ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಚುನಾವಣಾಪೂರ್ವ ಸಮೀಕ್ಷೆ: ಕಷ್ಟಪಟ್ಟು ಅಧಿಕಾರಕ್ಕೆ ಬರಲಿದೆ ಬಿಜೆಪಿ

|
Google Oneindia Kannada News

ಈಶಾನ್ಯ ರಾಜ್ಯಗಳ ಪೈಕಿ ರಾಜಕೀಯವಾಗಿ ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿರುವ ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 15ನೇ ವಿಧಾನಸಭೆಗೆ 126 ಶಾಸಕರನ್ನು ಆಯ್ಕೆ ಮಾಡಬೇಕಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ನಡುವೆ ತೀವ್ರ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ನಿರೀಕ್ಷೆಯಿದೆ ಎಂದು 'ಟೈಮ್ಸ್ ನೌ' ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಸೋಮವಾರ ತಿಳಿಸಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗಳ (ಎನ್‌ಆರ್‌ಸಿ) ವಿರುದ್ಧ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದರ ಹೊರತಾಗಿಯೂ ಆಡಳಿತಾರೂಢ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.

ABP-CNX ಚುನಾವಣಾಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೇಗಿದೆ ಜನಾಭಿಪ್ರಾಯ?ABP-CNX ಚುನಾವಣಾಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೇಗಿದೆ ಜನಾಭಿಪ್ರಾಯ?

ಈ ಬಾರಿ ಯುಪಿಎ ಮೈತ್ರಿಕೂಟದ ಮತ ಹಂಚಿಕೆಯ ಪ್ರಮಾಣದಲ್ಲಿ ದೊಡ್ಡಮಟ್ಟದ ಏರಿಕೆಯಾಗಲಿದೆ. ಹೀಗಾಗಿ ಜನರ ತೀರ್ಪು ತನ್ನ ಕಡೆಗೆ ಇರಲಿದೆ ಎಂದು ಎನ್‌ಡಿಎ ನೆಮ್ಮದಿಯಿಂದ ಇರುವಂತಿಲ್ಲ ಎಂದು ಸಮೀಕ್ಷೆ ಹೇಳಿದೆ.

ಯಾರಿಗೆ ಎಷ್ಟು ಕ್ಷೇತ್ರ?

ಯಾರಿಗೆ ಎಷ್ಟು ಕ್ಷೇತ್ರ?

126 ಸೀಟುಗಳ ವಿಧಾನಸಭೆಯಲ್ಲಿ ಎನ್‌ಡಿಎ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಯುಪಿಎ 57 ಸೀಟುಗಳನ್ನು ಪಡೆಯಲಿದೆ. ಇತರೆ ಪಕ್ಷಗಳು 2 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. 2016ರ ಚುನಾವಣೆಯಲ್ಲಿ ಎನ್‌ಡಿಎ 74ರಲ್ಲಿ ಗೆದ್ದಿದ್ದರೆ, ಯುಪಿಎ 39 ಸೀಟುಗಳನ್ನು ಪಡೆದುಕೊಂಡಿತ್ತು.

ಯಾರಿಗೆ ಅಧಿಕಾರ ನೀಡಬೇಕು?

ಯಾರಿಗೆ ಅಧಿಕಾರ ನೀಡಬೇಕು?

ಇಂದು ಅಸ್ಸಾಂ ಚುನಾವಣೆ ನಡೆದರೆ ಯಾರಿಗೆ ಮತ ಹಾಕುತ್ತೀರಿ ಎಂಬ ಪ್ರಶ್ನೆಗೆ ಶೇ 42.29ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದನ್ನು ಬಯಸಿದ್ದಾರೆ. ಇನ್ನು ಶೇ 40.7 ಮಂದಿ ಕಾಂಗ್ರೆಸ್ ನೇತೃತ್ವದ ಯುಪಿಎ ಪರ ಒಲವು ಪ್ರದರ್ಶಿಸಿದ್ದಾರೆ.

ಟೈಮ್ಸ್ ನೌ ಸಮೀಕ್ಷೆ: ಡಿಎಂಕೆ- ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಜಯಟೈಮ್ಸ್ ನೌ ಸಮೀಕ್ಷೆ: ಡಿಎಂಕೆ- ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಜಯ

ಮುಖ್ಯಮಂತ್ರಿ ಯಾರಾಗಬೇಕು?

ಮುಖ್ಯಮಂತ್ರಿ ಯಾರಾಗಬೇಕು?

ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರನ್ನ ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡಲು ಹೆಚ್ಚಿನ ಜನರು ಬಯಸಿದ್ದಾರೆ. ಶೇ 45.2ರಷ್ಟು ಜನರಿಗೆ ಸೋನೊವಾಲ್ ಅವರೇ ಸಿಎಂ ಆಗಬೇಕು ಎನಿಸಿದೆ. ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್‌ನ ಗೌರವ್ ಗೊಗೊಯ್ ಇದ್ದಾರೆ. ಶೇ 4.8ರಷ್ಟು ಜನರು ಬದ್ರುದ್ದೀನ್ ಅಹ್ಮಲ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ.

ಪ್ರಧಾನಿ ಮೋದಿ ಕೆಲಸ ಎಷ್ಟು ತೃಪ್ತಿಕರ?

ಪ್ರಧಾನಿ ಮೋದಿ ಕೆಲಸ ಎಷ್ಟು ತೃಪ್ತಿಕರ?

ಬಹಳ ತೃಪ್ತಿಕರ: ಶೇ 42.42

ಒಂದು ಮಟ್ಟಕ್ಕೆ ತೃಪ್ತಿಕರ: 27.64%

ತೃಪ್ತಿಕರವಾಗಿಲ್ಲ: 16.45%

ಗೊತ್ತಿಲ್ಲ: 13.49%

English summary
Assam Pre Poll Survey by Times Now-C Voter: BJP led NDA will retain the power with a very thin majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X