ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?

|
Google Oneindia Kannada News

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಏರ್ ಟೆಲ್ ಡಿಜಿಟಲ್ ಟಿವಿ ತನ್ನ ಗ್ರಾಹಕರಿಗೆ ಚಾನೆಲ್ ಆಯ್ಕೆ ಮಾಡಿಕೊಳ್ಳುವ ವಿಧಾನವನ್ನು ಪ್ರಕಟಿಸಿದೆ.

ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ.

100 ರು ಚಾನೆಲ್ ಗಳ ನಂತರ ಬೇಕಾದ ಚಾನೆಲ್ ಪಡೆಯಲು ಪ್ರತಿ 25 ಚಾನೆಲ್ ಗಳಿಗೆ 20 ರು ನಂತೆ ದರ ನಿಗದಿಯಾಗಿದೆ ಈ ರೀತಿ ಆಯ್ಕೆ ವಿಧಾನವನ್ನು a la carte ಎನ್ನಲಾಗುತ್ತದೆ. ಎಚ್ ಡಿ ಚಾನೆಲ್ ಗಳು ಬೇಕಾದರೆ ದರ ಇನ್ನಷ್ಟು ಹೆಚ್ಚಾಗಲಿದೆ. ಕೇಬಲ್ ಟಿವಿ ಆಪರೇಟರ್ಸ್, ಏರ್ ಟೆಲ್ ಸೇರಿದಂತೆ ವಿವಿಧ ಡಿಟಿಎಚ್ ಸೇವಾದರರು ಪ್ರತ್ಯೇಕ ದರ ಪಟ್ಟಿಯನ್ನು ನಿಗದಿ ಪಡಿಸಿವೆ.

ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ? ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?

ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿದ್ದು, ಏರ್ ಟೆಲ್ ವೆಬ್ ಸೈಟ್ ಮೂಲಕದ ಆನ್ ಲೈನ್ ನಲ್ಲಿ ಸುಲಭವಾಗಿ ಚಾನೆಲ್ ಗಳ ಶಾಪಿಂಗ್ ಮಾಡಿ ನಿಮಗೆ ಬೇಕಾದ ಪ್ಯಾಕೇಜ್ ಪಡೆಯಿರಿ

 ಮೊದಲ ಹಂತ

ಮೊದಲ ಹಂತ

* ಏರ್ ಟೆಲ್ ಡಿಜಿಟಲ್ ಟಿವಿ ಅಥವಾ ಏರ್ ಟೆಲ್ ಇಂಟರ್ನೆಟ್ ಟಿವಿ ಗ್ರಾಹಕರು ಏರ್ ಟೆಲ್ ಪೋರ್ಟಲ್ ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು.
* ಲಾಗ್ ಇನ್ ಆದ ಬಳಿಕ ಚಂದಾದಾರಿಕೆ ಸಂಖ್ಯೆ ಹಾಕಿ ನಿಮ್ಮ ಪ್ಯಾಕೇಜ್ ಬದಲಾಯಿಸಲು ಸೂಚಿಸಿ.
* ನಿಮ್ಮ Subscriber Number ಸ್ಥಳದಲ್ಲಿ ಏರ್ ಟೆಲ್ subsriber ID ಹಾಕಿ.

ಟ್ರಾಯ್ ನಿಂದ 100 ಕೇಬಲ್ ಚಾನೆಲ್ ಗಳ ಗರಿಷ್ಠ ದರ ನಿಗದಿಟ್ರಾಯ್ ನಿಂದ 100 ಕೇಬಲ್ ಚಾನೆಲ್ ಗಳ ಗರಿಷ್ಠ ದರ ನಿಗದಿ

 ನಿಮ್ಮ ನೆಚ್ಚಿನ ಯೋಜನೆ ಆಯ್ಕೆ ಮಾಡಿಕೊಳ್ಳಿ

ನಿಮ್ಮ ನೆಚ್ಚಿನ ಯೋಜನೆ ಆಯ್ಕೆ ಮಾಡಿಕೊಳ್ಳಿ

ಏರ್ ಟೆಲ್ ಸದ್ಯಕ್ಕೆ ತನ್ನ ಗ್ರಾಹಕರಿಗೆ ಎರಡು ಯೋಜನೆಗಳನ್ನು ಪ್ರಕಟಿಸುತ್ತಿದೆ. ಉದಾಹರಣೆಗೆ 699 ರುಪಾಯಿ ಯೋಜನೆಯಲ್ಲಿ ಈಗ ನೀವು 306 ರುಪಾಯಿಗಳಷ್ಟು ಉಳಿಸಬಹುದಾಗಿದೆ(A la carte ಮಾದರಿಯಿಂದ ಅಯ್ಕೆ ಮಾಡಿ) : ಒಟ್ಟಾರೆ 160 ಚಾನೆಲ್ ಸಿಗಲಿದೆ. ನಿಮ್ಮ ಚಾನೆಲ್ ಯೋಜನೆ ಬದಲಾಯಿಸಲು ಇಷ್ಟವಿಲ್ಲದಿದ್ದರೆ, ಬ್ರಾಡ್ ಕಾಸ್ಟರ್ ಬೊಕೆ ಅಥವಾ ಅಲಾ ಕಾರ್ಟೆ ಮಾದರಿಯಂತೆ ಚಾನೆಲ್ ಆಯ್ಕೆ ಮಾಡಿಕೊಳ್ಳಬಹುದು

ಬ್ರಾಡ್ ಕಾಸ್ಟರ್ ಬೊಕೆ(ಚಾನೆಲ್ ಗಳ ಗುಚ್ಛ) ಮಾದರಿ

ಬ್ರಾಡ್ ಕಾಸ್ಟರ್ ಬೊಕೆ(ಚಾನೆಲ್ ಗಳ ಗುಚ್ಛ) ಮಾದರಿ

ಇದು ಬ್ರಾಡ್ ಕಾಸ್ಟ್ ಮಾಡುವವರಿಗೆ ಉಪಯುಕ್ತವಾದ ವಿಧಾನ, ವಿವಿಧ ಬ್ರಾಡ್ ಕಾಸ್ಟರ್ ಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಪ್ಯಾಕೇಜ್ ಪೂರ್ಣಗೊಳಿಸಬಹುದು. ಪ್ರತಿ ಚಾನೆಲ್ ಗಳ ದರಪಟ್ಟಿ ನಿಗದಿಯಾಗಿದ್ದು,ಈಟಿವಿ, ಜೀ, ಸ್ಟಾರ್, ಸನ್, ಡಿಸ್ನಿ ಹೀಗೆ 17 Bouguet(ಚಾನೆಲ್ ಗಳ ಗುಚ್ಛ)ಗಳಿದ್ದು, ಒಂದಕ್ಕಿಂತ ಹೆಚ್ಚು ಚಾನೆಲ್ ಗುಚ್ಛಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಲಾ ಕಾರ್ಟೆ(a LA Carte) ಮಾದರಿ

ಅಲಾ ಕಾರ್ಟೆ(a LA Carte) ಮಾದರಿ

ಈ ಮಾದರಿಯಲ್ಲಿ ಒಂದೊಂದೆ ಚಾನೆಲ್ ಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ದೂರದರ್ಶನದ 25 ಚಾನೆಲ್ ಗಳು ಏರ್ ಟೆಲ್ ಸೇರಿದಂತೆ ಎಲ್ಲಾ ಸೇವಾದಾರರು ಕಡ್ಡಾಯವಾಗಿ ನೀಡತಕ್ಕದ್ದು. ಉಳಿದಂತೆ ನಿಮ್ಮ ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡುತ್ತಿದ್ದಂತೆ ಅವುಗಳ ಮೊತ್ತವು ಸೇರುತ್ತದೆ. ಭಾಷೆಗೆ ತಕ್ಕಂತೆ ಪ್ರತ್ಯೇಕ ಪ್ಯಾಕೇಜ್ ಗಳು ಲಭ್ಯವಿದೆ. ಇದರಲ್ಲಿ ಉಚಿತವಾದ ಚಾನೆಲ್ (FTA) ಹಾಗೂ ಪೇ ಚಾನೆಲ್ ಗಳು ಪ್ರತ್ಯೇಕವಾಗಿರುತ್ತದೆ.

ದೂರುಗಳಿದ್ದರೆ ಟ್ರಾಯ್ ಸಂಪರ್ಕಿಸಿ

ದೂರುಗಳಿದ್ದರೆ ಟ್ರಾಯ್ ಸಂಪರ್ಕಿಸಿ

ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್, ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಡೌಟ್​ಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

English summary
The Telecom Regulatory Authority of India (TRAI) that allows customers to select the channels or channel bouquets they want instead of going for the option offered by the DTH operator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X