ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮತ್ತಷ್ಟು ಬಲಿಷ್ಠ, ಮುಗೀತು ಚೀನಿ ಗ್ಯಾಂಗ್‌ ಕತೆ..!

|
Google Oneindia Kannada News

ಭಾರತ ಹಾಗೂ ಅಮೆರಿಕ 2+2 ಸಭೆಯಲ್ಲಿ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದು, ಚೀನಿಯರ ಬುಡವೇ ಅಲುಗಾಡುತ್ತಿದೆ. ಅಂದಹಾಗೆ ಅಮೆರಿಕದ ಮಿಲಿಟರಿ ಉಪಗ್ರಹಗಳ ಮಾಹಿತಿ ಹಂಚಿಕೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಈ ಒಪ್ಪಂದದ ಪರಿಣಾಮ ಭಾರತದ ಗಡಿಯಲ್ಲಿ ಶತ್ರು ರಾಷ್ಟ್ರಗಳು ಕೈಗೊಳ್ಳುವ ಯಾವುದೇ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಮುಖ್ಯವಾಗಿ ಚೀನಿಗಳಿಗೆ ಇದರಿಂದ ಶಾಕ್ ಸಿಕ್ಕಂತಾಗಿದೆ.

ಬಿಇಸಿಎ (Basic Exchange and Cooperation Agreement) ಅಂದರೆ 'ಮೂಲ ವಿನಿಮಯ ಹಾಗೂ ಸಹಕಾರ ಒಪ್ಪಂದ'ಕ್ಕೆ ಸಹಿ ಹಾಕುವ ಮೂಲಕ ಎರಡೂ ದೇಶಗಳ ಸಂಬಂಧದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಭಾರತ ಬದಲಾಗುತ್ತಿದೆ, ಮೊದಮೊದಲು ದೂರ ಇಟ್ಟಿದ್ದ ಅಮೆರಿಕದ ಜೊತೆಗೂ ಹತ್ತಿರವಾಗುತ್ತಿದೆ. ಇದಕ್ಕೆ ಕಾರಣ ಸ್ಪಷ್ಟವಾಗಿದ್ದು, ಚೀನಿ ಗ್ಯಾಂಗ್‌ಗೆ ಗುದ್ದು ಕೊಡುವುದೇ ಭಾರತದ ಮೂಲ ಉದ್ದೇಶವಾಗಿದೆ. ಇದರ ಪರಿಣಾಮವೇ ಈಗ ನಡೆಯುತ್ತಿರುವ 2+2 ಸಭೆ.

ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ

ಈ ಸಭೆಯಲ್ಲಿ ಚೀನಾ ಊಹೆಗೂ ನಿಲುಕದ ಒಪ್ಪಂದಗಳಿಗೆ ಭಾರತ ಹಾಗೂ ಅಮೆರಿಕ ನಡುವೆ ಸಹಿ ಬಿದ್ದಿದೆ. ರಕ್ಷಣೆ ಹಾಗೂ ಭದ್ರತೆ ಸಂಬಂಧ ವೃದ್ಧಿಸುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ.

ಬಾಹ್ಯಾಕಾಶವೂ ಅಮೆರಿಕ ಹಿಡಿತದಲ್ಲಿದೆ

ಬಾಹ್ಯಾಕಾಶವೂ ಅಮೆರಿಕ ಹಿಡಿತದಲ್ಲಿದೆ

ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಅಮೆರಿಕದ ಹೆಸರು ರಾರಾಜಿಸುತ್ತಿದೆ. ಅದರಲ್ಲೂ ಮಿಲಿಟರಿ ವಿಚಾರ ಎಂದರೆ ಕಣ್ಣುಮುಚ್ಚಿ ಹೇಳಬಹುದು ಅಮೆರಿಕದ ಬಲ ಎಂತಹದ್ದು ಎಂದು. ಹೀಗೆ ಅಮೆರಿಕ ಮಿಲಿಟರಿ ವಿಚಾರದಲ್ಲಿ ಇಡೀ ಜಗತ್ತಿಗೆ ಬಾಸ್. ಆದರೆ ಹೀಗೆ ಬಾಸ್ ಎನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆ ಸ್ಥಾನಕ್ಕೆ ಏರಲು ಹಾಗೂ ಆ ಸ್ಥಾನಕ್ಕೆ ತಲುಪಲು ಸರ್ವ ತಯಾರಿಗಳು ನಡೆಯಬೇಕು. ಹಾಗೇ ಬಾಸ್ ಎನಿಸಿಕೊಂಡ ಮೇಲೆ ಅದನ್ನ ಉಳಿಸಿಕೊಳ್ಳಲು ಮತ್ತಷ್ಟು ಪರದಾಡಬೇಕು. ಹೀಗೆ ಅಮೆರಿಕ ಕೂಡ ತನ್ನ ಬಾಸ್ ಪಟ್ಟಕ್ಕಾಗಿ ಯಾವ ಕೆಲಸವನ್ನಾದರೂ ಮಾಡುತ್ತದೆ.

ಲಕ್ಷ ಲಕ್ಷ ಕೋಟಿ ಸುರಿದು ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದೆ. ಇದೇ ರೀತಿ ಬಾಹ್ಯಾಕಾಶದಿಂದಲೂ ಶತ್ರುಗಳನ್ನು ನಿಯಂತ್ರಿಸುವುದು ಅಮೆರಿಕದ ನಾಯಕರಿಗೆ ಗೊತ್ತು. ಹೀಗಾಗಿಯೇ ಅಮೆರಿಕ ಸಾವಿರಾರು ಉಪಗ್ರಹಗಳನ್ನು ಹಾರಿಬಿಟ್ಟಿದೆ. ಇದರಲ್ಲಿ ನೂರಾರು ಉಪಗ್ರಹಗಳು ವಿಶೇಷವಾಗಿ ಮಿಲಿಟರಿಗೆ ಸಂಬಂಧಿಸಿವೆ. ಅಮೆರಿಕದ ಮಿಲಿಟರಿ ಸ್ಯಾಟಲೈಟ್‌ಗಳು ಇಡೀ ಜಗತ್ತಿನಲ್ಲೇ ಬಲಶಾಲಿ.

ಒಪ್ಪಂದ ಹೇಗೆ ಅಪ್ಲೈ ಆಗುತ್ತೆ..?

ಒಪ್ಪಂದ ಹೇಗೆ ಅಪ್ಲೈ ಆಗುತ್ತೆ..?

'ಬಿಇಸಿಎ' ಒಪ್ಪಂದದ ಅನ್ವಯ ಅಮೆರಿಕ ಹಾರಿಬಿಟ್ಟಿರುವ ಮಿಲಿಟರಿ ಉಪಗ್ರಹಗಳಿಂದ ಸ್ಪಷ್ಟವಾದ ಮಾಹಿತಿ ಪಡೆಯಬಹುದು. ಇದರಲ್ಲಿ ಡೇಟ್ ಹಾಗೂ ಟೈಂ ಕೂಡ ಅಷ್ಟೇ ಸ್ಪಷ್ಟವಾಗಿರುತ್ತದೆ. ಈ ಮಾಹಿತಿ ಆಧಾರದಲ್ಲಿ ಭಾರತ ಅಗತ್ಯ ಕ್ರಮ ಕೈಗೊಳ್ಳಬಹುದು. ಸೇನೆ ನಿಯೋಜನೆ ಮಾಡಲು ಸಾಧ್ಯವಾಗದ ಸ್ಥಳಗಳಲ್ಲಿ ಅಮೆರಿಕದ ಮಿಲಿಟರಿ ಉಪಗ್ರಹಗಳ ಸಹಾಯ ಪಡೆದು, ಶತ್ರುಗಳ ಹೆಡೆಮುರಿ ಕಟ್ಟಬಹುದು. ಉದಾಹರಣೆಗೆ ಸದ್ಯ ಚೀನಾ ನಮ್ಮ ಗಡಿಗೆ ನುಗ್ಗಿದರೂ ತಕ್ಷಣಕ್ಕೆ ಮಾಹಿತಿ ಸಿಗುತ್ತಿಲ್ಲ.

ಭಾರತ-ಅಮೆರಿಕ ಮಾತುಕತೆ: ಮಹತ್ವದ ಒಪ್ಪಂದಕ್ಕೆ ಸಹಿಭಾರತ-ಅಮೆರಿಕ ಮಾತುಕತೆ: ಮಹತ್ವದ ಒಪ್ಪಂದಕ್ಕೆ ಸಹಿ

ಆದರೆ ಅಮೆರಿಕ ಉಪಗ್ರಹಗಳು ಹಾಗಲ್ಲ, ಚೀನಿಗಳು ಅಕಸ್ಮಾತ್ ಮುಂದೆ ಇದೇ ರೀತಿ ಭಾರತದ ಗಡಿಗೆ ನುಸುಳಿದರೆ ಪಕ್ಕಾ ಮಾಹಿತಿ ಸಿಗಲಿದೆ. ಭಾರತ ಕೂಡಲೇ ಅಲರ್ಟ್ ಆಗಿ, ವೈರಿಗಳ ರುಂಡ ಚೆಂಡಾಡಬಹುದು. ಈ ಒಪ್ಪಂದದ ಪರಿಣಾಮ ಸುಖಾಸುಮ್ಮನೆ ಭಾರತದ ಜೊತೆಗೆ ಪಾಪಿ ಪಾಕ್ ಅಥವಾ ಚೀನಾದಂತಹ ರಾಷ್ಟ್ರಗಳು ಗಡಿ ತಂಟೆ ಮಾಡುವುದು ತಪ್ಪಲಿದೆ.

ಸುಖಾಸುಮ್ಮನೆ ಮಾಹಿತಿ ನೀಡಲ್ಲ ‘ದೊಡ್ಡಣ್ಣ’

ಸುಖಾಸುಮ್ಮನೆ ಮಾಹಿತಿ ನೀಡಲ್ಲ ‘ದೊಡ್ಡಣ್ಣ’

ಜಗದ ಪಾಲಿನ ದೊಡ್ಡಣ್ಣ ಈ ರೀತಿ ತನ್ನ ಸ್ಯಾಟಲೈಟ್ ಮಾಹಿತಿಯನ್ನು ಸುಖಾಸುಮ್ಮನೆ ಇನ್ನೊಂದು ದೇಶಕ್ಕೆ ಬಿಟ್ಟುಕೊಡುವುದಿಲ್ಲ. ಏಕೆಂದರೆ ಅಮೆರಿಕ ಒಂದೊಂದು ಮಿಲಿಟರಿ ಉಪಗ್ರಹಗಳ ಮೇಲೂ ಹತ್ತಾರು ಸಾವಿರ ಕೋಟಿ ಹೂಡಿಕೆ ಮಾಡಿರುತ್ತದೆ. ಉಪಗ್ರಹಗಳ ಮೇಲಿನ ವೆಚ್ಚ, ಆಂತರಿಕ ಭದ್ರತೆ ಸೇರಿದಂತೆ ಇದಕ್ಕೆ ಹಲವು ಬಲವಾದ ಕಾರಣಗಳಿವೆ.

ಆದರೆ ಅತ್ಯಾಪ್ತ ರಾಷ್ಟ್ರಗಳ ಜೊತೆಯಲ್ಲಿ ಅಮೆರಿಕ ಉಪಗ್ರಹಗಳ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಈಗ ಭಾರತ ಕೂಡ ಅಮೆರಿಕದ ಆಪ್ತ ರಾಷ್ಟ್ರಗಳ ಪಟ್ಟಿಗೆ ಸೇರಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಭಾರತ ಹಾಗೂ ಅಮೆರಿಕ ಸಂಬಂಧದಿಂದ ಏಷ್ಯಾದ ಭದ್ರತೆಗೆ ದೊಡ್ಡ ಅಪಾಯವಿದೆ ಎಂದು ಬಾಯಿ ಬಡಿದುಕೊಳ್ಳುವ ಚೀನಾಗೆ ಇಂದು ನಿದ್ದೆ ಬರುವುದು ಕೂಡ ಅನುಮಾನವೇ ಸರಿ.

ಗಡಿಯ ಮೇಲೆ ಹದ್ದಿನ ಕಣ್ಣು

ಗಡಿಯ ಮೇಲೆ ಹದ್ದಿನ ಕಣ್ಣು

ಅಮೆರಿಕದ ಉಪಗ್ರಹಗಳ ಶಕ್ತಿ ಹೇಳಬೇಕೆಂದರೆ, ನೆಲದ ಮೇಲೆ ನಿಂತು 100-200 ಮೀಟರ್ ದೂರದಿಂದ ತೆಗೆಯುವ ಫೋಟೋಗಳ ರೀತಿಯಲ್ಲೇ ಸ್ಪಷ್ಟವಾದ ಚಿತ್ರವನ್ನು ಅಮೆರಿಕದ ಉಪಗ್ರಹಗಳು ನೀಡಬಲ್ಲವು. ಭೂಮಿಯಿಂದ ಸಾವಿರ ಸಾವಿರ ಕಿಲೋಮೀಟರ್ ದೂರದಿಂದ ಗಡಿಯ ಮೇಲೆ ಕಣ್ಣಿಟ್ಟಿರುತ್ತವೆ. ಈ ಹಿಂದೆ ಸೋವಿಯತ್ ಯೂನಿಯನ್ ಅಥವಾ ಸೋವಿಯತ್ ರಷ್ಯಾ ಬಿಟ್ಟರೆ ಇಂತಹ ತಂತ್ರಜ್ಞಾನ ಹೊಂದಿರುವುದು ಅಮೆರಿಕ ಮಾತ್ರ. ಈಗ ಸೋವಿಯತ್ ಬಲ ಕುಗ್ಗಿ, ರಷ್ಯಾ ವಿಘಟನೆಯಾಗಿದೆ. ಹೀಗಾಗಿ ಇಡೀ ಜಗತ್ತಿನ ಶಕ್ತಿ ಕೇಂದ್ರವಾಗಿ ಅಮೆರಿಕ ಜಗತ್ತಿನಲ್ಲಿ ಹವಾ ಇಟ್ಟಿದೆ.

ಹೀಗೆ ಹವಾ ಇಡಲು ಹೋಗಿ ಅಮೆರಿಕ ಎಂಬ ದೇಶಕ್ಕೆ ಎಲ್ಲೆಂದರಲ್ಲಿ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಹೀಗೆ ಪ್ರಪಂಚದ ತುಂಬಾ ಮಿತ್ರರಿಗಿಂತ ಹೆಚ್ಚು ಶತ್ರುಗಳನ್ನೇ ಹೊಂದಿರುವ ಅಮೆರಿಕ ತನ್ನ ಗಡಿ ಕಾಯಲು ಉಪಗ್ರಹಗಳನ್ನ ಬಿಟ್ಟಿದೆ. ಈ ಉಪಗ್ರಹಗಳು ಕೇವಲ ಅಮೆರಿಕ ಗಡಿ ಮೇಲೆ ಕಣ್ಣಿಟ್ಟಿಲ್ಲ, ಭೂಮಿ ಮೇಲಿನ ಬಹುಪಾಲು ರಾಷ್ಟ್ರಗಳನ್ನು ಇವು ಸುತ್ತುತ್ತಲೇ ಗಮನಿಸುತ್ತಿವೆ. ಈ ಪಟ್ಟಿಯಲ್ಲಿ ಚೀನಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಶ್ರೀಲಂಕಾ ಹಾಗೂ ಭಾರತವೂ ಸೇರಿದೆ.

ಭಾರತಕ್ಕೆ ಇದರಿಂದ ಲಾಭವೇನು..?

ಭಾರತಕ್ಕೆ ಇದರಿಂದ ಲಾಭವೇನು..?

ಬಿಇಸಿಎ (Basic Exchange and Cooperation Agreement) ಒಪ್ಪಂದದಿಂದ ಭಾರತಕ್ಕೆ ಸಿಕ್ಕಾಪಟ್ಟೆ ಲಾಭವಿದೆ. ಒಂದೇ ಏಟಿಗೆ 5 ಹಕ್ಕಿಗಳನ್ನು ಹೊಡೆದುರುಳಿಸುವ ಐಡಿಯಾ ಇದೆ. ಚೀನಾ ಒಂದು ಕಡೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಒಂದಷ್ಟರಮಟ್ಟಿಗೆ ಶ್ರೀಲಂಕಾ ದೇಶವನ್ನು ಬುಟ್ಟಿಗೆ ಹಾಕಿಕೊಂಡಿದೆ. ಹೀಗಾಗಿ ಎಲ್ಲಾ ದೇಶಗಳು ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ.

ನೇಪಾಳಿಗಳಂತೂ ಭಾರತದ ಜೊತೆಗಿನ ಅವಿನಾಭಾವ ಸಂಬಂಧವನ್ನೂ ಮರೆತು, ಚೀನಾಗೆ ದೇಶವನ್ನೇ ಮಾರುತ್ತಿದ್ದಾರೆ. ನೇಪಾಳಿ ನಾಯಕರ ಹುಚ್ಚಾಟ ದೊಡ್ಡ ಅನಾಹುತ ತಂದೊಡ್ಡುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಭಾರತದ ಗಡಿ ಒತ್ತುವರಿಗೂ ಚೀನಾ ಮುಂದಾಗುತ್ತಿದೆ. ಹೀಗಾಗಿ ಅಮೆರಿಕದ ಉಪಗ್ರಹಗಳ ಸಹಾಯ ಪಡೆದರೆ, ಭಾರತದ ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬಹುದು. ನಮ್ಮ ಶತ್ರುಗಳು ಮಿಸುಕಾಡಿದರೂ ನಮಗೆ ಸ್ಪಷ್ಟ ಮಾಹಿತಿ ಸಿಗಲು ಸಾಧ್ಯ. ಮುಖ್ಯವಾಗಿ ಕಾಶ್ಮೀರದಲ್ಲಿ ಪಾಕ್ ಉಗ್ರರ ಒಳನುಸುಳುವಿಕೆ ತಡೆಯಲು ಈ ಒಪ್ಪಂದ ಸಹಕಾರಿಯಾಗಲಿದೆ.

English summary
The US has agreed to share its military satellites data and information’s with India. India and the US have signed a major agreement on the 2 + 2 meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X