ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್ ಸೇರಿ ಮೂವರು ಸಚಿವರ ಅಕಾಲಿಕ ನಿಧನ ಕಂಡ ಮೋದಿ

|
Google Oneindia Kannada News

ಬೆಂಗಳೂರು, ನವೆಂಬರ್ 12 : ಕೇಂದ್ರ ಸಂಸದೀಯ ವ್ಯವಹಾರಗಳು ಹಾಗು ರಸಗೊಬ್ಬರ ಖಾತೆ ಸಚಿವ, ಹಿರಿಯ ಬಿಜೆಪಿ ನಾಯಕ, ಜಯನಗರದ ಸಂಸದ ಅನಂತ್ ಕುಮಾರ್ ಅವರು ತೀವ್ರ ಅನಾರೋಗ್ಯಕ್ಕೊಳಗಾಗಿ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅನಂತ್ ಅವರ ಅಗಲಿಕೆಯ ನೋವು ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಬಾಧಿಸುತ್ತಿದೆ.

ಎಬಿವಿಪಿ, ಬಿಜೆಪಿ ಮತ್ತು ಸಂಘಪರಿವಾರದ ಅತ್ಯಂತ ಪ್ರಮುಖ ಮುಖಂಡರಾಗಿ ಅನಂತ್ ಗುರುತಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗುವ ಮೂಲಕ ಅತ್ಯಂತ ಕಿರಿಯ ವಯಸ್ಸಿಗೆ ಸಚಿವರಾದ ದಾಖಲೆ ಬರೆದಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಮತ್ತೊಬ್ಬ ಪ್ರಮುಖ ಸಚಿವ ಅಕಾಲಿಕವಾಗಿ ನಿಧನರಾಗಿರುವ ವಾರ್ತೆಯನ್ನು ಅರಗಿಸಿಕೊಳ್ಳಬೇಕಾಗಿದೆ.

1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು 1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು

ಇದಲ್ಲದೆ, ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿದ್ದ ಆಪ್ತ ವಲಯದ ಸಹದ್ಯೋಗಿಗಳು ಮಾರಕ ಕಾಯಿಲೆಯಿಂದ ಬಳಲಿ, ಸಾವಿನೊಂದಿಗೆ ಹೋರಾಟ ನಡೆಸಿ, ಗೆದ್ದಿದ್ದನ್ನು ಕಂಡಿದ್ದಾರೆ. ಒಬ್ಬ ಪ್ರಮುಖ ಸಚಿವರು ಕೇಂದ್ರದ ಮಹತ್ವದ ಹುದ್ದೆ ತೊರೆದು, ಆರೋಗ್ಯ ಸಮಸ್ಯೆ ನಡೆಯುವೆಯೂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿಭಾಯಿಸುತ್ತಿದ್ದಾರೆ.

ಗೋಪಿನಾಥ್ ಮುಂಡೆ

ಗೋಪಿನಾಥ್ ಮುಂಡೆ

2014ರ ಮೇ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೇಂದ್ರ ಸಚಿವರಾಗಿ ಮಹಾರಾಷ್ಟ್ರದ ನಾಯಕ ಗೋಪಿನಾಥ್ ಮುಂಡೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಈ ಸಂತಸದ ಗಳಿಗೆ ಕಂಡ ಮುಂಡೆ ಅವರ ಕುಟುಂಬಕ್ಕೆ ಒಂದು ವಾರದಲ್ಲೇ ಸೂತಕ ಎದುರಾಯಿತು. ಕೇಂದ್ರ ಕೃಷಿ ಸಚಿವರಾಗಿದ್ದ ಮುಂಡೆ ಅವರು ಮೋದಿ ಅವರ ಸಂಪುಟ ಸೇರಿದ ಒಂದೇ ವಾರದೊಳಗೆ ದೆಹಲಿಯಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟರು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಗೋಪಿನಾಥ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರು.

2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು 2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಧವೆ

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಧವೆ

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಧವೆ ಅವರು ಮೇ 18, 2017 ರಂದು ದೆಹಲಿಯ ಏಮ್ಸ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು 2017 ವರ್ಷಾರಂಭದಿಂದಲೂ ಅನಾರೋಗ್ಯಪೀಡಿತರಾಗಿ ಕಚೇರಿಗೆ ನಿಯಮಿತವಾಗಿ ಬರುತ್ತಿರಲಿಲ್ಲ. ಪರಿಸರವಾದಿಯಾಗಿ ನರ್ಮದಾ ನದಿ ಪುನರುಜ್ಜೀವನ ಕಾರ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ನಿಮೋನಿಯಾಕ್ಕೆ ತುತ್ತಾಗಿದ್ದ ಅನಿಲ್ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಅವಿವಾಹಿತರಾಗಿದ್ದ ಅನಿಲ್ ಅವರ ಇಚ್ಛೆಯಂತೆ ನರ್ಮದಾ ನದಿ ತೀರದಲ್ಲೇ ಅವರ ಅಂತ್ಯಕ್ರಿಯೆಯನ್ನು ವೈದಿಕ ವಿಧಿ ವಿಧಾನದಂತೆ ನಡೆಸಲಾಯಿತು.

ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ

ಎಚ್ಎನ್ ಅನಂತ್ ಕುಮಾರ್

ಎಚ್ಎನ್ ಅನಂತ್ ಕುಮಾರ್

ಕೇಂದ್ರ ಸಂಸದೀಯ ವ್ಯವಹಾರಗಳು ಹಾಗು ರಸಗೊಬ್ಬರ ಖಾತೆ ಸಚಿವ, ಹಿರಿಯ ಬಿಜೆಪಿ ನಾಯಕ, ಜಯನಗರದ ಸಂಸದ ಎಚ್ ಎನ್ ಅನಂತ್ ಕುಮಾರ್ ಅವರು ಕ್ಯಾನ್ಸರ್ ಮಾರಿಗೆ ತುತ್ತಾದವರು ಚೇತರಿಸಿಕೊಳ್ಳಲಿಲ್ಲ. ಲಂಡನ್, ಅಮೆರಿಕಕ್ಕೆ ಹೋಗಿ ಬಂದರೂ ಗುಣಮುಖರಾಗಲಿಲ್ಲ. ಅವರ ಅಪ್ಪ-ಅಮ್ಮ ಇಬ್ಬರು ಕ್ಯಾನ್ಸರಿನಿಂದಾಗಿ ಮೃತಪಟ್ಟಿದ್ದರು. ಕ್ಯಾನ್ಸರ್ ಮದ್ದಿಗೆ ತಗುಲುವ ದುಬಾರಿ ವೆಚ್ಚವನ್ನು ತಗ್ಗಿಸಲು ಶ್ರಮಿಸಿದ್ದರು. ಬಡವರಿಗೆ ಕಡಿಮೆ ದರದಲ್ಲಿ ಅಗತ್ಯ ಜೀವರಕ್ಷಕ ಔಷಧಿ ದೊರೆಯುವಂತೆ ಮಾಡಿದ್ದರು. ಆದರೆ, ಅವರ ಕಾಯಿಲೆಗೆ ಮದ್ದು ಇಲ್ಲದ್ದಂತೆ ಇಹಲೋಕ ವ್ಯಾಪಾರ ಮುಗಿಸಿದರು.

ಅನಂತ್ ಕುಮಾರ್ ಸಾವು ಸಂಭ್ರಮಿಸಿದ 'ಮಂಗಳೂರು ಮುಸ್ಲಿಮ್ಸ್: ತಿರುಗೇಟು ಕೊಟ್ಟ ನೆಟ್ಟಿಗರು ಅನಂತ್ ಕುಮಾರ್ ಸಾವು ಸಂಭ್ರಮಿಸಿದ 'ಮಂಗಳೂರು ಮುಸ್ಲಿಮ್ಸ್: ತಿರುಗೇಟು ಕೊಟ್ಟ ನೆಟ್ಟಿಗರು

ಸಾವಿನೊಂದಿಗೆ ಹೋರಾಟ ನಡೆಸಿದ ಸಚಿವರು

ಸಾವಿನೊಂದಿಗೆ ಹೋರಾಟ ನಡೆಸಿದ ಸಚಿವರು

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕಿಡ್ನಿ ಕೈಕೊಟ್ಟಿದ್ದರಿಂದ ಬಹುಕಾಲ ತಮ್ಮ ಕಚೇರಿಯಿಂದ ದೂರ ಉಳಿಯಬೇಕಾಯಿತು.ದೆಹಲಿಯ ಏಮ್ಸ್ ನಲ್ಲಿ ಕಿಡ್ನಿ ಕಸಿಗೊಳಗಾಗಿ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆದು, ಮತ್ತೊಮ್ಮೆ ತಮ್ಮ ಕರ್ತವ್ಯಕ್ಕೆ ಹಾಜರಾದರು. ಆದರೆ, ಇನ್ನು ಅಪಾಯದಿಂದ ಪೂರ್ಣವಾಗಿ ಪಾರಾಗಿಲ್ಲ. ವಿಶ್ರಾಂತಿಯ ಅಗತ್ಯವಿದೆ.
****

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಕಿಡ್ನಿ ಕಸಿ ಮಾಡಿಸಿಕೊಂಡು, ವಿಶ್ರಾಂತಿ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾದರು.

***

ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಾಜಿ ರಕ್ಷಣಾ ಸಚಿವ, ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುವಾಗಲೆ ಸಚಿವ ಸಂಪುಟ ಸಭೆ ನಡೆಸಿದ್ದರು. ತೀವ್ರ ಅನಾರೋಗ್ಯದಲ್ಲಿದ್ದರೂ ಪರಿಕ್ಕರ್ ಇನ್ನೂ ಸಿಎಂ ಆಗಿ ಮುಂದುವರಿದಿದ್ದಾರೆ.

English summary
HN Ananth Kumar, Anil dave and Gopinath Munde are the three union ministers who passed away during the PM Narendra Modi tenure
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X