• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಗಿನ್ನಿಸ್ ದಾಖಲೆ, ಟಾಪ್ 5 ಸಾಧನೆಗಳು

|

ಭಾರತೀಯ ಜನತಾ ಪಕ್ಷದ ಪಾಲಿನ ಆಲ್ ರೌಂಡರ್, ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಇನ್ನಿಲ್ಲ. ಅಪರೂಪದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಜೇಟ್ಲಿ ಅವರು ಇಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲು, ಎರಡನೇ ಅವಧಿಗೆ ಅಧಿಕಾರ ಹಿಡಿದು ಸಮರ್ಥ ಆಡಳಿತ ನೀಡಲು ಬೇಕಾದ ಸೂತ್ರಗಳನ್ನು ರೂಪಿಸಿದ ಚಿಂತಕರ ಚಾವಡಿಯಲ್ಲಿ ಜೇಟ್ಲಿ ಉನ್ನತ ಸ್ಥಾನದಲ್ಲಿದ್ದವರು.

ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು

2014 ರಿಂದ 2019 ರ ಅವಧಿಯಲ್ಲಿ ವಿತ್ತ ಸಚಿವರಾಗಿ ಅನೇಕ ಆರ್ಥಿಕ ಸುಧಾರಣೆಗಳನ್ನು ತರುವ ಮೂಲಕ ಇಡೀ ಜಗತ್ತು ಭಾರತದೆಡೆಗೆ ನೋಡುವಂತೆ ಮಾಡಿದರು. ಮೋದಿ ಕನಸಿನ ತೆರಿಗೆ ವ್ಯವಸ್ಥೆ, ಅಪನಗದೀಕರಣ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ, ಜಿಎಸ್ಟಿ, ಕೃಷಿಕರಿಗೆ ಆರ್ಥಿಕ ಬಲ ತಂದವರು.

ಅರುಣ್ ಜೇಟ್ಲಿ ನಿಧನ : ಕಂಬನಿ ಮಿಡಿದ ಕರ್ನಾಟಕದ ನಾಯಕರು

ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ, ರಾಜ್ಯಸಭೆ ವಿಪಕ್ಷ ನಾಯಕ, ರಕ್ಷಣಾ ಸಚಿವ ಹಾಗೂ ವಿತ್ತ ಸಚಿವರಾಗಿ ಹಲವು ಮಹತ್ವದ ಯೋಜನೆಗಳನ್ನು ತಂದಿದ್ದು, ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಗಿನ್ನಿಸ್ ದಾಖಲೆ, ಟಾಪ್ 5 ಸಾಧನೆಗಳ ವಿವರ ಮುಂದಿದೆ...

1. ಸರಕು ಸೇವಾ ತೆರಿಗೆ(ಜಿಎಸ್ಟಿ)

1. ಸರಕು ಸೇವಾ ತೆರಿಗೆ(ಜಿಎಸ್ಟಿ)

1. ಸರಕು ಸೇವಾ ತೆರಿಗೆ(ಜಿಎಸ್ಟಿ)

ರಾಷ್ಟ್ರವ್ಯಾಪಿ ಸರಕು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ತರುವ ಮೂಲಕ ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದ್ದು ಮೋದಿ ಹಾಗೂ ಜೇಟ್ಲಿ ಅವರ ಸಾಧನೆಯಾಗಿದೆ. ದಕ್ಷಿಣ ರಾಜ್ಯಗಳು, ಪಶ್ಚಿಮ ಬಂಗಾಳದಿಂದ ಈ ವ್ಯವಸ್ಥೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ, ಜೇಟ್ಲಿ ಸಂಧಾನಕಾರರಾಗಿ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು 'ಒಂದು ದೇಶ, ಏಕ ತೆರಿಗೆ' ತಂದಿದ್ದು ಮಹತ್ಸಾಧನೆ.

2. ಆರ್ಥಿಕ ದಿವಾಳಿತನ ತಪ್ಪಿಸಿದ್ದು

2. ಆರ್ಥಿಕ ದಿವಾಳಿತನ ತಪ್ಪಿಸಿದ್ದು

2. ಆರ್ಥಿಕ ದಿವಾಳಿತನ ತಪ್ಪಿಸಿದ್ದು

ತೆರಿಗೆ ವಂಚನೆ ಮೂಲಕ ಸೋರಿಕೆಯಾಗುತ್ತಿದ್ದ ಆರ್ಥಿಕ ಅಪರಾಧ ತಡೆಗಟ್ಟುವಿಕೆ, ಕಾನೂನಿನ ಹಿಡಿಯಲು ಬಿಗಿಗೊಳಿಸಲು Insolvency & Bankruptcy code(IBC) ಜಾರಿಗೊಳಿಸಿದರು. ಜಿಎಸ್ಟಿ ಮೂಲಕ ಪರಿಣಾಮಕಾರಿಯಾಗಿ ಐಬಿಸಿ ಅಳವಡಿಸಿ, ದಿವಾಳಿತನ ತಡೆಗಟ್ಟಿ, 70,000 ಕೋಟಿ ರುಗಳನ್ನು 2019ರಲ್ಲೇ ಸರ್ಕಾರಕ್ಕೆ ದಕ್ಕಿದೆ.

ಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ

3. ಸಣ್ಣ ಮಧ್ಯಮ ಉದ್ದಿಮೆದಾರರಿಗೆ ಆರ್ಥಿಕ ಪುನಶ್ಚೇತನ.

3. ಸಣ್ಣ ಮಧ್ಯಮ ಉದ್ದಿಮೆದಾರರಿಗೆ ಆರ್ಥಿಕ ಪುನಶ್ಚೇತನ.

ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಆಗುತ್ತಿದ್ದ ತೆರಿಗೆ ವಂಚನೆ ತಪ್ಪಿಸಿದ್ದಲ್ಲದೇ, ಅರ್ಥಿಕ ಸುಧಾರಣೆ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ನಾಂದಿ ಹಾಡಿದರು. ಹಣದುಬ್ಬರ ತಗ್ಗಿದ್ದಲ್ಲದೆ, ವಿಶ್ವಮಟ್ಟದಲ್ಲಿ ಆರ್ಥಿಕ ಸುಧಾರಣೆಯ ಹಾದಿಯಲ್ಲಿ ಭಾರತ ನಿಲ್ಲುವಂತೆ ಮಾಡಿದರು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಜಿಡಿಪಿ ಏರಿಕೆ ಕಂಡಿದ್ದರಿಂದ 2024ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ಪ್ರಗತಿ ಗುರಿಯನ್ನು ವಿನ್ಯಾಸಗೊಳಿಸಲಾಗಿದೆ.

4. ಬ್ಯಾಂಕ್ ಗಳ ವಿಲೀನ

4. ಬ್ಯಾಂಕ್ ಗಳ ವಿಲೀನ

ದೇನಾ ಬ್ಯಾಂಕ್ ,ವಿಜಯ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಸಹವರ್ತಿ 5 ಬ್ಯಾಂಕ್ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ವಿಲೀನವಾಗಿದ್ದು, ಬ್ಯಾಂಕಿಂಗ್ ವಲಯದ ಅತಿ ದೊಡ್ಡ ಕಾರ್ಯವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದರೂ ಜೇಟ್ಲಿ ಎಲ್ಲಕ್ಕೂ ಸಮರ್ಥವಾಗಿ ಉತ್ತರಿಸಿದರು. ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್ ಬ್ಯಾಕಿಂಗ್, ಎಟಿಎಂ ಸುರಕ್ಷತೆ, ಅಪನಗದೀಕರಣ ಹೀಗೆ ಅನೇಕ ಸುಧಾರಣೆಗಳನ್ನು ತಂದರು. 11.5 ಕೋಟಿಗೂ ಅಧಿಕ ಪ್ರಧಾನಿ ಮಂತ್ರಿ ಜನ್ ಧನ್ ಖಾತೆ ಆರಂಭವಾಗಿದ್ದು ಗಿನ್ನಿಸ್ ದಾಖಲೆ ಪುಸ್ತಕ ಸೇರಿದ ಸಾಧನೆ ಮಾಡಿದ್ದಾರೆ.

5. ಎಫ್ ಡಿಐ ಉದಾರೀಕರಣ

5. ಎಫ್ ಡಿಐ ಉದಾರೀಕರಣ

ಭಾರತದ ಪಾಲಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ( ಎಫ್ ಡಿಐ) ಹೊಸ ವಿಷಯವಲ್ಲದಿದ್ದರೂ, ರಕ್ಷಣೆ, ವಿಮೆ, ವಿಮಾನಯಾನ ಮುಂತಾದ ಕ್ಷೇತ್ರಗಳಲ್ಲಿ ಎಫ್ ಡಿಐ ತರುವ ದಿಟ್ಟ ನಿರ್ಧಾರ ತಳೆದರು. ಈ ಮೂಲಕ ಭಾರತಕ್ಕೆ ಬಿಲಿಯನ್ ಡಾಲರ್ ಗಟ್ಟಲೆ ಮೊತ್ತ ಬಂದು ಸೇರಿದೆ. ವಿತ್ತ ಸಚಿವರಾಗಿ ಜೇಟ್ಲಿ ಅವರು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿನ್ಯಾಸಗೊಳಿಸಿದ ಎಫ್ ಡಿಐ ನೀತಿ ಈಗ ಮೋದಿ ಸರ್ಕಾರ್ 2.0ನಲ್ಲಿ ಜಾರಿಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾಗಲಿ ಎಂದು ಹೆಸರು ಸೂಚಿಸಿದ್ದು ಜೇಟ್ಲಿ ಎಂಬುದು ಮರೆಯುವಂತಿಲ್ಲ.

English summary
Former Union finance minister and senior BJP leader Arun Jaitley(66) passes away. Here are the top achievements of Jaitley as Finance Minister of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more