ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಯೋಜನೆ ಕೌಶಲ್ಯ ಅಭಿವೃದ್ಧಿಗೆ ಪೂರಕ: ಧರ್ಮೇಂದ್ರ ಪ್ರಧಾನ್

|
Google Oneindia Kannada News

ನವದೆಹಲಿ, ಜೂನ್ 18: ದೇಶದ ಸಶಸ್ತ್ರ ಪಡೆಗಳ ಆಧುನೀಕರಣ, ದೇಶ ಸೇವೆ ಮಾಡಲು ಯುವಕರಿಗೆ ಅವಕಾಶಗಳ ಸೃಷ್ಟಿ ಮತ್ತು ಸೈನಿಕರ ಮೂಲಕ ಭಾರತದ ಒಟ್ಟಾರೆ ರಕ್ಷಣಾ ಸನ್ನದ್ಧತೆಗೆ ಕೊಡುಗೆ ನೀಡಬಲ್ಲ ಕೌಶಲ್ಯ ಹೊಂದಿದ ಯುವಕರ ದೊಡ್ಡ ಸಮೂಹವನ್ನು ಸೃಷ್ಟಿಸುವ ಪರಿವರ್ತಕ ಕ್ರಮ ಇದಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

''ಅಗ್ನಿಪಥ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಬಿಡುಗಡೆ ಮಾಡಿದೆ. ಇದರಿಂದಾಗಿ ಯುವಜನತೆ ತಮ್ಮ ಕೌಶಲ್ಯ ಮತ್ತು ಅನುಭವದೊಂದಿಗೆ ತಮಗೆ ಬೇಕಾದ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಮತ್ತು ದೇಶದ ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ನೀಡಲಿದ್ದಾರೆ'' ಎಂದು ತಮ್ಮ ಇಲಾಖೆ ಮೂಲಕ ಪ್ರಕಟಣೆ ಹೊರಡಿಸಿದ್ದಾರೆ.

ಸ್ಕಿಲ್ ಇಂಡಿಯಾ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ (ಎಂಎಸ್ ಡಿಇ) ಅಗ್ನಿಪಥ್ ಯೋಜನೆಯೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆಪಡುತ್ತದೆ ಮತ್ತು ದೇಶವು ಯುವ ಭಾರತೀಯರ ಭವಿಷ್ಯಕ್ಕಾಗಿ ಸಿದ್ಧವಾಗಿರುವ ಸೈನ್ಯವನ್ನು ಸನ್ನದ್ದಪಡಿಸುವ ಕಾರ್ಯಕ್ರಮದ ಅನುಷ್ಠಾನದಲ್ಲಿ ಸೇನಾ ಪಡೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಉತ್ಸುಕವಾಗಿದೆ.

ಸ್ಕಿಲ್ ಇಂಡಿಯಾ ಮತ್ತು ಎಂಎಸ್ ಡಿಇ ಗಳು ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಸಹಯೋಗದಲ್ಲಿ ಕೆಲಸ ಮಾಡುತ್ತವೆ ಮತ್ತು ಆ ಉದ್ಯೋಗಗಳಿಗೆ ಹೊಂದಿಕೆಯಾಗುವಂತೆ ವಿದ್ಯಾರ್ಥಿಗಳಿಗೆ ಅಗತ್ಯ ಹೆಚ್ಚುವರಿ ಕೌಶಲ್ಯ ತುಂಬಲು ತರಬೇತಿ ನೀಡುತ್ತವೆ.

Agnipath to boost the creation of a young and skilled workforce for Indian Armed Forces

ಇದಲ್ಲದೆ, ಎಲ್ಲಾ ಅಗ್ನಿವೀರರಿಗೆ ಸೇವೆಯಲ್ಲಿರುವಾಗ ಸ್ಕಿಲ್ ಇಂಡಿಯಾದಿಂದ ಪ್ರಮಾಣಪತ್ರವನ್ನು ಪಡೆಯುಲಿದ್ದಾರೆ, ಇದು ಅವರ ಸೇವಾವಧಿಯನ್ನು ಪೂರ್ಣಗೊಳಿಸಿದ ನಂತರ ನಮ್ಮ ಆರ್ಥಿಕತೆಯಲ್ಲಿ ಸೃಷ್ಟಿಯಾಗುತ್ತಿರುವ ಉದ್ಯಮಶೀಲತೆ ಮತ್ತು ಉದ್ಯೋಗದ ಪಾತ್ರಗಳಲ್ಲಿ ಅನೇಕ ವೈವಿಧ್ಯಮಯ ಅವಕಾಶಗಳನ್ನು ಬಳಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.

ಸ್ಕಿಲ್ ಇಂಡಿಯಾ - ತರಬೇತಿ ಮಹಾನಿರ್ದೇಶನಾಲಯ (ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್- ಡಿಜಿಟಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ನಾನಾ ವಲಯದ ಕೌಶಲ್ಯ ಮಂಡಳಿಗಳು, ವಾಣಿಜ್ಯೋದ್ಯಮ ಸಂಸ್ಥೆಗಳಾದ ಎನ್‌ಐಇಎಸ್‌ಬಿಯುಡಿ ಮತ್ತು ಐಐಇ, ಹಾಗೂ ಕೌಶಲ್ಯ ನಿಯಂತ್ರಕ ಎನ್‌ಸಿವಿಇಟಿಯ ಎಲ್ಲಾ ಸಂಸ್ಥೆಗಳು ಈ ತರಬೇತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಅವು ಅಗ್ನಿವೀರರಿಗೆ ಅವರ ಕೆಲಸದ ಪಾತ್ರಗಳಿಗೆ ಸಂಬಂಧಿಸಿದ ಅಗತ್ಯವಿರುವ ಕೌಶಲ್ಯ ಪ್ರಮಾಣೀಕರಣವನ್ನು ಖಾತ್ರಿಪಡಿಸಲಿವೆ.

ಉದ್ಯೋಗದಲ್ಲಿ ಕಲಿತ ಕೆಲವು ಕೌಶಲ್ಯಗಳು ಎನ್ ಎಸ್ ಕ್ಯೂಎಫ್ ಪಠ್ಯಕ್ರಮದೊಂದಿಗೆ ನೇರ ಸಾಮ್ಯತೆ ಹೊಂದಿರಬಹುದು. ಕೆಲವರಿಗೆ ಕೆಲಸದ ಅನುಭವ ಪರಿಗಣಿಸಿ ಹೆಚ್ಚುವರಿ ಆನ್‌ಲೈನ್ ಅಥವಾ (ಭೌತಿಕ) ಆಫ್‌ಲೈನ್, ಪ್ರಾಯೋಗಿಕ ಅಥವಾ ಕೌಶಲ್ಯ ಹೊಂದಿದವರಿಂದ ಪೂರಕ ಕೌಶಲ್ಯ ಕಲಿಸಲಾಗುವುದು.

ಈ ಎಲ್ಲ ವಿವರಗಳು, ಅಂತೆಯೇ ಸಶಸ್ತ್ರ ಪಡೆಗಳ ತರಬೇತುದಾರರಿಗೆ ಯಾವ ತರಬೇತಿ ನೀಡುವುದು ಮತ್ತು ಮೌಲ್ಯಮಾಪನ ಮತ್ತು ಪ್ರಮಾಣೀಕರಣಕ್ಕಾಗಿ ಹಾಗೂ ತರಬೇತಿ ಮೌಲ್ಯಮಾಪಕರನ್ನು ಯಾರನ್ನು ಮಾಡುವುದು ಎಂಬೆಲ್ಲಾ ಅಂಶಗಳ ಬಗ್ಗೆ ಕಾರ್ಯ ನಡೆದಿದೆ. ನಿರ್ಗಮಿಸುವ ಸಮಯದಲ್ಲಿ ಈ ಯುವ ಅಗ್ನಿವೀರರಿಗೆ ಸಂಪೂರ್ಣ ಕೌಶಲ್ಯ ಪೂರಕ ವ್ಯವಸ್ಥೆಯು ತೆರೆದಿರುತ್ತದೆ, ಅವರು ಅವರಿಗೆ ಲಭ್ಯವಿರುವ ಹಲವು ಉನ್ನತ ಕೌಶಲ್ಯ/ಬಹು-ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ಕೋರ್ಸ್‌ಗಳ ಪ್ರಯೋಜನ ಪಡೆದಿರುತ್ತಾರೆ
ಅಗ್ನಿಪಥ ಯೋಜನೆಯು ಪರಿವರ್ತನಾತ್ಮಕ ಯೋಜನೆಯಾಗಿದೆ.

ಇದು ತಂತ್ರಜ್ಞಾನ ಸ್ನೇಹಿ, ಯುವ ಕಾರ್ಯಪಡೆಯ ಸೃಷ್ಟಿಗೆ ಕಾರಣವಾಗುತ್ತದೆ, ಜೊತೆಗೆ ರಾಷ್ಟ್ರ ಮೊದಲು ಎಂಬ ನಮ್ಮ ಮಿಲಿಟರಿಯ ಪ್ರಮುಖ ಮೌಲ್ಯವನ್ನು ಬಿತ್ತುತ್ತದೆ, ಇದು ಭಾರತದ ಮುಂದುವರಿದ ಬೆಳವಣಿಗೆ ಮತ್ತು ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ. ಅಗ್ನಿವೀರರು ನಮ್ಮ ಗಡಿಗಳ ರಕ್ಷಣೆಯಲ್ಲಿ ಮತ್ತು ಭಾರತವನ್ನು ಆಧುನಿಕ, ತಂತ್ರಜ್ಞಾನ ಆಧಾರಿತ, ಯುವ ಜಾಗತಿಕ ಮಹಾಶಕ್ತಿಯಾಗಿ ರೂಪುಗೊಳ್ಳುವ ಸನಿಹಕ್ಕೆ ಕೊಂಡೊಯ್ಯುವ ಆಸ್ತಿಗಳಾಗಲಿದ್ದಾರೆ. (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ)

English summary
Agnipath create opportunities for the youth to serve the nation, and via soldiering, create a large pool of skilled youth who can contribute to India’s overall defence preparedness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X