ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

April Fools' Day 2023 : ಮೂರ್ಖರ ಮುಖದಲಿ ಮಂದಹಾಸ ಮೂಡಿಸುವ ಈ ದಿನದ ವಿಶೇಷತೆ?

|
Google Oneindia Kannada News

ಜಗತ್ತಿನಾದ್ಯಂತ ವಿಭಿನ್ನ, ವಿಶಿಷ್ಟ, ವಿನೂತನ ಆಚರಣೆಗಳಲ್ಲಿ ಅದೊಂದು ದಿನ ಮಾತ್ರ ಎಂಥವರ ಮೊಗದಲ್ಲೂ ನಗು ಮೂಡಿಸಿ ಬಿಡುತ್ತದೆ. ಅತಿಯಾದ ತಮಾಷೆಯಿಂದ ತಾನು ಮೂರ್ಖನಾದೆ ಎಂದು ತಿಳಿದ ಮೇಲೆಯೂ ಮೊಗದ ಮೇಲೊಂದು ಮಂದಹಾಸ ಮೂಡುವುದಕ್ಕೆ ಇದೊಂದು ದಿನಾಂಕ ಸಾಕು. ಅದುವೇ ಏಪ್ರಿಲ್ 1st.

ವಿಶ್ವದಲ್ಲಿ ಈ ಏಪ್ರಿಲ್ 1 ಎನ್ನುವುದು ಮೂರ್ಖರ ದಿನ ಎಂತಲೇ ಫೇಮಸ್. ಆತ್ಮರು, ಅತ್ಯಾಪ್ತರು, ಪ್ರೀತಿ ಪಾತ್ರರು, ಗೆಳೆಯರು, ಗೆಳತಿಯರು, ಬಂಧುಗಳು ಹೀಗೆ ಒಬ್ಬರನ್ನೊಬ್ಬರು ಪರಸ್ಪರ ಮೂರ್ಖರನ್ನಾಗಿ ಮಾಡುವುದಕ್ಕೆ ಏಪ್ರಿಲ್ ಫೂಲ್ ಒಂದು ಹಬ್ಬದ ರೀತಿಯ ಆಚರಣೆ ಆಗಿದೆ.

ಟ್ವಿಟ್ಟರ್ ನಲ್ಲಿ ಮೂರ್ಖರ ದಿನದ್ದೇ ಗೌಜು!ಟ್ವಿಟ್ಟರ್ ನಲ್ಲಿ ಮೂರ್ಖರ ದಿನದ್ದೇ ಗೌಜು!

ನಿಜ ಹೇಳುವುದಾದರೆ ಏಪ್ರಿಲ 1ರ ಈ ಮೂರ್ಖರ ದಿನದ ಆಚರಣೆಯು ಭಾರತಕ್ಕೆ ಸಂಬಂಧಿಸಿರುವುದೇ ಅಲ್ಲ. ಇದೊಂದು ಪಾಶ್ಚಿಮಾತ್ಯ ಸಂಸ್ಕೃತಿ. ಪ್ರತಿರ್ಷ ಈ ಏಪ್ರಿಲ 1ರ ದಿನಾಂಕವನ್ನು ಮೂರ್ಖರ ದಿನ ಎಂದು ಆಚರಿಸುವುದರ ಹಿಂದೆಯೂ ಒಂದು ಐತಿಹ್ಯವಿದೆ. ಅದೇ ಮೂರ್ಖರ ದಿನದ ವಿಶೇಷತೆ ಹಾಗೂ ಇತಿಹಾಸವನ್ನು ತಿಳಿದುಕೊಳ್ಳಲು ಮುಂದೆ ಓದಿ. ಹಾಗೆ ನೆನಪಿರಲಿ ಇದು ನಿಮ್ಮನ್ನು ಮೂರ್ಖರನ್ನಾಗಿಸಲು ಮಾಡಿರುವ ವರದಿಯಂತೂ ಖಂಡಿತ ಅಲ್ಲ..

ಮೂರ್ಖರಿಗಾಗಿಯೇ ಇದು ಹೇಳಿ ಮಾಡಿಸಿರುವ ದಿನ

ಮೂರ್ಖರಿಗಾಗಿಯೇ ಇದು ಹೇಳಿ ಮಾಡಿಸಿರುವ ದಿನ

ಏಪ್ರಿಲ್ 1ರ ದಿನದ ವಿಶೇಷತೆಯೇ ಹಾಗಿದೆ. ಇಂದು ಯಾರು ಯಾರಿಗೆ ಏನನ್ನೇ ಹೇಳಿದರೂ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಬೇಕು, ಇಲ್ಲವೇ ಪುನಃ ಪರಿಶೀಲನೆ ನಡೆಸಬೇಕು. ಒಂದು ಕ್ಷಣ ಮೈಮರೆತರೆ ಸಾಕು, ನಿಮ್ಮವರೇ ನಿಮ್ಮನ್ನು ಮೂರ್ಖರನ್ನಾಗಿ ಮಾಡಿ ಬಿಡುತ್ತಾರೆ. ಆದರೆ ಇದೆಲ್ಲ ಜಸ್ಟ್ ತಮಾಷೆಗಾಗಿ ಮಾತ್ರ. ಏಕೆಂದರೆ ಕಟ್ಟುಕಥೆ, ಸುಳ್ಳು-ಪೊಳ್ಳು ಹಾಗೂ ಭಯ ಹುಟ್ಟಿಸುವಂತ ಕೆಲವು ಮಾತುಗಳೇ ನಿಮ್ಮನ್ನು ಮೂರ್ಖರನ್ನಾಗಿಸಲು ನಿಮ್ಮವರು ಬಳಸುವ ಅಸ್ತ್ರಗಳಾಗಿರುತ್ತವೆ. ಇದರ ಹೊರತಾಗಿಯೂ ಏಪ್ರಿಲ್ 1ರ ಮೂರ್ಖರ ದಿನಾಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಬಹಳಷ್ಟಿವೆ.

ಮೂರ್ಖರ ದಿನಕ್ಕೂ ಮೂಲವಿದೆಯೇ?

ಮೂರ್ಖರ ದಿನಕ್ಕೂ ಮೂಲವಿದೆಯೇ?

ಜಗತ್ತಿನ ಅನೇಕ ಇತಿಹಾಸಕಾರರು ಏಪ್ರಿಲ್ 1ರ ಮೂರ್ಖರ ದಿನಕ್ಕೆ ವಿವಿಧ ಮೂಲಗಳನ್ನು ನೀಡುತ್ತಾರೆ. ಈ ದಿನದ ಬಗ್ಗೆ ನೀಡಿರುವ ಎಲ್ಲಾ ಮೂಲಗಳು ಅನಿಶ್ಚಿತವಾಗಿದ್ದು, ನಾವು ಯಾವುದನ್ನು ನಂಬಬೇಕು, ಯಾರನ್ನು ನಂಬಬೇಕು ಎನ್ನುವುದೇ ಅಸ್ಥಿರವಾಗಿ ಉಳಿದುಕೊಂಡಿದೆ. ಆದರೆ ಕೆಲವು ಇತಿಹಾಸಕಾರರು ಈ ಆಚರಣೆಯು ಹೊಸ ಕ್ಯಾಲೆಂಡರ್ ಅನ್ನು ಅನುಸರಿಸಿದ ನಂತರ ಹುಟ್ಟಿಕೊಂಡಿತು ಎಂದು ಹೇಳುತ್ತಾರೆ, ಕೆಲವರು ಇದು ಋತುಗಳ ಬದಲಾವಣೆಗೆ ಸಂಬಂಧಿಸಿದೆ ಎಂದು ಭಾವಿಸುತ್ತಾರೆ.

ಮೊದಲು ಸುದ್ದಿಯಾದ ಕ್ಯಾಲೆಂಡರ್ ಬದಲಾವಣೆ ಇತಿಹಾಸ

ಮೊದಲು ಸುದ್ದಿಯಾದ ಕ್ಯಾಲೆಂಡರ್ ಬದಲಾವಣೆ ಇತಿಹಾಸ

ಏಪ್ರಿಲ್ ಫೂಲ್ ಆಚರಣೆಯ ಹಿಂದೆ ಪೋಪ್ XIIIನೇ ಗ್ರೆಗೊರಿ ಜಗತ್ತಿನ ಇಡೀ ಒಂದು ಸಮುದಾಯವನ್ನು ಮೂರ್ಖರನ್ನಾಗಿ ಮಾಡಿದ್ದರು ಎಂದು ಕೆಲವು ಇತಿಹಾಸಕಾರರು ಊಹಿಸಿದ್ದಾರೆ. ಅವರು ಹಳೆಯ ಜೂಲಿಯನ್ ಕ್ಯಾಲೆಂಡರ್ ಬದಲಿಗೆ ಹೊಸದಾದ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸುವಂತೆ ಸಲಹೆ ನೀಡಿದರು. ಹಳೆಯ ಜೂಲಿಯನ್ ಕ್ಯಾಲೆಂಡರ್ ಪ್ರಕಾರ, ಜನರು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ 1ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಆದರೆ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಜನವರಿ 1ರಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಫ್ರಾನ್ಸ್ ಈ ಕ್ಯಾಲೆಂಡರ್ ಬದಲಾವಣೆಯ ಬಗ್ಗೆ ತಿಳಿದುಕೊಂಡಿದೆ. ಅದಾಗ್ಯೂ, ಯುರೋಪಿನ ಇನ್ನೂ ಹಲವು ರಾಷ್ಟ್ರಗಳು ಈ ಹಳೆಯ ಜೂಲಿಯನ್ ಕ್ಯಾಲೆಂಡರ್ ಬದಲಾವಣೆಯನ್ನು ಒಪ್ಪಿಕೊಂಡಿಲ್ಲ. ಅವರು ಇಂದಿಗೂ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ 1ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಇಂಥ ಕೆಲವು ಜನರಿಗೆ ಮೂಲ ಬದಲಾವಣೆಯ ಕುರಿತು ಅರಿವೇ ಇಲ್ಲ, ಅಂಥವರು ಏಪ್ರಿ 1ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಆ ಮೂಲಕ ತಮ್ಮನ್ನು ತಾವೇ ಮೂರ್ಖರು ಎನ್ನುವ ರೀತಿಯಲ್ಲಿ ಜಗತ್ತಿನ ಎದುರು ಬಿಂಬಿಸಿಕೊಳ್ಳುತ್ತಾರೆ.

ಏಪ್ರಿಲ್ ಫೂಲ್ ಆಚರಣೆ ಮಹತ್ವವನ್ನು ತಿಳಿಯಿರಿ

ಏಪ್ರಿಲ್ ಫೂಲ್ ಆಚರಣೆ ಮಹತ್ವವನ್ನು ತಿಳಿಯಿರಿ

ಏಪ್ರಿಲ್ ಫೂಲ್ ದಿನಾಚರಣೆಗೆ ಸಂಬಂಧಿಸಿದಂತೆ ಬೋಸ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೋಸೆಫ್ ಬೋಸ್ಕಿನ್ ತಮ್ಮದೇ ಆದ ವಿವರಣೆಯನ್ನು ನೀಡಿದ್ದಾರೆ. ರೋಮನ್ ಆಡಳಿತದ ಕಾಲದಲ್ಲಿ ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ದಿ ಗ್ರೇಟ್, ಹಾಸ್ಯಗಾರನ ಕೈಗೆ ಅಧಿಕಾರವನ್ನು ನೀಡಿದ್ದರು. ತಮಾಷೆಗಾಗಿ ಹಾಸ್ಯಗಾರ ಕುಗೆಲ್ ಎಂಬಾತನಿಗೆ ಒಂದು ದಿನದ ಅಧಿಕಾರವನ್ನು ವಹಿಸಲಾಗಿತ್ತು. ತಮಾಷೆಗೆ ರೋಮನ್ ಚಕ್ರವರ್ತಿ ತೆಗೆದುಕೊಂಡ ದಿನವನ್ನು ಹಾಸ್ಯದ ದಿನವನ್ನಾಗಿ ಹಾಗೂ ಮೂರ್ಖರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದಿದ್ದಾರೆ.

ಏಪ್ರಿಲ್ ಫೂಲ್ ಎನ್ನುವುದಷ್ಟೇ ಅಲ್ಲದೇ ಮಾರ್ಚ್ ಅಂತ್ಯದ ವೇಳೆಗೆ ಹಾಗೂ ಏಪ್ರಿಲ್ ಆರಂಭದ ಹೊತ್ತಿನಲ್ಲಿ ಹಲವು ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾರ್ಚ್ 25ರಂದು ರೋಮನ್ ಪ್ರದೇಶದಲ್ಲಿ ಹಿಲಾರಿಯಾ ಎಂಬ ಆಚರಣೆಯನ್ನು ಮಾಡಲಾಗುತ್ತದೆ. ಇದೇ ಸಮಯದಲ್ಲಿ ಜೇವಿಶ್ ಪೂರಿಮ್ ಅನ್ನು ಆಚರಿಸುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ, ಈ ದಿನಾಂಕದ ಆಸುಪಾಸಿನಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

English summary
April Fools’ Day 2022: April fool’s day is a western cultural day, celebrated every year on 1st april. Know Origin, History, Significance in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X