ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!

|
Google Oneindia Kannada News

ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಬೇಕು, ತಮ್ಮ ಕಷ್ಟಗಳನ್ನೆಲ್ಲಾ ಬಗೆಹರಿಸಿಕೊಳ್ಳಬೇಕು ಅಂತಾ ಯಾರಿಗೆ ತಾನೆ ಇಷ್ಟ ಇರೋದಿಲ್ಲ ಹೇಳಿ. ಜಗತ್ತಿನ ಬಹುತೇಕ ಯುವಕರ ಕನಸು ಅಮೆರಿಕ. ಆದರೆ ಟ್ರಂಪ್ ಆಡಳಿತದಲ್ಲಿ ಈ ಕನಸು ಕನಸಾಗಿಯೇ ಉಳಿದಿತ್ತು. ಟ್ರಂಪ್ ಹೇರಿದ್ದ ಕಠಿಣ ನಿಯಮಗಳು ಭಾರತೀಯರು ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಿಗೆ ಅಡ್ಡಿಯಾಗಿತ್ತು. ಆದ್ರೆ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಬಳಿಕ ಒಂದೊಂದೇ ಗುಡ್ ನ್ಯೂಸ್ ಕೊಡುತ್ತಿದ್ದಾರೆ.

ಹೌದು, ಇದೀಗ 'ಗ್ರೀನ್ ಕಾರ್ಡ್' ಅಂದರೆ ಅಮೆರಿಕದ ಶಾಶ್ವತ ನಿವಾಸಿ ಪಟ್ಟ ನೀಡುವ ಹಸಿರು ಕಾರ್ಡ್ ಪಡೆಯಲು ಸುಲಭವಾಗುವ ಕಾನೂನು ಪ್ರಸ್ತಾಪಿಸಿದೆ ಜೋ ಬೈಡನ್ ಆಡಳಿತ. ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ವಿತರಣೆಯಲ್ಲಿ ಇಷ್ಟು ದಿನಗಳ ಕಾಲ ಅಸ್ತಿತ್ವದಲ್ಲಿದ್ದ ದೇಶವಾರು ಮಿತಿ, ಅಂದರೆ ಇಂತಿಂತಹ ದೇಶದ ಪ್ರಜೆಗಳಿಗೆ ಇಂತಿಷ್ಟೇ ಗ್ರೀನ್ ಕಾರ್ಡ್ ಎಂಬ ನಿಯಮ ತೆಗೆದುಹಾಕುವ ಕಾನೂನು ಜಾರಿಗೆ ಬೈಡನ್ ಮುಂದಾಗಿದ್ದಾರೆ.

ಈ ಮಸೂದೆಯನ್ನು ಜನಪ್ರತಿನಿಧಿಗಳ ಸಭೆ ಅರ್ಥಾತ್ 'ಹೌಸ್‌ ಆಫ್‌ ರೆಪ್ರೆಸೆಂಟೆಟಿವ್ಸ್‌'ನಲ್ಲಿ ಮಂಡಿಸಲಾಗಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಈ ಮಸೂದೆ ಕಾನೂನಾಗಿ ಜಾರಿಯಾಗುವ ವಿಶ್ವಾಸವಿದೆ.

 ಇಂತಹ ನಿಯಮ ಡೇಂಜರ್..!

ಇಂತಹ ನಿಯಮ ಡೇಂಜರ್..!

ಹಿಂದೆ ಒಂದು ಕಾಲವಿತ್ತು, ಮನುಷ್ಯ ಆಯಾ ದೇಶಕ್ಕೆ ಅಥವಾ ಆಯಾ ಸಾಮ್ರಾಜ್ಯಕ್ಕೆ ಸೀಮಿತವಾಗಿ ಬದುಕನ್ನ ಕಟ್ಟಿಕೊಳ್ಳುತ್ತಿದ್ದ. ಆದರೆ ಆಧುನಿಕ ಜಗತ್ತು ಇಡೀ ವಿಶ್ವವನ್ನೇ ಒಂದು ಮನೆಯ ರೀತಿ ಮಾಡಿದೆ. ಹೀಗಿರುವಾಗ ಅಮೆರಿಕದಂತಹ ದೇಶ ಬೇರೆ ದೇಶದ ಪ್ರತಿಭೆಗಳ ಮೇಲೆ ನಿರ್ಬಂಧ ಹೇರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಇದು ಪರೋಕ್ಷವಾಗಿ ಅಮೆರಿಕದ ಆರ್ಥಿಕತೆ ಮುಳುವಾಗುತ್ತಿದೆ ಎಂಬುದನ್ನ ಅರಿತಿರುವ ಅಮೆರಿಕದ ಆಡಳಿತ ಟ್ರಂಪ್ ಅಧಿಕಾರದಿಂದ ಕೆಳಗಿಳಿದ ತಕ್ಷಣ ವಲಸಿಗರಿಗೆ ಆದ್ಯತೆ ನೀಡುತ್ತಿದೆ. ಹಾಗಂತಾ ಅಲ್ಲಿನ ಸ್ಥಳೀಯರನ್ನು ತುಳಿಯುವ ಯೋಜನೆಯಂತೂ ಇದಲ್ಲ. ಹೊರ ದೇಶಗಳ ಪ್ರತಿಭೆಗಳಿಗೆ ತಮ್ಮ ದೇಶದಲ್ಲಿ ಜಾಗ ಕೊಟ್ಟು, ಆ ಮೂಲಕ ತಮ್ಮಲ್ಲಿ ಸಂಪತ್ತು ವೃದ್ಧಿಸಿಕೊಳ್ಳುವ ಜೊತೆಗೆ ತಮ್ಮ ದೇಶದ ಪ್ರತಿಭೆಗಳನ್ನೂ ಬೆಳೆಸುವ ಪ್ಲ್ಯಾನ್.

ಇದು ಸುಲಭದ ಮಾತಲ್ಲ..!

ಇದು ಸುಲಭದ ಮಾತಲ್ಲ..!

ಅಷ್ಟಕ್ಕೂ ಹೊಸ ಮಸೂದೆಯನ್ನ ಕಾಯ್ದೆಯಾಗಿ ಜಾರಿ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಬೈಡನ್‌ ಜಾಗತಿಕವಾಗಿ ಅಮೆರಿಕ ಹಾಗೂ ಅಮೆರಿಕದ ಮಾರುಕಟ್ಟೆಯನ್ನು ಮುಕ್ತವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮ ಜಾಗತಿಕವಾಗಿ ಕೋಟ್ಯಂತರ ಯುವಕರಿಗೆ ಉದ್ಯೋಗ ದೊರೆಯಲಿದೆ. ಆದರೆ ಇದಕ್ಕೆ ಅಮೆರಿಕದ ಜನಪ್ರತಿನಿಧಿಗಳ ವಿರೋಧವಿದೆ. ಸದ್ಯಕ್ಕೆ ಜನಪ್ರತಿನಿಧಿಗಳ ಸಭೆಯಲ್ಲಿ ಮಸೂದೆ ಗೆದ್ದರೂ ಸೆನೆಟ್‌ ಅಗ್ನಿಪರೀಕ್ಷೆ ಪಾಸ್ ಮಾಡಬೇಕು. ಮೇಲ್ಮನೆಯಲ್ಲಿ ಅಲ್ಲೋಲ ಕಲ್ಲೋಲವಾದ್ರೆ ಕೋಟ್ಯಂತರ ಜನರ ಕನಸು ಭಗ್ನವಾಗಲಿದೆ.

 ಮಸೂದೆಯ ಅಸಲಿಯತ್ತು ಏನು..?

ಮಸೂದೆಯ ಅಸಲಿಯತ್ತು ಏನು..?

ಅಮೆರಿಕದಲ್ಲಿ ವಿದೇಶಿಗರ ಸಂಖ್ಯೆ ಏರುತ್ತಿದೆ ಎಂಬ ಕಾರಣಕ್ಕೆ ನಾನಾ ಕಠಿಣ ನಿಯಮಗಳನ್ನ ಹೇರಲಾಗುತ್ತಿದೆ. ಅದರಲ್ಲೂ ಟ್ರಂಪ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳ ವಿರುದ್ಧ ಇದೇ ರೀತಿಯ ಕಾನೂನು ಜಾರಿ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ರೀತಿ ಗ್ರೀನ್ ಕಾರ್ಡ್ ನಿಯಮ ಕೂಡ ಕಠಿಣವಾಗಿದೆ. ಹೊಸ ಮಸೂದೆ ಮಂಡನೆಯಾಗಿ ಕಾನೂನು ರೂಪ ಪಡೆದರೆ, ಈಗಿನ ಮಿತಿ ರದ್ದಾಗುತ್ತದೆ. ಈ ಮೂಲಕ ‌ಉದ್ಯೋಗ ಆಧಾರಿತ ವಲಸಿಗರ ವೀಸಾ ಮೇಲಿನ ಆಯಾ ದೇಶಗಳ ಶೇಕಡ 7ರ ಮಿತಿ ರದ್ದಾಗುತ್ತೆ. ಅಲ್ಲದೆ ಕುಟುಂಬ ಪ್ರಾಯೋಜಿತ ವೀಸಾ ಮಿತಿಯನ್ನೂ ಶೇಕಡ 7ರಿಂದ ಶೇಕಡ 15ಕ್ಕೆ ಏರಿಸಲಿದೆ ಅಮೆರಿಕ.

ಚೀನಾ ಜೊತೆ ನೇರ ಸ್ಪರ್ಧೆ

ಚೀನಾ ಜೊತೆ ನೇರ ಸ್ಪರ್ಧೆ

ಅಮೆರಿಕದ ಪಾಲಿನ ದೊಡ್ಡ ಶತ್ರು ಚೀನಾ ಎಂಬುದರಲ್ಲಿ ಎರಡು ಮಾತಿಲ್ಲ. ಅಮೆರಿಕ ಮತ್ತು ಚೀನಾ ವ್ಯಾಪಾರ ಹಾಗೂ ವಹಿವಾಟು ಬಿಟ್ಟು ಬೇರೆ ಯಾವುದೇ ವಿಚಾರದಲ್ಲೂ ಒಂದಾಗಿಲ್ಲ. ಅದರಲ್ಲೂ ನಂಬರ್ 1 ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಚೀನಾ ಮಿಲಿಟರಿ ವಿಭಾಗದ ಹಲವು ಶಾಖೆಗಳಲ್ಲಿ ನಂ. 1 ಸ್ಥಾನಕ್ಕೆ ಬಂದು ನಿಂತಿದೆ. ಈಗ ಉಳಿದಿರುವುದು ಆರ್ಥಿಕತೆ ಮಾತ್ರ, ಕೊರೊನಾ ಬಂದು ಅಪ್ಪಳಿಸಿದ ಬಳಿಕ ಅಮೆರಿಕದ ಆರ್ಥಿಕತೆ ಅಲುಗಾಡಿ ಹೋಗಿದೆ. ಇನ್ನೇನು ಚೀನಾ ಅಧಿಕೃತವಾಗಿ ನಂಬರ್ 1 ಆಗೇ ಬಿಡುತ್ತೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಜಾಗತಿಕವಾಗಿ ಒಳ್ಳೆ ಹೆಸರನ್ನ ಪಡೆದು ತನ್ನ ನಂಬರ್ 1 ಪಟ್ಟ ಉಳಿಸಿಕೊಳ್ಳಲು ಯತ್ನಿಸುತ್ತಿದೆ ಎಂಬುದು ತಜ್ಞರ ವಾದ.

ಬೈಡನ್ ಬದ್ಧತೆ ಮಾದರಿ..!

ಬೈಡನ್ ಬದ್ಧತೆ ಮಾದರಿ..!

'ಅಮೆರಿಕ ಮೊದಲು', 'ಅಮೆರಿಕನ್ನರಿಗೆ ಆದ್ಯತೆ' ಹೀಗೆ ಬಾಯಿ ಬಿಟ್ಟರೆ ಸಾಕು ಅಮೆರಿಕ, ಅಮೆರಿಕ ಎನ್ನುತ್ತಿದ್ದ ಮಾಜಿ ಅಧ್ಯಕ್ಷ ಟ್ರಂಪ್ ಸಾಧಿಸಿದ್ದು ಅಷ್ಟಕ್ಕಷ್ಟೆ. ಬೇರೆ ಬೇರೆ ದೇಶಗಳನ್ನ ಬಿಡಿ, ಸ್ವತಃ ಅಮೆರಿಕದ ಪ್ರಜೆಗಳಿಗೂ ಟ್ರಂಪ್ ಹೇಳಿಕೆಗಳಿಂದ ಪ್ರಯೋಜನ ಆಗಲಿಲ್ಲ. ಮೇಕ್ ಅಮೆರಿಕ ಗ್ರೇಟ್ ಅಗೈನ್ ಹಾಗೂ ಅಮೆರಿಕ ಫಸ್ಟ್ ಎಂಬ ಟ್ರಂಪ್ ಘೋಷವಾಖ್ಯ ಪ್ರಯೋಜನಕ್ಕೆ ಬರಲಿಲ್ಲ. ಆದರೆ ಬೈಡನ್ ಗುಟ್ಟಾಗಿ ಇದನ್ನು ಸಾಧಿಸುತ್ತಿದ್ದಾರೆ. ಇತರ ದೇಶಗಳ ಉದ್ಯೋಗಿಗಳಿಗೆ ನಷ್ಟ ಆಗದ ರೀತಿಯಲ್ಲೇ ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ವಲಸಿಗರ ಪರ ಕಾನೂನು ಜಾರಿಗೆ ತಂದಿರುವ ಬೈಡನ್, ಇತರ ದೇಶಗಳ ಶತ್ರುತ್ವ ಕಟ್ಟಿಕೊಳ್ಳದೆ ಅಮೆರಿಕನ್ನರ ಉದ್ಧಾರಕ್ಕೆ ಪ್ರಯತ್ನಿಸುತ್ತಿದ್ದಾರೆ.

ಬಡವರಿಗೆ 1 ಲಕ್ಷ ರೂಪಾಯಿ

ಬಡವರಿಗೆ 1 ಲಕ್ಷ ರೂಪಾಯಿ

ಕೊರೊನಾ ಕಂಟಕದಿಂದ ಪಾರಾಗಲು ಬೈಡನ್ ಸರ್ಕಾರ ಬೃಹತ್ ಯೋಜನೆ ಹಾಕಿಕೊಂಡು, ಸುಮಾರು 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಬೈಡನ್ ಸರ್ಕಾರದ ಮಹತ್ವಕಾಂಕ್ಷೆಯ ಪ್ಯಾಕೇಜ್‌ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಬಡ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ಕೆಲಸ ಕಳೆದುಕೊಂಡು ನರಳಾಡುತ್ತಿದ್ದ ಅಮೆರಿಕದ ಬಡ ಕುಟುಂಬಗಳಿಗೆ ಸರ್ಕಾರದ ಸಹಾಯ ಒಂದಷ್ಟು ಚೇತರಿಕೆ ನೀಡಿದೆ. ಹೀಗೆ ಪ್ರೋತ್ಸಾಹಧನ ನೀಡುವ ಜೊತೆ ಉದ್ಯೋಗ ಸೃಷ್ಟಿಸುವಲ್ಲಿಯೂ ಜೋ ಬೈಡನ್ ಯಶಸ್ವಿಯಾಗುತ್ತಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯೂ ಆರ್ಥಿಕ ತಜ್ಞರಲ್ಲಿದೆ.

English summary
America submitted a bill in 'house of representatives' to remove country wise Green Card limitations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X