ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ ಇರಲಿ: ವಾಯು ಮಾಲಿನ್ಯಕ್ಕೂ ಉಂಟು ಉಸಿರು ಕಿತ್ತುಕೊಳ್ಳುವ ತಾಕತ್ತು!

|
Google Oneindia Kannada News

ನವದೆಹಲಿ, ಜೂನ್ 27: ಜಗತ್ತಿನಲ್ಲಿ ವಾಯು ಮಾಲಿನ್ಯವು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬ ಆಘಾತಕಾರಿ ಸುದ್ದಿಯನ್ನು ಸಮೀಕ್ಷೆಯು ಹೊರ ಹಾಕಿದೆ. ವಾಯು ಮಾಲಿನ್ಯದ ನಡುವೆ ಬದುಕುವುದರಿಂದ ಅಕಾಲಿಕ ಮರಣ ಪ್ರಮಾಣವು ಶೇ.20ರಷ್ಟು ಹೆಚ್ಚಾಗಿದೆ. ಅದೇ ರೀತಿ ಹೃದಯರಕ್ತನಾಳದ ಕಾಯಿಲೆಯಿಂದಲೂ ಶೇ.17ರಷ್ಟು ಜನರು ಸಾವಿನ ಮನೆ ಸೇರಿದ್ದಾರೆ ಎಂದು ಅಧ್ಯಯನವು ತಿಳಿಸಿದೆ.

PLOS ONE ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಧೂಮಪಾನದ ಜೊತೆಗೆ ವಾಯು ಮಾಲಿನ್ಯದಂತಹ ಪರಿಸರದ ಪರಿಣಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಮೃತಪಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಆಘಾತಕಾರಿ ವರದಿ: ಮಾಲಿನ್ಯದಿಂದ 2019ರಲ್ಲಿ 9 ಮಿಲಿಯನ್ ಜನರು ಸಾವುಆಘಾತಕಾರಿ ವರದಿ: ಮಾಲಿನ್ಯದಿಂದ 2019ರಲ್ಲಿ 9 ಮಿಲಿಯನ್ ಜನರು ಸಾವು

ವಾಯು ಮಾಲಿನ್ಯದ ಕಾರಣವು ಸಾವಿನ ಪ್ರಮಾಣ ಏರಿಕೆಗೆ ಕಾರಣವಾಗುತ್ತಿರುವುದು ಏಕೆ?, ವಾಯು ಮಾಲಿನ್ಯದ ಕುರಿತು ಜನರು ಹೇಗೆ ಜಾಗೃತಿ ವಹಿಸಬೇಕು?, ಮಾಲಿನ್ಯದ ಬಗ್ಗೆ ಸಮೀಕ್ಷೆಯಲ್ಲಿ ವಿವರಿಸಿದ ಪ್ರಮುಖ ಅಂಶಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ನಾಲ್ಕು ಗೋಡೆಗಳ ಮಧ್ಯೆ ಸೀಮೆಎಣ್ಣೆ ಬಳಸಿ ಒಲೆ ಹಚ್ಚುವುದು

ನಾಲ್ಕು ಗೋಡೆಗಳ ಮಧ್ಯೆ ಸೀಮೆಎಣ್ಣೆ ಬಳಸಿ ಒಲೆ ಹಚ್ಚುವುದು

ಸಾಮಾನ್ಯವಾಗಿ ಮನೆಯ 4 ಗೋಡೆಗಳ ಮಧ್ಯ ಮರದ ಅಥವಾ ಸೀಮೆಎಣ್ಣೆಯಿಂದ ಸುಡುವ ಒಲೆಗಳನ್ನು ಬಳಸುವುದು ಸಹ ವಾಯುಮಾಲಿನ್ಯ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಈ ರೀತಿ ಸಿದ್ಧಪಡಿಸಿದ ಆಹಾರಯವನ್ನು ಬಳಸುವುದು, ಸರಿಯಾಗಿ ಗಾಳಿಯಿಲ್ಲದ ಪ್ರದೇಶದಲ್ಲಿ ಚಿಮಣಿ ಬಳಸುವುದರಿಂದ ಮನೆಯಲ್ಲಿ ಬಿಸಿ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಒಟ್ಟಾರೆ ಸಾವಿನ ಅಪಾಯವು ಶೇ.23ರಷ್ಟಾಗಿದೆ. ಅದೇ ರೀತಿ ಹೃದಯರಕ್ತನಾಳದಿಂದ ಮೃತಪಟ್ಟವರ ಸಂಖ್ಯೆಯು ಶೇ.36ಕ್ಕೆ ಏರಿಕೆಯಾಗಿದೆ. ವಿಶೇಷ ವೈದ್ಯಕೀಯ ಚಿಕಿತ್ಸಾಲಯಗಳಿಂದ ದೂರವಿರುವುದು ಮತ್ತು ಅತಿಹೆಚ್ಚು ಬಿಡುವಿಲ್ಲದೇ ವಾಹನ ಸಂಚಾರವಿರುವ ರಸ್ತೆಗಳಲ್ಲಿ ವಾಸವಾಗಿರುವುದು ಕೂಡ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಅಂಕಿ-ಅಂಶಗಳ ಸಂಗ್ರಹದ ಮೂಲ ಯಾವುದು?

ಅಂಕಿ-ಅಂಶಗಳ ಸಂಗ್ರಹದ ಮೂಲ ಯಾವುದು?

NYU ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಮೌಂಟ್ ಸಿನೈ, USನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಇರಾನ್‌ನ ಈಶಾನ್ಯ ಗೋಲೆಸ್ತಾನ್ ಪ್ರದೇಶದಲ್ಲಿ ವಾಸಿಸುವ 50,045 ಬಹುತೇಕ ಬಡ, ಗ್ರಾಮೀಣ ಹಳ್ಳಿಗರಿಂದ ವೈಯಕ್ತಿಕ ಮತ್ತು ಪರಿಸರ ಆರೋಗ್ಯದ ಅಂಕಿ-ಅಂಶವನ್ನು ಸಂಗ್ರಹಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದ ಎಲ್ಲರೂ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಸಂಶೋಧಕರು ಪ್ರತಿ ವರ್ಷ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ಆರೋಗ್ಯ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ 2004ರಲ್ಲಿ ಭಾಗವಹಿಸಿದವರು ಒಪ್ಪಿಕೊಂಡಿದ್ದರು.

ವೈದ್ಯಕೀಯ ಸೇವೆಯು ಸಿಗುವ ಪ್ರದೇಶಗಳಲ್ಲಿನ ವಾತಾವರಣ

ವೈದ್ಯಕೀಯ ಸೇವೆಯು ಸಿಗುವ ಪ್ರದೇಶಗಳಲ್ಲಿನ ವಾತಾವರಣ

ಈ ಬಾರಿ ನಡೆಸಿರುವ ಅಧ್ಯಯನವು ಕೇವಲ ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರ ಬದಲಿಗೆ ಹೃದಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಗುರುತಿಸಿದೆ, ಆದರೆ ಕಡಿಮೆ ಮತ್ತು ಮಾಧ್ಯಮ ಆದಾಯವನ್ನು ಹೊಂದಿರುವ ದೇಶಗಳಲ್ಲಿಯೂ ಪರಿಸರವು ಹೀಗೇ ಇರುವ ಬಗ್ಗೆ ಹೆಚ್ಚುವರಿ ಪುರಾವೆಗಳನ್ನು ಪತ್ತೆ ಮಾಡಬೇಕಿದೆ.

ಸಾಂಪ್ರದಾಯಿಕ ಸಂಶೋಧನೆಯ ವೇಳೆ ಪರಿಸರ ಅಪಾಯದ ಅಂಶಗಳ ಜೊತೆಗೆ ಹೆಚ್ಚು ಆದಾಯವನ್ನು ಹೊಂದಿರುವ ಅತಿಹೆಚ್ಚು ಜನಸಂಖ್ಯೆಯಿರುವ ನಗರ ಪ್ರದೇಶಗಳು ಮತ್ತು ಅಲ್ಲಿ ಸಿಗುವ ಆಧುನಿಕ ವೈದ್ಯಕೀಯ ಸೇವೆಯ ಕುರಿತಾಗಿಯೂ ಸಂಶೋಧಕರು ಗಮನ ಹರಿಸಿದ್ದಾರೆ.

ಸಾವಿನ ಅಪಾಯ ಹೆಚ್ಚಾಗುವುದರ ಹಿಂದಿನ ಅಸಲಿ ಕಥೆ

ಸಾವಿನ ಅಪಾಯ ಹೆಚ್ಚಾಗುವುದರ ಹಿಂದಿನ ಅಸಲಿ ಕಥೆ

ಸಾಮಾನ್ಯವಾಗಿ ಜನರು ವಾಸವಿರುವ ಪ್ರದೇಶದಲ್ಲಿನ ವೈದ್ಯಕೀಯ ಸೇವೆ ಮತ್ತು ಸೌಲಭ್ಯವನ್ನು ಹೋಲಿಸಿ ನೋಡಲಾಗಿದೆ. ವೈದ್ಯಕೀಯ ಸೇವೆಗಳು ಸುಲಭವಾಗಿ ಲಭ್ಯವಿರುವ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ 10 ಕಿಲೋ ಮೀಟರ್ ದೂರದಲ್ಲಿ ವಾಸಿಸುವ ಜನರ ಸಾವಿನ ಪ್ರಮಾಣವು ಶೇ.1ರಷ್ಟು ಹೆಚ್ಚಳವಾಗಿದೆ. ಅಂದರೆ ಹತ್ತಿರದಲ್ಲಿ ವೈದ್ಯಕೀಯ ಸೇವೆಯು ಸಿಗದಿರುವ ಪ್ರದೇಶದಲ್ಲಿ ವಾಸವಾಗಿರುವ ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಡುತ್ತಿದ್ದು, ಸಾವಿನ ಪ್ರಮಾಣವು ಶೇ.1ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಸಾವಿನ ಅಪಾಯ ಶೇ.13ರಷ್ಟು ಹೆಚ್ಚಾಗಿರುವುದು ಗೊತ್ತಾಗಿದೆ. ಇದು ಪ್ರಮುಖವಾಗಿ ರಸ್ತೆಮಾರ್ಗ 500 ಮೀಟರ್‌ಗಳ ಒಳಗೆ ವಾಸಿಸುವ ಜನರಿಗೆ ಸಂಬಂಧಿಸಿದ್ದಾಗಿದೆ.

ಸಂಶೋಧನೆ ಮುಖ್ಯ ಉದ್ದೇಶವನ್ನು ವಿವರಿಸಿದ ತಜ್ಞ ವೇದಾಂತನ್

ಸಂಶೋಧನೆ ಮುಖ್ಯ ಉದ್ದೇಶವನ್ನು ವಿವರಿಸಿದ ತಜ್ಞ ವೇದಾಂತನ್

"ನಮ್ಮ ಅಧ್ಯಯನವು ಒಳಾಂಗಣ ಹಾಗೂ ಹೊರಾಂಗಣ ವಾಯು ಮಾಲಿನ್ಯದ ಪ್ರಮುಖ ಪರಿಸರ ಅಂಶಗಳು, ಆಧುನಿಕ ಆರೋಗ್ಯ ಸೇವೆಗಳು ಹಾಗೂ ಹೆಚ್ಚು ಮಾಲಿನ್ಯವುಳ್ಳ ರಸ್ತೆಗಳ ಸಾಮೀಪ್ಯದಲ್ಲಿ ವಾಸಿಸುವ ಜನರನ್ನು ಒಳಗೊಂಡಿದೆ. ವಿಶೇಷವಾಗಿ ಹೃದಯರಕ್ತನಾಳದ ಕಾಯಿಲೆಯಿಂದ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿನ ಏರಿಳಿತದ ಕಾರಣವನ್ನು ತೋರಿಸುತ್ತದೆ," ಎಂದು ಅಧ್ಯಯನದ ಹಿರಿಯ ಲೇಖಕರು ಮತ್ತು ಹೃದ್ರೋಗ ತಜ್ಞ ರಾಜೇಶ್ ವೇದಾಂತನ್ ಹೇಳಿದ್ದಾರೆ.

"ನಮ್ಮ ಸಂಶೋಧನೆಗಳು ವಯಸ್ಸು ಮತ್ತು ಸಾಂಪ್ರದಾಯಿಕ ವೈಯಕ್ತಿಕ ಅಪಾಯಕಾರಿ ಅಂಶಗಳನ್ನು ಮೀರಿ ರೋಗ-ಅಪಾಯದ ಪ್ರೊಫೈಲ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ" ಎಂದು NYU ಲ್ಯಾಂಗೋನ್ ಹೆಲ್ತ್‌ನ ಸಹಾಯಕ ಪ್ರಾಧ್ಯಾಪಕ ವೇದಾಂತನ್ ತಿಳಿಸಿದ್ದಾರೆ.

English summary
Exposure to above-average levels of outdoor air pollution increased the risk of death by 20 per cent, According to The research, published in the journal PLOS ONE. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X