ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಳ್ಕೊಂಡಿದ್ದೆಷ್ಟು, ಕಾಂಗ್ರೆಸ್ ಗಳಿಸಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ

|
Google Oneindia Kannada News

Recommended Video

5 States Election Results 2018 :ಕಾಂಗ್ರೆಸ್ ಬಿಜೆಪಿ ಕಳ್ಕೊಂಡಿದ್ದೆಷ್ಟು? ಕಾಂಗ್ರೆಸ್ ಗಳಿಸಿದ್ದೆಷ್ಟು?

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಮುಂದಿಟ್ಟುಕೊಂಡು ಪೋಸ್ಟ್ ಮಾರ್ಟಂ ಆರಂಭವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದೆಷ್ಟು? ಆ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಆಗಿದ್ದೇನು ಅನ್ನೋದರ ಪೋಸ್ಟ್ ಮಾರ್ಟಂ ಇದು. ಹಾಗೆ ಲೆಕ್ಕಾಚಾರ ನೋಡುವಾಗ ಯಾರಿಗೆಷ್ಟು ಲಾಭ-ನಷ್ಟ ಎಂಬ ವರದಿ ಇಲ್ಲಿದೆ.

ಈ ಐದು ರಾಜ್ಯಗಳಲ್ಲಿ ಬಂದ 2013ರ ಚುನಾವಣೆ ಫಲಿತಾಂಶದ ಲೆಕ್ಕಾಚಾರ ನೋಡಿದರೆ ಬಿಜೆಪಿ ಶೇ 50ರಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಮತ್ತೊಂದು ಇವೇ ರಾಜ್ಯಗಳಲ್ಲಿ ಕಾಂಗ್ರೆಸ್ ಶೇ 80ರಷ್ಟು ಸೀಟುಗಳನ್ನು ಹೆಚ್ಚು ಪಡೆದಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಒಟ್ಟು 679 ಸ್ಥಾನಗಳಲ್ಲಿ 382ರಲ್ಲಿ ಜಯ ಸಾಧಿಸಿತ್ತು.

ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ

2018ರಲ್ಲಿ ಅದು 192ಕ್ಕೆ ಕುಸಿತವಾಗಿದೆ. ಅಂದರೆ ಕಳೆದ ಸಲಕ್ಕೆ ಹೋಲಿಸಿದರೆ ಶೇ 50ರಷ್ಟು ಇಳಿಕೆ. ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ, 2013ರಲ್ಲಿ ಈ ಐದು ರಾಜ್ಯಗಳಲ್ಲಿ 165 ಸ್ಥಾನ ಪಡೆದಿತ್ತು. ಈ ಬಾರಿ 303 ಸ್ಥಾನ ಗಳಿಸುವ ಮೂಲಕ ಶೇ 83ರಷ್ಟು ಹೆಚ್ಚಾಗಿ ಸೀಟುಗಳನ್ನು ಗೆದ್ದಿದೆ.

ರಾಜಸ್ತಾನ ವಿಧಾನಸಭಾ ಚುನಾವಣಾ ಫಲಿತಾಂಶದ ಹೋಲಿಕೆ

ರಾಜಸ್ತಾನ ವಿಧಾನಸಭಾ ಚುನಾವಣಾ ಫಲಿತಾಂಶದ ಹೋಲಿಕೆ

ರಾಜಸ್ತಾನದಲ್ಲಿ 2013ರಲ್ಲಿ ಬಿಜೆಪಿಯು 200 ಸ್ಥಾನಗಳಲ್ಲಿ 163ರಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ 73 ಕಡೆ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಆ ಬಾರಿ 21 ಸ್ಥಾನ ಗಳಿಸಲು ಸಾಧ್ಯವಾಗಿದ್ದ ಕಾಂಗ್ರೆಸ್ ತೆಕ್ಕೆಯಲ್ಲಿ ಈ ಬಾರಿ 102 ಸೀಟುಗಳು. ಇನ್ನು ಮಧ್ಯಪ್ರದೇಶದ ಲೆಕ್ಕಾಚಾರವನ್ನು ನೋಡೋಣ.

ಮಧ್ಯಪ್ರದೇಶ, ಛತ್ತೀಸ್ ಗಢ ಚುನಾವಣೆ ಫಲಿತಾಂಶದ ಹೋಲಿಕೆ

ಮಧ್ಯಪ್ರದೇಶ, ಛತ್ತೀಸ್ ಗಢ ಚುನಾವಣೆ ಫಲಿತಾಂಶದ ಹೋಲಿಕೆ

2013ರಲ್ಲಿ ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಸ್ಥಾನಗಳ ಪೈಕಿ 165 ಬಿಜೆಪಿ ಪಾಲಾಗಿತ್ತು. ಕಾಂಗ್ರೆಸ್ 58 ಕ್ಷೇತ್ರಗಳಲ್ಲಿ ಜಯಿಸಿತ್ತು. 2018ರಲ್ಲಿ ಕೈ ಪಕ್ಷಕ್ಕೆ 114 ಸ್ಥಾನಗಳು ಬಂದಿವೆ. ಬಿಜೆಪಿ ಪಾಲಿಗೆ 106 ಕಡೆ ಗೆಲುವು ಸಿಕ್ಕಿದೆ. ಛತ್ತೀಸ್ ಗಢದ ಒಟ್ಟು 90 ಸ್ಥಾನಗಳ ಪೈಕಿ 49ರಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಆ ಸಲ ಕಾಂಗ್ರೆಸ್ 39 ಸ್ಥಾನಗಳಲ್ಲಿ ಜಯಿಸಿತ್ತು. 2018ರಲ್ಲಿ ಬಿಜೆಪಿ 13ಕ್ಕೆ ಕುಸಿದರೆ. ಕಾಂಗ್ರೆಸ್ 62ಕ್ಕೆ ನೆಗೆದಿದೆ.

5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು? 5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?

ತೆಲಂಗಾಣದಲ್ಲಿ ಯಾವ ರೀತಿ ಫಲಿತಾಂಶ ಬಂದಿದೆ?

ತೆಲಂಗಾಣದಲ್ಲಿ ಯಾವ ರೀತಿ ಫಲಿತಾಂಶ ಬಂದಿದೆ?

ತೆಲಂಗಾಣದಲ್ಲಿ 2013ರಲ್ಲಿ (ಆಗ ಅವಿಭಜಿತ ಆಂಧ್ರಪ್ರದೇಶವಾಗಿತ್ತು) ಬಿಜೆಪಿಯು 5 ಸ್ಥಾನಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿತ್ತು. ಕಾಂಗ್ರೆಸ್ ಗೆ 13 ಸೀಟು ಸಿಕ್ಕಿತ್ತು. 2018ರಲ್ಲಿ ತೆಲಂಗಾಣದ ಒಟ್ಟು ಸದಸ್ಯತ್ವ ಬಲದ 119 ಸ್ಥಾನಗಳಲ್ಲಿ 1ರಲ್ಲಿ ಮಾತ್ರ ಜಯ ಸಾಧಿಸಲು ಬಿಜೆಪಿಗೆ ಸಾಧ್ಯವಾಗಿದೆ. ಕಾಂಗ್ರೆಸ್ ಮೈತ್ರಿ ಕೂಟ 20 ಕಡೆ ಗೆಲುವು ದಾಖಲಿಸಿದೆ.

ಮಧ್ಯ ಪ್ರದೇಶ ಚುನಾವಣೆ: ಕಾಂಗ್ರೆಸ್-ಬಿಜೆಪಿ ನಡುವೆ ಅಂತರ ಬಹು ತೆಳು ಮಧ್ಯ ಪ್ರದೇಶ ಚುನಾವಣೆ: ಕಾಂಗ್ರೆಸ್-ಬಿಜೆಪಿ ನಡುವೆ ಅಂತರ ಬಹು ತೆಳು

ಮಿಜೋರಾಂ ವಿಧಾನಸಭೆಯಲ್ಲಿ ಏನಾಗಿದೆ?

ಮಿಜೋರಾಂ ವಿಧಾನಸಭೆಯಲ್ಲಿ ಏನಾಗಿದೆ?

ಮಿಜೋರಾಂನ ‌ಒಟ್ಟು ಸದಸ್ಯ ಬಲ 40ರ ಪೈಕಿ 2013ರಲ್ಲಿ 34 ಸ್ಥಾನಗಳು ಕಾಂಗ್ರೆಸ್ ವಶವಾಗಿದ್ದವು. ಆ ಮೂಲಕ ಭರ್ಜರಿ ಜಯ ದಾಖಲಿಸಿತ್ತು. ಆ ಚುನಾವಣೆಯಲ್ಲಿ ಒಂದು ಸ್ಥಾನ ಕೂಡ ಅಲ್ಲಿ ಬಿಜೆಪಿ ಗೆದ್ದಿರಲಿಲ್ಲ. 2018ರಲ್ಲಿ ಅಂತೂ ಖಾತೆ ತೆರೆಯಲು ಸಾಧ್ಯವಾದ ಬಿಜೆಪಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆದರೆ ಕಾಂಗ್ರೆಸ್ ಪಕ್ಷವು 15 ಸ್ಥಾನಗಳಿಗೆ ಕುಸಿದು ಹೋಗಿದೆ.

ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಡಾ. ಛಕ್ಮಾ ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಡಾ. ಛಕ್ಮಾ

English summary
Assembly election 2018: Here is the comparison of seat gain and loss in 5 state assembly elections for BJP and Congress. How many seats gain or loss in each state presented with 2013 assembly election final result numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X