ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿವುಡ್ ಬ್ರಹ್ಮಾಸ್ತ್ರಕ್ಕೆ ಎದುರಾಯ್ತು ಸಂಕಟ: ಬಾಯ್ಕಾಟ್ ಬ್ರಹ್ಮಾಸ್ತ್ರ ಎಂದ ನೆಟ್ಟಿಗ

|
Google Oneindia Kannada News

ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಗೆಲುವಿನ ಟಾನಿಕ್ ನೀಡುತ್ತೆ ಎಂದೇ ನಿರೀಕ್ಷಿಸಲಾಗಿತ್ತು. ಬಹು ತಾರಾಗಣದೊಂದಿಗೆ, ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿದೆ.

ಸಾಹಸ-ಫ್ಯಾಂಟಸಿಯ ಬ್ರಹ್ಮಾಸ್ತ್ರ ಸಿನಿಮಾ ಬಹಳ ಸಮಯದಿಂದ ಪ್ರಚಾರದಲ್ಲಿದೆ, ಏಕೆಂದರೆ ಇದು ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಮತ್ತು ಆಲಿಯಾ ಮದುವೆಯಾದ ನಂತರ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಟ್ರೇಲರ್ ಬಿಡುಗಡೆಯಾಗಿದ್ದು ಅದ್ದೂರಿ ಮೇಕಿಂಗ್, ಗ್ರಾಫಿಕ್ಸ್ ನೋಡುಗರ ಮನ ಗೆದ್ದಿದೆ. ಆದರೆ ಚಿತ್ರದ ಒಂದು ದೃಶ್ಯದಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.

Allegedly Hurt Hindu Religious Sentiments: Boycott Brahmastra Trends In Twitter

ಈಗ ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿ ರಣಬೀರ್ ಪಾತ್ರದ ಪರಿಚಯದ ದೃಶ್ಯಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಶಿವ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿರುವ ರಣಬೀರ್ ತನ್ನ ದೇವಾಲಯದ ಗಂಟೆಗಳನ್ನು ಬಾರಿಸುವ ದೃಶ್ಯವಿದೆ ಈ ದೃಶ್ಯದಲ್ಲಿ ಆತ ಶೂಗಳನ್ನು ಧರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಬ್ರಹ್ಮಾಸ್ತ್ರ ಟ್ರೇಲರ್ ನೋಡಿದ ನಂತರ ಅನೇಕ ಪ್ರೇಕ್ಷಕರು ಈ ದೃಶ್ಯಕ್ಕೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ #BoycottBrahmastra ಎಂದು ಅಭಿಯಾನ ಶುರುವಾಗಿದೆ. ಟ್ವಿಟರ್ ಬಳಕೆದಾರರೊಬ್ಬರು, "ಶೂಗಳನ್ನು ಧರಿಸಿ ದೇವಾಲಯಕ್ಕೆ ಪ್ರವೇಶಿಸುವುದು. ಬಾಲಿವುಡ್‌ಗೆ ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಮತ್ತು ನಮ್ಮ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲು ಮಾತ್ರ ತಿಳಿದಿದೆ. ಅವರಿಂದ ನಾವು ಇನ್ನೇನು ನಿರೀಕ್ಷಿಸಬಹುದು" ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬರು ಚಲನಚಿತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, "ವಾಹ್ ರೇ, ಬಾಲಿವುಡ್ ಬೂಟುಗಳೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸುತ್ತಿದೆ. ಈ ಚಲನಚಿತ್ರವನ್ನು ಬಹಿಷ್ಕರಿಸಿ! ಅವರಿಗೆ ಹಿಂದೂಗಳ ಶಕ್ತಿ ಏನೆಂದು ಅರ್ಥವಾಗಲಿ!" ಎಂದು ಟ್ವೀಟ್ ಮಾಡಿದ್ದಾರೆ.

"ಶೂಗಳೊಂದಿಗೆ ದೇವಾಲಯವನ್ನು ಪ್ರವೇಶಿಸುವುದು, ಉರ್ದುವುಡ್‌ನಿಂದ ನಾವು ನಿರೀಕ್ಷಿಸಬಹುದಾದದ್ದು ಇದನ್ನೇ. ಸನಾತನ ಧರ್ಮದ ಬಗ್ಗೆ ನಮ್ಮ ಭಾವನೆಗಳನ್ನು ನೋಯಿಸುವ ಅವಕಾಶವನ್ನು ಬಾಲಿವುಡ್ ಎಂದಿಗೂ ಕಳೆದುಕೊಳ್ಳುವುದಿಲ್ಲ" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

Recommended Video

Bangalore: ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಪರ್ಕ ಜಾಲ ಇನ್ನಷ್ಟು ವಿಸ್ತಾರ | *Karnataka | OneIndia Kannada

ಬ್ರಹ್ಮಾಸ್ತ್ರ ಚಿತ್ರಕ್ಕೆ ಅಯಾನ್ ಮುಖರ್ಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್, ಅಪೂರ್ವ ಮೆಹ್ತಾ, ಹಿರೂ ಜೋಹರ್, ನಮಿತ್ ಮಲ್ಹೋತ್ರಾ ರಣಬೀರ್ ಮತ್ತು ಅಯಾನ್ ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೆಪ್ಟೆಂಬರ್ 9, 2022 ರಂದು ಬ್ರಹ್ಮಾಸ್ತ್ರ ಜಗತ್ತಿನಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

English summary
Bollywood Most Anticipated Movie Brahmastra: Part one Shiva trailer was released online, netizens spotted something which has allegedly hurt the religious sentiments of many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X