ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ-ಇರಾನ್ ಯುದ್ಧ ಸ್ಥಿತಿಗೆ ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿ

|
Google Oneindia Kannada News

ಅಮೆರಿಕಾ ನಿನ್ನೆಯಷ್ಟೆ ಇರಾನ್‌ ಸೇನಾ ಪ್ರಮುಖ ಖಾಸಿಂ ಸುಲೇಮಾನಿ ಅನ್ನು ಏರ್‌ಸ್ಟ್ರೈಕ್ ಮೂಲಕ ಹತ್ಯೆ ಮಾಡಿದೆ. ಈ ಹತ್ಯೆ ಅಮೆರಿಕ ಮತ್ತು ಇರಾನ್ ನಡುವಿನ ಬೆಂಕಿಗೆ ಸೀಮೆಎಣ್ಣೆ ಸುರಿದಂತಾಗಿದ್ದು, ಇರಾನ್, ಪ್ರತಿದಾಳಿಯ ಎಚ್ಚರಿಕೆ ನೀಡಿದೆ.

ಅಮೆರಿಕ-ಇರಾನ್ ನಡುವೆ ಈಗ ಉದ್ಭವಿಸಿರುವ ಯುದ್ಧ ಸ್ಥಿತಿ ಇತ್ತೀಚಿಗೆ ನಿರ್ಮಾಣವಾದದ್ದಲ್ಲ. ಇದಕ್ಕೆ ಸುದೀರ್ಘ ಇತಿಹಾಸವಿದೆ.

1953 ರಲ್ಲಿ ಮೊದಲ ಬಾರಿಗೆ ಅಮೆರಿಕವು ಇರಾನ್‌ ನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿತ್ತು. 1953 ರಲ್ಲಿ ಅಮೆರಿಕದ ಗುಪ್ತಚರ ದಳ ಸಿಐಎ, ಬ್ರಿಟನ್‌ ನ ಗುಪ್ತಚರ ದಳ ಎಂಐ6 ಒಟ್ಟಿಗೆ ಸೇರಿ ಆಗಿನ ಇರಾನ್ ಪ್ರಧಾನಿ (ಚುನಾವಣೆ ಮೂಲಕ ಆಯ್ಕೆ ಆದ) ಮೊಹಮ್ಮದ್ ಮೊಸ್ಸಾದೆಖ್ ಅವರನ್ನು ಕೆಳಗಿಸಲು ದಂಗೆಗೆ ಸಹಾಯ ಮಾಡಿತ್ತು. ಈ ಯೋಜನೆಯ ಹಿಂದೆ ಇರಾನ್‌ ನ ತೈಲ ಬಂಡಾರದ ಮೇಲೆ ಬ್ರಿಟನ್ ಜೊತೆಗೆ ತಾನೂ ಹಿಡಿತ ಸಾಧಿಸುವ ತಂತ್ರ ಅಮೆರಿಕಕ್ಕೆ ಇತ್ತು.

ಆದರೆ ಅಮೆರಿಕ ಎಣಿಸಿದಂತೆ ಇರಾನ್ ಸುಲಭಕ್ಕೆ ಅಮೆರಿಕದ ತುತ್ತಾಗಲಿಲ್ಲ, ಮೊಹಮ್ಮದ್ ಮೊಸ್ಸಾದೆಖ್ ಪತನದ ನಂತರ ಇರಾನ್ ಮುಖ್ಯಸ್ಥನಾಗಿ ಮೊಹಮ್ಮದ್ ರೇಜಾ ಶಾ ಅಧಿಕಾರ ವಹಿಸಿಕೊಂಡ. ಈತ ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಹಿಂದಿನ ಪ್ರಧಾನಿ ಮೊಹಮ್ಮದ್ ಮೊಸ್ಸಾದೆಖ್ ಕೈಗೊಂಡಿದ್ದ ತೈಲ ಬಂಡಾರದ ರಾಷ್ಟ್ರೀಯಕರಣ ರದ್ದು ಮಾಡಿದ.

ಉತ್ತಮ ಆಡಳಿತಗಾರರಾಗಿದ್ದ ಮೊಹಮ್ಮದ್ ರೇಜಾ ಶಾ ಇರಾನ್‌ನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ, ಕಾಲೇಜು ತೆರೆದ ಪಾಶ್ಚೀಮಾತ್ಯ ಸಂಸ್ಕೃತಿಗೆ ದೇಶದ ಜನರು ತೆರೆದುಕೊಳ್ಳಬೇಕೆಂಬುದು ಆತನ ಆಸೆಯಾಗಿತ್ತು. ಇದಕ್ಕೆ ಅಮೆರಿಕದ ಬೆಂಬಲವೂ ಇತ್ತು. ಆದರೆ ಇರಾನ್‌ನ ಧಾರ್ಮಿಕ ಮೂಲಭೂತವಾದಿಗಳಿಗೆ ಇಷ್ಟವಾಗಲಿಲ್ಲ.

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

ಕಾಲ ಸರಿದಂತೆ ಮೊಹಮ್ಮದ್ ರೇಜಾ ಶಾ ವಿರುದ್ಧ ಪ್ರತಿಭಟನೆಗಳು ಆರಂಭವಾದವು, ಪ್ರತಿಭಟನೆಗಳು ಕ್ರಾಂತಿಯ ರೂಪ ಪಡೆದುಕೊಂಡವು. ದಂಗೆ ಹತ್ತಿಕ್ಕಲು ಅಮೆರಿಕವು ಮೊಹಮ್ಮದ್ ರೇಜಾ ಶಾ ಗೆ ಮಿಲಿಟರಿ ಸಹಾಯ ಕೊಡುವುದಾಗಿ ಘೋಷಿಸಿತು. ಆಗಲೇ ಇರಾನ್‌ ನ ಜನರಿಗೆ, ಕ್ರಾಂತಿಯ ಮುಂಚೂಣಿಯಲ್ಲಿದ್ದವರಿಗೆ ಅಮೆರಿಕದ ಮೇಲೆ ವೈರತ್ವ ಆರಂಭವಾಯಿತು.

ಮೊಹಮ್ಮದ್ ರೇಜಾ ಶಾ ಪತನ

ಮೊಹಮ್ಮದ್ ರೇಜಾ ಶಾ ಪತನ

ಪ್ರತಿಭಟನಾಕಾರರನ್ನು ಮಿಲಿಟರಿ, ಪೊಲೀಸ್ ಬಳಸಿ ಕೊಲ್ಲಲು ಆರಂಭಿಸಿದ ಮೊಹಮ್ಮದ್ ರೇಜಾ ಶಾ, ದಂಗೆ ತಹಬದಿಗೆ ಬರದ ಕಾರಣ ಇರಾನ್ ಬಿಟ್ಟು ಅಮೆರಿಕಕ್ಕೆ ಪಲಾಯನ ಮಾಡಿದ. ಆಗ ಇರಾನ್‌ ಗೆ ವಾಪಸ್ ಬಂದ ಬಂದ ಇಸ್ಲಾಂ ಖಟ್ಟರ್‌ವಾದಿ ರೂಹುಲ್ಲಾ ಖಮೇನಿ, ಮೊಹಮ್ಮದ್ ರೇಜಾ ಶಾ ನಿಯೋಜಿಸಿದ್ದ ಪ್ರಧಾನಿಯನ್ನು ಪದಚ್ಯುತಗೊಳಿಸಿ ಇರಾನ್‌ನ ಆಡಳಿತ ಕೈಗೆತ್ತಿಕೊಂಡ. ಇರಾನ್‌ ಅನ್ನು ಇಸ್ಲಾಂ ದೇಶವಾಗಿ ಘೋಷಣೆ ಮಾಡಿದ. ರೂಹುಲ್ಲಾ ಖುಮೇನಿ ಅನ್ನು ಮೊಹಮ್ಮದ್ ರೇಜಾ ಶಾ ಹದಿನೈದು ವರ್ಷ ಗಡಿಪಾರು ಮಾಡಿದ್ದ. ಆದರೆ ಆತನೇ ಇರಾನ್‌ ನ ಸರ್ವಾಧಿಕಾರ ಆದ.

ಅಮೆರಿಕ ರಾಯಭಾರಿ ಕಚೇರಿ ಸಿಬ್ಬಂದಿಯ ಒತ್ತೆ

ಅಮೆರಿಕ ರಾಯಭಾರಿ ಕಚೇರಿ ಸಿಬ್ಬಂದಿಯ ಒತ್ತೆ

1979 ರ ಇರಾನ್ ಕ್ರಾಂತಿ ವರೆಗೆ ಅಮೆರಿಕ-ಇರಾನ್ ನಡುವೆ ಸಂಬಂಧ ಚೆನ್ನಾಗಿಯೇ ಇತ್ತು. ದಂಗೆಯ ನಂತರ ಅಮೆರಿಕಕ್ಕೆ ಪಲಾಯನ ಮಾಡಿದ್ದ ಮೊಹಮ್ಮದ್ ರೇಜಾ ಶಾ ಅನ್ನು ಇರಾನ್‌ಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳ ದೊಡ್ಡ ಗುಂಪೊಂದು ಬಗ್ದಾದ್‌ನ ಅಮೆರಿಕ ರಾಯಭಾರಿ ಕಚೇರಿಗೆ ನುಗ್ಗಿ 52 ಮಂದಿ ಅಮೆರಿಕ ಅಧಿಕಾರಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿತು. ಬರೋಬ್ಬರಿ 444 ದಿನ ಇವರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿತ್ತು. ಆದರೆ ಮೊಹಮ್ಮದ್ ರೇಜಾ ಶಾ ಅನ್ನು ಇರಾನ್‌ಗೆ ಹಸ್ತಾಂತರಿಸಲು ಅಮೆರಿಕ ಒಪ್ಪಲಿಲ್ಲ. ಆತ ಅಮೆರಿಕದಲ್ಲಿಯೇ ಅನಾರೋಗ್ಯದಿಂದ ಪ್ರಾಣ ಬಿಟ್ಟ.

ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?

ಇರಾನ್‌ ಮೇಲೆ ಇರಾಕ್ ಯುದ್ಧ ಇದಕ್ಕೆ ಅಮೆರಿಕ ಬೆಂಬಲ

ಇರಾನ್‌ ಮೇಲೆ ಇರಾಕ್ ಯುದ್ಧ ಇದಕ್ಕೆ ಅಮೆರಿಕ ಬೆಂಬಲ

ಕ್ರಾಂತಿಯ ನಂತರ ನೆರೆಯ ದೇಶ ಇರಾಕ್, ಇರಾನ್‌ ಮೇಲೆ ಯುದ್ಧ ಆರಂಭಿಸಿತು. ಈ ಯುದ್ಧದಲ್ಲಿ ಸದ್ದಾಂ ಹುಸೇನ್‌ ಗೆ ಅಮೆರಿಕ ಪರೋಕ್ಷ ಬೆಂಬಲ ನೀಡಿತ್ತು. ಇದು ಇರಾನ್‌ ಗೆ ಅಮೆರಿಕದ ಮೇಲೆ ದ್ವೇಷ ಹೆಚ್ಚಾಗಲು ಕಾರಣವಾಯಿತು. ಎಂಟು ವರ್ಷ ನಡೆದ ಈ ಯುದ್ಧದಿಂದ ಸಾವು-ನೋವಿನ ಹೊರತು ಬೇರೆ ಮಹತ್ತರ ವ್ಯತ್ಯಾಸಗಳಾಗಲಿಲ್ಲ.

ಭಾರಿ ಪ್ರಮಾದ ಎಸಗಿದ ಅಮೆರಿಕ ಯುದ್ಧನೌಕೆ

ಭಾರಿ ಪ್ರಮಾದ ಎಸಗಿದ ಅಮೆರಿಕ ಯುದ್ಧನೌಕೆ

ಯುದ್ಧ ಮುಗಿಯುವ ವೇಳೆಗೆ ಅಮೆರಿಕದ ಯುದ್ಧನೌಕೆಯೊಂದು ಇರಾನ್‌ ನ ಪ್ರಯಾಣಿಕರು ತುಂಬಿದ್ದ ವಿಮಾನವನ್ನು ಹೊಡೆದುರುಳಿಸಿತು. ಬರೋಬ್ಬರಿ 290 ಮಂದಿ ಈ ದಾಳಿಯಲ್ಲಿ ಮೃತಪಟ್ಟರು. ಬಹುತೇಕರು ಇರಾನ್‌ನ ಸಾಮಾನ್ಯ ಜನರೇ ಆಗಿದ್ದರು. ಇದರಲ್ಲಿನ ಬಹುತೇಕರು ಮೆಕ್ಕಾ ತೆರಳುತ್ತಿದ್ದವರಾಗಿದ್ದರು. ಇದು ಇರಾನ್-ಅಮೆರಿಕ ನಡುವಿನ ಸಂಬಂಧವನ್ನು ತೀವ್ರವಾಗಿ ಹಾಳುಗೆಡವಿತು.

ಇರಾನ್‌ ಮೇಲೆ ಅಮೆರಿಕ ಆರ್ಥಿಕ ದಿಗ್ಭಂದನ

ಇರಾನ್‌ ಮೇಲೆ ಅಮೆರಿಕ ಆರ್ಥಿಕ ದಿಗ್ಭಂದನ

ನಂತರದ ವರ್ಷದಲ್ಲಿ ಅಮೆರಿಕ ಇರಾನ್‌ ಮೇಲಿನ ಸಿಟ್ಟನ್ನು ತ್ಯಜಿಸದೆ ಇರಾನ್‌ ಮೇಲೆ ಆರ್ಥಿಕ ದಿಗ್ಭಂದನ ವಿಧಿಸಿತು. ಇದನ್ನು ಹಲವು ದೇಶಗಳು ಬೆಂಬಲಿಸಿದವು ಇದರಿಂದ ಇರಾನ್ ಭಾರಿ ಆರ್ಥಿಕ ಕುಸಿತ ಕಂಡಿತು. ಆದರೆ ನಂತರ 2000 ದ ಸನಿಹದಲ್ಲಿ ಆರ್ಥಿಕ ದಿಗ್ಭಂದನ ಹಿಂತೆಗೆದ ಕಾರಣ ಇರಾನ್ ಪರಿಸ್ಥಿತಿ ಅಲ್ಪ ಸುಧಾರಿಸಿತು. ಇದಕ್ಕೆ ಸೌದಿ ಅರೆಬಿಯಾ ಸಾಕಷ್ಟು ಸಹಾಯ ಮಾಡಿತು.

ಜಾರ್ಜ್‌ ಬುಶ್‌ 'ಆಕ್ಸಿಸ್ ಆಫ್ ಇವಿಲ್' ಭಾಷಣ

ಜಾರ್ಜ್‌ ಬುಶ್‌ 'ಆಕ್ಸಿಸ್ ಆಫ್ ಇವಿಲ್' ಭಾಷಣ

ಅಮೆರಿಕ ಮೇಲೆ ನಡೆದ 9/11 ದಾಳಿ ನಂತರ ಅಮೆರಿಕ-ಇರಾನ್ ಸಂಬಂಧ ಮತ್ತಷ್ಟು ಬಿಗಡಾಯಿಸಿತು. ಆಗಿನ ಅಧ್ಯಕ್ಷ ಬುಶ್ ಅವರ 'ಆಕ್ಸಿಸ್ ಆಫ್ ಇವಿಲ್' ಭಾಷಣವಂತೂ ಮಧ್ಯಪ್ರಾಚ್ಯ ದೇಶಗಳು ಅಮೆರಿಕದ ಮೇಲೆ ಕೆಂಡ ಕಾರಲು ಆರಂಭಿಸಿದವು. ಇರಾನ್ ಅಂತೂ ಅಮೆರಿಕವನ್ನು ಬದ್ಧವೈರಿಯಾಗಿ ಪರಿಗಣಿಸಿತು. ಈ ಭಾಷಣದಲ್ಲಿ ಅಧ್ಯಕ್ಷ ಬುಶ್ 'ಇರಾನ್ ವಿಶ್ವಕ್ಕೆ ಭಯೋತ್ಪಾದನೆ ಸರಬರಾಜು ಮಾಡುತ್ತಿದೆ' ಎಂದು ಬಹಿರಂಗವಾಗಿ ಆರೋಪಿಸಿತು.

ಸಂಬಂಧ ಸುಧಾರಿಸಿದ್ದ ಬರಾಕ್ ಒಬಾಮಾ

ಸಂಬಂಧ ಸುಧಾರಿಸಿದ್ದ ಬರಾಕ್ ಒಬಾಮಾ

ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷ ಆದ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಸ್ವಲ್ಪ ಸುಧಾರಿಸಿತ್ತು. ಒಬಾಮಾ, ಇರಾನ್‌ ನ ಪರಮೋಚ್ಛ ನಾಯಕ ಅಯ್ಯದ್ ಅಲಿ ಖಮೇನಿ ಜೊತೆ ದೂರವಾಣಿ ಸಂಭಾಷಣೆಯನ್ನೂ ನಡೆಸಿದ್ದರು. ಆದರೆ ಅದೇ ಒಬಾಮಾ, ಬಿನ್ ಲಾದೆನ್ ಸಾವಿಗೆ ಕಾರಣವಾದಾಗ ಮತ್ತೆ ಇರಾನ್ ಅಮೆರಿಕದೊಂದಿಗೆ ಅಂತರ ಕಾಯ್ದುಕೊಂಡಿತು.

ಟ್ರಂಪ್ ಅಧ್ಯಕ್ಷರಾದ ಮೇಲೆ ತೀವ್ರವಾಗಿ ಹದಗೆಟ್ಟ ಸಂಬಂಧ

ಟ್ರಂಪ್ ಅಧ್ಯಕ್ಷರಾದ ಮೇಲೆ ತೀವ್ರವಾಗಿ ಹದಗೆಟ್ಟ ಸಂಬಂಧ

ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆದಾಗಿನಿಂದಲೂ ಇರಾನ್-ಅಮೆರಿಕ ನಡುವೆ ಆಗಾಗ್ಗೆ ಮಾತಿನ ಯುದ್ಧಗಳು ಸಂಭವಿಸುತ್ತಲೇ ಇದ್ದವು. ಇರಾನ್ ಪರಮಾಣು ಅಸ್ತ್ರ ಹೊಂದಿದೆ ಎಂಬ ಆರೋಪವನ್ನು ಅಮೆರಿಕ ಮಾಡುತ್ತಲೇ ಬಂದಿದೆ. ಇದನ್ನು ಇರಾನ್ ನಿರಾಕರಿಸುತ್ತಲೇ ಇತ್ತು. ಈ ಸಂಬಂಧ ಯುದ್ಧಾಹ್ವಾನದಂತಾ ಹೇಳಿಕೆಗಳು ಎರಡೂ ರಾಷ್ಟ್ರಗಳಿಂದ ಆಗಾಗ್ಗೆ ಹೊರಬಿದ್ದಿದ್ದವು.

ಪ್ರತೀಕಾರವಾಗಿ ಖಾಸಿಂ ಸೋಲೆಮನಿ ಹತ್ಯೆ ಮಾಡಿದ ಅಮೆರಿಕ

ಪ್ರತೀಕಾರವಾಗಿ ಖಾಸಿಂ ಸೋಲೆಮನಿ ಹತ್ಯೆ ಮಾಡಿದ ಅಮೆರಿಕ

ಕೆಲ ತಿಂಗಳ ಹಿಂದೆ ಸೆಪ್ಟೆಂಬರ್‌ 14 ರಂದು ಸೌದಿ ಅರೆಬಿಯಾದ 'ಅರಾಮ್ಕೋ' ಮೇಲೆ ಡ್ರೋನ್ ಮತ್ತು ರಾಕೆಟ್ ದಾಳಿ ನಡೆಯಿತು. ಇದನ್ನು ತೀವ್ರವಾಗಿ ಖಂಡಿಸಿದ ಅಮೆರಿಕ, 'ಈ ದಾಳಿಯ ಹಿಂದೆ ಇರಾನ್ ಇದ್ದು, ಇರಾನ್‌ ಯುದ್ಧಾಹ್ವಾನ ನೀಡಿದೆ' ಎಂದಿತು. ನಂತರ ಕೆಲವು ದಿನಗಳ ಹಿಂದೆಯಷ್ಟೆ ಬಾಗ್ದಾದ್‌ ನಲ್ಲಿ ಅಮೆರಿಕದ ಧೂತಾವಾಸದ ಮೇಲೆ ದಾಳಿ ಮಾಡಲಾಯಿತು. ಇದಕ್ಕೆ ಪ್ರತಿಕಾರವಾಗಿ ಅಮೆರಿಕವು ಏರ್‌ಸ್ಟ್ರೈಕ್ ನಡೆಸಿ ಇರಾನ್‌ ನ ಖಾಸಿಂ ಸೋಲೆಮನಿ ಅನ್ನು ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಇರಾನ್ ಈಗಾಗಲೇ ಘೊಷಿಸಿದೆ. ಈ ಎರಡೂ ರಾಷ್ಟ್ರಗಳು ಯುದ್ಧದತ್ತ ಸಾಗುತ್ತಿರುವ ಭೀತಿ ರಾಷ್ಟ್ರ ನಾಯಕರಲ್ಲಿ ಮೂಡಿಸಿದೆ.

English summary
A war like situation created between America and Iran. Yesterday America killed famous Iran military man Qasem Soleimani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X