ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ‘ಭೂಮಿ’ ಪತ್ತೆಹಚ್ಚಿದ ಅಮೆರಿಕ ಬಾಹ್ಯಾಕಾಶ ವಿಜ್ಞಾನಿಗಳು

|
Google Oneindia Kannada News

ಶುಕ್ರ ಗ್ರಹದಲ್ಲಿ ಏಲಿಯನ್‌ಗಳು ಬದುಕಿರುವ ಬಗ್ಗೆ ಮಹತ್ವದ ಮಾಹಿತಿ ಸಿಕ್ಕ ಕೆಲವೇ ದಿನಗಳ ಅಂತರದಲ್ಲಿ, ಭೂಮಿ ರೀತಿಯ ಮತ್ತೊಂದು ಗ್ರಹವನ್ನು ಬಾಹ್ಯಾಕಾಶ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಹೋಲಿಕೆಯಲ್ಲಿ ಭೂಮಿಯಂತೆಯೇ ಇರುವ ಈ ಗ್ರಹ, ತನ್ನ ನಕ್ಷತ್ರದ ಸುತ್ತ 3.14 ದಿನಗಳಿಗೆ ಒಮ್ಮೆ ಸುತ್ತುತ್ತದೆ. ಭೂಮಿಗೆ ಹೋಲಿಸಿದರೆ ಅಲ್ಲಿನ ತಾಪಮಾನ ಹೆಚ್ಚಾಗಿದ್ದರೂ, ಭೂಮಿ ರೀತಿ ನೆಲವನ್ನೇ ಅದು ಹೊಂದಿದೆ. 2017ರಲ್ಲಿ ಈ ಗ್ರಹದ ಫೋಟೋಗಳನ್ನು ನಾಸಾದ ಕೆಪ್ಲರ್ ಟೆಲಿಸ್ಕೋಪ್ ತೆಗೆದಿತ್ತು.

ಫೋಟೋಗಳನ್ನು ಆಳವಾಗಿ ಅಧ್ಯಯನ ನಡೆಸಿರುವ ಅಮೆರಿಕದ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನಿಗಳು, ಭೂಮಿಗೂ ಹೊಸ ಗ್ರಹಕ್ಕೂ ಇರುವ ಹೋಲಿಕೆಯನ್ನು ಅಧ್ಯಯನ ನಡೆಸಿದ್ದಾರೆ. ಗ್ರಹಕ್ಕೆ 'ಪಿಐ ಪ್ಲಾನೆಟ್' ಎಂದು ನಾಮಕರಣ ಮಾಡಲಾಗಿದೆ. ತಾನು ಸುತ್ತುತ್ತಿರುವ ನಕ್ಷತ್ರಕ್ಕೆ ಸಾಕಷ್ಟು ಹತ್ತಿರದಲ್ಲೇ ಇರುವ 'ಪಿಐ ಪ್ಲಾನೆಟ್'ನ ಉಷ್ಣಾಂಶ ಸಾಕಷ್ಟು ಹೆಚ್ಚಾಗಿದೆ. 'ಪಿಐ ಪ್ಲಾನೆಟ್'ನಲ್ಲಿ ಸುಮಾರು 350 ಡಿಗ್ರಿ ಉಷ್ಣಾಂಶವಿದ್ದು, ಜೀವಿಗಳು ಬದುಕುವ ಸಾಧ್ಯತೆ ಕಡಿಮೆ. ಆದರೂ ಶುಕ್ರ ಗ್ರಹದಂತೆ ಇಲ್ಲೂ ಜೀವಿಗಳು ಬದುಕಿರಬಹುದು ಎಂದು ಊಹಿಸಲಾಗಿದೆ.

ಶುಕ್ರ ಗ್ರಹದಲ್ಲಿ ಏಲಿಯನ್ ಸಂಶೋಧನೆ..!

ಶುಕ್ರ ಗ್ರಹದಲ್ಲಿ ಏಲಿಯನ್ ಸಂಶೋಧನೆ..!

ಕೆಲ ದಿನಗಳ ಹಿಂದೆ ಶುಕ್ರ ಗ್ರಹದಲ್ಲಿ ಜೀವಿಗಳು ಬದುಕಿರುವ ಸಾಧ್ಯತೆ ಕುರಿತು ಸಂಶೋಧಕರು ವರದಿ ಪ್ರಕಟಿಸಿದ್ದರು. 'ನೇಚರ್ ಅಸ್ಟ್ರಾನಮಿ'ಯಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿ ಶುಕ್ರ ಗ್ರಹದ ಕಠಿಣ ಆಮ್ಲೀಯ ಮೋಡಗಳ ಒಳಗೆ ಜೀವಿಗಳು ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಫಾಸ್ಫೈನ್ (Phosphine) ಎಂಬ ಜೈವಿಕ ಅನಿಲದ ಕಣ ಆಸಿಡ್ ಮೋಡಗಳಲ್ಲಿ ಕಂಡುಬಂದಿತ್ತು. 3 ಹ್ರೈಡ್ರೋಜನ್ ಅಣುಗಳ ಜೊತೆಯಲ್ಲಿ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್ಫೈನ್ ಗ್ಯಾಸ್ ಉತ್ಪತ್ತಿ ಆಗುತ್ತದೆ. ಭೂಮಿ ಮೇಲೆ ಕೆಲ ಬ್ಯಾಕ್ಟೀರಿಯಾಗಳು ಫಾಸ್ಫೈನ್ ಗ್ಯಾಸ್ ಹೊರಸೂಸುತ್ತವೆ. ಇದೇ ಕಾರಣಕ್ಕೆ ಶುಕ್ರ ಗ್ರಹದಲ್ಲೂ ಜೀವಿಗಳು ಅಥವಾ ಸೂಕ್ಷ್ಮಾಣು ಜೀವಿಗಳು ಬದುಕಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ವರದಿ ಮಂಡನೆಯಾಗಿ ಕೆಲವೇ ದಿನದಲ್ಲಿ ಮನುಕುಲಕ್ಕೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ.

ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿ

ಆಕ್ಸಿಜೆನ್ ಇಲ್ಲದಿದ್ದರೂ ‘ಫಾಸ್ಫೈನ್’ ಗ್ಯಾಸ್ ಸಾಕು..!

ಆಕ್ಸಿಜೆನ್ ಇಲ್ಲದಿದ್ದರೂ ‘ಫಾಸ್ಫೈನ್’ ಗ್ಯಾಸ್ ಸಾಕು..!

ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್‌ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್ಫೈನ್ ಗ್ಯಾಸ್ ಕಂಡುಬಂದಿದೆ. ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ.

ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ

ನರಕದಂತಹ ಗ್ರಹದಲ್ಲಿ ಜೀವಿಗಳು ಬದುಕಬಹುದಾ..?

ನರಕದಂತಹ ಗ್ರಹದಲ್ಲಿ ಜೀವಿಗಳು ಬದುಕಬಹುದಾ..?

ಶುಕ್ರ ಗ್ರಹವನ್ನು ನೋಡಿದರೆ ಥೇಟ್ ನರಕವೇ ನೆನಪಾಗುತ್ತದೆ. ಏಕೆಂದರೆ ಶುಕ್ರ ಗ್ರಹದ ಪರಿಸ್ಥಿತಿ ಹಾಗೇ ಇದೆ. ಎಲ್ಲಾ ಕಡೆಯೂ ಕೊತ ಕೊತ ಕುದಿಯುವ ನೆಲ. ಪ್ರತಿಕ್ಷಣಕ್ಕೂ ಸ್ಫೋಟವಾಗುವ ಜ್ವಾಲಾಮುಖಿಗಳು. ಹಾಗೇ ಆಕಾಶಕ್ಕೆ ಹಾರುವ ಟನ್‌ಗಟ್ಟಲೇ ಆಸಿಡ್ ಗ್ಯಾಸ್. ಇದನ್ನೆಲ್ಲಾ ನೋಡುತ್ತಿದ್ದರೆ ನರಕ ನೆನಪಾಗದೇ ಇರದು. ಆದರೂ ಕೂಡ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎಂಬ ಕುರುಹನ್ನು ಈ ಫಾಸ್ಫೈನ್ ಗ್ಯಾಸ್ ನೀಡಿದೆ.

ಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾ

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

ಬ್ರಹ್ಮ ರಹಸ್ಯ ಬಯಲು : ಸೃಷ್ಟಿಗೆ ಕಾರಣವಾದ ದೇವಕಣ ಪತ್ತೆಬ್ರಹ್ಮ ರಹಸ್ಯ ಬಯಲು : ಸೃಷ್ಟಿಗೆ ಕಾರಣವಾದ ದೇವಕಣ ಪತ್ತೆ

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಮತ್ತೊಂದು ಭೂಮಿಯನ್ನು ಸೃಷ್ಟಿಸೋಣ: ಹೀಗೊಂದು ವಿನೂತನ ಪರಿಕಲ್ಪನೆಮತ್ತೊಂದು ಭೂಮಿಯನ್ನು ಸೃಷ್ಟಿಸೋಣ: ಹೀಗೊಂದು ವಿನೂತನ ಪರಿಕಲ್ಪನೆ

English summary
Astronomers at MIT have claimed to find a new look-alike planet similar to the Earth. This is another achievement in a week after founding alien life in Venus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X