• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ ‘ನಾಸ್ಟ್ರಡಾಮಸ್’

|
Google Oneindia Kannada News

ಅಮೆರಿಕ ಚುನಾವಣೆ ಫಲಿತಾಂಶದ ಪಕ್ಕಾ ಲೆಕ್ಕಾಚಾರ ಹೇಳುವ ಆಧುನಿಕ ಜಗತ್ತಿನ 'ನಾಸ್ಟ್ರಡಾಮಸ್' ಅಲನ್ ಲಿಚ್‌ಮನ್ ಟ್ರಂಪ್‌ಗೆ ಶಾಕ್ ಕೊಟ್ಟಿದ್ದಾರೆ. ಅಲನ್ ಲಿಚ್‌ಮನ್ ಹೇಳುವಂತೆ ಈ ಬಾರಿ ಡೊನಾಲ್ಡ್ ಟ್ರಂಪ್ ಸೋತು ಸುಣ್ಣವಾಗಲಿದ್ದಾರೆ. ಸುಮಾರು 4 ದಶಕಗಳಿಂದಲೂ ಅಲನ್ ಲಿಚ್‌ಮನ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಪಕ್ಕಾ ಲೆಕ್ಕ ಹೇಳಿದ್ದವರು.

ಇದೀಗ ಅವರೇ ಹೇಳಿರುವಂತೆ ಡೊನಾಲ್ಡ್ ಟ್ರಂಪ್ ಈ ಬಾರಿ ವೈಟ್‌ಹೌಸ್‌ನಿಂದ ಹೊರ ಬೀಳಲಿದ್ದಾರೆ. 2016ರಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದೇ ಗೆಲ್ಲುತ್ತಾರೆಂದು ಇದೇ ಅಲನ್ ಲಿಚ್‌ಮನ್ ಹೇಳಿದ್ದರು. ಅಮೆರಿಕದ ತುಂಬೆಲ್ಲಾ ಹಿಲರಿ ಕ್ಲಿಂಟನ್ ಗೆಲುವು ಫಿಕ್ಸ್ ಎನ್ನುವಾಗಲೇ ಈ ರೀತಿಯ ಭವಿಷ್ಯ ಹೇಳಿದ್ದ ಅಲನ್ ಲಿಚ್‌ಮನ್ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಕಡೆಗೆ ಫಲಿತಾಂಶ ಹೊರಬಿದ್ದ ಕ್ಷಣ ಎಲ್ಲರಿಗೂ ಆಘಾತ ಕಾದಿತ್ತು.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

ಅಲನ್ ಹೇಳಿದ್ದ ಭವಿಷ್ಯ ಸತ್ಯವಾಗಿ, ಟ್ರಂಪ್‌ ಅಧ್ಯಕ್ಷರಾಗಿದ್ದರು. ಅಂದು ಟ್ರಂಪ್ ಗೆಲ್ಲುತ್ತಾರೆ ಎಂದು ಹೇಳಿದ್ದ ಅಲನ್ ಲಿಚ್‌ಮನ್, ಇಂದು ಟ್ರಂಪ್ ಸೋತು ಹೋಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಸಿಟ್ಟಿಗೇಳುವಂತೆ ಮಾಡಿದೆ.

ಇದು ಪ್ರಮುಖ ಅಂಶಗಳ ಲೆಕ್ಕಾಚಾರ

ಇದು ಪ್ರಮುಖ ಅಂಶಗಳ ಲೆಕ್ಕಾಚಾರ

ಅಲನ್ ಲಿಚ್‌ಮನ್ ಭವಿಷ್ಯ ಹೇಳಿದರೂ ಆತ ಜೋತಿಷಿ ಅಲ್ಲ. ಆತ ಅಮೆರಿಕ ಫಲಿತಾಂಶದ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿ, ಭವಿಷ್ಯ ನುಡಿಯುತ್ತಾರೆ. ಹೀಗೆ ಅಂಕಿ-ಅಂಶ ಆಧರಿಸಿ ಅಲನ್ ಲಿಚ್‌ಮನ್ ಫಲಿತಾಂಶದ ಬಗ್ಗೆ ಭವಿಷ್ಯ ಹೇಳುತ್ತಾರೆ. 1984ರಿಂದಲೂ ಅಲನ್ ಹೇಳಿರುವ ವ್ಯಕ್ತಿಯೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದೇ ಕಾರಣಕ್ಕೆ 2020ರ ಚುನಾವಣೆ ಕೂಡ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಅಲನ್ ಹೇಳಿಕೆ ಪ್ರಕಾರ ಟ್ರಂಪ್ 2020ರ ಚುನಾವಣೆಯಲ್ಲಿ ಸೋತು ಹೋಗಲಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನು ಅಲನ್ ನೀಡಿದ್ದಾರೆ. ಹಾಗೇ ಬಿಡೆನ್ ಪರ ಅಮೆರಿಕ ಮತದಾರ ಪ್ರಭು ಮತಚಲಾಯಿಸಲು ಕಾರಣವನ್ನೂ ತಿಳಿಸಿದ್ದಾರೆ.

ಟ್ರಂಪ್ ಸೋಲಿಗೆ ನಾನಾ ಕಾರಣ

ಟ್ರಂಪ್ ಸೋಲಿಗೆ ನಾನಾ ಕಾರಣ

ಅಲನ್ ಲಿಚ್‌ಮನ್ ಪ್ರಕಾರ ಟ್ರಂಪ್ ಮೇಲೆ ಹಲವು ವಿಚಾರಗಳು ಪರಿಣಾಮ ಬೀರಲಿವೆ. ಮೊದಲ ವಿಚಾರ ರಷ್ಯಾ ಮಧ್ಯಪ್ರವೇಶ. ಟ್ರಂಪ್ ಪರ ರಷ್ಯಾ ಮಧ್ಯಪ್ರವೇಶ ಮಾಡುತ್ತಿದೆ ಎಂಬುದು ಜನರನ್ನು ಕೆಣಕಿದಂತಿದೆ. ಹಾಗೇ ಕೊರೊನಾ ಕಾಲದಲ್ಲಿ ಉಂಟಾದ ಸಮಸ್ಯೆಗಳು ಅಮೆರಿಕನ್ನರು ರೊಚ್ಚಿಗೇಳುವಂತೆ ಮಾಡಿದೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಇನ್ನೂ ಅಮೆರಿಕದ ಆರ್ಥಿಕತೆ ಹಾಗೂ ಉದ್ಯೋಗ ನಷ್ಟ ಸೇರಿದಂತೆ ಟ್ರಂಪ್ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಅವರ ಪಾಲಿಗೆ ಮುಳುವಾಗಲಿದೆ. ಹಾಗೇ ಟ್ರಂಪ್ ವಿರುದ್ಧ ನಡೆದಿದ್ದ ವಾಗ್ದಂಡನೆ (Impeachment) ಕೂಡ ಬಹುದೊಡ್ಡ ಪ್ರಭಾವ ಬೀರಲಿದೆ. ಇದೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಅಮೆರಿಕದ ಮತದಾರ ಪ್ರಭು ಈ ಬಾರಿ ಮತ ಚಲಾಯಿಸಲಿದ್ದಾರೆ.

ಮತದಾರ ಮೂರ್ಖನಲ್ಲ, ಅವರಿಗೆ ಸತ್ಯ ಗೊತ್ತಿದೆ..!

ಮತದಾರ ಮೂರ್ಖನಲ್ಲ, ಅವರಿಗೆ ಸತ್ಯ ಗೊತ್ತಿದೆ..!

ನಮ್ಮಲ್ಲಿ ನಡೆಯುವಂತೆ ಮತದಾರನ ಮನ ಗೆಲ್ಲಲು ಅಮೆರಿಕದಲ್ಲೂ ಚುನಾವಣಾ ಗಿಮಿಕ್‌ಗಳು ನಡೆಯುತ್ತವೆ. ಸಾಮಾನ್ಯವಾಗಿ ಇಂತಹ ಗಿಮಿಕ್‌ಗಳಿಗೆ ಅದೇ ಕ್ಯಾಂಪೇನ್ ವೇದಿಕೆಯಾಗಿರುತ್ತದೆ. ಸುಖಾಸುಮ್ಮನೆ ಆರೋಪ ಮಾಡುವುದು, ಮತದಾರರನ್ನು ಓಲೈಸಿಕೊಳ್ಳಲು ನೂರಾರು ಆಶ್ವಾಸನೆ ನೀಡುವುದು. ಹೀಗೆ ಅಮೆರಿಕದಲ್ಲೂ ಮತ ಪಡೆಯಲು ಗಿಮಿಕ್‌ಗಳು ನಡೆದೇ ಇರುತ್ತವೆ.

ಆದರೆ ಇದಕ್ಕೆಲ್ಲಾ ಖಡಕ್ ಉತ್ತರ ನೀಡುವ ಅಲನ್ ಲಿಚ್‌ಮನ್, ಜನರು ಅಥವಾ ಮತದಾರರು ಮೂರ್ಖರಲ್ಲ ತಿಳಿದುಬಿಡಿ ಎನ್ನುತ್ತಾರೆ. ಜನರು ಕ್ಯಾಂಪೇನ್‌ಗಳ ಆಧಾರದಲ್ಲಿ ಮತ ಹಾಕುವುದಿಲ್ಲ. ಅಮೆರಿಕದ ಮತದಾರರು ಪ್ರಬುದ್ಧರು ಹಾಗೂ ಅವರಿಗೆ ತಿಳಿದಿದೆ, ಯಾರಿಗೆ ಮತ ಹಾಕಬೇಕು ಎಂಬುದು. ಆದರೆ ಚುನಾವಣೆ ಗಿಮಿಕ್‌ಗಳಿಗೆಲ್ಲಾ ಅಮೆರಿಕದ ಪ್ರಬುದ್ಧ ಮತದಾರ ಪ್ರಭು ಬಲಿಯಾಗುವುದಿಲ್ಲ ಎಂಬುದು ಅಲನ್ ಲಿಚ್‌ಮನ್ ಅಭಿಪ್ರಾಯವಾಗಿದೆ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಇದರ ಜೊತೆಗೆ ಕೊರೊನಾ ಸಂಕಷ್ಟ, ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ. ಅಲ್ಲದೆ ತಮಗೆ ಸೋಂಕು ಬಂದಿದ್ದಾಗ ನಡೆದುಕೊಂಡ ರೀತಿ ಕೂಡ ಅಮೆರಿಕದ ಪ್ರಬುದ್ಧ ಮತದಾರರನ್ನು ಕೆರಳಿಸಿದೆ. ಇದೆಲ್ಲವೂ ನಮಗೆ ವರವಾಗಲಿದೆ ಎಂಬುದು ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಲೆಕ್ಕಾಚಾರ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಟ್ರಂಪ್ ಎಡವಟ್ಟು ಹೇಳಿಕೆಗಳಿಂದ ವಿವಾದ

ಮಾಸ್ಕ್ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ತನಕ ಟ್ರಂಪ್ ಮೇಲಿಂದ ಮೇಲೆ ವಿವಾದಗಳನ್ನು ಸೃಷ್ಟಿ ಮಾಡಿದ್ದರು. ಮೊದಲಿಗೆ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಬಳಿಕ ತಾವೇ ಮಾಸ್ಕ್ ತೊಟ್ಟು ಹೊರಗೆ ಕಾಣಿಸಿಕೊಂಡಿದ್ದರು. ಹಾಗೇ ಕೊರೊನಾ ವೈರಸ್ ಸಾಯಲು ದೇಹಕ್ಕೆ ಸೋಂಕು ನಿವಾರಕ ರಾಸಾಯನಿಕಗಳನ್ನು ಚುಚ್ಚಿ ಎಂದಿದ್ದರು. ಸಾಲದು ಎಂಬಂತೆ ನೆರಳಾತೀತ ಕಿರಣಗಳನ್ನು ದೇಹಕ್ಕೆ ಹಾಯಿಸಿದರೆ ಮನುಷ್ಯನ ದೇಹದಲ್ಲಿರುವ ಕೊರೊನಾ ಸಾಯುತ್ತದೆ ಅಂತಾ ಹೇಳಿಕೆ ಕೊಟ್ಟಿದ್ದರು.

ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!ಟ್ರಂಪ್ ಅಧ್ಯಕ್ಷರಾಗಲು ಈ ರಾಜ್ಯಗಳಲ್ಲಿ ಗೆಲ್ಲಲೇಬೇಕು..!

ಆದರೆ ಇದೆಲ್ಲಾ ಮನುಷ್ಯನನ್ನೇ ಸಾಯಿಸುತ್ತದೆ ಎಂಬುದನ್ನೇ ಟ್ರಂಪ್ ಮರೆತಂತೆ ಮಾತನಾಡಿದ್ದರು. ಇಂತಹ ವಿಚಿತ್ರ ಹೇಳಿಕೆಗಳಿಂದ ಟ್ರಂಪ್ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದು ಚುನಾವಣೆ ಮೇಲೂ ಭಾರಿ ಪ್ರಭಾವ ಬೀರುತ್ತಿದೆ. ಬಿಡೆನ್ ಇದನ್ನೇ ರಾಜಕೀಯ ದಾಳ ಮಾಡಿಕೊಂಡು ಮತದಾರರ ಮನಗೆದ್ದು, ವೋಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಡೆನ್ ಹವಾ ಹೆಚ್ಚಾಗುತ್ತಿದೆ.

English summary
Alan Lichtman says Donald Trump Will Lose The 2020 Election. For nearly four decades, Alan Lichtman has calculated the outcome of the US presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X