ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ 2ನೇ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟ ನಿತೀಶ್ ಕುಮಾರ್

|
Google Oneindia Kannada News

ಪಟ್ನಾ, ಆಗಸ್ಟ್ 11: ಬಿಹಾರದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಮಹಾಘಟಬಂಧನ್ ಜೊತೆ ಕೈಜೋಡಿಸಿ ನಿತೀಶ್ ಕುಮಾರ್ ಬಿಜೆಪಿಗೆ ಶಾಕ್ ಕೊಟ್ಟರು. ಇದರ ನಡುವೆಯೇ ಸಮೀಕ್ಷೆಯೊಂದು ನಿತೀಶ್ ಕುಮಾರ್ ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

ಲೋಕನೀತಿ, ಸಿಎಸ್‌ಡಿಎಸ್‌ ಸಮೀಕ್ಷೆ ಪ್ರಕಾರ ನಿತೀಶ್ ಕುಮಾರ್ ಜನಪ್ರಿಯತೆ ಕಡಿಮೆಯಾಗಿದೆ. 2015ರಲ್ಲಿ ಶೇಕಡಾ 39 ರಷ್ಟರಿದ್ದ ಜನಪ್ರಿಯತೆ 2020ರಲ್ಲಿ ಶೇಕಡಾ 38ಕ್ಕೆ ಕುಸಿದಿತ್ತು. ಅದೇ ಸಿ ವೋಟರ್ ಇತ್ತೀಚಿನ ಸಮೀಕ್ಷೆ ಪ್ರಕಾರ ನಿತೀಶ್ ಕುಮಾರ್‌ಗಿಂತ ತೇಜಸ್ವಿ ಯಾದವ್ ಸಿಎಂ ಆಗಬೇಕು ಎಂದು ಬಿಹಾರದ ಹೆಚ್ಚಿನ ಜನತೆ ಬಯಸಿದ್ದಾರೆ.

ನಿತೀಶ್ ಕುಮಾರ್ : ಅಧಿಕಾರಕ್ಕಾಗಿ ಮುಂದುವರಿದ ಪಲ್ಟಿ ರಾಜಕೀಯನಿತೀಶ್ ಕುಮಾರ್ : ಅಧಿಕಾರಕ್ಕಾಗಿ ಮುಂದುವರಿದ ಪಲ್ಟಿ ರಾಜಕೀಯ

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕೂಡ ಕಡಿಮೆಯಾಗಿದೆ. 2019ರಲ್ಲಿ ಶೇಕಡ 47ರಷ್ಟಿದ್ದ ಪ್ರಧಾನಿ ಮೋದಿ ಜನಪ್ರಿಯತೆ 2021ರಲ್ಲಿ ಶೇಕಡ 44ಕ್ಕೆ ಕುಸಿದಿದೆ ಎಂದು ಲೋಕನೀತಿ, ಸಿಎಸ್‌ಡಿಎಸ್‌ ಸಮೀಕ್ಷೆ ತಿಳಿಸಿದೆ.

2003ರಲ್ಲಿ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಆಗಿ ಅಧಿಕಾರ ಅನುಭವಿಸಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಕೂಡ ಕೆಲಸ ಮಾಡಿದ್ದರು.

 ನರೇಂದ್ರ ಮೋದಿ ನಾಯಕತ್ವ ವಿರೋಧಿಸಿದ್ದ ನಿತೀಶ್ ಕುಮಾರ್

ನರೇಂದ್ರ ಮೋದಿ ನಾಯಕತ್ವ ವಿರೋಧಿಸಿದ್ದ ನಿತೀಶ್ ಕುಮಾರ್

ಎಲ್ಲವೂ ಸರಿ ಇದ್ದಾಗ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಎದುರಿಸಲಿದೆ ಎಂದು ಘೋಷಣೆ ಮಾಡಿದಾಗ ನಿತೀಶ್ ಕುಮಾರ್ ಬಹಿರಂಗವಾಗಿ ವಿರೋಧಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದರು. 2014ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 18 ಸ್ಥಾನಗಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿತು. ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾದ ನಿತೀಶ್ ಕುಮಾರ್ ಮತ್ತೆ ಮಹಾಘಟಬಂಧನ್ ಮೊರೆ ಹೋದರು.

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 71 ಸ್ಥಾನಗಳಲ್ಲಿ ಜಯಗಳಿಸಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, 80 ಸ್ಥಾನ ಗಳಿಸಿದ್ದ ಆರ್‌ಜೆಡಿ, 27 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದರು. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟರು.

 ಬಿಜೆಪಿ ಸಖ್ಯ ಬೆಳೆಸಿದ ನಿತೀಶ್ ಕುಮಾರ್

ಬಿಜೆಪಿ ಸಖ್ಯ ಬೆಳೆಸಿದ ನಿತೀಶ್ ಕುಮಾರ್

2017ರಲ್ಲಿ ಮಹಾಘಟಬಂಧನ್‌ ತೊರೆದು ಹೊರಬಂದ ನಿತೀಶ್ ಕುಮಾರ್ ಮತ್ತೆ ಬಿಜೆಪಿ ಸಖ್ಯ ಬೆಳೆಸಿದರು. 2015ರ ವಿಧಾನಸಭಾ ಚುನಾವಣೆಯಲ್ಲಿ 53 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಜೆಡಿಯುಗೆ ಬೆಂಬಲ ನೀಡಿತ್ತು. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆದರು.

ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋಡಿ ಮಾಡಿದ್ದ ಎನ್‌ಡಿಎ ಮೈತ್ರಿಕೂಟ 40 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. 17 ಬಿಜೆಪಿ, 16 ಜೆಡಿಯು, 6 ಸ್ಥಾನಗಳಲ್ಲಿ ಎಲ್‌ಜೆಪಿ ಜಯಗಳಿಸಿದ್ದವು.

 ಪ್ರಯಾಸದ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ

ಪ್ರಯಾಸದ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ

2020ರಲ್ಲಿ ಎನ್‌ಡಿಎ ಮೈತ್ರಿಕೂಟ ಹಲವು ಗೊಂದಲಗಳ ನಡುವೆಯೇ ಚುನಾವಣೆ ಎದುರಿಸಿತು. 243 ವಿಧಾನಸಭಾ ಸ್ಥಾನಗಳಲ್ಲಿ ಜೆಡಿಯು 43 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಬಿಜೆಪಿ 74 ಸ್ಥಾನಗಳಲ್ಲಿ ಜನಗಳಿಸಿದ್ದರೂ, ಆಡಿದ ಮಾತಿನಂತೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಆದರೆ ದಿನಕಳೆದಂತೆ ಬಿಜೆಪಿ ಜೆಡಿಯು ನಡುವೆ ಬಿರುಕು ಮೂಡಲಾರಂಭಿಸಿತು. ಮೊದಲು ಚಿರಾಗ್ ಪಾಸ್ವಾನ್ ಅವರ ಬಂಡಾಯಕ್ಕೆ ಆಸರೆ ನೀಡಿ ನಂತರ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಮೂಲಕ ಅವರ ಜೆಡಿಯು ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನ ಮಾಡಿದೆ ಎನ್ನುವುದು ನಿತೀಶ್ ಕುಮಾರ್ ಆರೋಪ.

 ಬಿಜೆಪಿ ಸಖ್ಯಕ್ಕೆ ಅಂತ್ಯ ಹಾಡಿದ ನಿತೀಶ್ ಕುಮಾರ್

ಬಿಜೆಪಿ ಸಖ್ಯಕ್ಕೆ ಅಂತ್ಯ ಹಾಡಿದ ನಿತೀಶ್ ಕುಮಾರ್

ಆದರೆ ಮತ್ತೆ ಉಲ್ಟಾ ಹೊಡೆದ ಬಿಹಾರ ಸಿಎಂ ನಿತೀಶ್ ಕುಮಾರ್ ಎನ್‌ಡಿಎ ಜೊತೆ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್ ಜೊತೆ ಕೈಜೋಡಿಸಿದ್ದಾರೆ. ಮತ್ತೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಇಲ್ಲದಂತೆ ಮಾಡುವಲ್ಲಿ ಯಶ ಕಂಡಿದ್ದಾರೆ. ರಾಜಕೀಯ ತಂತ್ರಗಳಿಂದ ಹಲವು ರಾಜ್ಯಗಳಲ್ಲಿ ಅಧಿಕಾರ ಪಡೆದುಕೊಂಡಿರುವ ಬಿಜೆಪಿಗೆ ಬಿಹಾರದಲ್ಲಿ ಮಾತ್ರ ಇದುವರೆಗೆ ಸಂಪೂರ್ಣವಾಗಿ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ.

242ರ ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರ ರಾಜ್ಯ ವಿಧಾನಸಭೆಯಲ್ಲಿ, ಬಹುಮತಕ್ಕೆ 121 ಶಾಸಕರ ಅಗತ್ಯವಿದೆ, ಆರ್‌ಜೆಡಿ ಅತಿ ಹೆಚ್ಚು 79 ಶಾಸಕರನ್ನು ಹೊಂದಿದೆ, ನಂತರ ಬಿಜೆಪಿ 77 ಮತ್ತು ಜೆಡಿಯು 44 ಶಾಸಕರ ಬಲವನ್ನು ಹೊಂದಿದೆ. ಜೆಡಿಯು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ ನಾಲ್ವರು ಶಾಸಕರು ಮತ್ತು ಸ್ವತಂತ್ರರ ಬೆಂಬಲವನ್ನು ಸಹ ಹೊಂದಿದೆ.

ಕಾಂಗ್ರೆಸ್ 19 ಶಾಸಕರನ್ನು ಹೊಂದಿದ್ದರೆ, ಸಿಪಿಐಎಂಎಲ್ (ಎಲ್) 12 ಮತ್ತು ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರನ್ನು ಹೊಂದಿದೆ. ಅಲ್ಲದೆ, ಒಬ್ಬ ಶಾಸಕ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಸೇರಿದ್ದಾರೆ.

ನಿತೀಶ್ ಕುಮಾರ್ ಅವರ ಸ್ಪಷ್ಟ ಅನುಮತಿ ಇಲ್ಲದೆಯೇ ಆರ್‌ಸಿಪಿ ಸಿಂಗ್ ಅವರನ್ನು ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಯಿತು. ಪರಿಣಾಮವಾಗಿ, ರಾಜ್ಯಸಭಾ ಸದಸ್ಯರಾಗಿ ಅವರ ಅವಧಿಯು ಕೊನೆಗೊಂಡಾಗ, ಜೆಡಿಯು ಅವರಿಗೆ ಮತ್ತೊಂದು ಅವಧಿಗೆ ರಾಜ್ಯಸಭೆ ಟಿಕೆಟ್ ನೀಡಲು ನಿರಾಕರಿಸಿತು, ಹೀಗಾಗಿ ಸಂಪುಟ ಸಚಿವರಾಗಿ ಅವರ ಅಧಿಕಾರ ಕೊನೆಗೊಂಡಿತು.

ಜಾತಿ ಗಣತಿ, ಜನಸಂಖ್ಯೆ ನಿಯಂತ್ರಣ ಮತ್ತು ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ಸಂಬಂಧವು ಸ್ವಲ್ಪ ಸಮಯದಿಂದ ಹದಗೆಟ್ಟಿದೆ. ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಹೇಳಿಕೆಯಿಂದ ನಿತೀಶ್ ಕುಮಾರ್ ಕೋಪಗೊಂಡಿದ್ದರು.

English summary
In Bihar's rapid political developments, Nitish Kumar shocked the BJP by breaking out of the NDA alliance and joining hands with Mahaghatabandhan. Meanwhile, a survey said that Nitish Kumar popularity declined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X