ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆ

|
Google Oneindia Kannada News

ವಾಷಿಂಗ್ಟನ್‌, ಆಗಸ್ಟ್‌ 24: ಕೋವಿಡ್‌ ಸೋಂಕಿಗೆ ಕಾರಣವಾಗುವ SARS-CoV-2 ವೈರಸ್‌ನ ದೀರ್ಘಾವಧಿಯ ರೂಪಾಂತರಗಳಿಂದ ರಕ್ಷಿಸುವ, ಕಡಿಮೆ ಪ್ರಮಾಣದಲ್ಲಿದ್ದರೂ ಅಧಿಕ ರಕ್ಷಣಾತ್ಮಕವಾಗಿರುವ ಪ್ರತಿಕಾಯವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಜರ್ನಲ್ ಇಮ್ಯೂನಿಟಿಯಲ್ಲಿ ಅಧ್ಯಯನವನ್ನು ಮಾಡಲಾಗಿದ್ದು, ಕೊರೊನಾ ವೈರಸ್‌ ಸೋಂಕು ರೂಪಾಂತರಗೊಂಡಂತೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವ ಹೊಸ ಪ್ರತಿಕಾಯ ಆಧಾರಿತ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ವರದಿ ಮಾಡಿದೆ. ಈ ಅಧ್ಯಯನವನ್ನು ಪ್ರತಿಕಾಯ ಥೆರಪಿ ಮೂಲಕ ಕೋವಿಡ್‌ ರೋಗಿಗಳನ್ನು ಗುಣಮುಖ ಮಾಡಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಪ್ರಯೋಗ ಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ವರದಿಗಳು ಹೇಳಿದೆ. ಹೊಸ ಪ್ರತಿಕಾಯಗಳು ಕೊರೊನಾ ವೈರಸ್‌ನ ಒಂದು ಭಾಗವಾಗಿರುತ್ತದೆ. ಅದು ಕೋವಿಡ್‌ ರೂಪಾಂತರಗಳಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಅಂದರೆ ಪ್ರತಿರೋಧವು ಉದ್ಭವಿಸುವುದು ಅಸಂಭವವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

16 ವಾರ ಕಳೆದರೂ 1.6 ಕೋಟಿ ಜನರು 2ನೇ ಡೋಸ್ ಪಡೆದಿಲ್ಲ16 ವಾರ ಕಳೆದರೂ 1.6 ಕೋಟಿ ಜನರು 2ನೇ ಡೋಸ್ ಪಡೆದಿಲ್ಲ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈ ಅಧ್ಯಯನದಲ್ಲಿನ ಹಿರಿಯ ಲೇಖಕರು, ಅಮೆರಿಕದ ಸೇಂಟ್ ಲೂಯಿಸ್‌‌ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪ್ರಾಧ್ಯಾಪಕರಾಗಿರುವ ಮೈಕೆಲ್‌ ಎಸ್‌ ಡೈಮಂಡ್‌, "ಪ್ರಸ್ತುತ ಇರುವ ಪ್ರತಿಕಾಯಗಳು ಕೆಲವು ಕೋವಿಡ್‌ ರೂಪಾಂತರಗಳ ವಿರುದ್ದ ಕಾರ್ಯ ಮಾಡಬಹುದು ಆದರೆ ಎಲ್ಲಾ ಕೋವಿಡ್‌ನ ಹಲವು ರೂಪಾಂತರದ ವಿರುದ್ದ ಕಾರ್ಯನಿರ್ವಹಿಸಲಾರದು," ಎಂದು ತಿಳಿಸಿದ್ದಾರೆ.

 ಏನಿದು ಸ್ಪೈಕ್ ಎಂಬ ಪ್ರೋಟೀನ್?

ಏನಿದು ಸ್ಪೈಕ್ ಎಂಬ ಪ್ರೋಟೀನ್?

"ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ವೈರಸ್ ವಿಕಸನಗೊಳ್ಳುವ ಸಾಧ್ಯತೆಯಿದೆ. ಎಲ್ಲಾ ಕೋವಿಡ್‌ ರೂಪಾಂತರಗಳನ್ನು ತಟಸ್ಥಗೊಳಿಸುವ ಪರಿಣಾಮಕಾರಿ ಪ್ರತಿಕಾಯಗಳು ಪ್ರತ್ಯೇಕವಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಹೊಸ ಸಂಯೋಜನೆಗಳನ್ನು ಮಾಡಲು ಜೋಡಿಯಾಗಬಹುದು. ಅದು ಪ್ರತಿರೋಧವನ್ನು ತಡೆಯುವ ಸಾಧ್ಯತೆಯಿದೆ," ಎಂದು ಕೂಡಾ ಈ ಅಧ್ಯಯನದಲ್ಲಿನ ಹಿರಿಯ ಲೇಖಕರು ಮೈಕೆಲ್‌ ಎಸ್‌ ಡೈಮಂಡ್‌ ಹೇಳಿದ್ದಾರೆ.

SARS-CoV-2 ವೈರಸ್ ದೇಹದ ಉಸಿರಾಟದ ಪ್ರದೇಶದಲ್ಲಿನ ಜೀವಕೋಶಗಳಿಗೆ ಅಂಟಿಕೊಳ್ಳಲು ಮತ್ತು ಆಕ್ರಮಣ ಮಾಡಲು ಸ್ಪೈಕ್ ಎಂಬ ಪ್ರೋಟೀನ್ ಅನ್ನು ಬಳಸುತ್ತದೆ. ಸ್ಪೈಕ್ ಪ್ರೋಟೀನ್ ಜೀವಕೋಶಗಳಿಗೆ ಅಂಟಿಕೊಳ್ಳುವುದನ್ನು ತಡೆಯುವ ಪ್ರತಿಕಾಯಗಳು ವೈರಸ್ ಅನ್ನು ತಟಸ್ಥಗೊಳಿಸುತ್ತದೆ ಮತ್ತು ರೋಗವನ್ನು ತಡೆಯುತ್ತದೆ.

ಅನೇಕ ವೈರಸ್‌ನ ರೂಪಾಂತರಗಳು ತಮ್ಮ ಸ್ಪೈಕ್ ವಂಶವಾಹಿಗಳಲ್ಲಿ ರೂಪಾಂತರಗಳನ್ನು ಪಡೆದುಕೊಂಡಿವೆ. ಇದು ಮೂಲ ತಳಿಯ ವಿರುದ್ಧ ಉತ್ಪತ್ತಿಯಾಗುವ ಕೆಲವು ಪ್ರತಿಕಾಯಗಳನ್ನು ತಪ್ಪಿಸಲು ಅವಕಾಶ ಮಾಡಿಕೊಡುತ್ತದೆ. ಹಾಗೆಯೇ ಪ್ರತಿಕಾಯ ಆಧಾರಿತ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ದುರ್ಬಲ ಮಾಡುತ್ತದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.

 ಇಲಿಗಳ ಮೆಲೆ ಕೋವಿಡ್‌ ರೂಪಾಂತರದ ಪ್ರಯೋಗ

ಇಲಿಗಳ ಮೆಲೆ ಕೋವಿಡ್‌ ರೂಪಾಂತರದ ಪ್ರಯೋಗ

ವ್ಯಾಪಕ ಶ್ರೇಣಿಯ ರೂಪಾಂತರಗಳ ವಿರುದ್ಧ ಕೆಲಸ ಮಾಡುವ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ, ರಿಸೆಪ್ಟರ್-ಬೈಂಡಿಂಗ್ ಡೊಮೇನ್ (ಆರ್‌ಬಿಡಿ) ಎಂದು ಕರೆಯಲ್ಪಡುವ ಸ್ಪೈಕ್ ಪ್ರೋಟೀನ್‌ನ ಪ್ರಮುಖ ಭಾಗದೊಂದಿಗೆ ಇಲಿಗಳಿಗೆ ರೋಗನಿರೋಧಕತೆಯನ್ನು ನೀಡಿದ್ದಾರೆ. ಅಂದರೆ ಈ ಪ್ರತಿಕಾಯ ಪತ್ತೆ ಹಚ್ಚುವ ನಿಟ್ಟಿನಲ್ಲಿ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ನಂತರ ಸಂಶೋಧಕರು ಪ್ರತಿಕಾಯ-ಉತ್ಪಾದಿಸುವ ಕೋಶಗಳನ್ನು ಹೊರತೆಗೆದಿದ್ದು ಆ ಇಲಿಗಳಿಂದ ಆರ್‌ಬಿಡಿಯನ್ನು ಗುರುತಿಸುವ 43 ಪ್ರತಿಕಾಯಗಳನ್ನು ಪಡೆದಿದ್ದಾರೆ ಎಂದು ವರದಿ ವಿವರಿಸಿದೆ.

ಭಾರತದಲ್ಲಿ ನವೆಂಬರ್ ವೇಳೆಗೆ ಕೊರೊನಾವೈರಸ್ 3ನೇ ಅಲೆ!ಭಾರತದಲ್ಲಿ ನವೆಂಬರ್ ವೇಳೆಗೆ ಕೊರೊನಾವೈರಸ್ 3ನೇ ಅಲೆ!

2019 ರಲ್ಲಿ ಮೊದಲು ಪತ್ತೆಯಾದ SARS-CoV-2 ನ ಮೂಲ ರೂಪಾಂತರದಿಂದ ಜೀವಕೋಶಗಳಿಗೆ ಸೋಂಕು ತಗುಲಿಸುವುದನ್ನು ಎಷ್ಟು ಸಫಲವಾಗಿ ತಡೆಯುತ್ತದೆ ಎಂಬುವುದನ್ನು ಅಲೆಯುವ ಮೂಲಕ ತಂಡವು 43 ಪ್ರತಿಕಾಯಗಳ ತಪಾಸಣೆ ನಡೆಸಿದೆ. ಮೂಲ ಕೊರೊನಾ ವೈರಸ್‌ನಿಂದ ಸೋಂಕಿತ ಪ್ರಾಣಿಗಳನ್ನು ರೋಗದಿಂದ ರಕ್ಷಿಸಬಹುದೇ ಎಂದು ನೋಡಲು ಬಳಿಕ ಈ ಪೈಕಿ ಒಂಬತ್ತು ಅತ್ಯಂತ ಶಕ್ತಿಶಾಲಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಇಲಿಗಳ ಮೇಲೆ ಅಧ್ಯಯನಕಾರರು ಪರೀಕ್ಷಿಸಿದ್ದಾರೆ.

 ಯಾವೆಲ್ಲಾ ರೂಪಾಂತರಗಳ ಪ್ರಯೋಗ?

ಯಾವೆಲ್ಲಾ ರೂಪಾಂತರಗಳ ಪ್ರಯೋಗ?

ಅನೇಕ ಪ್ರತಿಕಾಯಗಳು ಎರಡೂ ಪರೀಕ್ಷೆಗಳಲ್ಲಿ ವಿಭಿನ್ನ ಮಟ್ಟದ ಸಾಮರ್ಥ್ಯದೊಂದಿಗೆ ಉತ್ತಮವಾಗಿದೆ ಎಂದು ತಿಳಿದು ಬಂದಿದೆ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ಸಂಶೋಧಕರು ಕೊರೊನಾ ವೈರಸ್‌ ರೋಗದಿಂದ ಇಲಿಗಳನ್ನು ರಕ್ಷಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾದ ಎರಡು ಪ್ರತಿಕಾಯಗಳನ್ನು ಆಯ್ಕೆ ಮಾಡಿದ್ದಾರೆ. ಬಳಿಕ ವೈರಲ್ ರೂಪಾಂತರಗಳ ಮೇಲೆ ಪರೀಕ್ಷೆ ಮಾಡಿದ್ದಾರೆ. ಸಂಶೋಧಕರು ಸ್ಪೈಕ್ ಪ್ರೋಟೀನ್ ಹೊಂದಿರುವ ಅತ್ಯಂತ ಅಪಾಯಕಾರಿ ರೂಪಾಂತರಗಳಾದ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ಎಂಬ ನಾಲ್ಕು ಕಾಳಜಿಯ ರೂಪಾಂತರಗಳನ್ನು, ಇನ್ನೆರಡು ಕಾಳಜಿಯ ರೂಪಾಂತರಗಳಾದ ಕಪ್ಪಾ ಹಾಗೂ ಲೂಟಾ ಹಾಗೂ ಅನಾಮಧೇಯ ಹಲವು ಕಾಳಜಿಯ ರೂಪಾಂತರಗಳನ್ನು ಪರೀಕ್ಷೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಭೀತಿಯಿಲ್ಲ!ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಭೀತಿಯಿಲ್ಲ!

Recommended Video

BS Yediyurappa ಬಹಳ ವರ್ಷಗಳ ನಂತರ ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದರು | Oneindia Kannada
 ಎಲ್ಲಾ ರೂಪಾಂತರಗಳ ವಿರುದ್ದ ಕಾರ್ಯನಿರ್ವಹಿಸುವ SARS2-38 ಪ್ರತಿಕಾಯ

ಎಲ್ಲಾ ರೂಪಾಂತರಗಳ ವಿರುದ್ದ ಕಾರ್ಯನಿರ್ವಹಿಸುವ SARS2-38 ಪ್ರತಿಕಾಯ

SARS2-38 ಎಂಬ ಒಂದು ಪ್ರತಿಕಾಯವು ಎಲ್ಲಾ ರೂಪಾಂತರಗಳನ್ನು ಸುಲಭವಾಗಿ ತಟಸ್ಥಗೊಳಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮಾನವನಲ್ಲಿ ಕಂಡು ಬರುವ ಸ್ಪೈಕ್ ಪ್ರೋಟೀನ್ ಹೊಂದಿರುವ ಕಪ್ಪಾ ಮತ್ತು ಬೀಟಾ ರೂಪಾಂತರದಿಂದ ಉಂಟಾಗುವ ರೋಗಗಳ ವಿರುದ್ಧ ಇಲಿಗಳನ್ನು SARS2-38 ಪ್ರತಿಕಾಯದ ಮೂಲಕ ರಕ್ಷಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬೀಟಾ ರೂಪಾಂತರವು ಪ್ರತಿಕಾಯ ನಿರೋಧಕವಾಗಿದೆ. ಆದ್ದರಿಂದ SARS2-38 ಅನ್ನು ವಿರೋಧಿಸಲು ಅದರ ಅಸಮರ್ಥತೆಯು ವಿಶೇಷವಾಗಿ ಗಮನಾರ್ಹವಾಗಿದೆ. ಅಂದರೆ ಬೀಟಾವು ಈ SARS2-38 ಪ್ರತಿಕಾಯವನ್ನು ವಿರೋಧಿಸುವ ಸ್ಪಲ್ಪ ಸಾಮರ್ಥ್ಯವನ್ನೂ ಹೊಂದಿಲ್ಲ ಎಂಬುವುದನ್ನು ಸಂಶೋಧಕರು ಗಮನಿಸಿದ್ದಾರೆ. ಇನ್ನು ಹೆಚ್ಚಿನ ಪ್ರಯೋಗಗಳು ಪ್ರತಿಕಾಯದಿಂದ ಗುರುತಿಸಲ್ಪಟ್ಟ ಸ್ಪೈಕ್ ಪ್ರೋಟೀನ್‌ನ ನಿಖರವಾದ ಸ್ಥಳದಲ್ಲಿ ಮತ್ತು ಎರಡು ರೂಪಾಂತರಗಳು ಇದ್ದರೆ ಈ ಪ್ರತಿಕಾಯವು ಕೆಲಸ ಮಾಡುವುದಕ್ಕೆ ತಡೆ ಉಂಟಾಗಬಹುದು ಎಂದು ಕೂಡಾ ಸಂಶೋಧನಾ ವರದಿಯು ಹೇಳುತ್ತದೆ. ಆದಾಗ್ಯೂ, ಈ ರೂಪಾಂತರಗಳು ಕಾಣ ಸಿಗುವುದು ಅಪರೂಪ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರು ಸುಮಾರು 800,000 SARS-CoV-2 ಸೀಕ್ವೆನ್ಸ್‌ಗಳ ಡೇಟಾಬೇಸ್ ಅನ್ನು ಹುಡುಕಿದ್ದು ಆ ಪೈಕಿ ಕೇವಲ 0.04 ಪ್ರತಿಶತದಷ್ಟು ಮಾತ್ರ ತಪ್ಪಿಸಿಕೊಳ್ಳಬಹುದಾದ ರೂಪಾಂತರಗಳನ್ನು ಕಂಡುಕೊಂಡಿದ್ದಾರೆ. "ಈ ಪ್ರತಿಕಾಯವು ಹೆಚ್ಚು ಪರಿಣಾಮಕಾರಿಯಾಗಿದೆ ಹಾಗೂ ಎಲ್ಲಾ ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತದೆ. ಇದು ಪ್ರತಿಕಾಯಕ್ಕೆ ಅಸಾಮಾನ್ಯ ಸಂಯೋಜನೆಯಾಗಿದೆ. ಸಂಯೋಜಿತ ಚಿಕಿತ್ಸೆಗೆ ಇದು ಅದ್ಭುತವಾಗಿದೆ," ಎಂದು ಡೈಮಂಡ್‌ ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Antibody SARS2-38 That Protects Against Wide Range of Covid-19 Variants Identified, Explained in Kannada. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X