ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್ ಡೌನ್ ನಿಂದ ಪರಿಶುದ್ಧವಾಯ್ತು ಬೆಂಗಳೂರಿನ ಗಾಳಿ

|
Google Oneindia Kannada News

ಬೆಂಗಳೂರು ಮೇ. 19 : ಕೊರೊನಾ ಸೋಂಕಿನಿಂದ ಜನರು ತತ್ತರಿಸಿ ಹೋಗಿದ್ದಾರೆ ನಿಜ. ಈಗಲೂ ಮನೆಯಿಂದ ಹೊರಗೆ ಕಾಲಿಡಲು ಭಯ. ಆದರೆ, ಈ ಕರೊನಾ ಸೊಂಕಿನಿಂದ ಜಾರಿಯಾದ ಲಾಕ್ ಡೌನ್ ನಿಂದ ರಾಜಧಾನಿಯ ಮಾಲಿನ್ಯ ಸಂಪೂರ್ಣ ಕಡಿಮೆಯಾಗಿದೆ. ಸದಾ ವಾಹನಗಳ ಹೊಗೆಯಾಡುತ್ತಿದ್ದ ರಸ್ತೆಗಳಲ್ಲಿ ಪರಿಶುದ್ಧ ಗಾಳಿ ಸಿಗುತ್ತಿದೆ. ಕರೊನಾ ಲಾಕ್ ಡೌನ್ ನಿಯಮ ಜಾರಿಯಾದ ಬಳಿಕ ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ಕಡಿಮೆಯಾಗಿರುವ ಪ್ರಮಾಣದ ವಿವರ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಕೆಎಸ್ ಆರ್‌ಟಿಸಿ , ಬಿಎಂಟಿಸಿ , ಟ್ಯಾಕ್ಸಿ, ಕಾರುಗಳ ಅಬ್ಬರದಿಂಧ ವಾಹನ ದಟ್ಟಣೆ ಯಾಗುತ್ತಿತ್ತು. ಕಟ್ಟಡ ನಿರ್ಮಾಣ ಹೀಗೆ ನಾನಾ ಕಾರಣಗಳಿಂದ ಬೆಂಗಳೂರು ಭಾರತದ 82 ನೇ ಕಲುಷಿತ ನಗರ ಎಂಬ ಹಣೆಪಟ್ಟಿಗೆ ಒಳಗಾಗಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಅನುದಾನ ಕೂಡ ನೀಡಿತ್ತು. ಪರಿಸರ ಸಂರಕ್ಷಣೆ ಕುರಿತ ಹಲವು ಸಂಸ್ಥೆಗಳ ಸರ್ವೆ ಪ್ರಕಾರ ಬೆಂಗಳೂರಿನಲ್ಲಿ ಕಲುಷಿತ ವಾತಾವರಣದಿಂದ ನಾನಾ ಕಾಯಿಲೆಗಳಿಗೆ ತುತ್ತಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ನೆರೆ ರಾಜ್ಯಗಳ ರಾಜಧಾನಿ ಚೆನ್ನೈ, ಹೈದರಾಬಾದ್ ಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪರಿಸರ ಮಾಲಿನ್ಯ ವಾಗುತ್ತಿರುವುದು ಸರ್ವೆಗಳಿಂದ ಬೆಳಕಿಗೆ ಬಂದಿತ್ತು. ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ ಸರಾಸರಿ ಹದಿನೈದು ಲಕ್ಷ ಮಂದಿ ಸಾವನ್ನಪ್ಪುತ್ತಾರೆ ಎಂಬ ಆತಂಕ ಕಾರಿ ಸಂಗತಿ ಕಳೆದ ವರ್ಷ ಅಧ್ಯಯನಗಳು ಬಹಿರಂಗಗೊಳಿಸಿದ್ದವು.

ಕೊರೊನಾ ಲಾಕ್ ಡೌನ್ ಜಾರಿಯಾದ ಪರಿಣಾಮ ರಾಜಧಾನಿಯಲ್ಲಿ ನಿರೀಕ್ಷೆಗೂ ಮೀರಿ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಕಳೆದ ಇಪ್ಪತ್ತು ದಿನಗಳಿಂದ ವಾಹನ ಸಂಚಾರ ಕಡಿಮೆಯಾಗಿರುವ ಕಾರಣ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಸಂಪೂರ್ಣ ಹತೋಟಿಗೆ ಬಂದಿದೆ. ವಾಹನ ಸಂಚಾರವಿಲ್ಲ, ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ. ಹೀಗಾಗಿ ಬೆಂಗಳೂರು ಇದೀಗ ಸ್ವಚ್ಛಂಧವಾಗಿ ಕಾಣುತ್ತಿದೆ. ಪರಿಸರ ಮಾಲಿನ್ಯ ಕೂಡ ನಿಯಂತ್ರಣಕ್ಕೆ ಬಂದಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಖಲೆಗಳ ಪ್ರಕಾರ ಪರಿಸರ ಮಾಲಿನ್ಯದ ವಿವರ ಇಲ್ಲಿದೆ ನೋಡಿ.

Air pollution Rate reduced in Bengaluru city after the strict lock down Rules !

ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿರುವ ಪಟ್ಟಿ

Recommended Video

Modi ಅವರಿಗೆ Lockdown ಬಗ್ಗೆ ಇರುವ ಅನಿಸಿಕೆ ಏನು ? | Oneindia Kannada
ಪ್ರದೇಶ ಏ. 15 ಮೇ. 18
ಹೆಬ್ಬಾಳ 111 ug/m3 28 ug/m3
ಜಯನಗರ 105 37
ಮೈಸೂರು ರಸ್ತೆ 142 34
ನಿಮ್ಹಾನ್ಸ್ 106 37
ಸಿಟಿ ರೈಲ್ವೆ ನಿಲ್ದಾಣ 106 49
ಬಸವೇಶ್ವರನಗರ 67 36
ಪೀಣ್ಯಾ 44 24
ಬಿಟಿಎಂ ಲೇಔಟ್ 75 59

English summary
Bangalore's air pollution rate has been reduced drastically with the implementation of the Corona Lock down Rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X