ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್: ಇಡೀ ಅಮೆರಿಕದಲ್ಲಿ ಆರೋಗ್ಯ ತುರ್ತು ಸ್ಥಿತಿ ಘೋಷಣೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 5: ಎರಡೂವರೆ ವರ್ಷಗಳ ಹಿಂದೆ ಕೋವಿಡ್ ಬಾಧಿಸಿದ ರೀತಿಯಲ್ಲಿ ಮಂಕಿಪಾಕ್ಸ್ ವಿಶ್ವವನ್ನು ಕಾಡಲು ಆರಂಭಿಸಿದೆ. ಅಮೆರಿಕ ದೇಶ ಈಗ ಮಂಕಿಪಾಕ್ಸ್ ಅನ್ನು ತುರ್ತು ಆರೋಗ್ಯ ಪರಿಸ್ಥಿತಿ ಎಂದು ಘೋಷಣೆ ಮಾಡಿದೆ.

ಅಮೆರಿಕದಲ್ಲಿ ಈಗ 6,600ಕ್ಕೂ ಹೆಚ್ಚು ಮಂದಿ ಮಂಕಿಪಾಕ್ಸ್ ಸೋಂಕಿಗೆ ಒಳಗಾಗಿದ್ದಾರೆ. ನಿಯಂತ್ರಣಕ್ಕೆ ನಿಲುಕದ ರೀತಿಯಲ್ಲಿ ಇಡೀ ದೇಶದಲ್ಲಿ ಮಂಕಿಪಾಕ್ಸ್ ಹರಡುತ್ತಿರುವುದರಿಂದ ತುರ್ತು ಆರೋಗ್ಯ ಸ್ಥಿತಿ ಎಂದು ಪರಿಗಣಿಸಲಾಗಿದೆ.

Monkeypox Do's And Don'ts: ಮಂಕಿಪಾಕ್ಸ್ ಕುರಿತು ಸುರಕ್ಷತೆ ಹೇಗೆ ಸಾಧ್ಯ?Monkeypox Do's And Don'ts: ಮಂಕಿಪಾಕ್ಸ್ ಕುರಿತು ಸುರಕ್ಷತೆ ಹೇಗೆ ಸಾಧ್ಯ?

ಕೆಲ ದಿನಗಳ ಹಿಂದೆ ಅಮೆರಿಕದ ಮೂರು ರಾಜ್ಯಗಳು ಮಂಕಿಪಾಕ್ಸ್ ರೋಗವನ್ನು ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಎಂದು ಘೋಷಿಸಿದ್ದವು. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಮತ್ತು ಇಲಿನಾಯ್ಸ್ ರಾಜ್ಯಗಳು ಅದಾಗಲೇ ತುರ್ತು ಸ್ಥಿತಿ ಘೋಷಿಸಿದ್ದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಂಕಿಪಾಕ್ಸ್ ಬಗ್ಗೆ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ವಾರದ ಹಿಂದೆ ಮಂಕಿಪಾಕ್ಸ್ ರೋಗವನ್ನು ಡಬ್ಲ್ಯೂಎಚ್ಒ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿತ್ತು. ಆಫ್ರಿಕಾದ ಕೆಲ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ರೋಗ ಈಗ ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿದೆ. ಒಂದು ಅಂದಾಜು ಪ್ರಕಾರ ೮೦ಕ್ಕೂ ಹೆಚ್ಚು ದೇಶಗಳಿಗೆ ಇದು ಅಡಿ ಇಟ್ಟಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಆರ್ಭಟ ಹೆಚ್ಚಾಗಿದೆ.

ಡಬ್ಲ್ಯೂಎಚ್‌ಒ ಘೋಷಣೆ ಮಹತ್ವ

ಡಬ್ಲ್ಯೂಎಚ್‌ಒ ಘೋಷಣೆ ಮಹತ್ವ

ವಿಶ್ವ ಆರೋಗ್ಯ ಸಂಸ್ಥೆ ಯಾವುದಾದರು ಒಂದು ರೋಗವನ್ನು ತುರ್ತು ಆರೋಗ್ಯ ಪರಿಸ್ಥಿತಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ ಆ ರೋಗವನ್ನು ಎದುರಿಸಲು ಬೇಕಾದ ಸಂಪನ್ಮೂಲದ ಕ್ರೋಢೀಕರಣ ಕಾರ್ಯ ಸುಲಭವಾಗುತ್ತದೆ. ರೋಗಕ್ಕೆ ಔಷಧ, ಲಸಿಕೆ ಸೇರಿದಂತೆ ವಿವಿಧ ರೀತಿಯ ನೆರವು ಒದಗಿಬರಲು ಅನುವು ಮಾಡಿಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಮಧ್ಯೆ ಈ ರೋಗ ಪ್ರಸರಣ ತಡೆಗೆ ಜಂಟಿ ಕಾರ್ಯಾಚರಣೆ ನಡೆಯಲು ಸಾಧ್ಯ ಮಾಡಿಕೊಡುತ್ತದೆ. ಜಾಗತಿಕ ಸಮುದಾಯ ಮಂಕಿಪಾಕ್ಸ್ ರೋಗವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.

ಮಂಕಿಪಾಕ್ಸ್ ಹೊಸ ರೋಗವಲ್ಲ ಭಯಬೇಡ; ಆರೋಗ್ಯ ಸಚಿವಮಂಕಿಪಾಕ್ಸ್ ಹೊಸ ರೋಗವಲ್ಲ ಭಯಬೇಡ; ಆರೋಗ್ಯ ಸಚಿವ

ಅಮೆರಿಕ ಘೋಷಣೆ ಮಹತ್ವ

ಅಮೆರಿಕ ಘೋಷಣೆ ಮಹತ್ವ

ಅಮೆರಿಕದಲ್ಲಿ ಮೇ ತಿಂಗಳಲ್ಲೇ ಮಂಕಿಪಾಕ್ಸ್ ಹರಡು ಆರಂಭಿಸಿದ್ದು. ಆದರೆ, ಸರಕಾರ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಸೋಂಕು ಸಂಖ್ಯೆ ಹೆಚ್ಚೂಕಡಿಮೆ 7 ಸಾವಿರ ಗಡಿ ಸಮೀಪ ಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಆರೋಗ್ಯ ಕಾರ್ಯದರ್ಶಿ ಕ್ಸೇವಿಯರ್ ಬಾಕೆರಾ ಮಂಕಿಪಾಕ್ಸ್ ಕಾಯಿಲೆಯನ್ನು ತುರ್ತು ಆರೋಗ್ಯ ಸ್ಥಿತಿ ಎಂದು ಘೋಷಿಸಿದ್ದಾರೆ.

ಇದರಿಂದ ತುರ್ತು ಸ್ಥಿತಿಗೆಂದು ಮೀಸಲಾದ ಹಣವನ್ನು ಸರಕಾರ ಬಿಡುಗಡೆ ಮಾಡಬಹುದು. ಎಮರ್ಜೆನ್ಸಿ ಸಂದರ್ಭವಾದ್ದರಿಂದ ಲಸಿಕೆ, ಔಷಧ ವಿತರಣೆಗೆ ಇರುವ ಕೆಲ ಕಟ್ಟುಪಾಡುಗಳು ನಿವಾರಣೆ ಆಗುತ್ತವೆ.

"ಈ ವೈರಸ್ ಅನ್ನು ಎದುರಿಸಲು ನಾವು ಮುಂದಿನ ಹಂತಕ್ಕೆ ಹೋಗಲು ಸಜ್ಜಾಗುತ್ತಿದ್ದೇವೆ. ಮಂಕಿಪಾಕ್ಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರತಿಯೊಬ್ಬ ಅಮೆರಿಕನ್ನರನ್ನೂ ನಾವು ಕೇಳಿಕೊಳ್ಳುತ್ತೇವೆ" ಎಂದು ಕ್ಸೇವಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಡವಾಗಿ ಎಚ್ಚೆತ್ತುಕೊಂಡ ಅಮೆರಿಕ

ತಡವಾಗಿ ಎಚ್ಚೆತ್ತುಕೊಂಡ ಅಮೆರಿಕ

ವಿಶ್ವ ಅರೋಗ್ಯ ಸಂಸ್ಥೆ ಒಂದು ವಾರದ ಹಿಂದೆಯೇ ಮಂಕಿಪಾಕ್ಸ್ ಅನ್ನು ಹೆಲ್ತ್ ಎಮರ್ಜೆನ್ಸಿ ಎಂದು ಘೋಷಿಸಿತ್ತು. ಮಂಕಿಪಾಕ್ಸ್‌ನಿಂದ ಅತಿಹೆಚ್ಚು ಬಾಧೆಗೊಳಗಾಗಿರುವ ದೇಶಗಳಲ್ಲಿ ಅಮೆರಿಕ ಪ್ರಮುಖವಾದುದು. ಆದರೂ ಈ ದೇಶದಲ್ಲಿ ಮಂಕಿಪಾಕ್ಸ್ ಅನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ಮಂಕಿಪಾಕ್ಸ್ ಹಳೆಯ ಕಾಯಿಲೆಯಾದ್ದರಿಂದ ಲಸಿಕೆ ಇದೆ. ಜಿನ್ನಿಯೋಸ್ ಎಂಬ ಲಸಿಕೆಯನ್ನು ಅಮೆರಿಕದಲ್ಲಿ ಕೊಡಲಾಗುತ್ತಿದೆ. ಅದರೆ, ಈ ವ್ಯಾಕ್ಸಿನ್ ವಿತರಣೆಯಲ್ಲಿ ಅಮೆರಿಕ ಮುತುವರ್ಜಿ ತೋರುತ್ತಿಲ್ಲ. ಬಹಳ ನಿಧಾನಗತಿಯಲ್ಲಿ ಲಸಿಕೆ ಹಂಚಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಈಗ ಎಮರ್ಜೆನ್ಸಿ ಎಂದು ಘೋಷಣೆ ಮಾಡಿರುವುದರಿಂದ ಲಸಿಕೆಯ ತಯಾರಿಕೆ ಮತ್ತು ಕ್ಷಿಪ್ರ ವಿತರಣೆಗೆ ಹೆಚ್ಚು ಆದ್ಯತೆ ಸಿಗಲಿದೆ. ಈ ಕಾಯಿಲೆಯ ಚಿಕಿತ್ಸೆಗೆ ಬಳಕೆ ಮಾಡಲಾಗುವ ಟೆಕೋವಿರಿಮ್ಯಾಟ್ ಎಂಬ ಔಷಧವನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿ ವಿತರಿಸಲೂ ಆದ್ಯತೆ ಸಿಗಲಿದೆ.

"ಮಂಕಿಪಾಕ್ಸ್ ಅನ್ನು ತುರ್ತ ಸ್ಥಿತಿ ಎಂದು ಘೋಷಿಸಿರುವುದು ಪ್ರಬಲ ಸಂದೇಶ ಕೊಟ್ಟಂತಾಗಿದೆ. ಈಗಲೇ ಈ ರೋಗವನ್ನು ಎದುರಿಸಬೇಕು ಎಂದು ಜನರನ್ನು ಎಚ್ಚರಿಸಲು ಸಾಧ್ಯವಾಗುತ್ತದೆ" ಎಂದು ಡಬ್ಲ್ಯೂಎಚ್‌ಒನ ಸಲಹಾ ಮಂಡಳಿ ಸದಸ್ಯೆ ಆನೆ ರಿಮೋಯಿನ್ ಹೇಳುತ್ತಾರೆ.

ಅಮೆರಿಕದಲ್ಲಿ 11 ಲಕ್ಷ ಲಸಿಕೆ ಡೋಸ್‌ಗಳಿವೆ ಎನ್ನಲಾಗಿದೆ. ಹಾಗೆಯೇ, ಒಂದು ವಾರದಲ್ಲಿ 80 ಸಾವಿರ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಇದೆ ಎನ್ನಲಾಗಿದೆ.

ಮಂಕಿಪಾಕ್ಸ್ ಕಾಯಿಲೆ ಏನು?

ಮಂಕಿಪಾಕ್ಸ್ ಕಾಯಿಲೆ ಏನು?

ಇದು 1958ರಲ್ಲಿ ಆಫ್ರಿಕಾದಲ್ಲಿ ಪತ್ತೆಯಾದ ಒಂದು ವೈರಸ್. ಸಿಡುಬು ರೋಗಕ್ಕೆ ಕಾರಣವಾಗುವ ವೈರಸ್ ಜಾತಿಗೆ ಸೇರಿದ್ದು ಇದು. ಇದು ಬಂದರೆ ಸಿಡುಬು ರೋಗಿಗಳಿಗೆ ಕಾಣುವ ಲಕ್ಷಣಗಳೇ ಹೆಚ್ಚಾಗಿರುತ್ತದೆ. ಜ್ವರ, ಗುಳ್ಳೆ, ಕಜ್ಜಿ, ಸ್ನಾಯು ನೋವು ಇತ್ಯಾದಿ ರೋಗಲಕ್ಷಣಗಳು ತಲೆದೋರುತ್ತವೆ.

87 ದೇಶಗಳಲ್ಲಿ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಅಮೆರಿಕ ಮತ್ತು ಯೂರೋಪ್ ಹೆಚ್ಚು ಬಾಧಿತವಾಗಿವೆ. ಸ್ಪೇನ್, ಜರ್ಮನಿ ಮತ್ತು ಬ್ರಿಟನ್ ದೇಶಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಈವರೆಗೂ 9 ಮಂದಿಗೆ ಮಂಕಿಪಾಕ್ಸ್ ಕಾಯಿಲೆ ಇರವುದು ಪತ್ತೆಯಾಗಿದೆ.

ಪುರುಷರೊಂದಿಗೆ ಸಂಭೋಗ

ಪುರುಷರೊಂದಿಗೆ ಸಂಭೋಗ

ಮಂಕಿಪಾಕ್ಸ್ ಪ್ರಕರಣಗಳಲ್ಲಿ ಈವರೆಗೂ ಸಿಕ್ಕಿರುವ ಮಾಹಿತಿ ಪ್ರಕಾರ ಪುರುಷರಲ್ಲೇ ಇದು ಅತಿ ಹೆಚ್ಚು ಸೋಂಕು ಸೃಷ್ಟಿಸಿದೆ. ಪುರುಷರೊಂದಿಗೆ ಲೈಂಗಿಕ ಸಂಭೋಗ ನಡೆಸುವ ಪುರುಷರು, ಅಂದರೆ ಸಲಿಂಗಿ ಪುರುಷರಲ್ಲೇ ಇದು ಅಧಿಕ. ಶೇ. 99ರಷ್ಟು ಪ್ರಕರಣಗಳು ಇವರಲ್ಲೇ ಇದೆಯಂತೆ. ಅದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ.

ಇನ್ನೂ ಕುತೂಹಲದ ಸಂಗತಿ ಎಂದರೆ, ಭಾರತಕ್ಕೆ ಬಂದ ಒಬ್ಬ ನೈಜೀರಿಯಾ ಮಹಿಳೆಯಲ್ಲಿ ಈ ಸೋಂಕು ಬಂದಿದೆ. ಇಡೀ ವಿಶ್ವದಲ್ಲಿ ಮಂಕಿಪಾಕ್ಸ್ ಸೋಂಕು ಹತ್ತಿದ ಮೊದಲ ಮಹಿಳೆ ಅವರಾಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Taiwan ಕಡಲ ತೀರದಲ್ಲಿ ಸಮರಾಭ್ಯಾಸ ಶುರು ಮಾಡಿರೋ ಚೀನಾ! | *World | OneIndia Kannda

English summary
United States of America has declared Monkeypox as health emergency as it sees over 6,600 cases. With emergency declared, the fight against Monkeypox will be stronger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X