ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೋಸಗಾರ, ಹೇಡಿ, ಮೂರ್ಖ..!’ಅಬ್ಬಬ್ಬಾ.. ಪ್ರಜೆಗಳ ಶಾಪ ಒಂದಾ.. ಎರಡಾ..?

|
Google Oneindia Kannada News

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ.. ಇದುವೇ ಪ್ರಜಾಪ್ರಭುತ್ವ. ಹೀಗೆ ಪ್ರಜಾಪ್ರಭುತ್ವದ ಹೆಸರಲ್ಲಿ ಅಧಿಕಾರ ಪಡೆದಿದ್ದ ಅಫ್ಘಾನಿಸ್ತಾನದ ಅಧ್ಯಕ್ಷ ಓಡಿ ಹೋಗಿದ್ದಾರೆ. ಅಂದ್ರೆ ಎಸ್ಕೇಪ್ ಆಗಿದ್ದಾರೆ..! ಅರೆರೆ ಒಬ್ಬ ಅಧ್ಯಕ್ಷ ಓಡಿ ಹೋಗುವುದು ಸಾಧ್ಯವಾ..? ಅಂತಾ ಪ್ರಶ್ನೆ ಮಾಡಬೇಡಿ. ಏಕೆಂದರೆ ಅಶ್ರಫ್ ಘನಿ ಓಡೋಗಿದ್ದು ಸತ್ಯ.

Recommended Video

ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಅಫ್ಘಾನಿಸ್ತಾನದಿಂದ ಓಡಿಹೋದ ಅಶ್ರಫ್ ಘನಿ! | Oneindia Kannada

ಯಾವಾಗ ತಾಲಿಬಾನ್ ಪಡೆಗಳು ಕಾಬೂಲ್ ಕಡೆಗೆ ನುಗ್ಗಿ ಬಂದವೋ, ಆಗಲೇ ಅಶ್ರಫ್ ಘನಿ ಆವೇಶ ಹುದುಗಿ ಹೋಗಿತ್ತು. ಕಾಬೂಲ್ ಗಡಿ ದಾಟುತ್ತಿದ್ದಂತೆ ತಡ ಮಾಡದ ಅಶ್ರಫ್ ಘನಿ, ತನಗೆ ಬೇಕಾದ ಸಂಪತ್ತು ಹಾಗೂ ತನ್ನ ಕುಟುಂಬ ಕರೆದುಕೊಂಡು ಓಡಿ ಹೋಗಿದ್ದಾರೆ. ಆದ್ರೆ ಒಬ್ಬ ಜನಪ್ರತಿನಿಧ ಅದರಲ್ಲೂ ಅಧ್ಯಕ್ಷನ ಈ ವರ್ತನೆ ಅಫ್ಘಾನಿಸ್ತಾನದ ಜನರನ್ನು ಕೆರಳಿಸಿದೆ. ಸೋಷಿಯಲ್ ಮೀಡಿಯಾ ತುಂಬಾ ಅಶ್ರಫ್ ಘನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 'ಮೋಸಗಾರ, ಹೇಡಿ, ಮೂರ್ಖ..' ಹೀಗೆ ಮನದಾಳದ ಮಾತುಗಳನ್ನ ಜನ ಸಾಮಾಜಿಕ ಜಾಲತಾಣಗಳ ಮೂಲಕ ಹೊರಹಾಕಿದ್ದಾರೆ. ಹಾಗೇ ಅಶ್ರಫ್ ಘನಿ ಶೋಕಿ ಜೀವನದ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 ಅಧ್ಯಕ್ಷನ ಕಾರು ತುಂಬಾ ಕ್ಯಾಶ್..?

ಅಧ್ಯಕ್ಷನ ಕಾರು ತುಂಬಾ ಕ್ಯಾಶ್..?

ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ತನ್ನ ದೇಶ ಬಿಟ್ಟು ಹೋಗುವಾಗ ಬರಿಗೈಯಲ್ಲಿ ಹೋಗಿಲ್ಲ. ಬದಲಾಗಿ ತನ್ನ ಕಾರ್ ತುಂಬಾ ಕ್ಯಾಶ್, ಅಪಾರ ಸಂಪತ್ತನ್ನು ಹೊತ್ತು ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಲ್ಲಿ ತಾಲಿಬಾನ್ ಪಡೆಗಳು ತನ್ನನ್ನ ಕೊಂದು ಹಾಕಿಬಿಡುತ್ತವೋ ಎಂಬ ಜೀವ ಭಯದಲ್ಲೇ ಅಶ್ರಫ್ ಘನಿ ದೇಶವನ್ನ ಬಿಟ್ಟು ಪರಾರಿ ಆಗಿದ್ದಾರೆ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಇರಬೇಕಾದ ಜನಪ್ರತಿನಿಧಿ ಅಶ್ರಫ್ ಘನಿ ಓಡಿ ಹೋಗಿರೋದು ಹೇಡಿತನದ ಲಕ್ಷಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕೆಲವು ತೀವ್ರ ಬೇಸರ ಹೊರಹಾಕಿದ್ದಾರೆ.

ರಕ್ತ ಚರಿತ್ರೆ -1: ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?ರಕ್ತ ಚರಿತ್ರೆ -1: ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?

 ತಜಕಿಸ್ತಾನದಲ್ಲಿ ಜಾಗ ಸಿಗಲಿಲ್ಲ..!

ತಜಕಿಸ್ತಾನದಲ್ಲಿ ಜಾಗ ಸಿಗಲಿಲ್ಲ..!

ಮೊದಲಿಗೆ ತಜಕಿಸ್ತಾನ ತಲುಪಲು ಅಫ್ಘಾನಿಸ್ತಾನ ಅಧ್ಯಕ್ಷ ಘನಿ ಸ್ಕೆಚ್ ಹಾಕಿದ್ದರು, ಆದರೆ ಅದು ಕೈಗೂಡಲಿಲ್ಲ. ಅಶ್ರಫ್ ಘನಿ ವಿಮಾನ ತಜಕಿಸ್ತಾನದಲ್ಲಿ ಲ್ಯಾಂಡ್ ಆಗಲು ಅವಕಾಶ ಸಿಗಲಿಲ್ಲ. ಹೀಗಾಗಿ ತಕ್ಷಣ ಒಮನ್ ಕಡೆ ತನ್ನ ದೃಷ್ಟಿ ನೆಟ್ಟಿದ್ದ ಅಶ್ರಫ್ ಘನಿ, ಒಮನ್‌ನಿಂದ ನೇರ ಅಮೆರಿಕ ತಲುಪಲು ಪ್ಲ್ಯಾನ್ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ತನಗೆ ಬೇಕಾದಷ್ಟು ಹಣ ಹಾಗೂ ಅಮೆರಿಕದಲ್ಲಿ ನೆಲೆಸಲು ಬೇಕಾದ ವ್ಯವಸ್ಥೆಗಳನ್ನು ಅಶ್ರಫ್ ಘನಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇಲ್ಲಿ ಅಫ್ಘಾನ್ ಪ್ರಜೆಗಳು ನಿತ್ಯ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

ಪ್ರಜೆಗಳನ್ನು ಅನಾಥರಾಗಿಸಿದ ಅಧ್ಯಕ್ಷ

ಪ್ರಜೆಗಳನ್ನು ಅನಾಥರಾಗಿಸಿದ ಅಧ್ಯಕ್ಷ

ತಾಲಿಬಾನ್ ಪಡೆಗಳ ಮುಖ್ಯಸ್ಥರು ರಾಜಧಾನಿ ಕಾಬೂಲ್ ಪ್ರವೇಶ ಮಾಡುತ್ತಿದ್ದಂತೆ, ಘನಿ ಓಡಿ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದಂತೆ ಕಾಣುತ್ತದೆ. ಇದೇ ಕಾರಣಕ್ಕೆ ಘನಿ ದಿಢೀರ್ ದೇಶಬಿಟ್ಟು ಹೋಗಿದ್ದಾರೆ. ಹೀಗೆ ಪ್ರಜೆಗಳನ್ನು ಕಾಯಬೇಕಿದ್ದ ಅಧ್ಯಕ್ಷನೇ ಜೀವ ಭಯದಲ್ಲಿ ಓಡಿ ಹೋಗಿರುವುದು ಒಂದೆಡೆ ‘ಜೋಕ್' ಆಗಿದ್ದರೂ, ಮತ್ತೊಂದು ಕಡೆ ಈತನನ್ನೇ ನಂಬಿಕೊಂಡಿದ್ದ ಕೋಟ್ಯಂತರ ಪ್ರಜೆಗಳು ಅನಾಥರಾಗಿದ್ದಾರೆ. ಇನ್ನು ಮುಂದೆ ನಮ್ಮ ಪರಿಸ್ಥಿತಿ ಏನೋ, ಹೇಗೋ ಎಂಬ ಭಯ ಸಹಜವಾಗಿ ಅಫ್ಘಾನ್ ಜನರನ್ನ ಕಾಡುತ್ತಿದೆ.

ದೇಶಬಿಟ್ಟು ಅಧ್ಯಕ್ಷನೇ ಎಸ್ಕೇಪ್..! ಅರಮನೆ ತಾಲಿಬಾನ್ ಪಾಲು!ದೇಶಬಿಟ್ಟು ಅಧ್ಯಕ್ಷನೇ ಎಸ್ಕೇಪ್..! ಅರಮನೆ ತಾಲಿಬಾನ್ ಪಾಲು!

ಅಧ್ಯಕ್ಷರ ಚೇರ್ ಮೇಲೆ ವಿಶ್ರಾಂತಿ

ಅಧ್ಯಕ್ಷರ ಚೇರ್ ಮೇಲೆ ವಿಶ್ರಾಂತಿ

ಇಷ್ಟೆಲ್ಲಾ ನಡೆಯುವಾಗಲೇ ತಾಲಿಬಾನ್ ಲೀಡರ್ಸ್ ನೇರವಾಗಿ ಅಧ್ಯಕ್ಷರ ಅರಮನೆ, ಅಂದ್ರೆ ಘನಿ ಬಿಟ್ಟು ಓಡಿ ಹೋದ ಅರಮನೆಗೆ ನುಗ್ಗಿದ್ದಾರೆ. ಈ ವೇಳೆ ತಾಲಿಬಾನ್ ವಿರುದ್ಧ ಮಾತನಾಡಲು ಒಂದೇ ಒಂದು ಹುಳ ಕೂಡ ಆ ಅರಮನೆಯಲ್ಲಿ ಇರಲಿಲ್ಲ. ಅಲ್ಲಿದ್ದ ಕೆಲವು ಜನರು ಕೂಡ ತಾಲಿಬಾನ್ ನಾಯಕರಿಗೆ ಸತ್ಕಾರ ಮಾಡಿದ್ದಾರೆ. ತಾಲಿಬಾನ್ ಮುಖಂಡರು ಅಲ್ಲೇ ಇದ್ದ ಅಶ್ರಫ್ ಘನಿ ಚೇರ್ ಮೇಲೆ ಕೂತು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಜೊತೆಗೆ ತಾಲಿಬಾನ್ ಮುಖಂಡರ ಪೈಕಿ ಒಬ್ಬೊಬ್ಬರೇ ಚೇರ್ ಮೇಲೆ ಕೂತು ಫೋಟೋ ತೆಗೆಸಿಕೊಂಡಿದ್ದಾರೆ.

English summary
Afghan Former president Ashraf Ghani reached Oman after Tajikistan denied landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X