ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2024 election: ಅಖಿಲೇಶ್ ಯಾದವ್ ರಾಜೀನಾಮೆ ಹಿಂದಿನ ರಹಸ್ಯವೇನು?

|
Google Oneindia Kannada News

ಲಕ್ನೋ ಮಾರ್ಚ್ 23: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅಜಂಗಢದಿಂದ ರಾಜೀನಾಮೆ ನೀಡಿದ ನಂತರ ಮತ್ತೊಮ್ಮೆ ಊಹಾಪೋಹಗಳು ಶುರುವಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಅಧಿಕಾರಕ್ಕೆ ಬರದೇ ಇರಬಹುದು. ಆದರೆ ಪಕ್ಷವು ಇಲ್ಲಿಯವರೆಗೆ ಹೆಚ್ಚಿನ ಮತಗಳನ್ನು ಪಡೆದಿದೆ. ವಿಧಾನಸಭೆಯ ಫಲಿತಾಂಶ ನೋಡಿದರೆ ಎಸ್‌ಪಿ 23 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಶ್ಚಿಮ ಉತ್ತರ ಪ್ರದೇಶದಿಂದ ಪೂರ್ವಾಂಚಲದವರೆಗಿನ ಹಲವು ಜಿಲ್ಲೆಗಳಲ್ಲಿ ಪಕ್ಷದ ಸಾಧನೆ ಗಣನೀಯವಾಗಿ ಸುಧಾರಿಸಿದೆ. ಹೀಗೆ ಮತದಾರರು ಮತ್ತು ಬೆಂಬಲಿಗರ ಬೆಂಬಲವನ್ನು ಉಳಿಸಿಕೊಳ್ಳಲು ಎಸ್‌ಪಿ ಮಾಡಿದ ಕಾರ್ಯಗಳನ್ನು ತಿಳಿಯುವುದು ತುಂಬಾ ಅವಶ್ಯಕ. ಈ ಹಿಂದೆ ಲೋಕಸಭೆ, ರಾಜ್ಯಸಭೆಯಿಂದ ವಿಧಾನ ಪರಿಷತ್ತಿನವರೆಗೂ ಪಕ್ಷದ ಪಾಲ್ಗೊಳ್ಳುವಿಕೆ ಕಡಿಮೆಯಾಗಿತ್ತು. ಆದರೆ ಈ ಬಾರಿ ವಿಧಾನಸಭೆಯಲ್ಲಿ ಎಸ್‌ಪಿ ಎರಡು ಪಟ್ಟು ಹೆಚ್ಚು ಶಾಸಕರನ್ನು ಹೊಂದಿದ್ದು, ಇದರ ಲಾಭ ಪಡೆಯಲು ಅಖಿಲೇಶ್ ಬಯಸಿದ್ದಾರೆ.

ರಾಜೀನಾಮೆ ಹಿಂದಿನ ರಹಸ್ಯವೇನು?

ರಾಜೀನಾಮೆ ಹಿಂದಿನ ರಹಸ್ಯವೇನು?

ಅಖಿಲೇಶ್ ಗೆದ್ದ ಕರ್ಹಾಲ್ ವಿಧಾನಸಭಾ ಕ್ಷೇತ್ರ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಅದನ್ನು ಎಸ್‌ಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಕರ್ಹಾಲ್‌ನಿಂದ ಶಾಸಕರಾಗಿ ಮುಂದುವರಿಯಲು ಅಜಮ್‌ಗಢದ ಲೋಕಸಭಾ ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಹಿಂದಿನ ರಹಸ್ಯವೇನು? ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಎಸ್‌ಪಿ ತೀವ್ರ ಪೈಪೋಟಿ ನೀಡಿದೆ. ಹೀಗಾಗಿ ಅಖಿಲೇಶ್ ಯುಪಿಯಲ್ಲಿಯೇ ಇದ್ದು 2024ಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಖಿಲೇಶ್ ಮೇಲೆ ಬಿಜೆಪಿ ಆರೋಪ

ಅಖಿಲೇಶ್ ಮೇಲೆ ಬಿಜೆಪಿ ಆರೋಪ

ವಿಧಾನಸಭೆ ಹೀನಾಯ ಸೋಲಿನ ಬಳಿಕ ಅಖಿಲೇಶ್ ಪ್ರತಿಪಕ್ಷಗಳ ಆರೋಪವನ್ನು ಎದುರಿಸಿದರು. 2010-11ರಲ್ಲಿ ಸಮಾಜವಾದಿ ಸೈಕಲ್ ಯಾತ್ರೆ ಮೂಲಕ ಹವಾ ಸೃಷ್ಟಿಸಿ ಅಧಿಕಾರಕ್ಕೆ ಬಂದಿದ್ದ ಅಖಿಲೇಶ್ 2017ರಲ್ಲಿ ಅಧಿಕಾರದಿಂದ ಹೊರಗುಳಿದರು. ಆದರೆ ಪಕ್ಷವನ್ನು ಕಟ್ಟುವಲ್ಲಿ ಅಖಿಲೇಶ್ ಪ್ರಯತ್ನ ಸಣ್ಣದಲ್ಲ. ಹೀಗಾಗಿ ಅವರ ಆಲೋಚನೆಗಳ ಮೇಲೆ ಪಕ್ಷದ ಇನ್ನುಳಿದ ನಾಯಕರು ಹಾಗೂ ಜನರು ನಂಬಿಕೆ ಇಟ್ಟಿದ್ದಾರೆ. ಲಖಿಂಪುರ ಘಟನೆಯ ನಂತರ, ಅಖಿಲೇಶ್ ರಸ್ತೆಗಿಳಿದರು ಮತ್ತು ಬಂಧನಕ್ಕೆ ಒಳಗಾದರು. ಆದರೆ ಮುಲಾಯಂ ಸಿಂಗ್ ನೇತೃತ್ವದಲ್ಲಿದ್ದ ಹೋರಾಟವು ಕಾಣೆಯಾಗಿದೆ.

ಕಾರ್ಯಕರ್ತರ ನೈತಿಕ ಸ್ಥೈರ್ಯ ಗಟ್ಟಿ

ಕಾರ್ಯಕರ್ತರ ನೈತಿಕ ಸ್ಥೈರ್ಯ ಗಟ್ಟಿ

ಅಖಿಲೇಶ್ ರಾಜೀನಾಮೆಯ ನಂತರ ಸಮಾಜವಾದಿ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಜೂಹಿ ಸಿಂಗ್ ಟ್ವೀಟ್ ಮಾಡಿದ್ದಾರೆ. 'ರಾಷ್ಟ್ರೀಯ ಅಧ್ಯಕ್ಷರು ಯುಪಿ ಅಸೆಂಬ್ಲಿಯಲ್ಲಿ ನಮ್ಮನ್ನು ಮುನ್ನಡೆಸುತ್ತಾರೆ' ಎಂದು ಹೇಳಿದ್ದಾರೆ. ವಾಸ್ತವವಾಗಿ ಸಕ್ರಿಯ ಮತ್ತು ಬಲವಾದ ನಾಯಕತ್ವವು ಪಕ್ಷವನ್ನು ಕಟ್ಟುತ್ತದೆ. ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಭರವಸೆಯನ್ನು ಛಿದ್ರಗೊಂಡ ನಂತರ ಈ ಬೆಳವಣಿಗೆಗಳು ಎಸ್‌ಪಿಯಲ್ಲಿ ಕಂಡುಬಂದಿವೆ. ಜೊತೆಗೆ ಅಖಿಲೇಶ್ ಅವರು ವಿಧಾನಸಭೆಯಲ್ಲಿಯೇ ಇದ್ದು ನೇರವಾಗಿ ಸರ್ಕಾರದ ಜತೆ ಸಂವಾದ ನಡೆಸಿದರೆ ಕಾರ್ಯಕರ್ತರ ನೈತಿಕ ಸ್ಥೈರ್ಯವೂ ಗಟ್ಟಿಯಾಗಲಿದ್ದು, ಅಧಿಕಾರದ ಉಳಿದ ಭರವಸೆಯನ್ನು ಉಳಿಸಿಕೊಳ್ಳುವುದು ಸುಲಭವಾಗಲಿದೆ ಎಂಬುದು ಪಕ್ಷದ ಆಶಯ.

ಪಕ್ಷ ಭದ್ರತೆಗೆ ಅಖಿಲೇಶ್ ಪಣ

ಪಕ್ಷ ಭದ್ರತೆಗೆ ಅಖಿಲೇಶ್ ಪಣ

ಅಖಿಲೇಶ್ ತಮ್ಮ ಹಳೆಯ ಪಾತ್ರಕ್ಕೆ ಮರಳಬಹುದು ಎಂದು ಪಕ್ಷವು ಭಾವಿಸುತ್ತದೆ. ಮನೆಯಿಂದ ರಸ್ತೆವರೆಗೆ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವ ಮೂಲಕ 2024ರ ಲೋಕಸಭೆ ಚುನಾವಣೆಯಿಂದ 2027ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಸುಗಮವಾಗಲಿದೆ. ಅಖಿಲೇಶ್ ಅವರ ತಂದೆ ಮುಲಾಯಂ ಮತ್ತು ಚಿಕ್ಕಪ್ಪ ಶಿವಪಾಲ್ ಕೂಡ ವಿರೋಧ ಪಕ್ಷದ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಖಿಲೇಶ್ ಅವರೇ ಅವರನ್ನು ಮುನ್ನಡೆಸಿದರೆ, ಪಕ್ಷದ ಪ್ರಮುಖ ಮತದಾರರು ಸಹ ಭರವಸೆ ಹೊಂದಿದ್ದಾರೆ ಮತ್ತು ಹೊಸ ಪರ್ಯಾಯಗಳನ್ನು ಹುಡುಕುವುದಿಲ್ಲ. ಮೈತ್ರಿ ಮತ್ತು ಪಕ್ಷದ ನಡುವಿನ ಭಿನ್ನಾಭಿಪ್ರಾಯದ ಆತಂಕವೂ ದುರ್ಬಲವಾಗಲಿದೆ. ಅಖಿಲೇಶ್ ಅವರ ಕ್ರಿಯಾಶೀಲತೆ ಸಂಘಟನೆಯನ್ನು ತಳಮಟ್ಟದವರೆಗೆ ಸಕ್ರಿಯಗೊಳಿಸುತ್ತದೆ. ಕಾಂಗ್ರೆಸ್‌ನ ಜರ್ಜರಿತ ನೆಲ ಮತ್ತು ಬಿಎಸ್‌ಪಿಯ ಖಾಲಿ ಜಾಗದ ನಡುವೆ ಅಖಿಲೇಶ್ ನೆಲದಲ್ಲಿ ಬೆವರು ಹರಿಸುತ್ತಿರುವುದು ಕಂಡುಬಂದರೆ ಅವರಿಗೆ ವಿಸ್ತರಣೆಯ ಸಾಧ್ಯತೆಗಳು ಬಲವಾಗಿರುತ್ತವೆ.

English summary
After the resignation of former Uttar Pradesh Chief Minister Akhilesh Yadav from Azamgarh, the round of speculation has started once again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X