ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿಗೆ ಮತ್ತೆ ಸಿಎಂ ಆಗುವ ಯೋಗ: ಜ್ಯೋತಿಷಿ ಅಶ್ವಿನಿ ಪಾಂಡೆ

|
Google Oneindia Kannada News

ಐದು ರಾಜ್ಯಗಳಲ್ಲಿ 2022ರ ವಿಧಾನಸಭಾ ಚುನಾವಣೆ ನಡೆಸಲಾಗಿದ್ದು, ಮಾರ್ಚ್ 10ರಂದು ಎಲ್ಲಾ ಐದು ರಾಜ್ಯಗಳ ಫಲಿತಾಂಶ ಪ್ರಕಟಿಸಲಾಗುತ್ತದೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಅಂತಿಮಗೊಂಡಿದೆ. ಮಾರ್ಚ್ 10ರಂದು ಈ ವೇಳೆಗಾಗಲೇ ಮತದಾರ ನಿರ್ಧರಿಸಿದಂತೆ ಉತ್ತರಪ್ರದೇಶದ ಸಿಎಂ ಯಾರಾಗಲಿದ್ದಾರೆ ಎಂಬುದು ತಿಳಿದು ಬರಲಿದೆ

ಎರಡು ತಿಂಗಳ ಅವಧಿಯಲ್ಲಿ ಐದು ರಾಜ್ಯಗಳ ಚುನಾವಣೆ 2022ಗೆ ತೆರೆ ಬಿದ್ದಿದೆ. ಗುರುವಾರ ಎಣಿಕೆ ಕಾರ್ಯ ಪ್ರಾರಂಭವಾಗುತ್ತಿದ್ದಂತೆ, ರಾಜಕೀಯದ ಬಗ್ಗೆ ಆಸಕ್ತಿಯುಳ್ಳವರು, ಪಕ್ಷಗಳಿಗೆ ನಿಷ್ಠರಾದವರು ಟಿವಿ ಮುಂದೆ ಲೈವ್ ನೋಡುತ್ತಾರೆ. ಮಿಕ್ಕವರಿಗೆ ಯಾವ ರಾಜ್ಯದಲ್ಲಿ ಯಾರು ಗೆದ್ದರು? ಯಾರಿಗೆ ಎಷ್ಟು ಸೀಟು ಬಂದಿದೆ? ಎಂಬುದು ತಿಳಿದರೆ ಸಾಕು ಎಂಬುವರ ಸಂಖ್ಯೆ ಹೆಚ್ಚಿದೆ. ಫಲಿತಾಂಶಗಳ ಕುರಿತು ಕ್ಷಣ ಕ್ಷಣದ ಅಪ್ಡೇಟ್ಸ್ ಮೊಬೈಲ್ ಫೋನ್ ನಲ್ಲೇ ಸಿಗುವ ಕಾಲವಿದು.

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗಲಿದೆ? ಜಗನ್ನಾಥ್ ಗುರೂಜಿ ಭವಿಷ್ಯಐದು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗಲಿದೆ? ಜಗನ್ನಾಥ್ ಗುರೂಜಿ ಭವಿಷ್ಯ

ಯುಪಿ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಮತ್ತು ಎಷ್ಟು ಸ್ಥಾನಗಳನ್ನು ಪಡೆಯುತ್ತದೆ. ಇಂಥ ಸಂದರ್ಭದಲ್ಲಿ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷಿ ಅಶ್ವಿನಿ ಪಾಂಡೆ
ಅವರು ಅಮರ್ ಉಜಾಲ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, ಉತ್ತರ ಪ್ರದೇಶ ರಾಜ್ಯದ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ.

Astrologer Ashwini Pandey Predicts The Fate Of UP Assembly Elections 2022

ಯೋಗಿ ಆದಿತ್ಯನಾಥ್ ಅವರು ಆಡಳಿತದ ಚುಕ್ಕಾಣಿ ಹಿಡಿದಿರುವ ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆ ಇಡೀ ದೇಶವೇ ಗಮನವಿಟ್ಟಿದೆ, 2022 ರಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಜ್ಯೋತಿಷಿ ಅಶ್ವಿನಿ ಪಾಂಡೆ ಹೇಳಿದ್ದಾರೆ.

403 ಸ್ಥಾನಗಳ ಪೈಕಿ ಬಿಜೆಪಿ 223-248 ಸ್ಥಾನಗಳನ್ನು ಗೆಲ್ಲಲಿದೆ. ಸಮಾಜವಾದಿ ಪಕ್ಷವು 140 ಸ್ಥಾನಗಳನ್ನು ಪಡೆಯಬಹುದು ಎಂದಿದ್ದಾರೆ. ವಿಕ್ರಮ ಶಖೆ ಹಿಂದೂ ಪಂಚಾಂಗ ರೀತ್ಯ2078 ವರ್ಷ ಜಾರಿಯಲ್ಲಿದ್ದು, ಈ ಸಂವತ್ಸರಕ್ಕೆ ಮಂಗಳ ಗ್ರಹ ಅಧಿಪತಿಯಾಗಿದೆ. ಗ್ರಹಗತಿಗಳು ಸಿಎಂ ಯೋಗಿ ಆದಿತ್ಯನಾಥ್ ಪರವಾಗಿದೆ ಎಂದಿದ್ದಾರೆ.

ಆದರೆ, ಮೀರತ್ ಮೂಲದ ಜ್ಯೋತಿಷಿ ವಿನೋದ್ ತ್ಯಾಗಿ ಹಾಗೂ ಮಥುರಾದ ಅಲೋಕ್ ಗುಪ್ತಾ ಕೂಡಾ ಯೋಗಿಗೆ ಸಿಎಂ ಸ್ಥಾನ ಮತ್ತೆ ಒಲಿಯಲಿದೆ ಎಂದಿದ್ದರೂ ಬಿಜೆಪಿಯ ಗ್ರಹಗತಿ ಸರಿಯಿಲ್ಲ 200 ಸ್ಥಾನ ಮಾತ್ರ ಗೆಲ್ಲುವ ನಿರೀಕ್ಷೆಯಿದ್ದು, ಮ್ಯಾಜಿಕ್ ನಂಬರ್ ದಾಟಿದರೆ ಅಚ್ಚರಿಯೇ ಸರಿ ಎಂದು ಹೇಳಿದ್ದಾರೆ.

English summary
Kendriya Sanskrit Vishwavidyalaya astrologer Ashwini Pandey State Assembly Elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X