ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ಹಂತದಲ್ಲಿ ರಮೇಶ್ ಹಾಗೂ ಬಾದಲ್ ಶ್ರೀಮಂತ ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಮೇ 14: ಲೋಕಸಭೆ ಚುನಾವಣೆ 2019ಯ ಕೊನೆ ಹಂತದ ಮತದಾನ ಪ್ರಕ್ರಿಯೆ ಮೇ 19ರಂದು ನಿಗದಿಯಾಗಿದೆ. ಕೊನೆ ಹಂತದಲ್ಲಿ ಕಣದಲ್ಲಿರುವ ಸಿರಿವಂತ ಅಭ್ಯರ್ಥಗಳ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆಯ 7ನೇ ಹಾಗೂ ಅಂತಿಮ ಹಂತದಲ್ಲಿ ಸ್ಪರ್ಧಿಸಿರುವ ಸ್ಪರ್ಧಿಗಳ ಪೈಕಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಬಿಹಾರದಲ್ಲಿದ್ದಾರೆ. ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮ ಅವರ ಆಸ್ತಿ ಮೌಲ್ಯ 11,07,58,33,190 ರು ಎಂದು ವರದಿ ಹೇಳಿದೆ.

ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ

ರಮೇಶ್ ಕುಮಾರ್ ನಂತರದ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಸುಖ್ ಬೀರ್ ಸಿಂಗ್ ಬಾದಲ್ ಇದ್ದಾರೆ. ಬಾದಲ್ ಅವರ ಆಸ್ತಿ ಮೌಲ್ಯ 2,17,99,19,870 ರು (217 ಕೋಟಿ ರು). ಚರಾಸ್ತಿ 1,00,30,02,445 ರು ಹಾಗೂ ಸ್ಥಿರಾಸ್ತಿ ಮೌಲ್ಯ 1,17,69,17,425ರು.

ಸುಖ್ ಬೀರ್ ಸಿಂಗ್ ಬಾದಲ್

ಸುಖ್ ಬೀರ್ ಸಿಂಗ್ ಬಾದಲ್

ರಮೇಶ್ ಕುಮಾರ್ ನಂತರದ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಸುಖ್ ಬೀರ್ ಸಿಂಗ್ ಬಾದಲ್ ಇದ್ದಾರೆ. ಬಾದಲ್ ಅವರ ಆಸ್ತಿ ಮೌಲ್ಯ 2,17,99,19,870 ರು (217 ಕೋಟಿ ರು). ಚರಾಸ್ತಿ 1,00,30,02,445 ರು ಹಾಗೂ ಸ್ಥಿರಾಸ್ತಿ ಮೌಲ್ಯ 1,17,69,17,425ರು.

ಬಾದಲ್ ದಂಪತಿ ಆಸ್ತಿ ಮೌಲ್ಯ

ಬಾದಲ್ ದಂಪತಿ ಆಸ್ತಿ ಮೌಲ್ಯ

ಮಾಜಿ ಕೇಂದ್ರ ಸಚಿವೆ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಹರ್ ಸಿಮ್ರತ್ ಕೌರ್ ಬಾದಲ್ ಅವರು ಭಟಿಂಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹರ್ ಸಿಮ್ರತ್ ಕೌರ್ ಅವರು 2,17,99,19,870ರು ಹೊಂದಿದ್ದಾರೆ.

ಪತಿ ಚರಾಸ್ತಿ ಮೌಲ್ಯ 100 ಕೋಟಿ ರು ನಲ್ಲಿ ಪತಿ ಸುಖ್ ಬೀರ್ 76 ಕೋಟಿ ರು ಹಾಗೂ ಪತ್ನಿ 24.18 ಕೋಟಿ ರು ಹೊಂದಿದ್ದಾರೆ. 9.4 ಕೋಟಿ ರು ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. 7 ಕೋಟಿ ಆಭರಣ ಹೊಂದಿದ್ದಾರೆ. ದಂಪತಿ ಬಳಿ 1.6 ಲಕ್ಷ ರು ನಗದು ಹೊಂದಿದ್ದಾರೆ.
ಮೂವರು ಅಭ್ಯರ್ಥಿಗಳು ಶೂನ್ಯ ಆಸ್ತಿ

ಮೂವರು ಅಭ್ಯರ್ಥಿಗಳು ಶೂನ್ಯ ಆಸ್ತಿ

ಒಟ್ಟು ಮೂವರು ಅಭ್ಯರ್ಥಿಗಳು ಶೂನ್ಯ ಆಸ್ತಿ ಘೋಷಿಸಿಕೊಂಡಿದ್ದಾರೆ. ಪಪ್ಪು ಕುಮಾರ್, ಶಿವಚರಣ್ ಹಾಗೂ ಸುನೀಲ್ ಕುಮಾರ್ ಪಾಂಡೆ ಅವರು ಶೂನ್ಯ ಅಸ್ತಿ ಹೊಂದಿದ್ದಾರೆ. ಅತಿ ಕಡಿಮೆ ಆಸ್ತಿ ಹೊಂದಿರುವವರು ಊರ್ಮಿಳಾ, ಜಾನಿ ಕರಣ್, ಚೈನ್ ಸಿಂಗ್ ಬೈಂಕಾ. ಇವರುಗಳು ಕ್ರಮವಾಗಿ 295ರು, 1,000ರು ಹಾಗೂ 3,000 ರು ಆದಾಯ ತೋರಿಸಿದ್ದಾರೆ.

4ನೇ ಹಂತದಲ್ಲೂ ಮೂವರ ಶೂನ್ಯ ಆಸ್ತಿ

4ನೇ ಹಂತದಲ್ಲೂ ಮೂವರ ಶೂನ್ಯ ಆಸ್ತಿ

ಮಹಾರಾಷ್ಟ್ರದ ನಾಸಿಕ್ ಹಾಗೂ ಥಾಣೆ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಿಯಾಂಕಾ ರಾಮರಾವ್ ಶಿರೋಲಿ ಹಾಗೂ ವಿಠಲ್ ನಾಥ ಚವಾಣ್ ಹಾಗೂ ಟೊಂಕ್ ಸವಾಯಿ ಮಾಧೋಪುರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರೇಮಲತ ಬನ್ಶಿವಾಲ್ ಅವರು ಶೂನ್ಯ ಆಸ್ತಿ ಘೋಷಿಸಿದ್ದರು.ಮೇ 19ರಂದು ಪಂಜಾಬಿನ 13 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 8 ರಾಜ್ಯಗಳು ಹಾಗೂ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

English summary
Ramesh Kumar Sharma, an independent contesting the 7th phase of the Lok Sabha elections 2019 from Pataliputra is the richest with assets to the tune of Rs 11,07,58,33,190.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X