• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗೆ ಆಪತ್ತು ತಂದೊಡ್ಡಲಿದೆಯಾ ಅದೊಂದು ಕ್ಷುದ್ರಗ್ರಹ?

|
Google Oneindia Kannada News

ಭೂಮಿ ಮೇಲೆ ಪ್ರಳಯ, ಪ್ರಳಯ ಅಂತಾ ದಿನನಿತ್ಯ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಾನವ ಈಗಾಗಲೇ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದ್ದಾನೆ. ಪ್ರಕೃತಿ ನಾಶ, ವಾತಾವರಣ ಬಿಸಿ ಏರಿಕೆ. ಇದೆಲ್ಲದರ ಮಧ್ಯೆ ಭೂಮಿ ತಾಯಿಗೆ ಬಾಹ್ಯಾಕಾಶದಲ್ಲೂ ಕಂಟಕ ಎದುರಾಗಿದೆ.

ಹೌದು, '2021 KT1' ಹೆಸರಿನ ಕ್ಷುದ್ರಗ್ರಹ ಭೂಮಿಗೆ ಅತಿ ಸಮೀಪದಲ್ಲೇ ಇಂದು ಹಾದು ಹೋಗುತ್ತೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈಗಾಗಲೇ ಕೊರೊನಾ ಕೂಪದಲ್ಲಿ ಜಗತ್ತು ನಲುಗುತ್ತಿರುವಾಗ ಹೊಸ ಕಂಟಕ ಎದುರಾಗಿದೆ. ಈ 2021 KT1 ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಡಿಮೆ ಇದೆ.

ಆದರೂ ಅಪಾಯ ತಪ್ಪಿದ್ದಲ್ಲ ಎಂಬುದು ವಿಜ್ಞಾನಿಗಳ ಎಚ್ಚರಿಕೆ. ಅಕಸ್ಮಾತ್ ಸ್ವಲ್ಪ ಎಡವಟ್ಟಾದರೂ ಈ ಬೃಹತ್ ಗಾತ್ರದ ಬಂಡೆಕಲ್ಲು ಭೂಮಿಗೆ ಬಡಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಎಚ್ಚರವಾಗಿರಲು ಸೂಚನೆ ನೀಡಿದ್ದಾರೆ ಬಾಹ್ಯಾಕಾಶ ವಿಜ್ಞಾನಿಗಳು. ಈ ವರ್ಷ ಹಲವು ಕ್ಷುದ್ರಗ್ರಹಗಳು ಭೂಮಿ ಸಮೀಪದಲ್ಲಿ ಹಾದು ಹೋಗಿವೆ. ಈಗ ಮತ್ತೊಂದು ಕ್ಷುದ್ರಗ್ರಹ ಭೂಮಿಗೆ ಸಮೀಪ ಬರುತ್ತಿದ್ದು, ಸಹಜವಾಗಿ ಭೀತಿ ಎದುರಾಗಿದೆ.

ಸ್ವಲ್ಪ ಎಡವಟ್ಟಾದರೂ ಖತಂ..!

ಸ್ವಲ್ಪ ಎಡವಟ್ಟಾದರೂ ಖತಂ..!

ವಿಜ್ಞಾನಿಗಳು ಅಂದಾಜು ಮಾಡಿದಂತೆ '2021 KT1' ಹೆಸರಿನ ಕ್ಷುದ್ರಗ್ರಹ ಇಂದು ಭೂಮಿಯಿಂದ ಸುಮಾರು 4 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದು ಹೋಗಲಿದೆ. ಆದ್ರೆ ಅಂತರದಲ್ಲಿ ವ್ಯತ್ಯಾಸವಾಗಬಹುದು. ಭೂಮಿ ಗುರತ್ವ ಬಲ ಹಾಗೂ ಕ್ಷುದ್ರಗ್ರಹ ಹೋಗುತ್ತಿರುವ ದಿಕ್ಕು ಎಲ್ಲವನ್ನೂ ನಿರ್ಧರಿಸಲಿದೆ. ಅಕಸ್ಮಾತ್ ಭೂ ವಾತಾವರಣಕ್ಕೆ ಈ ಕ್ಷುದ್ರಗ್ರಹ ನುಗ್ಗಿದರೂ ಉರಿದು ಬೂದಿಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯದೇ ಇದ್ದರೆ ಎಡವಟ್ಟು ಗ್ಯಾರಂಟಿ. ಹಾಗೇ ಈ ಎಡವಟ್ಟಿನಿಂದ ದೊಡ್ಡ ಅಪಾಯವೂ ಎದುರಾಗಬಹುದು.

ವಿಜ್ಞಾನಿಗಳ ಪಾಲಿಗೆ ಮಹತ್ವದ ದಿನ..!

ವಿಜ್ಞಾನಿಗಳ ಪಾಲಿಗೆ ಮಹತ್ವದ ದಿನ..!

ಒಂದು ಕಡೆ ಆತಂಕ, ಮತ್ತೊಂದು ಕಡೆ ಕುತೂಹಲ. ಹೀಗೆ ಎರಡನ್ನೂ ಸೃಷ್ಟಿಸಿದೆ '2021 KT1' ಕ್ಷುದ್ರಗ್ರಹ. ಭೂಮಿಗೆ ಸಮೀಪದಲ್ಲಿ ಕ್ಷುದ್ರಗ್ರಹ ಹಾದು ಹೋಗುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಹಲವಾರು ಮಹತ್ವದ ಸಂಶೋಧನೆಗೆ ತಯಾರಿ ನಡೆಸಿದ್ದಾರೆ. ನಾಸಾ ವಿಜ್ಞಾನಿಗಳು ನಿದ್ದೆಯನ್ನೇ ಮರೆತು '2021 KT1' ಕ್ಷುದ್ರಗ್ರಹ ಬರುವಿಕೆಗೆ ಕಾಯುತ್ತಿದ್ದಾರೆ. ಮತ್ತೊಂದ್ಕಡೆ '2021 KT1' ಕ್ಷುದ್ರಗ್ರಹಕ್ಕೆ ನ್ಯೂಕ್ಲಿಯರ್ ಬಾಂಬ್ ಢಿಕ್ಕಿ ಹೊಡೆಸಿ ಬಾಹ್ಯಾಕಾಶದಲ್ಲೇ ಕ್ಷುದ್ರಗ್ರಹ ಸ್ಫೋಟಿಸುವ ಐಡಿಯಾ ಕೂಡ ಸಿಕ್ಕಿದೆ. ಆದರೆ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಾಕಷ್ಟು ಸಮಯ ಬೇಕಿದೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!

ಊಹೆಗೂ ನಿಲುಕದಷ್ಟು ಸಂಪತ್ತು..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

* ಎಲ್ಲವೂ ಸಾಂದರ್ಭಿಕ ಚಿತ್ರಗಳು
English summary
Asteroid ‘2021 KT1’ pass near Earth, scientist worried about possible collision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X