ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಯು, ಜೆಡಿಎಸ್ ಆಸ್ತಿ ಗಳಿಕೆ ಕ್ರಮವಾಗಿ 298%, 102% ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 11: ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಹಿರಂಗ ಪಡಿಸಿದೆ. ಎಡಿಆರ್ ವರದಿ ಪ್ರಕಾರ 2017-18ರ ಘೋಷಿತ ಆಸ್ತಿಗಳ ವಿವರಗಳಂತೆ ಒಟ್ಟಾರೆ 1,320 ಕೋಟಿ ರು ಮೌಲ್ಯದ ಆಸ್ತಿ ಸಿಕ್ಕಿದೆ. 2016-17ರಲ್ಲಿ 39 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಆಸ್ತಿ ಪ್ರಮಾಣ 1,267.81 ಕೋಟಿ ರು ನಷ್ಟಿತ್ತು.

ಟಾಪ್ 10 ಪಕ್ಷಗಳ ಪೈಕಿ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಸ್ತಿಯ ವಿಚಾರದಲ್ಲಿ 9ನೇ ಸ್ಥಾನದಲ್ಲಿದೆ. 2017-18 ರಲ್ಲಿ 583.29 ಕೋಟಿ ಆಸ್ತಿಯನ್ನು ಹೊಂದಿರುವ ಸಮಾಜವಾದಿ ಪಕ್ಷ ಹೊಂದಿದ್ದು, ಪ್ರಾದೇಶಿಕ ಪಕ್ಷಗಳಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಪಕ್ಷವಾಗಿದೆ.

ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ; ಜೆಡಿಎಸ್ ಆಸ್ತಿಯಲ್ಲಿ ಏರಿಕೆಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ; ಜೆಡಿಎಸ್ ಆಸ್ತಿಯಲ್ಲಿ ಏರಿಕೆ

ತಮಿಳುನಾಡಿನ ಎರಡು ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ. 13.78 ಕೋಟಿ ಆಸ್ತಿಯನ್ನು ಹೊಂದಿರುವ ಜೆಡಿಯು 10ನೇ ಸ್ಥಾನದಲ್ಲಿದೆ. ಕಳೆದ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ ಆಸ್ತಿ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ? ಎಷ್ಟು ಸಾಲ ಹೊಂದಿವೆ ಎಂಬ ವಿವರವೂ ಲಭ್ಯವಿದೆ. 2016-17ರ ಅವಧಿಯಲ್ಲಿ 39 ಪ್ರಾದೇಶಿಕ ಪಕ್ಷಗಳು 40.33 ಕೋಟಿ ರು ಸಾಲ ಹೊಂದಿದ್ದವು, 2017-18ರ ಅವಧಿಯಲ್ಲಿ 41 ಪಕ್ಷಗಳು 61.61 ಕೋಟಿ ರು ಸಾಲ ಹೊಂದಿವೆ.

2016-17ರ ಅವಧಿಯಲ್ಲಿ ಎಸ್ ಪಿ ಗಳಿಕೆ ಹೆಚ್ಚಿದೆ

2016-17ರ ಅವಧಿಯಲ್ಲಿ ಎಸ್ ಪಿ ಗಳಿಕೆ ಹೆಚ್ಚಿದೆ

2016-17ರಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿದ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ ಅತಿ ಹೆಚ್ಚು 571.12 ಕೋಟಿ ರು ಘೋಷಿಸಿಕೊಂಡಿತ್ತು. 2017-18ರಲ್ಲಿ 583.29 ಕೋಟಿ ರು ಗಳಿಸಿದ್ದು, ಶೇ 2.13 ರಷ್ಟು ಏರಿಕೆ ಕಂಡಿದೆ. ಎರಡನೇ ಸ್ಥಾನದಲ್ಲಿ ಡಿಎಂಕೆ ಇದ್ದು, 2016-17ರಲ್ಲಿ 183.36 ಕೋಟಿರು ಹಾಗೂ 2017-18ರ ಅವಧಿಯಲ್ಲಿ 191.64 ಕೋಟಿರು ಗಳಿಸಿದೆ.

ಜೆಡಿಯು ಆಸ್ತಿ ಗಳಿಕೆ ಪ್ರಮಾಣ ಅಧಿಕ

ಜೆಡಿಯು ಆಸ್ತಿ ಗಳಿಕೆ ಪ್ರಮಾಣ ಅಧಿಕ

2016-17 ಹಾಗೂ 2017-18ರ ಅವಧಿಯ ಆಸ್ತಿ ಗಳಿಕೆ ತುಲನೆ ಮಾಡಿ ನೋಡಿದರೆ ಜೆಡಿಯು ಒಟ್ಟಾರೆ ಆಸ್ತಿ ಪ್ರಮಾಣ 298.3% ರಷ್ಟು ಏರಿಕೆ ಕಂಡಿದೆ. ಜೆಡಿಎಸ್ ಆಸ್ತಿ ಗಳಿಕೆ 102.9% ಹಾಗೂ ಟಿಆರ್ ಎಸ್ 100.4% ರಷ್ಟು ಏರಿಕೆ ಕಂಡಿರುವುದು ದಾಖಲಾಗಿದೆ.

ಶಿವಸೇನಾ ಆಸ್ತಿ ಗಳಿಕೆ ಇಳಿಕೆ

ಶಿವಸೇನಾ ಆಸ್ತಿ ಗಳಿಕೆ ಇಳಿಕೆ

ಅಚ್ಚರಿಯೆಂಬಂತೆ ಶಿವಸೇನಾ ಪಕ್ಷದ ಆಸ್ತಿ ಗಳಿಕೆ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ ಇಳಿಮುಖವಾಗಿದೆ. ಟಾಪ್ 10 ಪಟ್ಟಿಯಲ್ಲಿದ್ದರೂ ವಾರ್ಷಿಕ ಘೋಷಿತ ಆಸ್ತಿ ಪ್ರಮಾಣ 1.2% ಇಳಿಕೆ ಕಂಡಿದೆ. 2016-17ರಲ್ಲಿ 52.56 ಕೋಟಿ ರು ನಿಂದ 2017-18ರಲ್ಲಿ 51.92 ಕೋಟಿ ರುಗೆ ಇಳಿಕೆಯಾಗಿದೆ.

ಸಾಲದ ಪ್ರಮಾಣದ ವಿವರ ಎಷ್ಟಿದೆ?

ಸಾಲದ ಪ್ರಮಾಣದ ವಿವರ ಎಷ್ಟಿದೆ?

2017-18 ಅತಿ ಹೆಚ್ಚು ಸಾಲಗಾರ ಪಕ್ಷವಾಗಿ ತೆಲುಗು ದೇಶಂ ಪಾರ್ಟಿ ಹೊರಹೊಮ್ಮಿದೆ. ಒಟ್ಟಾರೆ 22.71 ಕೋಟಿ ರು ಸಾಲ ಹೊಂದಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 190% ಏರಿಕೆಯಾಗಿದೆ. 2016-17 ರಲ್ಲಿ ಡಿಎಂಕೆ ಸಾಲದ ಪ್ರಮಾಣ 8.05 ಕೋಟಿ ರು ನಷ್ಟಿದೆ. ವೈಎಸ್ಸಾರ್ ಕಾಂಗ್ರೆಸ್ ಪಕ್ಷವು 2016-17ರ ಅವಧಿಯಲ್ಲಿ 48.86% ಹಾಗೂ 34.77% ರಷ್ಟು ಏರಿಕೆಯಾಗಿದೆ.

ಟಾಪ್ 10ರಲ್ಲಿ ಎಎಪಿ ಮಾತ್ರ ವಾರ್ಷಿಕ ಸಾಲದ ಪ್ರಮಾಣ ತಗ್ಗಿದೆ ಎಂದು ಘೋಷಿಸಿಕೊಂಡಿದೆ. 2016-17ರಲ್ಲಿ 1.22 ಕೋಟಿ ರು ಇದ್ದದ್ದು 2017-18ರ ಅವಧಿಯಲ್ಲಿ 0.96 ಕೋಟಿ ರು ಗೆ ಇಳಿದಿದೆ. 21.31% ಇಳಿಕೆಯಾಗಿದೆ.

English summary
Regional parties have declared assets worth Rs 1,320 crore for the years 2017-18. A report by the Association for Democratic Reforms says that the declaration for the years 2017-18 was made by 41 regional parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X