ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Anti-Valentine's Week 2023 : ಹೊಸ ಜೀವನ ಶುರು ಮಾಡಿ: ಲವ್ ಫೇಲ್ಯೂರ್ ಆದವರಿಗೂ ಇದೆ ಒಂದು ವಾರ

|
Google Oneindia Kannada News

ಫೆಬ್ರವರಿ ತಿಂಗಳಲ್ಲಿ ಎರಡು ಹೆಚ್ಚು ಮಾತನಾಡುವ ವಿಷಯಗಳೆಂದರೆ ಪ್ರೀತಿ ಮತ್ತು ಪ್ರಣಯ. ಪ್ರೇಮಿಗಳ ದಿನ (Valentine's Day) ವಾಸ್ತವವಾಗಿ ಇಡೀ ವಾರವು ಪ್ರೇಮ ಪಕ್ಷಿಗಳ ಹೃದಯದಲ್ಲಿ ಉತ್ಸಾಹವನ್ನು ತುಂಬುತ್ತದೆ. ಜೊತೆಗೆ ವಿಶೇಷವಾದದ್ದನ್ನು ಪ್ರಸ್ತಾಪಿಸಲು ಅವರಿಗೆ ಧೈರ್ಯವನ್ನು ನೀಡುತ್ತದೆ. ಆದರೆ ಪ್ರೇಮಿಗಳ ವಾರವನ್ನು ಆಚರಿಸುವವರು, ನಿಮ್ಮ ಪ್ರಿಯತಮೆಯನ್ನು ಸಂತೋಷಪಡಿಸುವ ಮತ್ತು ನಿಮ್ಮನ್ನು ಹೊಗಳಿಕೊಳ್ಳುವ ಜೊತೆಗೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು. ಯಾಕೆಂದರೆ ಈ ಆಚರಣೆ ಇನ್ನೂ ಮುಗಿದಿಲ್ಲ. ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ ಅದಾದ ಮಾರನೇಯ ದಿನ ಅಂದರೆ ಫೆಬ್ರವರಿ 15ಕ್ಕೆ ಪ್ರೀತಿಯ ವಿರೋಧದ ವಾರ (Anti-Valentine's Week) ಪ್ರಾರಂಭವಾಗುವುದು. ಫೆಬ್ರವರಿ 15ರಿಂದ ಕಪಾಳಕ್ಕೆ ಹೊಡೆಯುವ ದಿನದಿಂದ ಶುರುವಾಗಿ ಫೆಬ್ರವರಿ 21ಕ್ಕೆ ಬ್ರೇಕಪ್‌ ಆಗುವುದರೊಂದಿಗೆ ಮುಗಿಯುವುದು, ಈ ವಾರ ಪ್ರೀತಿಯದು ಅಲ್ಲ, ಪ್ರೀತಿಯನ್ನು ತಿರಸ್ಕರಿಸುವ ವಾರವಾಗಿದೆ.

 Anti-Valentine’s Week 2022: When is Slap Day, Kick Day, Breakup Day? Dates For Unromantic Week in kannada/telugu/

ಪ್ರೀತಿಯ ವಿರೋಧಿಸುವ ವಾರ (Anti-Valentine's Week 2023)

ಸ್ಲ್ಯಾಪ್ ಡೇ 2022: ಫೆಬ್ರವರಿ 15, 2022

ಕಿಕ್ ಡೇ 2022: ಫೆಬ್ರವರಿ 16, 2022

ಪರ್ಫ್ಯೂಮ್‌ ಡೇ 2022: ಫೆಬ್ರವರಿ 17, 2022

ಫ್ಲರ್ಟ್ ಡೇ 2022: ಫೆಬ್ರವರಿ 18, 2022

ಕನ್ಫೆಷನ್ ಡೇ 2022: ಫೆಬ್ರವರಿ 19, 2022

ಮಿಸ್ಸಿಂಗ್ ಡೇ 2022: ಫೆಬ್ರವರಿ 20, 2022

ಬ್ರೇಕಪ್ ಡೇ 2022: ಫೆಬ್ರವರಿ 21, 2022

ಅನೇಕ ದಂಪತಿಗಳು ವಾರದ ಪ್ರತಿ ದಿನವೂ ಮನರಂಜಿಸುವ ವಿಹಾರಗಳೊಂದಿಗೆ ಪೂರ್ಣ ವಾರವನ್ನು ಆಚರಿಸುತ್ತಾರೆ.

 Anti-Valentine’s Week 2022: When is Slap Day, Kick Day, Breakup Day? Dates For Unromantic Week in kannada/telugu/

ಪ್ರೀತಿಯ ವಿರೋಧಿಸುವ ವಾರ ಹೇಗೆ ಆಚರಿಸುವುದು?

ಸ್ಲ್ಯಾಪ್ ಡೇ: ನಿಮಗೆ ನೋವುಂಟು ಮಾಡುತ್ತಿದ್ದರೂ ನಿಮಗೆ ಅವರ ಮೇಲೆ ಸೆಂಟಿಮೆಂಟ್ ಇದ್ದರೆ ಅದನ್ನು ಹೊರದೂಡುವ ದಿನ. ನಿಮ್ಮನ್ನು ಕಾಡುತ್ತಿರುವ ಎಲ್ಲಾ ಕೆಟ್ಟ ಆಲೋಚನೆ ಹಾಗೂ ನೆನಪುಗಳನ್ನು ಹೊರ ಹಾಕುವ ದಿನ.

ಕಿಕ್ ಡೇ: ಈ ದಿನ ನಿಮ್ಮ ಎಲ್ಲಾ ಚಿಂತೆಗಳನ್ನು ಒದ್ದು ಹೊರಹಾಕಿ. ನಿಮಗೆ ಪ್ರೀತಿಯಲ್ಲಿ ಯಾರಾದರೂ ಮೋಸ ಮಾಡಿದ್ದರೆ ಅವರ ಎಲ್ಲಾ ನೆನಪುಗಳನ್ನು ನಿಮ್ಮಿಂದ ಒದ್ದು ಹೊರಹಾಕಿ.

ಪರ್ಫ್ಯೂಮ್‌ ಡೇ: ಈ ದಿನ ಯಾವುದೇ ಆಲೋಚನೆಗಳಿಂದ ದೂರವಿಡಿ. ಸ್ನಾನ ಮಾಡಿ ಪರ್ಫ್ಯೂಮ್ ಹಾಕಿ. ಆ ಅದ್ಭುತವಾದ ಸುಗಂಧ ಉತ್ತಮ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ.

ಫ್ಲರ್ಟ್ ಡೇ: ಈ ದಿನ ನೀವು ಹೊಸ ಜನರನ್ನು ಭೇಟಿ ಮಾಡಬಹುದು ಮತ್ತು ಜೀವನವನ್ನು ಉತ್ತಮ ರೀತಿಯಲ್ಲಿ ಅನುಭವಿಸಬಹುದು.

ಕನ್ಫೆಷನ್ ಡೇ (ತಪ್ಪೊಪ್ಪಿಗೆ ದಿನ): ಈ ದಿನ, ನಿಮ್ಮ ದೋಷಗಳನ್ನು ಸರಿಪಡಿಸಿಕೊಳ್ಳಿ

ಮಿಸ್ಸಿಂಗ್ ಡೇ (ಕಾಣೆಯಾದ ದಿನ): ಈ ದಿನ ನಿಮ್ಮ ಪ್ರೇಮಿಯೊಂದಿಗೆ ನೀವು ಹಂಚಿಕೊಂಡ ಆಹ್ಲಾದಕರ ಸಮಯವನ್ನು ನೆನಪಿಸಿಕೊಳ್ಳುವ ಮೂಲಕ ನೀವು ಅವರಿಗೆ ಅತ್ಯುತ್ತಮ ಉಡುಗೊರೆಗಳನ್ನು ನೀಡಬಹುದು.

ಬ್ರೇಕಪ್ ಡೇ: ಆ ವ್ಯಕ್ತಿಯ ಪ್ರೀತಿ ನಿಮಗೆ ನಿಜ ಅನಿಸದಿದ್ದರೆ ಅವರಿಂದ ಬ್ರೇಕಪ್ ಆಗುವುದು.

English summary
Anti Valentine week calendar 2022: The first day of Anti Valentine's week starts from Slap Day followed by Kick Day, Perfume Day, Flirting Day, Confession Day, Missing Day and Breakup Day. Here's the datesheet for Anti-Valentine's Week 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X