ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್‌ ಶಾ, ಜೂ. ಎನ್‌ಟಿಆರ್‌ ಭೇಟಿ: ಮತ ಭದ್ರತೆಗೆ ಮುಂದಾದ ಜಗನ್‌ಮೋಹನ್ ರೆಡ್ಡಿ

|
Google Oneindia Kannada News

ಅಮರಾವತಿ, ಸೆಪ್ಟೆಂಬರ್‌ 12: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ಜಾತಿ (ಬಿಸಿ), ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮತ ಬ್ಯಾಂಕ್‌ಗಳನ್ನು ಸಂಗ್ರಹಿಸಿ ಹಾಗೂ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಬೃಹತ್ ಕಸರತ್ತನ್ನು ಪ್ರಾರಂಭಿಸಿದೆ. ಇದಕ್ಕೆ ಬಲವಾದ ಕಾರಣವಿದೆ, ಏನೆಂದರೆ....

2024ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ಇನ್ನೂ ದೂರವಿದ್ದರೂ ಜಗನ್‌ ಮೋಹನ್‌ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನೆ ಮತ್ತು ಬಿಜೆಪಿ ನಡುವಿನ ಅಲಿಖಿತ ಮೈತ್ರಿ ನಿರೀಕ್ಷೆಯಲ್ಲಿ ಪ್ರಚಾರವನ್ನು ಕೈಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಟಿಡಿಪಿಯ ಸಂಸ್ಥಾಪಕ ಎನ್‌ಟಿ ರಾಮರಾವ್ ಅವರ ಮೊಮ್ಮಗ, ತೆಲುಗು ಚಲನಚಿತ್ರ ನಟ ಜೂನಿಯರ್ ಎನ್‌ಟಿಆರ್ ನಡುವೆ ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದ ಸಭೆಯು ವಿರೋಧ ಪಕ್ಷದ ಮೈತ್ರಿಯ ಬಗ್ಗೆ ಆಡಳಿತ ಪಕ್ಷದಲ್ಲಿ ನಂಬಿಕೆಯನ್ನು ಬಲಪಡಿಸಿದೆ.

ತಾತನ ತೆಲುಗು ದೇಶಂ ಪಾರ್ಟಿ ಕಟ್ಟಲು ಜೆ. ಎನ್‌ಟಿಆರ್ ರಾಜಕೀಯಕ್ಕೆ ಇಳಿತಾರಾ?ತಾತನ ತೆಲುಗು ದೇಶಂ ಪಾರ್ಟಿ ಕಟ್ಟಲು ಜೆ. ಎನ್‌ಟಿಆರ್ ರಾಜಕೀಯಕ್ಕೆ ಇಳಿತಾರಾ?

75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ರಚಿಸಲಾದ ರಾಷ್ಟ್ರೀಯ ಸಮಿತಿಯ ಸಭೆಗೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಕಳೆದ ತಿಂಗಳು ಕೇಂದ್ರದ ಆಹ್ವಾನ ನೀಡಿತ್ತು. ಆಗ ಸಭೆಯ ಬದಿಯಲ್ಲಿ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿದರು. ಪಕ್ಷದ ಪದಾಧಿಕಾರಿಗಳು ಹೇಳುವಂತೆ ವೈಎಸ್ಆರ್‌ಸಿಪಿ ಹಾಗೂ ಜಗನ್ ಮೋಹನ್ ರೆಡ್ಡಿ ಅವರನ್ನೂ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಹೋಗಲು ಸಾಧ್ಯವಾಗಲಿಲ್ಲ.

ವೈಎಸ್‌ಆರ್‌ಸಿಪಿ ಮಾಜಿ ಸಚಿವ ಕೊಡಾಲಿ ವೆಂಕಟೇಶ್ವರ ರಾವ್ ಅವರು, ಅಮಿತ್ ಶಾ ಅವರು ಯಾವುದೇ ಕಾರಣವಿಲ್ಲದೆ ಚಿತ್ರನಟರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದರು. ಮುಂದುವರಿದು ಜಗನ್ ನೇತೃತ್ವದ ಸಂಘಟನೆಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡುವ ಊಹಾಪೋಹ ಬಗ್ಗೆ ಕಿಡಿ ಕಾರಿದರು. ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲು ಮತ್ತು ವೈಎಸ್‌ಆರ್‌ಸಿಪಿಗೆ ಮತ ನೀಡುವಂತೆ ಒತ್ತಾಯಿಸಲು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮದ ಭಾಗವಾಗಿ ಸಿಎಂ ಈಗಾಗಲೇ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರನ್ನು ಅವರ ಕ್ಷೇತ್ರಗಳಿಗೆ ಕಳುಹಿಸಿದ್ದಾರೆ.

ಕಳೆದ ವಾರ ವೈಎಸ್‌ಆರ್ ಚೇಯುತ ಯೋಜನೆಯ ಅರ್ಹ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಜಾತಿಯ ಮಹಿಳಾ ಫಲಾನುಭವಿಗಳ ಸಂಖ್ಯೆಯನ್ನು ಸರ್ಕಾರ ದ್ವಿಗುಣಗೊಳಿಸಿದೆ. ಕಳೆದ ವರ್ಷ 12 ಲಕ್ಷಕ್ಕೆ ಹೋಲಿಸಿದರೆ, ಈ ವಯಸ್ಸಿನ 25 ಲಕ್ಷ ಮಹಿಳೆಯರು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ವಾರ್ಷಿಕ 18,750 ರೂ. ನೀಡಲಾಗಿದೆ.

ಶನಿವಾರ ಸರ್ಕಾರವು ವೈಎಸ್ಆರ್ ಕಲ್ಯಾಣಮಸ್ತು ಮತ್ತು ವೈಎಸ್ಆರ್ ಶಾದಿ ತೋಫಾ ಎಂಬ ಎರಡು ಹೊಸ ಯೋಜನೆಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರುವುದಾಗಿ ಘೋಷಿಸಿದೆ. ಮದುವೆಯ ನಗದು ಪ್ರೋತ್ಸಾಹವು ಚುನಾವಣಾ ಭರವಸೆಯಾಗಿದ್ದರೂ ಭಾರಿ ವೆಚ್ಚದ ಕಾರಣ ಅದನ್ನು ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅಧಿಕಾರಕ್ಕೆ ಬಂದ ಎರಡೂವರೆ ವರ್ಷ ಜಗನ್ ಆಡಳಿತವು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಎಸ್‌ಸಿ ಸಮುದಾಯದ ದಂಪತಿಗಳಿಗೆ ರೂ 1 ಲಕ್ಷ

ಎಸ್‌ಸಿ ಸಮುದಾಯದ ದಂಪತಿಗಳಿಗೆ ರೂ 1 ಲಕ್ಷ

ಜನಪರ ಯೋಜನೆಗಳನ್ನು ಘೋಷಿಸಿದ ಸಿಎಂ ಜಗನ್‌ ಹಿಂದಿನ ಸರ್ಕಾರ ಭರವಸೆ ನೀಡಿದ್ದಕ್ಕಿಂತ ಹೆಚ್ಚಿನ ನಗದು ಮೊತ್ತವನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಕಲ್ಯಾಣಮಸ್ತು ಅಡಿಯಲ್ಲಿ ಎಸ್‌ಸಿ ಸಮುದಾಯದ ದಂಪತಿಗಳಿಗೆ ರೂ 1 ಲಕ್ಷ ನೀಡಲಾಗುವುದು ಮತ್ತು ಎಸ್‌ಸಿ ಸಮುದಾಯಕ್ಕೆ ಸೇರಿದ ಸಂಗಾತಿಗಳಲ್ಲಿ ಒಬ್ಬರು ಅಂತರ್ಜಾತಿ ವಿವಾಹದ ಸಂದರ್ಭದಲ್ಲಿ ರೂ. 1.2 ಲಕ್ಷ ನೀಡಲಾಗುವುದು ಎಂದು ಹೇಳಿದ್ದಾರೆ.

ಚುನಾವಣೆಗೆ 2ವರ್ಷ ಮುನ್ನವೇ ಸ್ಪರ್ಧಿಸುವ ಕ್ಷೇತ್ರ ಪ್ರಕಟಿಸಿದ ಸಿಎಂ ಜಗನ್ಚುನಾವಣೆಗೆ 2ವರ್ಷ ಮುನ್ನವೇ ಸ್ಪರ್ಧಿಸುವ ಕ್ಷೇತ್ರ ಪ್ರಕಟಿಸಿದ ಸಿಎಂ ಜಗನ್

ಅಲ್ಪಸಂಖ್ಯಾತರಿಗೆ 1 ಲಕ್ಷ ರೂ ನೆರವು

ಅಲ್ಪಸಂಖ್ಯಾತರಿಗೆ 1 ಲಕ್ಷ ರೂ ನೆರವು

ಇದು ಎಸ್‌ಟಿಗಳಿಗೂ ಅನ್ವಯಿಸುತ್ತದೆ. ಹಿಂದುಳಿದ ಜಾತಿಯ ದಂಪತಿಗಳಿಗೆ ರು. 50,000 ನೀಡಲಾಗುವುದು. ಒಬ್ಬ ಹಿಂದುಳಿದ ಜಾತಿ ವ್ಯಕ್ತಿಯು ಅಂತರ್ಜಾತಿ ವಿವಾಹವಾಗಿದ್ದರೆ ಅಂತಹವರಿಗೆ ರೂ 75,000 ಕೊಡಲಾಗುತ್ತದೆ. ಅಲ್ಪಸಂಖ್ಯಾತರಿಗೆ 1 ಲಕ್ಷ ರೂ., ವಿಕಲಚೇತನರಿಗೆ 1.5 ಲಕ್ಷ ರೂ. ಕಟ್ಟಡ ಕಾರ್ಮಿಕರು, ವಾಸಸ್ಥಳದ ದಾಖಲೆಗಳನ್ನು ಹೊಂದಿರಲಿ ಅಥವಾ ಇಲ್ಲದಿರಲಿ, 40,000 ರೂ.ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಿಂದಿನ ಟಿಡಿಪಿ ಸರ್ಕಾರವು ಎಸ್‌ಸಿಗಳಿಗೆ ರೂ 40,000 ಮತ್ತು ಎಸ್‌ಸಿಗಳನ್ನು ಒಳಗೊಂಡ ಅಂತರ್ಜಾತಿ ವಿವಾಹಗಳಿಗೆ ರೂ 75,000 ಕೊಡಲಾಗಿತ್ತು. ಎಸ್ಟಿಗಳಿಗೆ, ಮೊತ್ತವು ಕ್ರಮವಾಗಿ ರೂ 50,000 ಮತ್ತು ರೂ. 75,000, ಅಲ್ಪಸಂಖ್ಯಾತರಿಗೆ 50,000 ರೂ. ಹಾಗೂ ವಿಕಲಚೇತನರಿಗೆ 1 ಲಕ್ಷ ರೂ. ಟಿಡಿಪಿ ಆಡಳಿತದಲ್ಲಿ ಕಟ್ಟಡ ಕಾರ್ಮಿಕರು 20,000 ರೂ.ಗಳನ್ನು ಪಡೆಯಲು ಅರ್ಹರಾಗಿದ್ದರು.

ಚುನಾವಣಾ ಭರವಸೆ ಶೇ 98.44 ರಷ್ಟು ಈಡೇರಿಕೆ

ಚುನಾವಣಾ ಭರವಸೆ ಶೇ 98.44 ರಷ್ಟು ಈಡೇರಿಕೆ

ಕಲ್ಯಾಣಮಸ್ತು ಯೋಜನೆಗಳನ್ನು ಗ್ರಾಮ ಮತ್ತು ವಾರ್ಡ್ ಕಾರ್ಯದರ್ಶಿಗಳ ಮೂಲಕ ಜಾರಿಗೊಳಿಸಲಾಗುವುದು. ಕಲ್ಯಾಣಮಸ್ತು ಯೋಜನೆಯ ಅನುಷ್ಠಾನದೊಂದಿಗೆ ರಾಜ್ಯ ಸರ್ಕಾರವು ವೈಎಸ್‌ಆರ್‌ಸಿಪಿಯ ಚುನಾವಣಾ ಭರವಸೆಗಳಲ್ಲಿ ಶೇ 98.44 ರಷ್ಟು ಈಡೇರಿಸಲಿದೆ ಎಂದು ಕಲ್ಯಾಣ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ ಎಸ್ ವೇಣುಗೋಪಾಲ ಕೃಷ್ಣ ಹೇಳಿದ್ದಾರೆ.

ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಪ್ರಚಾರ ಕಾರ್ಯತಂತ್ರ

ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಪ್ರಚಾರ ಕಾರ್ಯತಂತ್ರ

ಜಗನ್ ಮೋಹನ್ ರೆಡ್ಡಿ, ಸರ್ಕಾರ ಮತ್ತು ಆಡಳಿತ ಪಕ್ಷದ ಅಧಿಕಾರಿಗಳ ಪ್ರಕಾರ, ವೈಎಸ್‌ಆರ್ ಚೇಯುತ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವ ಸಲುವಾಗಿ ಸೆಪ್ಟೆಂಬರ್ 22ರಂದು ವೈಯಕ್ತಿಕವಾಗಿ ಮಹಿಳೆಯರನ್ನು ಭೇಟಿ ಮಾಡಲಿದ್ದಾರೆ. ಯೋಜನೆಯ ಬಗ್ಗೆ ಪ್ರಚಾರ ಮತ್ತು ಜಾಗೃತಿ ಮೂಡಿಸಲು ನಗದು ವರ್ಗಾವಣೆಯನ್ನು ಕೈಗೊಳ್ಳುವಾಗ ಸಚಿವರು, ಶಾಸಕರು ಮತ್ತು ವೈಎಸ್‌ಆರ್‌ಸಿಪಿ ಮುಖಂಡರು ಪ್ರತಿ ಕ್ಷೇತ್ರದಲ್ಲಿ ಕೆಲವು ಮಹಿಳಾ ಫಲಾನುಭವಿಗಳೊಂದಿಗೆ ಉಪಸ್ಥಿತರಿರುತ್ತಾರೆ. ವೈಎಸ್‌ಆರ್‌ಸಿಪಿ ನಾಯಕರಿಗೆ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಭಾಗವಹಿಸಿ ವಿವಾಹ ನಗದು ಪ್ರೋತ್ಸಾಹ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಸೂಚನೆಯನ್ನೂ ನೀಡಲಾಗಿದೆ.

English summary
Andhra Pradesh's YS Jagan Mohan Reddy government has launched a massive exercise to consolidate and further strengthen the vote banks of Scheduled Castes (SC), Scheduled Tribes (ST), Backward Castes (BC), and religious minorities. There is a strong reason for this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X