ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಟ್ರಾಜೆನೆಕಾ ವಿಸ್ತರಣೆ: ಬೆಂಗಳೂರಿಗೆ ಒಲಿದ ಕ್ಲಿನಿಕಲ್ ಡೇಟಾ ವಿಭಾಗ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ಅಗ್ರಗಣ್ಯ ವಿಜ್ಞಾನ ಚಾಲಿತ ಬಯೋಫಾರ್ಮಸ್ಯೂಟಿಕಲ್ ಕಂಪನಿಯಾದ ಆಸ್ಟ್ರಾಜೆನಿಕಾದ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ)ವಾದ ಆಸ್ಟ್ರಾಜೆನಿಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್, ತನ್ನ ಜಾಗತಿಕ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ಮತ್ತು ಕ್ಲಿನಿಕಲ್ ಪರೀಕ್ಷೆಗಳ ಡಾಟಾ ಸಂಬಂಧಿ ಆಯಾಮಗಳ ನಿರ್ವಹಣೆಗಾಗಿ ಜಾಗತಿಕ ಕ್ಲಿನಿಕಲ್ ಡಾಟಾ ಮತ್ತು ಒಳನೋಟಗಳ ವಿಭಾಗವನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿರುವ ಕ್ಲಿನಿಕಲ್ ಡಾಟಾ ಮತ್ತು ಒಳನೋಟಗಳ ತಂಡವು, ಬೆಳೆಯುತ್ತಿರುವ ಜಾಗತಿಕ ಉತ್ಪನ್ನ ಶ್ರೇಣಿಯನ್ನು ಬೆಂಬಲಿಸುವ ಮತ್ತು ಆಂತರಿಕ ಡಾಟಾ ನೈಪುಣ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದೆ. ಕೇಂದ್ರವು ಇತ್ತೀಚೆಗೆ ತನ್ನ ಕಾರ್ಯಾಚರಣೆಯನ್ನು ಆರಂಭಿಸುವುದರೊಂದಿಗೆ, ಭವಿಷ್ಯದ ಅಗತ್ಯಗಳಿಗಾಗಿ ಸರಿಯಾದ ಪ್ರತಿಭೆ ಮತ್ತು ಸಂಪನ್ಮೂಲವನ್ನು ಪಡೆಯುವುದರ ಮೂಲಕ ತಂಡವನ್ನು ವಿಸ್ತರಿಸುವುದನ್ನು ಮುಂದುವರಿಸಲಿದೆ.

ಬಯೋಫಾರ್ಮಾಸ್ಯುಟಿಕಲ್ಸ್ ಸಂಶೋಧನೆ & ಅಭಿವೃದ್ಧಿಯಲ್ಲಿ ಅಭಿವೃದ್ಧಿ ಕಾರ್ಯಾಚರಣೆಗಳಿಗೆ ವರದಿ ಮಾಡುವ ಕ್ಲಿನಿಕಲ್ ಡೇಟಾ ಮತ್ತು ಒಳನೋಟಗಳು (ಸಿಡಿಐ) ತಂಡವು ವಿಶ್ಲೇಷಣೆ ಮತ್ತು ವರದಿ ಮಾಡುವುದನ್ನು ಹೊರತುಪಡಿಸಿ, ಅಸ್ಟ್ರಾಜೆನೆಕಾದ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶ-ಸಂಬಂಧಿತ ಅಂಶಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ.

ಸಿಡಿಐ ವಿಭಾಗವು ಚಿಕಿತ್ಸಾ ಪ್ರದೇಶಗಳು ಮತ್ತು ಉತ್ಪನ್ನ ಶ್ರೇಣಿಯ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಕ್ಲಿನಿಕಲ್ ಡೇಟಾ, ವಿಶ್ಲೇಷಣೆಗಳು, ಒಳನೋಟಗಳು ಮತ್ತು ಅಪಾಯ ನಿರ್ವಹಣೆಗಾಗಿ ಸಂಯೋಜಿತ ಎಂಡ್-ಟು-ಎಂಡ್ ವಿಧಾನದೊಂದಿಗೆ 1 ರಿಂದ 3 ನೇ ಹಂತದರವರೆಗಿನ ಆರಂಭಿಕ ಮತ್ತು ಕೊನೆಯ ಹಂತದ ವೈದ್ಯಕೀಯ ಕಾರ್ಯಕ್ರಮಗಳನ್ನು ಇದು ಬೆಂಬಲಿಸುತ್ತದೆ. ಪ್ರಸ್ತುತ 30 ಸದಸ್ಯರ ತಂಡ, 2022 ರ ವೇಳೆಗೆ 100ಕ್ಕೂ ಅಧಿಕ ಸದಸ್ಯರ ಬಲಿಷ್ಠ ತಂಡವಾಗಿ ಬೆಳೆಯುವ ನಿರೀಕ್ಷೆಯಿದೆ.

ವ್ಯವಸ್ಥಾಪಕ ನಿರ್ದೇಶಕ ಶಿವ ಪದ್ಮನಾಭನ್

ವ್ಯವಸ್ಥಾಪಕ ನಿರ್ದೇಶಕ ಶಿವ ಪದ್ಮನಾಭನ್

ಭಾರತದಲ್ಲಿ ಸಿಡಿಐ ವಿಭಾಗ ಆರಂಭದ ಕುರಿತು ಪ್ರತಿಕ್ರಿಯಿಸಿದ ಅಸ್ಟ್ರಾಜೆನೆಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಪದ್ಮನಾಭನ್, "ಮಾತೃ ಸಂಸ್ಥೆಯ ಒಟ್ಟಾರೆ ಬೆಳವಣಿಗೆಯಲ್ಲಿ ಜಿಸಿಸಿಗಳ ಪಾತ್ರವು ಬದಲಾವಣೆಗೆ ಸಾಕ್ಷಿಯಾಗಿದೆ. ಕಳೆದ ದಶಕದಲ್ಲಿ, ಭಾರತದಲ್ಲಿ ಜಿಸಿಸಿಗಳು ಸಂಘಟನೆಯ ಯಶಸ್ಸಿಗೆ ಹೆಚ್ಚು ಕಾರ್ಯತಂತ್ರದ ಮತ್ತು ಪರಿವರ್ತಕ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ಜಾಗತಿಕ ಫಾರ್ಚೂನ್ -500 ಕಂಪನಿಗಳಿಂದ ವ್ಯಾಪಾರ ಸೇವೆಗಳು, ಎಂಜಿನಿಯರಿಂಗ್, ಡಿಜಿಟಲ್, ಐಟಿ, ಆರ್ & ಡಿ ಮತ್ತು ಉತ್ಪನ್ನ ಅಭಿವೃದ್ಧಿಯಂತಹ ಕ್ಷೇತ್ರಗಳ ಹೂಡಿಕೆಯಲ್ಲಿ ಭಾರತ ನಿರಂತರ ಏರಿಕೆ ಕಂಡಿದೆ. ಭಾರತದಲ್ಲಿ ಅಸ್ಟ್ರಾಜೆನೆಕಾ ಕೂಡಾ ತನ್ನ ಆರಂಭದಿಂದಲೂ ಇದಕ್ಕೆ ಭಿನ್ನವಾಗಿಲ್ಲ. ಎಝೆಡ್‍ಐಪಿಲ್ ಜಾಗತಿಕ ಸಂಸ್ಥೆಯನ್ನು ಐಟಿ, ಬಿಸಿನೆಸ್ ಸೇವೆಗಳು ಮತ್ತು ಆರ್&ಡಿ ವ್ಯಾಪ್ತಿಯ ವಿವಿಧ ಸೇವೆಗಳೊಂದಿಗೆ ಚೆನ್ನೈ ಮತ್ತು ಬೆಂಗಳೂರಿನ ನಮ್ಮ ಕೇಂದ್ರಗಳಿಂದ ಪರಿವರ್ತಕ ಯೋಜನೆಗಳಲ್ಲಿ ಬೆಂಬಲಿಸಿದೆ. ಅಸ್ಟ್ರಾಜೆನೆಕಾ ಭಾರತದಲ್ಲಿ ಸಿಡಿಐ ವಿಭಾಗವನ್ನು ಸ್ಥಾಪಿಸುವ ನಿರ್ಧಾರವು ಇದರ ಸಹಜ ಪ್ರಗತಿಯಾಗಿದ್ದು, ದೇಶದಲ್ಲಿ ವ್ಯಾಪಕವಾದ ಪ್ರತಿಭಾ ಸಮೂಹದ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ, " ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆರು ದೇಶಗಳಲ್ಲಿ ಮಾರಾಟಗಾರರ ಪಾಲುದಾರಿಕೆ

ಆರು ದೇಶಗಳಲ್ಲಿ ಮಾರಾಟಗಾರರ ಪಾಲುದಾರಿಕೆ

ಅಸ್ಟ್ರಾಜೆನೆಕಾ ಸಿಡಿಐನ ಪ್ರಸ್ತುತ ಹೆಜ್ಜೆಗುರುತಿನಲ್ಲಿ 400 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಅಂದಾಜು 700 ಡೇಟಾ ಮ್ಯಾನೇಜ್‍ಮೆಂಟ್ ವೃತ್ತಿಪರರು ಆರು ದೇಶಗಳಲ್ಲಿ ಮಾರಾಟಗಾರರ ಪಾಲುದಾರಿಕೆಯನ್ನು ಒಳಗೊಂಡಿದೆ. ಅವರು ಈಗ ಆರ್ & ಡಿ ಕೇಂದ್ರಗಳಲ್ಲಿ ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಅಳವಡಿಸುತ್ತಿದ್ದಾರೆ, ತಮ್ಮ ಡೇಟಾ ತಂಡಗಳು ವಿಜ್ಞಾನದ ಗಡಿಗಳನ್ನು ದಾಟಿ ಜೀವನ ಬದಲಾಯಿಸುವ ಔಷಧಿಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ.

ಜಾಗತಿಕ ಮುಖ್ಯಸ್ಥ ನತಾಲಿ ಫಿಶ್‍ಬರ್ನ್

ಜಾಗತಿಕ ಮುಖ್ಯಸ್ಥ ನತಾಲಿ ಫಿಶ್‍ಬರ್ನ್

ಭಾರತದಲ್ಲಿ ಸಿಡಿಐ ವಿಭಾಗವನ್ನು ಸ್ಥಾಪಿಸುವ ಕುರಿತು ಪ್ರತಿಕ್ರಿಯಿಸಿದ ಅಸ್ಟ್ರಾಜೆನೆಕಾದ ಕ್ಲಿನಿಕಲ್ ಡೇಟಾ ಮತ್ತು ಒಳನೋಟಗಳ ಜಾಗತಿಕ ಮುಖ್ಯಸ್ಥ ನತಾಲಿ ಫಿಶ್‍ಬರ್ನ್, "ಕ್ಲಿನಿಕಲ್ ಡೇಟಾ ಮತ್ತು ಒಳನೋಟ ಪರಿಹಾರಗಳು ನಮ್ಮಂತಹ ಔಷಧೀಯ ಸಂಸ್ಥೆಗಳಿಗೆ ವಿಭಿನ್ನ ದತ್ತಾಂಶ ಮೂಲಗಳಿಂದ ಕ್ರಿಯಾತ್ಮಕ ಒಳನೋಟಗಳನ್ನು ಹೊರತೆಗೆಯುವ ಮೂಲಕ ರೋಗಿಯ ಪಯಣದಲ್ಲಿ ಆಳವಾದ ಗೋಚರತೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಭಾರತದಲ್ಲಿ ಸಿಡಿಐ ವಿಭಾಗವನ್ನು ಸ್ಥಾಪಿಸುವುದು ಈ ಕ್ಷೇತ್ರದಲ್ಲಿ ಉದ್ಯಮದ ನಾಯಕರಾಗುವ ನಮ್ಮ ಕಾರ್ಯತಂತ್ರದ ದೃಷ್ಟಿಕೋನಕ್ಕೆ ಪ್ರಮುಖವಾಗಿದೆ. ನಾವು ಡೇಟಾವನ್ನು ನಿರ್ವಹಿಸುವ ವಿಧಾನವು ವಿಕಸನಗೊಳ್ಳುತ್ತಿದೆ, ಮತ್ತು ಭವಿಷ್ಯಕ್ಕೆ ಸಜ್ಜಾಗುವ ಸಲುವಾಗಿ ನಾವು ನಮ್ಮ ಸಾಮಥ್ರ್ಯಗಳನ್ನು ಬೆಳೆಯುತ್ತಿದ್ದೇವೆ ಮತ್ತು ವಿಸ್ತರಿಸುತ್ತಿದ್ದೇವೆ. ಜೊತೆಗೆ, ಭಾರತೀಯ ಮಾರುಕಟ್ಟೆಯು ಒಂದು ದೊಡ್ಡ ಪ್ರತಿಭಾ ಸಮೂಹವನ್ನು ನೀಡುವ ಮೂಲಕ ಗಮನಾರ್ಹವಾಗಿ ಬೆಳೆದಿದೆ, ಅವರಲ್ಲಿ ಬಹಳಷ್ಟು ಮಂದಿ 10 ವರ್ಷಗಳ ಅನುಭವವನ್ನು ಹೊಂದಿದ್ದು, ಭಾರತದಲ್ಲಿ ಈ ವಿಭಾಗವನ್ನು ಸ್ಥಾಪಿಸಲು ನಮ್ಮನ್ನು ಮತ್ತಷ್ಟು ಪ್ರೇರೇಪಿಸಿದ್ದಾರೆ" ಎಂದು ಅಭಿಪ್ರಾಯಪಟ್ಟರು.

Recommended Video

Rohit Sharma ನಾಯಕನಾಗಿ Kohliಯನ್ನು ಬಳಸಿಕೊಂಡಿದ್ದು ಹೀಗೆ | Oneindia Kannada
ಅಸ್ಟ್ರಾಜೆನೆಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಗ್ಗೆ

ಅಸ್ಟ್ರಾಜೆನೆಕಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಗ್ಗೆ

ಆಸ್ಟ್ರಾಜೆನೆಕಾ ಜಾಗತಿಕ, ವಿಜ್ಞಾನ ಚಾಲಿತ ಜೈವಿಕ ಔಷಧೀಯ ಕಂಪನಿಯಾಗಿದ್ದು, ಪ್ರಿಸ್ಕ್ರಿಪ್ಷನ್ ಔಷಧಿಗಳ ಆವಿಷ್ಕಾರ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಮೇಲೆ ಕೇಂದ್ರೀಕರಿಸುತ್ತದೆ, ಪ್ರಾಥಮಿಕವಾಗಿ ಆಂಕಾಲಜಿ, ಕಾರ್ಡಿಯೋವಾಸ್ಕುಲರ್, ಮೂತ್ರಪಿಂಡ ಮತ್ತು ಚಯಾಪಚಯ ಮತ್ತು ಉಸಿರಾಟ ಮುಂತಾದ ಚಿಕಿತ್ಸಾ ಕ್ಷೇತ್ರಗಳಲ್ಲಿ ರೋಗಗಳ ಚಿಕಿತ್ಸೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಸ್ಟ್ರಾಜೆನೆಕಾ 100 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ಅದರ ನವೀನ ಔಷಧಿಗಳನ್ನು ವಿಶ್ವಾದ್ಯಂತ ಲಕ್ಷಾಂತರ ರೋಗಿಗಳು ಬಳಸುತ್ತಾರೆ.

ಅಸ್ಟ್ರಾಜೆನೆಕಾ ಇಂಡಿಯಾ ಪ್ರೈ. ಲಿಮಿಟೆಡ್ (ಎಝೆಡ್‍ಐಪಿಎಲ್) ಆಸ್ಟ್ರಾಜೆನಿಕಾಗೆ ಜಾಗತಿಕ ಸಾಮರ್ಥ್ಯ ಕೇಂದ್ರವಾಗಿದ್ದು, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. 2014 ರಲ್ಲಿ ಸ್ಥಾಪನೆಯಾದ ಎಝೆಡ್‍ಐಪಿಎಲ್ ಇಂದು 3100ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು ಐಟಿ ಸೇವೆಗಳು, ಜಾಗತಿಕ ವ್ಯಾಪಾರ ಸೇವೆಗಳು (ಜಿಬಿಎಸ್) ಮತ್ತು ಆರ್&ಡಿ ಆಂಕಾಲಜಿ ಸೇರಿದಂತೆ ಇತರ ಸೇವೆಗಳನ್ನು ಪೂರೈಸುತ್ತಿದೆ. ಕೇಂದ್ರವು ತಂತ್ರಜ್ಞಾನದ ನಾವೀನ್ಯತೆ ಮತ್ತು ಪರಿವರ್ತನೆ ಯೋಜನೆಗಳಲ್ಲಿ ಅಸ್ಟ್ರಾಜೆನೆಕಾದ ಪ್ರಮುಖ ವ್ಯಾಪಾರ ಪ್ರಕ್ರಿಯೆಗಳಾದ ಡಿಸ್ಕವರಿ, ಡೆವಲಪ್‍ಮೆಂಟ್, ಪ್ರೊಡಕ್ಷನ್, ಲಾಂಚ್ಸ್ ಟು ಸಪ್ಲೈ ಟು ಸಪ್ಲೈ ಆಫ್ ವೇಲ್ಯೂ ಚೈನ್ ಮುಂದಾದ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವ ಮತ್ತು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

English summary
AstraZeneca launches Clinical Date and insights division in Bengaluru, India; expands its footprint in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X