ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿ ಜೀವನ ಪ್ರಯೋಗದ ಫಲವೇ ಇಂದಿನ ಸ್ವತಂತ್ರ ಭಾರತ

|
Google Oneindia Kannada News

ಮಹಾತ್ಮ ಗಾಂಧೀಯವರ ಜೀವನವೇ ಒಂದು ಪ್ರಯೋಗ ಶಾಲೆ. ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಸತ್ಯಾಗ್ರಹ ಮತ್ತು ಉಪವಾಸಗಳು ಅವರ ಜೀವನವೆಂಬ ಪ್ರಯೋಗದ ಪರಿಕರಗಳು. ಅವರ ಪ್ರಯೋಗದ ಸಂಶೋಧನಾ ಫಲವೇ ನಾವಿಂದು ವಾಸಿಸುತ್ತಿರುವ ಸ್ವತಂತ್ರ ಭಾರತ. ಗಾಂಧಿ ವಿಚಾರಧಾರೆಯ ಬಗ್ಗೆ ಚೆಂಬೆಳಕು ಚೆಲ್ಲುವ ಚಿಂತನೆಗಳು ಅನೇಕ.

ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ ಅರ್ಥಮಾಡಿಕೊಳ್ಳತ್ತಲೇ ನಾವು ಅವರ ಮಾತಿನ ಆಳ ಅರಿಯದೆ ಗೊಂದಲಕ್ಕೆ ನಿಲುಕುವುದು ಉಂಟು.

ಮದ್ಯಪಾನ ನಿಷೇಧಕ್ಕೆ ಮುಂದಾದ ವೈಎಸ್ ಜಗನ್, ಕರ್ನಾಟಕಕ್ಕೆ ಲಾಭಮದ್ಯಪಾನ ನಿಷೇಧಕ್ಕೆ ಮುಂದಾದ ವೈಎಸ್ ಜಗನ್, ಕರ್ನಾಟಕಕ್ಕೆ ಲಾಭ

ಜಗತ್ತು ಕಂಡ ಶ್ರೇಷ್ಠ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೆ ಆದರ್ಶಪ್ರಾಯರಾದ ಅಪರೂಪದ ವ್ಯಕ್ತಿ ಮೋಹನದಾಸ ಕರಮಚಂದ ಗಾಂಧಿ . ಈಗಿನ ತಾಂತ್ರಿಕ ಯುಗದಲ್ಲಿ ಗಾಂಧಿ ಅದೆಷ್ಟು ಪ್ರಸ್ತುತವೆಂಬ ಪ್ರಶ್ನೆಗಳಿಗೆ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಸ್ಟೀವ್ ಜಾಬ್ಸ್ ಮುಂತಾದವರು ಉತ್ತರಿಸಿಬಿಟ್ಟಿದ್ದಾರೆ. ನಾವು ಗಾಂಧಿ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಸಾರಿ ಹೇಳಿದ್ದಾರೆ. ರಾಜಕೀಯ ರಂಗದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಂತೂ ಸದಾ ಜಪಿಸುವುದು ಗಾಂಧಿ ಮಂತ್ರ. ಗಾಂಧಿ ಸ್ವಾತಂತ್ರ್ಯ ಚಳುವಳಿಯ ಮಾರ್ಗದರ್ಶನವನ್ನು ಪತ್ರಿಕೆಗಳ ಮೂಲಕ ನೀಡಿದ್ದು ಈಗ ಇತಿಹಾಸ.

Amara Bapu Chintana Special Magazine Mahatma Gandhi Jayanti

ಅದೇ ರೀತಿ ಮಾಧ್ಯಮಗಳ ಮುಖಾಂತರ ಗಾಂಧಿ ವಿಚಾರಧಾರೆಯ ಹರಿಯಬಿಡಲಿಕ್ಕೆ ಕನ್ನಡದಲ್ಲೊಂದು ಪತ್ರಿಕೆ ಇದೆ ಎಂದರೆ ನಿಮಗೆ ಅಚ್ಚರಿಯೆನಿಸಬಹುದು. ಹೌದು, ಸದ್ದಿಲ್ಲದೆ ಎಲೆಮರೆಕಾಯಿಯಂತೆ ಬೆಂಗಳೂರಿನ ಗಾಂಧಿಭವನದಿಂದ ಗಾಂಧಿ ತತ್ವ ಆದರ್ಶಗಳನ್ನು ಸರಳ ಸುಂದರ ನಿರೂಪಣೆಯೊಂದಿಗೆ ತಿಳಿಗನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ದ್ವೈಮಾಸಿಕವಾಗಿ ಪ್ರಕಟವಾಗುತ್ತಿರುವ 'ಅಮರ ಬಾಪು ಚಿಂತನ'ವು ಈಗ ಎಂಟನೇ ವಸಂತದಲ್ಲಿದೆ.

ಪ್ಲಾಸ್ಟಿಕ್ ಬಳಕೆ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿ ಮನ್ ಕೀ ಬಾತ್ಪ್ಲಾಸ್ಟಿಕ್ ಬಳಕೆ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿ ಮನ್ ಕೀ ಬಾತ್

2013ರ ಗಣರಾಜ್ಯೋತ್ಸವದಂದು ಕರ್ನಾಟಕದ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಲೋಕಾರ್ಪಣೆಗೊಂಡ ಈ ಮಾಸಿಕದಲ್ಲಿ ಗಾಂಧಿ ಮತ್ತು ಸ್ತ್ರೀ ಜಾಗೃತಿ, ಖಾದಿ ಗ್ರಾಮೋದ್ಯೋಗ, ಗ್ರಾಮ ಸ್ವರಾಜ್ಯ, ಗಾಂಧೀಜಿ ಆರ್ಥಿಕ ಚಿಂತನೆ, ಸ್ವಚ್ಛ ಭಾರತ ಮುಂತಾದ ಲೇಖನಗಳು ಗಾಂಧಿ ಚಿಂತನಗಳ ಬಗ್ಗೆ ವಿಶೇಷ ಬೆಳಕು ಚೆಲ್ಲುತ್ತದೆ. ಒಟ್ಟಿನಲ್ಲಿ ಅಮರ ಬಾಪು ಚಿಂತನ ಮಾಸಿಕವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವ, ದೇಶ ಪ್ರೇಮ ಹುಟ್ಟಿಸುವ ನಿಟ್ಟಿನಲ್ಲಿ ಮೂಡಿ ಬಂದಿದೆ ಎಂಬುದು ಗಣ್ಯ ಓದುಗರಾದ ನಾಡೋಜ ಪಾಟೀಲ ಪುಟ್ಟಪ್ಪ, ಹಿರಿಯ ಮುತ್ಸದ್ಧಿ ಎಂ.ವಿ ರಾಜಶೇಖರನ್ ಅವರ ಅಭಿಪ್ರಾಯವಾಗಿದೆ.

Amara Bapu Chintana Special Magazine Mahatma Gandhi Jayanti

ಗಾಂಧೀಜಿಯಸವರ ಬದುಕು ಬರಹಗಳೆಲ್ಲ ಅನನ್ಯವಾಗಿ ಸರ್ವಕಾಲಕ್ಕೂ ಪ್ರಸ್ತುತ. ದೇಶ-ವಿದೇಶಗಳ ಲೇಖಕರು, ಚಿಂತಕರು ಗಾಂಧಿ ವಿಚಾರಧಾರೆಯನ್ನಷ್ಟೆ ಅಲ್ಲ, ಬಾಪು ನಡೆನುಡಿಯನ್ನು ವಿಶ್ಲೇಷಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿನ ಯುವ ಸಮುದಾಯಕ್ಕೆ ಪ್ರಸ್ತುತದಲ್ಲಿ ಪ್ರಾಯೋಗಿಕವಾದ ಗಾಂಧಿವಾಣಿಯನ್ನು ತಲುಪಿಸುವ ಉದ್ದೇಶದಿಂದ ಈ ಪ್ರಕಟಣಾ ಕಾರ್ಯ ಪ್ರಾರಂಭಿಸಲಾಯಿತು ಎಂದು ಸ್ಥಾಪಕ ಸಂಪಾದಕರು ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ತಿಳಿಸುತ್ತಾರೆ.

2. ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಎಂತಹ ಜಟಿಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಪಂಚಕ್ಕೆ ಮನನ ಮಾಡಿಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧೀಜಿ. " ನನ್ನ ಜೀವನವೇ ನನ್ನ ಸಂದೇಶ " ಎಂದು ಹೇಳಿದ್ದ ಭಾರತೀಯರೆಲ್ಲರ ಅಕ್ಕರೆಯ 'ಬಾಪು' ಜನಿಸಿ 150 ವರ್ಷಗಳು ಆದರೂ ಅವರ ಚಿಂತನೆಗಳು ಇಂದಿಗೂ ಆದರಣೀಯ ಮತ್ತು ಅನುಕರಣಿಯ ಎಂಬುದು ಖ್ಯಾತ ಚಿಂತಕ ಪ್ರೊ ಮಲ್ಲೇಪುಂ ಜಿ ವೆಂಕಟೇಶರವರ ಅಭಿಮತ .

ಬಾ - ಬಾಪೂಜಿ 150 ನೇ ಜಯಂತಿ ವರ್ಷಾಚರಣೆ ಇದಾಗಿದ್ದು ಹಲವಾರು ಮೌಲಿಕ ವಿಚಾರಗಳಿಂದ ಕೂಡಿದ ಅಮರ ಬಾಪು ಚಿಂತನ- ವಿಶೇಷ ಸಂಚಿಕೆಯು ಕಲುಷಿತವಾದ ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವ ಚಾರಿತ್ರ್ಯ ನಿರ್ಮಾಣದ ದಿಸೆಯಲ್ಲಿ ಈ ಪತ್ರಿಕೆ ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿ ಏನಲ್ಲ !! ವಿವರಗಳಿಗೆ 9035618076

English summary
Amara Bapu Chintana Kannada Magazine of Gandhi Bhavan is to propagate and popularize Gandhian thoughts among the Indians in general and youth in particular.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X