ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿಗೆ ನಮ್ಮ ದೇಶದ ಪುರಾತನ ವೈದ್ಯ ಪದ್ದತಿಯಾದ ಆಯುರ್ವೇದದಿಂದ ಪರಿಹಾರ ಸಾಧ್ಯ ಎನ್ನುವುದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ನಲ್ಲಿ ದೃಢಪಟ್ಟಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಕೇಂದ್ರ ಸರಕಾರದ ಮಾರ್ಗಸೂಚಿಯಂತೆ, ಆ ಆಸ್ಪತ್ರೆಯಲ್ಲಿನ ಹತ್ತು ಸೋಂಕಿತರ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ಎಲ್ಲರೂ ನೆಗೆಟೀವ್ ವರದಿಯೊಂದಿಗೆ ಗುಣಮುಖರಾಗಿ ಮನೆ ಸೇರಿದ್ದಾರೆ.

ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆ

ಇದಕ್ಕೆ ಕಾರಣರಾದವರು ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ನ ಮುಖ್ಯಸ್ಥರು, ಖ್ಯಾತ ವೈದ್ಯರೂ ಆಗಿರುವ ಡಾ.ಗಿರಿಧರ ಕಜೆ ಮತ್ತು ತಂಡ. ಇಡೀ ತಂಡಕ್ಕೆ ಅಭಿನಂದನೆಗಳು.

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಿದ್ಧ 200 ಮುಸ್ಲಿಂ ಯುವಕರ ತಂಡಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಿದ್ಧ 200 ಮುಸ್ಲಿಂ ಯುವಕರ ತಂಡ

ಕೊರೊನಾಗೆ ಆಯುರ್ವೇದದ ಈ ಲಸಿಕೆಗೆ ಅನುಮತಿ ಸಿಗುವ ವಿಚಾರ, ಯಾರ್ಯಾರು ಇದನ್ನು ಬಳಸಬೇಕು, ಅಡ್ಡ ಪರಿಣಾಮ ಏನಾದರೂ ಇದೆಯೇ, ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಡಾ.ಕಜೆಯವರ ಜೊತೆಗೆ 'ಒನ್ ಇಂಡಿಯಾ'ನಡೆಸಿದ ಸಂದರ್ಶನದ ಆಯ್ದ ಭಾಗ:

ಹತ್ತು ಜನರ ಮೇಲೆ ನಾವು ಮಾಡಿದ ಟ್ರಯಲ್ ದೊಡ್ಡ ಪ್ರಯೋಗ

ಹತ್ತು ಜನರ ಮೇಲೆ ನಾವು ಮಾಡಿದ ಟ್ರಯಲ್ ದೊಡ್ಡ ಪ್ರಯೋಗ

ಪ್ರ: ನಿಮ್ಮ ಲಸಿಕೆಗೆ ರಾಜ್ಯ ಸರಕಾರ ಅನುಮತಿ ನೀಡುವ ವಿಚಾರ ಯಾವ ಹಂತದಲ್ಲಿದೆ?

ಡಾ.ಕಜೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ಹತ್ತು ಜನರ ಮೇಲೆ ನಾವು ಮಾಡಿದ ಟ್ರಯಲ್ ದೊಡ್ಡ ಪ್ರಯೋಗವಾಗಿತ್ತು. ಇದು ಯಶಸ್ವಿಯಾಯಿತು ಎಂದು ಸರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಆದರೆ, ಒಂದು ಪ್ರಯೋಗ ಯಶಸ್ವಿಯಾದಾಗ, ಅದನ್ನು ಫಾಲೋ ಮಾಡುವುದು ಒಂದು ರೂಢಿ.

ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಲಸಿಕೆಯ ಬಗ್ಗೆ ಚರ್ಚೆ ನಡೆಯಿತು. ಇನ್ನೊಂದೆರಡು ದಿನಗಳಲ್ಲಿ ಈ ಬಗ್ಗೆ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಲಬಹುದು.

ಕೊರೊನಾ ಲಕ್ಷಣ

ಕೊರೊನಾ ಲಕ್ಷಣ

ಪ್ರ: ಈ ಲಸಿಕೆಗೆ ಅಧಿಕೃತವಾಗಿ ಸರಕಾರದಿಂದ ಅನುಮತಿ ಸಿಗಬಹುದು ಎನ್ನುವ ವಿಶ್ವಾಸವಿದೆಯೇ?

ಡಾ.ಕಜೆ: ಇದರಲ್ಲಿ ಕೆಲವು ವಿಚಾರಗಳಿವೆ. ಕೆಲವರು ಕೊರೊನಾ ಲಕ್ಷಣಗಳಿವೆ ಎಂದು ಆಸ್ಪತ್ರೆಗೆ ಹೋಗುತ್ತಾರೆ. ಅದರಲ್ಲಿ ಕೆಲವರು ಐಸಿಯುಗೆ ಹೋಗುತ್ತಾರೆ, ಇನ್ನು ಕೆಲವರು ವೆಂಟಿಲೇಟರ್ ಗೆ ಹೋಗುತ್ತಾರೆ. ನಾವು ಪ್ರಯೋಗಿಸಿದ ಹತ್ತು ಜನರಲ್ಲಿ ಈ ರೀತಿಯಿರುವವರನ್ನೇ ಆಯ್ಕೆ ಮಾಡಿದ್ದೆವು. ಹಾಗಾಗಿ, ಹತ್ತು ಜನರೂ ಗುಣಮುಖರಾಗಿದ್ದಾರೆ ಎನ್ನುವುದು ಪ್ರಮುಖ ವಿಚಾರವಾಗುತ್ತದೆ.

ನಮ್ಮ ಕ್ಲಿನಿಕಲ್ ಟ್ರಯಲ್ ನಲ್ಲಿ ಸೋಂಕಿತರು ಬಹಳ ಬೇಗ ಗುಣಮುಖರಾದರು ಎನ್ನುವುದು ಬಹಳ ಮುಖ್ಯವಾಗುತ್ತದೆ. ಆಯುರ್ವೇದ ಎಂದರೆ ಪಥ್ಯ ಮಾಡಬೇಕಾಗುತ್ತದೆ. ಆದರೆ, ನಾವು ಯಾವುದೇ ಡಯಟ್ ಸಿಸ್ಟಂ ಇಲ್ಲಿ ಪ್ರಯೋಗಿಸಲಿಲ್ಲ.

ನಾವು ಈ ವಿಚಾರದಲ್ಲಿ ಇನ್ನೂ ಸಂಶೋಧನೆ ನಡೆಸಲು ಬದ್ದರಿದ್ದೇವೆ. ರಾಜ್ಯದಲ್ಲಿ, ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳು ಐವತ್ತು ಸಾವಿರ ಮೇಲೆ ಇದ್ದಾರೆ. ಸಕ್ರಿಯ ಪ್ರಕರಣಗಳು ಹದಿನಾಲ್ಕು ಸಾವಿರ ಹತ್ತಿರವಿದೆ. ಈ ಎಲ್ಲರಿಗೂ ಈ ಲಸಿಕೆಯನ್ನು ಪ್ರಯೋಗಿಸಿ, ಅವರು ಗುಣಮುಖರಾದರೆ, ಅಷ್ಟು ಹಾಸಿಗೆ ಖಾಲಿಯಾಗುತ್ತದೆ.

ಹೊರಗಡೆಯಿಂದ ಬರುವ ವೈರಾಣುವನ್ನು ಎಷ್ಟೇ ಮುಂಜಾಗೃತೆ ತೆಗೆದುಕೊಂಡರೂ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆಗ, ನಮ್ಮಲ್ಲಿ ರೋಗ ನಿರೋಧಕ ಶಕ್ತಿಯಿದ್ದರೆ, ಆಗ ಅದನ್ನು ನೆಗೆಟೀವ್ ಮಾಡಲು ಸುಲಭವಾಗುತ್ತದೆ. ಆರೋಗ್ಯಕ್ಕಾಗಿ ಅಧ್ಯಯನ ಎಂದು ಹತ್ತು ದಿನ ಎಲ್ಲರೂ ಮಾಡುವಂತೆ, ಸರಕಾರಕ್ಕೆ ಹೇಳಿದ್ದೇನೆ. ಈ ಎಲ್ಲಾ ವಿಚಾರವನ್ನು ನೋಡಿದಾಗ, ಸರಕಾರದಿಂದ ಅನುಮತಿ ಸಿಗುವ ವಿಶ್ವಾಸದಲ್ಲಿದ್ದೇವೆ.

ಆಯುರ್ವೇದ

ಆಯುರ್ವೇದ

ಪ್ರ: ಆಯುರ್ವೇದದ ಪ್ರಕಾರ, ಕೊರೊನಾ ಬಗ್ಗೆ ಇಷ್ಟು ಭಯ ಪಡುವ ಅವಶ್ಯಕತೆ ಇದೆಯೇ?

ಡಾ.ಕಜೆ: ನನ್ನ ಪ್ರಕಾರ ಇದೊಂದು ಖಂಡಿತವಾಗಿಯೂ ದುರ್ಬಲ ವೈರಸ್. ಸ್ಟ್ರಾಂಗ್ ಇರುವವರಿಗೆ ಈ ವೈರಸ್ ಅಟ್ಯಾಕ್ ಮಾಡಲು ಆಗುತ್ತಿಲ್ಲ. ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು ದೊಡ್ಡ ಕಾಯಿಲೆಯೆಂದು ಜನರಿಗೆ ಅನಿಸಿದೆ.

ಚಿಕನ್ ಗುನ್ಯಾ, ಡೆಂಗ್ಯೂ ಕಾಯಿಲೆ ಆರೋಗ್ಯವಂತರಿಗೂ ತೊಂದರೆಯನ್ನು ನೀಡಿತ್ತು. ಡೆಂಗ್ಯೂಗೆ ಎಷ್ಟು ಸಾವು ಸಂಭವಿಸಿತ್ತೋ ಅಷ್ಟೇ ಮರಣದ ಪ್ರಮಾಣ ಕೊರೊನಾಗೂ ಆಗುತ್ತಿದೆ. ಕೊರೊನಾಗೆ ಹಬ್ಬುವ ಶಕ್ತಿ ಜಾಸ್ತಿ, ಪ್ರಾಣ ತೆಗೆಯುವ ಶಕ್ತಿ ಕಮ್ಮಿ.

ಹಾಗಾಗಿ, ಜಾಸ್ತಿ ಈ ವೈರಸ್ ಹರಡದೇ ಇರಲು ಸರಕಾರದ ಮಾರ್ಗಸೂಚಿಯಂತೆ ನಡೆಯುವುದು ಒಳ್ಲೆಯದು. ಮಾನಸಿಕ ಸ್ಥೈರ್ಯ, ಧೈರ್ಯ ಹೆಚ್ಚಿಸಿಕೊಂಡರೆ ಸಾಕು.

ಸೋಂಕಿತರಲ್ಲದವರೂ ತೆಗೆದುಕೊಳ್ಳಬಹುದೇ

ಸೋಂಕಿತರಲ್ಲದವರೂ ತೆಗೆದುಕೊಳ್ಳಬಹುದೇ

ಪ್ರ: ಈ ಲಸಿಕೆಯನ್ನು ಸೋಂಕಿತರಲ್ಲದವರೂ ತೆಗೆದುಕೊಳ್ಳಬಹುದೇ?

ಡಾ.ಕಜೆ: ತೆಗೆದುಕೊಳ್ಳಬಾರದು ಎಂದೇನಿಲ್ಲ, ಆದರೆ ಇದನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಎಲ್ಲರೂ ತೆಗೆದುಕೊಳ್ಳಲು ಆರಂಭಿಸಿದರೆ, ಲಸಿಕೆಯ ಕೊರತೆ ಎದುರಾಗಬಾರದು. ಸೋಂಕು ಇಲ್ಲದವರು ಮುಂಜಾಗೃತಾ ಕ್ರಮವಾಗಿ ಈಗಾಗಲೇ ನಾನು ಹೇಳಿದಂತೆ, ಕುದಿಯುವ ನೀರಿಗೆ 5-6 ತುಳಸಿ ಎಲೆಯನ್ನು ಹಾಕಿ ಕುಡಿಯುವುದು.

ಇನ್ನೊಂದು, ಕುದಿಸಿದ ಹಾಲಿಗೆ ಒಂದು ಚಮಚ ಅರಶಿಣ ಹಾಕಿ ಮತ್ತೆ ಕುದಿಸಿ ಕುಡಿಯುವುದು. ಮತ್ತೊಂದು, ನೆಲನೆಲ್ಲಿ, ಭದ್ರಮುಷ್ಠಿ ಗೆಡ್ಡೆ ಅಥವಾ ಅಮೃತಬಳ್ಳಿ ಕಷಾಯವನ್ನು ಕುಡಿಯುವುದರಿಂದ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದು. ಹಾಗಾಗಿ, ಸೋಂಕಿತರಲ್ಲದವರು ತೆಗೆದುಕೊಳ್ಳಬೇಕಾಗಿಲ್ಲ.

ನಾವು ಇದರ ಮಾರ್ಕೆಟಿಂಗ್ ಮಾಡುವುದಿಲ್ಲ

ನಾವು ಇದರ ಮಾರ್ಕೆಟಿಂಗ್ ಮಾಡುವುದಿಲ್ಲ

ಪ್ರ: ಸರಕಾರದಿಂದ ಅನುಮತಿ ಸಿಕ್ಕರೆ, ಈ ಲಸಿಕೆ ಎಲ್ಲರಿಗೂ ಲಭ್ಯವಾಗುತ್ತಾ?

ಡಾ. ಕಜೆ: ಪಾಸಿಟೀವ್ ಇಲ್ಲದ್ದಿದ್ದವರು ಇದನ್ನು ತೆಗೆದುಕೊಳ್ಲಬೇಕಾಗಿಲ್ಲ. ಸರಕಾರದ ಜೊತೆ ಮಾತನಾಡಿ, ಇದನ್ನು ಹೇಗೆ ಎಲ್ಲಾ ಕಡೆ ತಲುಪಿಸುವ ಬಗ್ಗೆ ಮಾತುಕತೆ ನಡೆಸುತ್ತೇವೆ. ಈಗಾಗಲೇ, ಇದರ ಪೇಟೆಂಟ್ ಅನ್ನು ಸರಕಾರಕ್ಕೆ ಕೊಡುತ್ತೇನೆ ಎಂದು ಹೇಳಿದ್ದೇನೆ. ನಾವು ಇದರ ಮಾರ್ಕೆಟಿಂಗ್ ಮಾಡುವುದಿಲ್ಲ.

ಒಂದು ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿದ್ದೇನೆ

ಒಂದು ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿದ್ದೇನೆ

ಪ್ರ: ಈ ಲಸಿಕೆ ತೆಗೆದುಕೊಳ್ಳಲು ಏನಾದರೂ ವಯಸ್ಸಿನ ಲಿಮಿಟ್ ಇದೆಯಾ?

ಡಾ.ಕಜೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾವು ಕ್ಲಿನಿಕಲ್ ಟ್ರಯಲ್ ನಡೆಸಿದಾಗ 16-99 ವರ್ಷದ ರೋಗಿಗಳಿಗೆ ಎಂದು ಸಿದ್ದಪಡಿಸಿದ್ದಾಗಿತ್ತು. ಇದನ್ನು 23-65 ವರ್ಷದವವರಿಗೆ ಆಸ್ಪತ್ರೆಯಲ್ಲಿ ಪ್ರಯೋಗಿಸಲಾಗಿತ್ತು. ಸಾಮಾನ್ಯವಾಗಿ ಯಾವ ವಯಸ್ಸಿನವರೂ ಇದನ್ನು ತೆಗೆದುಕೊಳ್ಳಲು ತೊಂದರೆಯಿಲ್ಲ. ವಯಸ್ಸಿನ ಆಧಾರದಲ್ಲಿ ಡೋಸೇಜ್ ಬದಲಿಸಿದರೆ ಸಾಕು.

ಪ್ರ: ಈ ಲಸಿಕೆಯಿಂದ ಅಡ್ಡ ಪರಿಣಾಮ ಏನಾದರೂ ಇದೆಯೇ?

ಡಾ.ಕಜೆ: ಇದು ಹೊಸ ಮೆಡಿಸಿನ್ ಅಲ್ಲ, ಕಳೆದ ಇಪ್ಪತ್ತು ವರ್ಷಗಳಿಂದ ಇದನ್ನು ತಯಾರಿಸುತ್ತಿದ್ದೇವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿದ್ದೇನೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ.

English summary
An Exclusive Interview Of Noted Ayurveda Doctor Giridhar Kaje Interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X