• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿ ತಮ್ಮ 'ಭಕ್ತ'ರಿಗಾಗಿ ವಿಶೇಷ ಪೆಟ್ರೋಲ್ ಬಂಕ್ ತೆರೆಯಬೇಕಿದೆ

|

ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪನವರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ, ಹಾಲೀ ಮಂಗಳೂರು ಶಾಸಕ ಯು.ಟಿ.ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

   ಪ್ರಧಾನಿ ಮೋದಿ ಭಕ್ತರಿಗಾಗಿ ಸ್ಪೆಷಲ್ ಪೆಟ್ರೋಲ್ ಬಂಕ್ ತೆರೆಯಬೇಕಿದೆ: ಮಾಜಿ ಸಚಿವ U.T.Khader ಲೇವಡಿ

   'ಒನ್ ಇಂಡಿಯಾ'ಕಚೇರಿಗೆ ಆಗಮಿಸಿದ್ದ ಖಾದರ್ ಅವರು ಕೊರೊನಾ, ಕೋವಿಡ್ ಲಸಿಕೆ, ಎಐಸಿಸಿ, ಕೆಪಿಸಿಸಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಯಾರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ.

   EXCLUSIVE INTERVIEW: ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ: ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ!

   ಪ್ರ: ಕೊರೊನಾ ನಿರ್ವಹಣೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಯಾವ ರೀತಿ ನಿಭಾಯಿಸಿದೆ?

   ಖಾದರ್: ಕೊರೊನಾವನ್ನು ಸಂಪೂರ್ಣವಾಗಿ ಓಡಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಯಾಕೆಂದರೆ ಇವರೇ ಗೊಂದಲದಲ್ಲಿದ್ದಾರೆ. ಕಳೆದ ಆರು ತಿಂಗಳಲ್ಲಿ ಕೊರೊನಾ ಜೊತೆಗೆ, ಜನಸಾಮಾನ್ಯರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ.

    ಲಾಕ್ ಡೌನ್, ತಬ್ಲಿಘಿ ಕಾರ್ಯಕ್ರಮ

   ಲಾಕ್ ಡೌನ್, ತಬ್ಲಿಘಿ ಕಾರ್ಯಕ್ರಮ

   ಪ್ರ: ಲಾಕ್ ಡೌನ್ ಅನ್ನು ಸಮಯಕ್ಕೆ ಮುಂಚಿತವಾಗಿಯೇ ಘೋಷಣೆ ಮಾಡಿದ್ರಾ?

   ಖಾದರ್: ಯಾವ ಸಮಯದಲ್ಲಿ ಲಾಕ್ ಡೌನ್ ಮಾಡಬೇಕಿತ್ತು ಆ ವೇಳೆ ಅದನ್ನು ಮಾಡಲಿಲ್ಲ. ಅಂತರಾಷ್ಟ್ರೀಯ ವಿಮಾನಗಳನ್ನು ದೇಶಕ್ಕೆ ಬರಲು ಬಿಟ್ಟರು. ಒಂದು ತಿಂಗಳು ಕಠಿಣವಾದ ಲಾಕ್ ಡೌನ್ ಮಾಡಬೇಕಿತ್ತು. ಅದನ್ನು ಬಿಟ್ಟು ಊರೆಲ್ಲಾ ಲಾಕ್ ಡೌನ್ ಮಾಡಿದರೆ ಹೇಗೆ?

   ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು. ದೆಹಲಿಯಲ್ಲಿ ಅನುಮತಿಯನ್ನು ಯಾಕೆ ನೀಡಬೇಕಾಗಿತ್ತು. ಐಪಿಎಲ್ ಕ್ರೀಡಾಕೂಟವನ್ನೇ ಮುಂದಕ್ಕೆ ಹಾಕಿದ್ದರು. ತಬ್ಲಿಘಿ ಕಾರ್ಯಕ್ರಮಕ್ಕೆ ಯಾಕೆ ಅನುಮತಿ ನೀಡಬೇಕಾಗಿತ್ತು. ಇದು ಕೇಂದ್ರ ಸರಕಾರದ ಗಂಭೀರ ವೈಫಲ್ಯ.

    ಕೊರೊನಾ ವೈರಸ್ ತುತ್ತಾದವರಿಗೆ ಮಾನವೀಯತೆಯ ಕೆಲಸನ್ನು ಮಾಡಿಲ್ಲ

   ಕೊರೊನಾ ವೈರಸ್ ತುತ್ತಾದವರಿಗೆ ಮಾನವೀಯತೆಯ ಕೆಲಸನ್ನು ಮಾಡಿಲ್ಲ

   ಪ್ರ: ತಬ್ಲಿಘಿ ಸಂಘಟಕರು ಕೇಂದ್ರ ಗೃಹ ಇಲಾಖೆಗೆ ಸಹಕಾರ ನೀಡಲಿಲ್ಲ ಎನ್ನುವ ಅಪವಾದ ಇದೆಯಲ್ಲ?

   ಖಾದರ್: ಇದಕ್ಕೆ ಕಾರಣಕರ್ತರು ಯಾರು? ಕೊರೊನಾ ವಿಚಾರ ಅವರಿಗೆ ತಿಳಿಯದೇ ಇರಬಹುದು. ಲಾಕ್ ಡೌನ್ ಘೋಷಣೆಯಾದ ನಂತರ ಅಲ್ಲೇ ಸಿಕ್ಕಿಹಾಕಿ ಕೊಂಡಿರಬಹುದು. ಕೊರೊನಾ ವೈರಸ್ ತುತ್ತಾದವರಿಗೆ ಮಾನವೀಯತೆಯ ಕೆಲಸನ್ನು ಮಾಡಿಲ್ಲ. ಜೈಲಿಗೆ ಹೋಗುವ ಪರಿಸ್ಥಿತಿ ಇತ್ತು, ಹಾಗಾಗಿ, ಅವರು ಹೇಗೆ ಕೇಂದ್ರ ಸರಕಾರದ ಮೇಲೆ ನಂಬಿಕೆಯನ್ನು ಇಡಲು ಸಾಧ್ಯ.

    ಲಸಿಕೆಯ ಹಂಚಿಕೆ

   ಲಸಿಕೆಯ ಹಂಚಿಕೆ

   ಪ್ರ: ಕೊರೊನಾ ಲಸಿಕೆಯ ಹಂಚಿಕೆಯಲ್ಲಿ ನಿಮ್ಮ ಅಭಿಪ್ರಾಯ?

   ಖಾದರ್: ಇದರಲ್ಲಿ ಮೂರು ವಿಚಾರವಿದೆ. ಒಂದು ಸೈನ್ಸ್, ಇನ್ನೊಂದು ಇಕಾನಮಿ ಮತ್ತೊಂದು ಪಾಲಿಟಿಕ್ಸ್. ಇದರಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುವುದನ್ನು ಬಿಡಬೇಕು. ಲಸಿಕೆ ವಿಚಾರದಲ್ಲಿ ಕಂಪೆನಿಗಳು ನಿರ್ವಹಿಸಿದ ಮಾನದಂಡವೇನು ಮುಂತಾದ ಮಾಹಿತಿಯನ್ನು ಸರಕಾರ, ಸಾರ್ವಜನಿಕರಿಗೆ ತಿಳಿಸಬೇಕು. ಎಷ್ಟು ಜನರ ಮೇಲೆ ಇದನ್ನು ಪ್ರಯೋಗಿಸಿದ್ದೇವೆ, ಲಸಿಕೆ ತಯಾರಿಸಲು ಬಳಸಲಾದ ವಸ್ತುಗಳೇನು, ಐಸಿಎಂಆರ್ ಕೊಟ್ಟ ರಿಪೋರ್ಟ್ ಏನು ಮುಂತಾದವುಗಳನ್ನು ಸರಕಾರ ತಿಳಿಸಬೇಕು.

    ಯು.ಟಿ.ಖಾದರ್ ವಿಶೇಷ ಸಂದರ್ಶನ

   ಯು.ಟಿ.ಖಾದರ್ ವಿಶೇಷ ಸಂದರ್ಶನ

   ಪ್ರ: ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಕಾಂಗ್ರೆಸ್ಸಿನಲ್ಲಿ ಗೊಂದಲವಿದೆಯಾ?

   ಖಾದರ್: ರಾಹುಲ್ ಗಾಂಧಿಯವರನ್ನು ಬೇಡ ಎಂದು ಯಾರೂ ಹೇಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಅವರು ಹಿಂದೆ ಸರಿದಿರಬಹುದು. ಅವರು ಹೇಳುವ ಹೇಳಿಕೆಯ ಹಿಂದೆ ಒಂದು ಲಾಜಿಕ್ ಇದೆ. ಅವರು ಹೇಳಿದ ಹೇಳಿಕೆ ಎಲ್ಲಾ ಸತ್ಯವಾಗುತ್ತಿದೆ.

   ರಾಹುಲ್ ಹೇಳಿಕೆಯನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅವರು ಒಂದು ಕನಿಷ್ಠ ಸಚಿವ ಸ್ಥಾನ ಬಯಸಲಿಲ್ಲ. ಮುಂದೊಂದು ದಿನ ಅವರು ಈ ದೇಶದ ಪ್ರಧಾನಿಯಾಗಲಿದ್ದಾರೆ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಮೋದಿ ಭಕ್ತರು ನೂರು ರೂಪಾಯಿ ಆಗಲಿ, ಅದು ದೇಶಕ್ಕಾಗಿ ಅನ್ನುತ್ತಿದ್ದಾರೆ. ಅವರಿಗಾಗಿ ಪ್ರತ್ಯೇಕ ಪೆಟ್ರೋಲ್ ಬಂಕ್ ಓಪನ್ ಮಾಡಲಿ.

    ಸಿದ್ದರಾಮಯ್ಯ ಮತ್ತು ಡಿಕೆಶಿ

   ಸಿದ್ದರಾಮಯ್ಯ ಮತ್ತು ಡಿಕೆಶಿ

   ಪ್ರ: ಕಾಂಗ್ರೆಸ್ಸಿನ ಸಿಎಂ ಕ್ಯಾಂಡಿಡೇಟ್ ಯಾರು?

   ಖಾದರ್: ಅದನ್ನು ನಮ್ಮ ಶಾಸಕಾಂಗ ಪಕ್ಷದ ಸಭೆ ನಿರ್ಧರಿಸುತ್ತದೆ. ಯಾರಾದರೂ ಒಬ್ಬರನ್ನು ಆಯ್ಕೆ ಮಾಡಬೇಕಾಗುತ್ತದೆ, ಸರ್ವಾನುಮತದಿಂದ ಒಬ್ಬರು ಆಯ್ಕೆಯಾಗುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಸಾಮಾಜಿಕ ನ್ಯಾಯ, ಅಂಬೇಡ್ಕರ್ ಅವರ ಸಂವಿಧಾವನ್ನು ಉಳಿಸುವುದೇ ಕಾಂಗ್ರೆಸ್ಸಿನ ಮೂಲ ಉದ್ದೇಶ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಜೊತೆಜೊತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

   English summary
   An Exclusive Interview With Congress Sitting MLA And Former Minsiter U T Khader.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X