• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

$55 ಬಿಲಿಯನ್ ಆಸ್ತಿಯಿಂದ ಜೈಲು ಬಾಗಿಲ ತನಕ ಅನಿಲ್ ಅಂಬಾನಿ

By ಅನಿಲ್ ಆಚಾರ್
|

ಈ ಸುದ್ದಿ ನೀವು ಓದುತ್ತಿರುವ ಕೊನೆ ಕ್ಷಣದಲ್ಲಿ ಆನಿಲ್ ಅಂಬಾನಿ ಅವರು ಎರಿಕ್ಸನ್ ಕಂಪನಿಗೆ ಪಾವತಿಸಬೇಕಾದ ನಾನೂರು ಐವತ್ತು ಕೋಟಿಗೂ ಹೆಚ್ಚು ಬಾಕಿಯನ್ನು ಕೋರ್ಟ್ ನೀಡಿದ್ದ ಗಡುವಿನ ಒಂದು ದಿನ ಮೊದಲು ಪಾವತಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅನಿಲ್ ಅಂಬಾನಿ ಹೇಗಿದ್ದರು ಮತ್ತು ಹೇಗಾದರು ಎಂದು ತಿಳಿಸುವ ವರದಿ ಇಲ್ಲಿದೆ.

***

ಒಂದು ಕಾಲದಲ್ಲಿ ಭಾರತದ ಅನಿಲ್ ಅಂಬಾನಿ ಆಸ್ತಿ $55 ಬಿಲಿಯನ್. ಅಂದರೆ 5500 ಕೋಟಿ ಅಮೆರಿಕನ್ ಡಾಲರ್. ಇವತ್ತಿನ ಭಾರತದ ರುಪಾಯಿ ಮೌಲ್ಯಕ್ಕೆ ಹೇಳುವುದಾದರೆ 3.75 ಲಕ್ಷ ಕೋಟಿ ರುಪಾಯಿ. ಆದರೆ ಇನ್ನೊಂದು ದಿನದಲ್ಲಿ $80 ಮಿಲಿಯನ್ ಡಾಲರ್ ಬಾಕಿಯನ್ನು ವಾಪಸ್ ಮಾಡದಿದ್ದರೆ ಅನಿಲ್ ಅಂಬಾನಿ ಜೈಲು ಪಾಲಾಗ ಬೇಕಾಗುತ್ತದೆ.

ಅನಿಲ್ ಅಂಬಾನಿಯ ಟೆಲಿಕಾಂ ಉದ್ಯಮ ಅದ್ಯಾವ ಪರಿಯ ಹೊಡೆತ ಕೊಟ್ಟಿದೆ ಎಂಬುದಕ್ಕೆ ಒಂದು ಉದಾಹರಣೆ ನಮ್ಮೆದುರು ಇದೆ. ಆ ಕಂಪನಿಯಿಂದ ಎರಿಕ್ಸನ್ ಎಬಿಗೆ 550 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ. ಆದು ಈ ಹಿಂದಿನ ಅ ಕಂಪನಿಯ ನಿರ್ವಹಣಾ ವೆಚ್ಚ. ಪದೇಪದೇ ಸಮಯ ತೆಗೆದುಕೊಂಡು, ಹಣ ಪಾವತಿಸಿಲ್ಲ. ಕೊನೆಗೆ ಕಳೆದ ತಿಂಗಳು ತಮ್ಮ ವೈಯಕ್ತಿಕ ಖಾತ್ರಿ ನೀಡಿದ್ದು, ಸಮಸ್ಯೆಗೆ ಸಿಲುಕಿಸಿದೆ.

'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ'

ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸಿದರು ಆನಿಲ್. ಜತೆಗೆ ಕಳೆದ ವಾರ ಏನಾಗಿದೆ ಅಂದರೆ, ಅನಿಲ್ ಗೆ ಮರು ಪಾವತಿ ಆಗಬೇಕಾದ ತೆರಿಗೆ ಹಣವನ್ನು ಪಾವತಿದಾರರಿಂದ ಕೊಡಿಸಬೇಕು ಎಂಬ ಮನವಿ ಕೂಡ ಕೆಳ ಹಂತದ ಕೋರ್ಟ್ ನಲ್ಲಿ ತಿರಸ್ಕೃತವಾಗಿದೆ. ಒಂದು ವೇಳೆ ಮಂಗಳವಾರದಂದು ಪಾವತಿ ಆಗಲಿಲ್ಲ ಅಂದರೆ 59 ವರ್ಷದ ಅನಿಲ್ ಅಂಬಾನಿಗೆ ಮೂರು ತಿಂಗಳು ಜೈಲು ಶಿಕ್ಷೆ ಆಗಬಹುದು.

$300 ಮಿಲಿಯನ್ ಗೆ ಕುಸಿದಿದೆ ಅನಿಲ್ ಅಂಬಾನಿ ಆಸ್ತಿ ಮೌಲ್ಯ

$300 ಮಿಲಿಯನ್ ಗೆ ಕುಸಿದಿದೆ ಅನಿಲ್ ಅಂಬಾನಿ ಆಸ್ತಿ ಮೌಲ್ಯ

2008ನೇ ಇಸವಿಯಲ್ಲಿ ಅನಿಲ್ ಅಂಬಾನಿ ಆಸ್ತಿ ಇದ್ದದ್ದು ಕನಿಷ್ಠ $55 ಬಿಲಿಯನ್. ಅಲ್ಲಿಂದ ಈಗ $300 ಮಿಲಿಯನ್ ಗೆ ಕುಸಿದಿದೆ. ಬ್ಲೂಮ್ ಬರ್ಗ್ ನಿಂದ ಸಂಗ್ರಹಿಸಲಾದ ಅಂಕಿ-ಅಂಶದ ಪ್ರಕಾರ, ಅನಿಲ್ ಅಂಬಾನಿ ಟೆಲಿಕಾಂನಿಂದ ಪೆಟ್ರೊಲ್, ವಿದ್ಯುತ್, ಮೂಲಸೌಕರ್ಯ ವ್ಯಾಪಾರದ ತನಕ ಎಲ್ಲವೂ ಸಾಲವನ್ನು ತೀರಿಸಲು ಹೆಣಗುತ್ತಿವೆ. ಆಸ್ತಿ ಮಾರಾಟ ಮಾಡಿ, ಸಾಲಗಾರರಿಗೆ ಹಿಂತಿರುಗಿಸಲಾಗುತ್ತಿದೆ.

ಅಣ್ಣ ಮುಕೇಶ್ ಅಂಬಾನಿ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ

ಅಣ್ಣ ಮುಕೇಶ್ ಅಂಬಾನಿ ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಿ

ಒಂದು ಕಡೆ ಅನಿಲ್ ಅಂಬಾನಿ ಆಸ್ತಿ ದಿನದಿನಕ್ಕೂ ಕುಸಿಯುತ್ತಾ ಸಾಗಿದರೆ, ಅದೇ ಉದ್ಯಮಿಯ ಅಣ್ಣ ಮುಕೇಶ್ ಅಂಬಾನಿ ಆಸ್ತಿ ಮೌಲ್ಯ ಏರುತ್ತಾ $52.9 ಬಿಲಿಯನ್ ತಲುಪಿದೆ ಎಂಬುದನ್ನು ಬ್ಲೂಮ್ ಬರ್ಗ್ ಶತಕೋಟ್ಯಧಿಪತಿಗಳ ಸೂಚ್ಯಂಕವು ತಿಳಿಸುತ್ತಿದೆ. ಎರಿಕ್ಸನ್ ಗೆ ಹೇಗೆ ಹಣ ಮರು ಪಾವತಿ ಮಾಡುತ್ತೀರಿ ಎಂದು ಅನಿಲ್ ಅಂಬಾನಿ ಸಮೂಹದ ವಕ್ತಾರರಿಗೆ ಮಾಧ್ಯಮವೊಂದು ಕೇಳಿರುವ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಿಲ್ಲ.

ತೆರಿಗೆ ಹಣ ಮರುಪಾವತಿ ಆಗದ ಹೊರತು ಬೇರೆ ದಾರಿಯಿಲ್ಲ್

ತೆರಿಗೆ ಹಣ ಮರುಪಾವತಿ ಆಗದ ಹೊರತು ಬೇರೆ ದಾರಿಯಿಲ್ಲ್

ಅನಿಲ್ ಅಂಬಾನಿಗೆ ಸೇರಿದ ಹಲವು ಉದ್ಯಮಗಳು ಆದಾಯ ತರುವಲ್ಲಿ ವಿಫಲವಾಗಿವೆ. ಕೋರ್ಟ್ ನಲ್ಲಿ ವಾದ ಮಂಡಿಸಿದ ಅನಿಲ್ ಅಂಬಾನಿ ಪರ ವಕೀಲರು, ರಿಲಯನ್ಸ್ ಕಮ್ಯುನಿಕೇಷನ್ಸ್ ಗೆ ಪಾವತಿ ಆಗಬೇಕಾದ ಇನ್ನೂರಾ ಅರವತ್ತು ಕೋಟಿ ತೆರಿಗೆ ಮರುಪಾವತಿ ಆಗದೆ ಬಾಕಿ ಪಾವತಿಸಲು ಸಂಸ್ಥೆ ಬಳಿ ಹಣವಿಲ್ಲ ಎಂದರೆ- ಈ ಪ್ರಸ್ತಾವವನ್ನು ಬ್ಯಾಂಕ್ ಗಳು ವಿರೋಧಿಸಿವೆ.

ವಿರಳವಾದ ಸನ್ನಿವೇಶ ಎದುರಿಸುತ್ತಿರುವ ಅನಿಲ್ ಅಂಬಾನಿ

ವಿರಳವಾದ ಸನ್ನಿವೇಶ ಎದುರಿಸುತ್ತಿರುವ ಅನಿಲ್ ಅಂಬಾನಿ

ದ ನ್ಯಾಷನಲ್ ಕಂಪನಿ ಲಾ ಅಪಿಲೇಟ್ ಟ್ರಿಬ್ಯುನಲ್ ನಲ್ಲಿ ಮಾರ್ಚ್ ಹದಿನೈದರಂದು, ಆ ಹಣ ಬಿಡುಗಡೆ ಮಾಡುವಂತೆ ಬ್ಯಾಂಕ್ ಗಳು ಸೂಚಿಸಲು ಸಾಧ್ಯವಿಲ್ಲ ಎಂದಿದೆ. ಇದೀಗ ಅನಿಲ್ ಅಂಬಾನಿ ವಿರಳವಾದ ಸನ್ನಿವೇಶ ಎದುರಿಸುತ್ತಿದ್ದಾರೆ. ಭಾರತದ ಶ್ರೀಮಂತ ಸಾಲಗಾರರ ಸಂಸ್ಥೆಗಳು ಹಣ ಮರು ಪಾವತಿಸದಿದ್ದಾಗ ಜೈಲು ಸೇರಬೇಕಾದ ಸನ್ನಿವೇಶ ಎದುರಾಗಿರುವುದು ಕಡಿಮೆ. ಆದರೆ ಜನಪ್ರತಿನಿಧಿಗಳು, ಕೋರ್ಟ್ ಗಳು ಬ್ಯಾಂಕ್ ಗಳ ಪರವಾಗಿ ನಿಂತು ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿದೆ.

ವೈಯಕ್ತಿಕ ಖಾತ್ರಿ ನೀಡಿದ್ದರಿಂದ ಜೈಲು ಭೀತಿ

ವೈಯಕ್ತಿಕ ಖಾತ್ರಿ ನೀಡಿದ್ದರಿಂದ ಜೈಲು ಭೀತಿ

ಈ ಮಧ್ಯ ಹೊಸದಾಗಿ ಬಂದಿರುವ ದಿವಾಳಿಗೆ ಸಂಬಂಧಿಸಿದ ಕಾನೂನು ಕೂಡ ಎರಿಕ್ಸನ್ ಕಂಪನಿಗೆ ರಿಲಯನ್ಸ್ ಕಮ್ಯೂನಿಕೇಷನ್ಸ್ ಕೈ ಕಟ್ಟಿ ಹಾಕುವುದು ಸಲೀಸಾಗಿದ್ದು, ಸಾವಿರದ ಆರು ನೂರು ಕೋಟಿ ರುಪಾಯಿ ಕ್ಲೇಮ್ ಮಾಡಿತ್ತು. ಆ ರೀತಿ ದಿವಾಳಿಯ ಅರ್ಜಿ ಹಾಕುವ ಮೂಲಕವೇ ಎರಿಕ್ಸನ್ ಆರಂಭಿಸಿತು. ಆ ನಂತರ ಅನಿಲ್ ಅಂಬಾನಿಯಿಂದ ವೈಯಕ್ತಿಕ ಖಾತ್ರಿ ಪಡೆಯಿತು. ಅದರಿಂದಲೇ ಈಗ ಜೈಲು ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ ಅನಿಲ್ ಅಂಬಾನಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Once worth at least $55 billion, India’s Anil Ambani has about a day to piece together $80 million to settle long-pending dues with a vendor or go to prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more