ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!

|
Google Oneindia Kannada News

Recommended Video

lok sabha election 2019: ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ! | Oneindia Kannada

ಗಾಂಧಿನಗರ, ಮಾರ್ಚ್ 31: ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ ಮಾಹಿತಿಯಂತೆ ಏಳು ವರ್ಷಗಳಲ್ಲಿ ಅಮಿತ್ ಅವರ ಆಸ್ತಿ ಮೂರು ಪಟ್ಟು ಏರಿಕೆ ಕಂಡಿದೆ.

ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್ ಶಾ ಅವರು ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ನಡೆದ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರ ಜತೆಗೆ ಎನ್​ಡಿಎ ಪ್ರಮುಖ ಪಕ್ಷಗಳಾದ ಎಲ್​ಜೆಪಿ, ಅಕಾಲಿ ದಳ ಹಾಗೂ ಶಿವಸೇನೆ ಮುಖಂಡರು ಕೂಡ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಲಾಯಿತು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ, ಹಿರಿಯ ಸಚಿವ ಅರುಣ್ ಜೇಟ್ಲಿ ಕೂಡ ಭಾಗವಹಿಸಿದ್ದರು

ಬಿಜೆಪಿ ಅಭ್ಯರ್ಥಿಯಾಗಿ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಅಮಿತ್ ಶಾಬಿಜೆಪಿ ಅಭ್ಯರ್ಥಿಯಾಗಿ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಅಮಿತ್ ಶಾ

ಗಾಂಧಿನಗರ ಕ್ಷೇತ್ರವು 1989ರ ಮುಂಚೆ ಕಾಂಗ್ರೆಸ್ ಕೈನಲ್ಲಿತ್ತು. ಆದರೆ 1989ರ ಬಳಿಕ ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಒಟ್ಟು 9 ಚುನಾವಣೆಗಳಲ್ಲಿ 6 ಬಾರಿ ಆಡ್ವಾಣಿ ಪ್ರತಿನಿಧಿಸಿದ್ದರೆ, ಒಮ್ಮೆ ರಾಜಕೀಯ ಮುತ್ಸದ್ದಿ ದಿ.ಅಟಲ್ ಬಿಹಾರಿ ವಾಜಪೇಯಿ ಕೂಡ ಸಂಸದರಾಗಿದ್ದರು. 2014ರಲ್ಲಿ ಆಡ್ವಾಣಿ 4 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.

Amit Shah assets grows three times in seven years

ಅಫಿಡವಿಟ್ ನಲ್ಲಿ ನೀಡುವ ಮಾಹಿತಿಯಂತೆ ಅಮಿತ್ ಶಾ ಹಾಗೂ ಅವರ ಪತ್ನಿಯ ಸ್ಥಿರಾಸ್ತಿ ಮೊತ್ತ 38.81 ಕೋಟಿ ರು ನಷ್ಟಿದೆ. 2012ರಲ್ಲಿ 11.79 ಕೋಟಿ ರು ನಷ್ಟಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

38.81 ಕೋಟಿ ರು ಆಸ್ತಿಯಲ್ಲಿ ಪಿತ್ರಾರ್ಜಿತ ಆಸ್ತಿ, ಚರಾಸ್ತಿ, ಸ್ಥಿರಾಸ್ತಿ ಮೊತ್ತ 23.45 ಕೋಟಿ ರು ಕೂಡಾ ಸೇರಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ? ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿಎಸ್ ಅಸ್ತಿ ಎಷ್ಟಿದೆ?

ಅಮಿತಾ ಶಾ ಅವರ ಕೈಲಿ 20,633 ರು ನಗದು ಹೊಂದಿದ್ದಾರೆ. ಅವರ ಪತ್ನಿ ಬಳಿ 72,578 ರು ನಗದು ಹೊಂದಿದ್ದಾರೆ. ಅಮಿತ್ ಶಾ ಕುಟುಂಬ ಯಾವುದೇ ಸ್ವಂತ ವಾಹನವನ್ನು ಹೊಂದಿಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

English summary
The affidavit filed on Saturday by BJP chief Amit Shah while submitting his nomination papers for the Gandhinagar Lok Sabha seat showed that his assets had grown over three times in the last seven years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X