ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಲಸಿಕೆ ವೇರಿಯಂಟ್‌-ಪ್ರೂಫ್ ಆಗಬಹುದು: ಅಧ್ಯಯನ

|
Google Oneindia Kannada News

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವೊಂದು ಲಸಿಕೆಯ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದೆ. ಕೊರೊನಾ ವೈರಸ್‌ ಸೋಂಕಿನ ರೂಪಾಂತರ ಓಮಿಕ್ರಾನ್‌ನ ಆತಂಕದ ನಡುವೆ ಈ ಹೊಸ ಅಧ್ಯಯನವು ಈ ಕೋವಿಡ್‌ ಲಸಿಕೆಯು ವೇರಿಯಂಟ್‌-ಪ್ರೂಫ್ ಆಗಬಹುದು ಎಂದು ಹೇಳಿದೆ.

ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಪರೂಪದ ನೈಸರ್ಗಿಕವಾಗಿ ಸಂಭವಿಸುವ T ಕೋಶಗಳನ್ನು ಕಂಡು ಹಿಡಿದಿದ್ದಾರೆ. ಈ ಟಿ ಕೋಶವು SARS-CoV-2 ಮತ್ತು ಇತರ ಕೊರೊನಾ ವೈರಸ್‌ಗಳಲ್ಲಿ ಕಂಡುಬರುವ ಪ್ರೋಟೀನ್ ಅನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧನೆಯು ಉಲ್ಲೇಖ ಮಾಡಿದೆ.

ಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ

ವೈರಸ್ ಪಾಲಿಮರೇಸ್ ಎಂದು ಕರೆಯಲ್ಪಡುವ ಈ ಪ್ರೋಟೀನ್‌ನ ಒಂದು ಅಂಶವನ್ನು ಕೋವಿಡ್‌ ಲಸಿಕೆಗಳಿಗೆ ಸಂಭಾವ್ಯವಾಗಿ ಸೇರಿಸಬಹುದು ಎಂದು ಸಂಶೋಧನೆಗಳು ಸೂಚಿಸಿವೆ, ಇದು ದೀರ್ಘಕಾಲೀನ ಪ್ರತಿರಕ್ಷಣೆಯನ್ನು ಸೃಷ್ಟಿ ಮಾಡುತ್ತದೆ. ಹಾಗೆಯೇ ಕೋವಿಡ್‌ ವೈರಸ್‌ನ ಹೊಸ ರೂಪಾಂತರಗಳ ವಿರುದ್ಧ ರಕ್ಷಣೆಯನ್ನು ಹೆಚ್ಚಿಸುತ್ತದೆ.

Amid Omicron Alert Vaccines Can Become Variant-Proof, Says New Study

ಹೆಚ್ಚಿನ ಕೋವಿಡ್‌ ಲಸಿಕೆಗಳು ಪ್ರತಿಕಾಯಗಳನ್ನು ಉತ್ಪಾದಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರೇರೇಪಿಸಲು ವೈರಸ್‌ನ ಮೇಲ್ಮೈಯಲ್ಲಿ ಕಂಡುಬರುವ ಸ್ಪೈಕ್ ಪ್ರೋಟೀನ್‌ನ ಒಂದು ಭಾಗವನ್ನು ಬಳಸುತ್ತವೆ. ಆದಾಗ್ಯೂ, ಡೆಲ್ಟಾ ಮತ್ತು ಓಮಿಕ್ರಾನ್‌ನಂತಹ ಹೊಸ ರೂಪಾಂತರಗಳು ಸ್ಪೈಕ್ ಪ್ರೋಟೀನ್‌ಗೆ ರೂಪಾಂತರಗಳನ್ನು ಸಾಗಿಸುತ್ತವೆ. ಇದು ಪ್ರತಿರಕ್ಷಣಾ ಕೋಶ ಹಾಗೂ ಕೋವಿಡ್‌ ಲಸಿಕೆಯಿಂದಾಗಿ ಸೃಷ್ಟಿಯಾದ ಪ್ರತಿಕಾಯಗಳಿಗೆ ಅವುಗಳನ್ನು ಕಡಿಮೆ ಗುರುತಿಸುವಂತೆ ಮಾಡುತ್ತದೆ ಎಂದು ವೈದ್ಯಕೀಯ ವಿಚಾರವನ್ನು ಸಂಶೋಧನೆಯಲ್ಲಿ ವಿವರಿಸಲಾಗಿದೆ. ಹಾಗೆಯೇ ಕೋವಿಡ್‌ನ ಹೊಸ ರೂಪಾಂತರವನ್ನು ಹಿಮ್ಮೆಟ್ಟಿಸಲು ಹೊಸ ಪೀಳಿಗೆಯ ಲಸಿಕೆಗಳ ಅಗತ್ಯವಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇನ್ನು ಲಸಿಕೆಯ ಮೂಲಕ ಹೊಸ ರೂಪಾಂತರವನ್ನು ಎದುರಿಸಬೇಕಾದರೆ ಒಂದು ಮಾರ್ಗವಿದೆ ಎಂದು ಕೂಡಾ ಈ ಸಂಶೋಧಕರು ಹೇಳಿದ್ದಾರೆ. ಲಸಿಕೆಗಳಿಗೆ ವಿಭಿನ್ನ ವೈರಲ್ ಪ್ರೋಟೀನ್‌ನ ತುಣುಕನ್ನು ಸೇರಿಸುವುದು ಎಂದು ಕೂಡಾ ತಿಳಿಸಿದ್ದಾರೆ. ಸಂಶೋಧಕರು ವೈರಲ್ ಪಾಲಿಮರೇಸ್ ಪ್ರೋಟೀನ್‌ನ ಮೇಲೆ ಮುಖ್ಯ ವಿವರಣೆಯನ್ನು ನೀಡಿದ್ದಾರೆ. ಇದು SARS-CoV-2 ನಲ್ಲಿ ಮಾತ್ರವಲ್ಲದೆ SARS, MERS ಮತ್ತು ನೆಗಡಿಗೆ ಕಾರಣವಾಗುವ ಇತರ ಕೊರೊನಾವೈರಸ್‌ಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆಯಲ್ಲಿ ಉಲ್ಲೇಖ ಮಾಡಿದ್ದಾರೆ. ವೈರಲ್‌ ಪಾಲಿಮರೇಸ್‌ಗಳು ಸೋಂಕು ಹರಡಲು ಅನುವು ಮಾಡಿಕೊಡುತ್ತದೆ. ಸ್ಪೈಕ್ ಪ್ರೊಟೀನ್‌ಗಿಂತ ಭಿನ್ನವಾಗಿ, ವೈರಸ್‌ಗಳು ವಿಕಸನಗೊಂಡಾಗಲೂ ವೈರಲ್ ಪಾಲಿಮರೇಸ್‌ಗಳು ಬದಲಾಗುವ ಅಥವಾ ರೂಪಾಂತರಗೊಳ್ಳುವ ಸಾಧ್ಯತೆಯಿಲ್ಲ ಎಂದು ಕೂಡಾ ಸಂಶೋಧನಾ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

 ಓಮಿಕ್ರಾನ್ ರೂಪಾಂತರಿಯನ್ನು ತಟಸ್ಥಗೊಳಿಸಲಿದೆ 'ಪ್ಯಾಕ್ಸ್ಲೋವಿಡ್' ಮಾತ್ರೆ ಓಮಿಕ್ರಾನ್ ರೂಪಾಂತರಿಯನ್ನು ತಟಸ್ಥಗೊಳಿಸಲಿದೆ 'ಪ್ಯಾಕ್ಸ್ಲೋವಿಡ್' ಮಾತ್ರೆ

"ಹೊಸ ರೂಪಾಂತರ ಬಂದಂತೆ ಲಸಿಕೆಯೂ ನವೀಕರಣವಾಗಬೇಕು"

ವಿಶ್ವಾದ್ಯಂತ 5 ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾ ವೈರಸ್‌ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈ ನಡುವೆ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಆದರೆ ಓಮಿಕ್ರಾನ್‌ನಿಂದಾಗಿ ಅಧಿಕ ಸಾವು ಪ್ರಕರಣಗಳು ವರದಿ ಆಗಿಲ್ಲ. ವಿಶ್ವದಲ್ಲಿ ಮೊದಲ ಬಾರಿಗೆ ಯುಕೆಯಲ್ಲಿ ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಇನ್ನು ಪ್ರಸ್ತುತ ಲಸಿಕೆಗಳು ತೀವ್ರವಾದ ಕಾಯಿಲೆಯ ವಿರುದ್ಧ ಗಮನಾರ್ಹವಾದ ರಕ್ಷಣೆಯನ್ನು ನೀಡುತ್ತವೆ, ಆದರೆ ಹೊಸದಾದ ಬೇರೆ ರೂಪಾಂತರಗಳು ಪತ್ತೆಯಾದಾಗ ಕೋವಿಡ್‌ ಲಸಿಕೆಯನ್ನು ಕೂಡಾ ನವೀಕರಿಸುವ ಅಗತ್ಯವಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ.

ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಹಿಂದಿನ ಯಾವುದೇ ರೂಪಾಂತರದೊಂದಿಗೆ ಕಂಡುಬರದ ಪ್ರಮಾಣದಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, "77 ದೇಶಗಳು ಈಗ ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ವಾಸ್ತವವೆಂದರೆ ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿ ಇನ್ನೂ ಪತ್ತೆಯಾಗದಿದ್ದರೂ ಸಹ ಓಮಿಕ್ರಾನ್ ಹಿಂದಿನ ಯಾವುದೇ ರೂಪಾಂತರದೊಂದಿಗೆ ನಾವು ನೋಡದ ದರದಲ್ಲಿ ಹರಡುತ್ತಿದೆ'' ಎಂದು ಎಚ್ಚರಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Amid Omicron Alert Vaccines Can Become Variant-Proof, Says New Study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X