ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಕಾಡಿಗೆ ಬೆಂಕಿ ಇಟ್ಟವರು ಯಾರು..?

|
Google Oneindia Kannada News

ಭೂಮಿಯ ಶ್ವಾಸಕೋಶ ಧಗಧಗನೆ ಹೊತ್ತಿ ಉರಿಯುತ್ತಿದೆ. ಅಮೆಜಾನ್ ಕಾಡಿನಲ್ಲಿ ಹೊತ್ತಿದ ಬೆಂಕಿ ಲಕ್ಷಾಂತರ ಎಕರೆ ಮಳೆ ಕಾಡನ್ನು ಭಸ್ಮ ಮಾಡಿದೆ. 10 ವರ್ಷದಲ್ಲೇ ಅತ್ಯಂತ ಭೀಕರ ಸ್ಥಿತಿ ಅಮೆಜಾನ್‌ನಲ್ಲಿ ಎದುರಾಗಿದೆ. ದಕ್ಷಿಣ ಅಮೆರಿಕದಲ್ಲಿ ಹಬ್ಬಿರುವ ಅಮೆಜಾನ್ ಅರಣ್ಯದ ಬಹುಭಾಗ ಇರುವುದು ಬ್ರೆಜಿಲ್‌ ದೇಶದಲ್ಲಿ.

ಆದರೆ ಬ್ರೆಜಿಲ್‌ನ ಜನಪ್ರತಿನಿಧಿಗಳ ಉಡಾಫೆ ಹಾಗೂ ಬೇಜವಾಬ್ದಾರಿಯಿಂದ ಅಮೆಜಾನ್ ಅರಣ್ಯಕ್ಕೆ ಕರುಣಾಜನಕ ಸ್ಥಿತಿ ಎದುರಾಗಿದೆ. ನಾಸಾ ಉಪಗ್ರಹಗಳು ತೆಗೆದಿರುವ ಚಿತ್ರಗಳು ಭಯ ಹುಟ್ಟಿಸುವಂತಿವೆ. ಕಾಡುಗಳ್ಳರು, ಬೀಫ್ ಮಾಫಿಯಾ, ಟಿಂಬರ್ ಮಾಫಿಯಾ, ಅಕ್ರಮ ಗಣಿಗಾರಿಕೆ, ಭೂ ಮಾಫಿಯಾ ಮಾತ್ರವಲ್ಲ ಕೃಷಿ ಹೆಸರಲ್ಲೂ ಅಮೆಜಾನ್ ಕಾಡಿನ ಮಾರಣ ಹೋಮ ನಡೆಯುತ್ತಿದೆ.

ಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚುಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚು

ಎಲ್ಲಾ ಅರಣ್ಯಗಳಲ್ಲೂ ನೈಸರ್ಗಿಕವಾಗಿ ಕಾಡ್ಗಿಚ್ಚು ಎದುರಾದರೆ, ಅಮೆಜಾನ್ ಅರಣ್ಯದಲ್ಲಿ ಮಾನವನೇ ಕಾಡಿಗೆ ಬೆಂಕಿ ಇಡುತ್ತಿದ್ದಾನೆ. ಅದು ಕೃಷಿ ಕಾರಣಕ್ಕೆ ಎಂದರೆ ನಂಬಲೇಬೇಕು. ಸದಾ ನೀರು ಲಭ್ಯವಿರುವ ಹಾಗೇ ಫಲವತ್ತಾದ ಭೂಮಿ ಹೊಂದಿರುವ ಅಮೆಜಾನ್ ಅರಣ್ಯ ಕೃಷಿಗೆ ಹೇಳಿ ಮಾಡಿಸಿದಂತಿದೆ. ಆದರೆ ಇದನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡದೆ ಕೃಷಿ ಹೆಸರಲ್ಲಿ ಕಾಡಿಗೆ ಬೆಂಕಿಯಿಟ್ಟು ಅರಣ್ಯ ಬರಿದಾಗಿಸುತ್ತಿದ್ದಾರೆ. ಈ ಮೂಲಕ ಪ್ರತಿವರ್ಷ ಲಕ್ಷಾಂತರ ಕೋಟಿ ಮೊತ್ತದ ಅರಣ್ಯ ಸಂಪತ್ತು ಇಲ್ಲಿಂದ ಲೂಟಿಯಾಗುತ್ತಿದೆ.

68 ಬಿಲಿಯನ್ ಡಾಲರ್ ಲೂಟಿ..!

68 ಬಿಲಿಯನ್ ಡಾಲರ್ ಲೂಟಿ..!

ಅಮೆಜಾನ್‌ನಲ್ಲಿ ಹಬ್ಬಿರುವ ಮಾಫಿಯಾ ಜಾಲ ವಾರ್ಷಿಕ ಸುಮಾರು 5 ಲಕ್ಷಕೋಟಿ ಅಂದರೆ 68 ಬಿಲಿಯನ್ ಡಾಲರ್‌ನಷ್ಟು ಸಂಪತ್ತು ಕೊಳ್ಳೆಹೊಡೆಯುತ್ತಿದೆ. ಇಲ್ಲಿ ವ್ಯವಹಾರ ನಡೆಸುವವರು ಬಹುತೇಕ ಡಾನ್‌ಗಳೇ. ಒಬ್ಬ ಡಾನ್ ಬ್ರೆಜಿಲ್‌ನಲ್ಲಿ 1 ಎಕರೆ ಮೇಲೆ ಹೂಡಿಕೆ ಮಾಡಿದರೆ 1000 ಎಕರೆಯಷ್ಟು ಸಂಪತ್ತು ದೋಚುತ್ತಾನೆ. ಹೀಗಾಗಿ ಭೂಗತ ದೊರೆಗಳಿಗೆ ಈ ಪ್ರದೇಶ ಹೂಡಿಕೆ ಮಾಡಲು ಕೈಬೀಸಿ ಕರೆಯುತ್ತಿದೆ. ಆದರೆ ಬ್ರೆಜಿಲ್ ಸರ್ಕಾರ ಮಾತ್ರ ಇದನ್ನೆಲ್ಲಾ ಕಂಡರೂ ಕಾಣದಂತೆ ಸುಮ್ಮನಿದೆ. ಮೇಲ್ನೋಟಕ್ಕೆ ಕಾಡುಗಳ್ಳರನ್ನು ಬಂಧಿಸುವ ಬ್ರೆಜಿಲ್ ಸರ್ಕಾರ ಈವರೆಗೂ ಕಠಿಣ ಕಾನೂನು ಜಾರಿಗೆ ತಂದಿಲ್ಲ.

ನೂರಾರು ಕೋಟಿ ಎಕರೆ ಅರಣ್ಯ..!

ನೂರಾರು ಕೋಟಿ ಎಕರೆ ಅರಣ್ಯ..!

ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಜಗತ್ತಿನ ಯಾವ ಭಾಗದಲ್ಲೂ ಸಿಗದು. ಇದಕ್ಕೆ ಸಹಕಾರಿಯಾಗಿರೋದು ಅಲ್ಲಿನ ವಾತಾವರಣ. 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ ಅರಣ್ಯ ಪ್ರದೇಶವನ್ನ ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ 130 ಕೋಟಿ ಎಕರೆಗೂ ಹೆಚ್ಚಿನ ಜಾಗ ಇಲ್ಲಿದೆ. ಇಷ್ಟು ಪ್ರಮಾಣದ ಕಾಡಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿ ಸುತ್ತಮುತ್ತಲೂ ದಟ್ಟವಾದ ಮರ-ಗಿಡಗಳು ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಈ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿ ಮರಗಳು, 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟು ಪ್ರಮಾಣದ ಅರಣ್ಯ ಸಂಪತ್ತು ಅಡಗಿದೆ ಎಂದರೆ 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ ಜಾಗದಲ್ಲಿ ಇನ್ನೆಷ್ಟು ಸಂಪತ್ತು ಇರಬೇಡ ಊಹಿಸಿ.

#StopAdani ಎಂದು ಹೋರಾಟಕ್ಕಿಳಿದ ಗ್ರೇಟಾ ತನ್ ಬರ್ಗ್#StopAdani ಎಂದು ಹೋರಾಟಕ್ಕಿಳಿದ ಗ್ರೇಟಾ ತನ್ ಬರ್ಗ್

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಅರಣ್ಯ ಇರುವ ಕಡೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣಕ್ಕೆ ಅಮೆಜಾನ್ ನಾಡು ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಇದೇ ಕಾಡನ್ನು ನಂಬಿ ಹರಿದುಬಂದಿದೆ. ಬ್ರೆಜಿಲ್ ಸದ್ಯದ ಮಟ್ಟಿಗೆ ಬಂಡವಾಳಿಗರ ಸ್ವರ್ಗ ಕೂಡ. ಇಲ್ಲಿ ಅಡಗಿರುವ ಅಪಾರ ಗಣಿ ಸಂಪತ್ತು ದೋಚುವ ಹುನ್ನಾರ ಶ್ರೀಮಂತ ರಾಷ್ಟ್ರಗಳದ್ದು. ಹೀಗಾಗಿ ಅಮೆಜಾನ್‌ನಲ್ಲಿ ಗಣಿಗಾರಿಕೆಗೆ ಬಲಿಷ್ಠ ರಾಷ್ಟ್ರಗಳು ಅತ್ಯುತ್ಸಾಹ ತೋರುತ್ತಿವೆ. ಇದರ ಪರಿಣಾಮವೇ ದಟ್ಟ ಅರಣ್ಯ ನಾಶವಾಗಿ, ಬೆಂಗಾಡು ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಮುಖವಾಗಿ ಟಿಂಬರ್ ಉದ್ಯಮ, ಫಾರ್ಮಸಿ, ಗಣಿಗಾರಿಕೆಗಳ ಮೇಲೆ ಉದ್ಯಮಿಗಳು ಕಣ್ಣು ನೆಟ್ಟಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಕೂಡ ದೋಚುತ್ತಿದ್ದಾರೆ.

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೆ ಇಲ್ಲಿ ಸ್ಥಾನ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಆಧುನಿಕ ಜಗತ್ತಿನ ಜೊತೆ ಸಂಪರ್ಕವನ್ನೇ ಹೊಂದದ ಕೆಲ ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

ಕಾರಂತಜ್ಜ ಮೆಚ್ಚಿದ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಹೇಳಿದ ಕಥೆಗಳುಕಾರಂತಜ್ಜ ಮೆಚ್ಚಿದ ಅರಣ್ಯಾಧಿಕಾರಿ ಡಾ. ಯಲ್ಲಪ್ಪ ರೆಡ್ಡಿ ಹೇಳಿದ ಕಥೆಗಳು

ಒಂದೇ ವರ್ಷದಲ್ಲಿ 22 ಲಕ್ಷ ಎಕರೆ ಕಾಡು ಭಸ್ಮ

ಒಂದೇ ವರ್ಷದಲ್ಲಿ 22 ಲಕ್ಷ ಎಕರೆ ಕಾಡು ಭಸ್ಮ

ಇಲ್ಲಿ ಕೃಷಿ ಮಾಡುವ ನೆಪದಲ್ಲಿ ಕಾಡಿನ ಮೇಲೆ ಎಂತಹ ದೌರ್ಜನ್ಯ ನಡೆಯುತ್ತಿದೆ ಎಂದರೆ, 2019ರಲ್ಲಿ ಅಮೆಜಾನ್ ಕಾಡಿನಲ್ಲಿ ಬೆಂಕಿ ಹೊತ್ತಿತ್ತು. ಒಂದೆರಡು ಭಾಗದಲ್ಲಿ ಹಬ್ಬಿದ್ದ ಬೆಂಕಿಯನ್ನು ನಂದಿಸಲು ಬ್ರೆಜಿಲ್, ಬೊಲಿವಿಯಾ, ಪೆರು, ಕೊಲಂಬಿಯಾ ಸರ್ಕಾರಗಳು ಸರ್ಕಸ್ ಮಾಡುತ್ತಿದ್ದವು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾಫಿಯಾ ಡಾನ್‌ಗಳು, ಒಣಗಿ ನಿಂತಿದ್ದ ಅಮೆಜಾನ್‌ನ ಹಲವು ಭಾಗಗಳಿಗೆ ಬೆಂಕಿ ಇಟ್ಟಿದ್ದರು. ಪರಿಣಾಮ ಅಮೆಜಾನ್ ಅರಣ್ಯದಲ್ಲಿ ಸುಮಾರು 40 ಸಾವಿರ ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಈ ಕೃತ್ಯಕ್ಕೆ ಬಲಿಯಾಗಿದ್ದು 22 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ. ಇಷ್ಟು ಕಾಡು ಭಸ್ಮವಾಗುವುದರ ಜೊತೆಗೆ ಲಕ್ಷಾಂತರ ಪ್ರಾಣಿಗಳು ಹಾಗೂ ಕಾಡು ಜನರು ಕೂಡ ಅಗ್ನಿಗೆ ಆಹುತಿಯಾಗಿದ್ದರು.

ಅಮೆಜಾನ್ ನಾಶವಾಗಿ ಹೋಗುತ್ತಿದೆ

ಅಮೆಜಾನ್ ನಾಶವಾಗಿ ಹೋಗುತ್ತಿದೆ

ಇದೀಗ 2019ರ ದುರಂತವನ್ನೂ ಮೀರಿಸುವ ಕಾಡ್ಗಿಚ್ಚು ಹಬ್ಬಿದ್ದು, ಎಲ್ಲೆಂದರಲ್ಲಿ ಮಾಫಿಯಾ ಡಾನ್‌ಗಳು ಅಮೆಜಾನ್ ಕಾಡಿಗೆ ಬೆಂಕಿ ಇಡುತ್ತಿದ್ದಾರೆ. ಒಟ್ನಲ್ಲಿ ಅಮೆಜಾನ್ ನಾಶವಾಗಿ ಹೋಗುತ್ತಿದೆ. ಇಡೀ ಭೂಮಿಗೆ ಶೇಕಡ 20ರಷ್ಟು ಆಕ್ಸಿಜೆನ್ ನೀಡುವ, ಸದಾ ಹಸಿರಾಗಿರುವ ನಿತ್ಯಹರಿದ್ವರ್ಣ ಕಾಡು ಅವಸಾನದತ್ತ ಸಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು 40 ವರ್ಷಗಳಲ್ಲಿ ಅಮೆಜಾನ್ ಕಾಡು ಸಂಪೂರ್ಣ ನಾಶವಾಗಲಿದೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಜಾಗತಿಕವಾಗಿ ಬ್ರೆಜಿಲ್ ಮೇಲೆ ಒತ್ತಡಗಳು ಇದ್ದರೂ, ಅಮೆಜಾನ್ ಕಾಡಿನ ರಕ್ಷಣೆಗೆ ಅಮೆಜಾನ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿರುವ ಅಪರೂಪದ ಕಾಡು ಇನ್ನೇನು ಕೆಲವೇ ವರ್ಷಗಳಲ್ಲಿ ಮರೆಯಾಗುವುದರಲ್ಲಿಅನುಮಾನವಿಲ್ಲ.

English summary
Once again amazon forest is burning in the summer. It may be the worst scenario in the decade. Mafia is regularly trying to blaze the forest, because they want to use the area for their illegal activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X