ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರವನ್ನು ಆಳಿದ ಕ್ರೂರ ಮತ್ತು ದೈತ್ಯ ಜೀವಿ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 29: ನಮ್ಮ ಪ್ರಪಂಚ ಅಂತಹ ರಹಸ್ಯಗಳಿಂದ ತುಂಬಿದೆ. ಈ ರಹಸ್ಯಗಳು ಲಕ್ಷಾಂತರ ವರ್ಷಗಳವರೆಗೆ ಬಹಿರಂಗಗೊಳ್ಳುತ್ತಲೇ ಇರುತ್ತವೆ. ಆದರೂ ರಹಸ್ಯಗಳು ಕಡಿಮೆಯಾಗುವುದಿಲ್ಲ. ಸಮುದ್ರದಲ್ಲಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಅಂತಹ ದೈತ್ಯ ಜೀವಿಯನ್ನು ಕಂಡುಹಿಡಿದಿದ್ದಾರೆ. ಈ ದೈತ್ಯ ಜೀವಿಯ ಏಕೈಕ ಸಾಮ್ರಾಜ್ಯ ಸಮುದ್ರ. ಡೈನೋಸಾರ್‌ಗಳು ಭೂಮಿಯನ್ನು ಆಳುತ್ತಿದ್ದಾಗ, ಸಮುದ್ರದಲ್ಲಿ ಆತಂಕಕಾರಿ ಹಲ್ಲುಗಳನ್ನು ಹೊಂದಿರುವ ಈ ರಾಕ್ಷಸನು ಉಳಿದ ಜೀವಿಗಳಿಗೆ ಯಮರಾಜನಾಗಿದ್ದನು. ಈಗ ಈ ದೈತ್ಯ ಜೀವಿಯ ಅವಶೇಷಗಳನ್ನು ಪತ್ತೆಯಾಗಿವೆ. ಮಾತ್ರವಲ್ಲದೆ ಈ ದೈತ್ಯ ಮತ್ತೊಂದು ದೈತ್ಯ ಜೀವಿಯನ್ನು ತಿನ್ನುತ್ತಿತ್ತು ಎನ್ನುವ ವಿಚಾರ ಕೂಡ ಸಂಶೋಧಕರು ಬಹಿರಂಗಗೊಳಿಸಿದ್ದಾರೆ.

ಕ್ರಿಟೇಶಿಯಸ್ ಅವಧಿಯ ಕೊನೆಯಲ್ಲಿ ತಿಮಿಂಗಿಲದಂತೆ ಹಲ್ಲುಗಳನ್ನು ಹೊಂದಿರುವ ದೈತ್ಯ ಜೀವಿ, ಮೊರಾಕೊದ ಸುತ್ತಮುತ್ತಲಿನ ಸಾಗರಗಳನ್ನು ಆಳಿತು ಎಂದು ಹೊಸ ಅಧ್ಯಯನ ಕಂಡುಹಿಡಿದಿದೆ. ಈ ಜೀವಿಯು ಸಮುದ್ರದ ಅತ್ಯಂತ ನಿರ್ದಯ ಬೇಟೆಗಾರ ಎಂದು ಸಂಶೋಧನೆ ತೋರಿಸಿದೆ ಮತ್ತು ಅದು ತನ್ನ ಬೇಟೆಯ ಮೇಲೆ ಹೆಚ್ಚಿನ ವೇಗದಲ್ಲಿ ಆಕ್ರಮಣ ಮಾಡುತ್ತಿತ್ತು. ಸಮುದ್ರದ ಜೀವಿಗಳಲ್ಲಿ ಆತಂಕ ಹುಟ್ಟಿಸಿದ ಎರಡನೇ ಹೆಸರಾದ ಈ ದೈತ್ಯ ಪ್ರಾಣಿಯ ಹೆಸರು ಥಲಸ್ಸೋ ಟೈಟನ್ ಟ್ರಾಕ್ಸ್ (Thalasso Titan trax). ಅದು ಈಗ ಅಳಿವಿನಂಚಿನಲ್ಲಿದೆ. ಈ ಜೀವಿಯು ಡೈನೋಸಾರ್‌ಗಳ ಸಮಯದಲ್ಲಿ ಮಾತ್ರ ಇತ್ತು ಮತ್ತು ಡೈನೋಸಾರ್‌ಗಳೊಂದಿಗೆ ಇದರ ಅಳಿವು ಸಂಭವಿಸಿದೆ. ಅಂದರೆ ಭೂಮಿಯ ಮೇಲಿನ ಡೈನೋಸಾರ್‌ಗಳು ಉಳಿದ ಜೀವಿಗಳಿಗೆ ಯಮನಾಗಿದ್ದರೆ, ಸಮುದ್ರದಲ್ಲಿನ ಈ ಜೀವಿ ಉಳಿದ ಜೀವಿಗಳಿಗೆ ಯಮರಾಜನಾಗಿತ್ತು.

30 ಅಡಿ ಉದ್ದವಿತ್ತು ಕ್ರೂರ ಹಾಗೂ ದೈತ್ಯ ಜೀವಿ

30 ಅಡಿ ಉದ್ದವಿತ್ತು ಕ್ರೂರ ಹಾಗೂ ದೈತ್ಯ ಜೀವಿ

ಅಳಿವಿನಂಚಿನಲ್ಲಿರುವ ಪರಭಕ್ಷಕ ಥಲಸೋ ಟೈಟನ್ ಟ್ರಾಕ್ಸ್, ಸುಮಾರು 30 ರಿಂದ 33 ಅಡಿ (9 ರಿಂದ 10 ಮೀ) ಉದ್ದವಿತ್ತು. ಅದು ಪ್ರತಿಯೊಂದು ಸಮುದ್ರ ಜೀವಿಗಳನ್ನು ಬೇಟೆಯಾಡುತ್ತಿತ್ತು. ಅಷ್ಟೇ ಅಲ್ಲ ಇದು ಹಸಿವಾದಾಗ ತನ್ನ ಸಮುದ್ರ ಸ್ನೇಹಿತ ಮೊಸಾಸಾರ್ (Mosasaur) ಅನ್ನು ಸಹ ಬಿಡದೆ ಬೇಟೆಯಾಡಿ ತಿನ್ನುತ್ತಿತ್ತು. ಥಲಸೋ ಟೈಟನ್ ಎಂಬ ಹೆಸರು ಗ್ರೀಕ್ ಪದಗಳಾದ "ತಲಸ್ಸಾ" ಮತ್ತು "ಟೈಟಾನ್" ನಿಂದ ಬಂದಿದೆ. ಇದರರ್ಥ "ಸಮುದ್ರ ದೈತ್ಯ" ಎಂದಾಗಿದೆ. ಜಾತಿಯ ಹೆಸರು ಅಟ್ರಾಕ್ಸ್, ಅಂದರೆ "ಕ್ರೂರ" ಅಥವಾ "ನಿರ್ದಯ". ಸಂಶೋಧಕರು ಈ ನಿರ್ದಯ ಪ್ರಾಣಿಯ ಪಳೆಯುಳಿಕೆಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಅದರ ದವಡೆಗಳು ಮತ್ತು ಇತರ ಅವಶೇಷಗಳು ಸೇರಿವೆ. ಪಶ್ಚಿಮ ಮೊರಾಕೊದ ಕಾಸಾಬ್ಲಾಂಕಾ (Casablanca in western Morocco)ಬಳಿ ಈ ಪ್ರಾಣಿ ಅವಶೇಷಗಳು ಸಿಕ್ಕಿವೆ. ಸಂಶೋಧನೆಯ ಪ್ರಕಾರ, ಇದು ಕ್ರಿಟೇಶಿಯಸ್ ಅವಧಿಯಲ್ಲಿ ನೀರಿನ ಅಡಿಯಲ್ಲಿದ್ದ ಪ್ರದೇಶವಾಗಿದೆ.

ಹಿಂಸಾತ್ಮಕವಾಗಿ ಆಕ್ರಮಣ ಮಾಡುವ ಥಲಸೋಟಿಟನ್ ಅಟ್ರಾಕ್ಸ್

ಹಿಂಸಾತ್ಮಕವಾಗಿ ಆಕ್ರಮಣ ಮಾಡುವ ಥಲಸೋಟಿಟನ್ ಅಟ್ರಾಕ್ಸ್

ಥಲಸೋ ಟೈಟನ್ ಟ್ರಾಕ್ಸ್ನ ಹಲ್ಲುಗಳು ತುಂಬಾ ಹಾನಿಗೊಳಗಾಗಿವೆ ಮತ್ತು ಮುರಿದುಹೋಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದರ ಹಲ್ಲುಗಳಿಮದ ಈ ಅಪಾಯಕಾರಿ ಪ್ರಭೇದವು ತನ್ನ ಬೇಟೆಯನ್ನು ಎಷ್ಟು ಹಿಂಸಾತ್ಮಕವಾಗಿ ಆಕ್ರಮಣ ಮಾಡಿ ಕಚ್ಚಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಅದರ ಹಲ್ಲುಗಳು ಕ್ರಮೇಣ ದುರ್ಬಲಗೊಳ್ಳಲು ಮತ್ತು ನಂತರ ಮುರಿಯಲು ಪ್ರಾರಂಭಿಸುತ್ತವೆ. ಈ ಜೀವಿ ತನ್ನ ಬೇಟೆಯ ಮೂಳೆಗಳನ್ನು ಸಹ ಬಿಡಲಿಲ್ಲ ಮತ್ತು ಅವುಗಳನ್ನು ಸಹ ತಿನ್ನುತ್ತಿತ್ತು ಎಂದು ಹೇಳಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ, ಕ್ಷುದ್ರಗ್ರಹವು ಭೂಮಿಗೆ ಡಿಕ್ಕಿ ಹೊಡೆದಾಗ, ಭೂಮಿಯ ಮೇಲಿನ ಡೈನೋಸಾರ್‌ಗಳು ನಾಶವಾದವು ಮತ್ತು ಅದೇ ಸಮಯದಲ್ಲಿ ಈ ದೈತ್ಯ ಜೀವಿ ಕೂಡ ನಾಶವಾಯಿತು. ಈ ಜೀವಿಗಳ ಅವಶೇಷಗಳು ಮೊರಾಕೊದಲ್ಲಿನ ಪಳೆಯುಳಿಕೆ ದಾಖಲೆಗೆ ಸೇರಿಸುತ್ತವೆ. ಇದು ಕ್ಷುದ್ರಗ್ರಹ ಭೂಮಿಗೆ ಹೊಡೆಯುವ ಮೊದಲು ಸಾಗರ ವೈವಿಧ್ಯಮಯ ಜೀವನದಿಂದ ತುಂಬಿತ್ತು ಎಂದು ತೋರಿಸುತ್ತದೆ.

ಮೊಸಾಸಾರ್ ಎಷ್ಟು ದೈತ್ಯ ಜೀವಿ ಗೊತ್ತಾ?

ಮೊಸಾಸಾರ್ ಎಷ್ಟು ದೈತ್ಯ ಜೀವಿ ಗೊತ್ತಾ?

ಈ ಸಂಶೋಧನೆಯ ಸಹ-ಲೇಖಕರಾದ ರಾ-ಎಡಿನ್ ಜಲೀಲ್, 'ಡೈನೋಸಾರ್ ಯುಗವು ಅಂತ್ಯಗೊಳ್ಳುವ ಮೊದಲು, ಸಾಗರವು ವೈವಿಧ್ಯಮಯ ಮತ್ತು ಶ್ರೀಮಂತ ಜೀವನದಿಂದ ತುಂಬಿತ್ತು. ಆ ಸಮಯದಲ್ಲಿ ಬೇರೆ ದೈತ್ಯ ಪ್ರಾಣಿಗಳು ಬದುಕಿದ್ದವು ಎಂದು ಈ ಸಂಶೋಧನೆಯು ನಮಗೆ ಹೇಳುತ್ತದೆ. ಇದರಲ್ಲಿ ಮೊಸಾಸಾರ್‌ಗಳು (Mosasaur) ಸಮುದ್ರದ ಸರೀಸೃಪಗಳ ವೈವಿಧ್ಯಮಯ ಗುಂಪಾಗಿದ್ದು, ಇವು ಆಧುನಿಕ ಹಲ್ಲಿಗಳು ಮತ್ತು ಹಾವುಗಳಿಗೆ ಸಂಬಂಧಿಸಿದ ರೂಪವನ್ನು ಹೊಂದಿವೆ. ಡೈನೋಸಾರ್‌ಗಳು ಭೂಮಿಯ ಮೇಲೆ ಪ್ರಾಬಲ್ಯ ಸಾಧಿಸಿದಾಗ ಮೊಸಾಸಾರ್‌ಗಳು ಲಕ್ಷಾಂತರ ವರ್ಷಗಳ ಕಾಲ ವಿಶ್ವದ ಸಾಗರಗಳನ್ನು ಆಳಿದವು. ಜರ್ನಲ್ ಪ್ರೊಸೀಡಿಂಗ್ಸ್ ಆಫ್ ಝೂಲಾಜಿಕಲ್ ಇನ್‌ಸ್ಟಿಟ್ಯೂಟ್ RAS ನಲ್ಲಿ ಪ್ರಕಟವಾದ 2014 ರ ಅಧ್ಯಯನ ರಷ್ಯಾದಲ್ಲಿ ಮೊಸಾಸಾರಸ್ ಹಾಫ್‌ಮನ್ನಿ ಎಂಬ ವಿಭಿನ್ನ ಜಾತಿಯ ಮೊಸಾಸಾರ್ ಮಾದರಿಯು ಸುಮಾರು 56 ಅಡಿ (17 ಮೀ) ಉದ್ದವಿದೆ ಎಂದು ಅಂದಾಜಿಸಿದೆ. ಇದು ಈ ಹಿಂದೆ ಇದ್ದ ಸಮುದ್ರದ ಅತ್ಯಂತ ದೊಡ್ಡ ಜೀವಿ ಎಂದು ಪರಿಗಣಿಸಲಾಗಿದೆ.

ಟಿ. ಟ್ರಾಕ್ಸ್‌ನ ಹೊಟ್ಟೆಯಲ್ಲಿ ಮೊಸಾಸಾರ್‌ ಮೂಳೆಗಳು

ಟಿ. ಟ್ರಾಕ್ಸ್‌ನ ಹೊಟ್ಟೆಯಲ್ಲಿ ಮೊಸಾಸಾರ್‌ ಮೂಳೆಗಳು

ಪ್ರಸ್ತುತ ಸಮುದ್ರದಲ್ಲಿ ಆಹಾರಕ್ಕಾಗಿ ಬೇಟೆಯಾಡುವ ತಿಮಿಂಗಿಲಗಳು ಮತ್ತು ದೊಡ್ಡ ಶಾರ್ಕ್‌ಗಳು ವಹಿಸುವ ಪಾತ್ರವನ್ನು ಆ ಸಮಯದಲ್ಲಿ ಥಲಸೋ ಟೈಟನ್ ಟ್ರಾಕ್ಸ್ಗಳು ವಹಿಸಿವೆ ಎಂದು ಸಂಶೋಧನೆ ತೋರಿಸಿದೆ. ಅಧ್ಯಯನದ ಪ್ರಕಾರ, ಹೆಚ್ಚಿನ ಮೊಸಾಸಾರ್‌ಗಳು ಉದ್ದವಾದ ದವಡೆಗಳು ಮತ್ತು ತೆಳ್ಳಗಿನ ಹಲ್ಲುಗಳನ್ನು ಹೊಂದಿದ್ದವು, ಆದರೆ ಥಲಸೋಟಿಟನ್ ಅಟ್ರಾಕ್ಸ್ ಚಿಕ್ಕದಾದ, ಅಗಲವಾದ ಮೂತಿಯನ್ನು ಹೊಂದಿದೆ. ಇದು ಕಚ್ಚುವಿಕೆಯ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ. ಸಂಶೋಧಕರು ಮೂರು ಇತರ ಮೊಸಾಸಾರ್‌ಗಳ ಮೂಳೆಗಳನ್ನು ಥಲಸೋ ಟೈಟನ್ ಟ್ರಾಕ್ಸ್ನ ಹೊಟ್ಟೆಯಲ್ಲಿ ಕಂಡುಹಿಡಿದಿದ್ದಾರೆ. ಈ ಮೊಸಾಸಾರ್‌ ಮೂಳೆಗಳು ಟಿ. ಅಟ್ರಾಕ್ಸ್‌ನ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಮತ್ತೆ ಉಗುಳಿದವು ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.

English summary
Scientists researching in the seas of the Americas discover a giant and ferocious creature. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X