ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಗ್ನಿಪಥ್' ಆಕ್ರೋಶದ ಜ್ವಾಲೆಗೆ ಹೊತ್ತಿ ಉರಿದ ರಾಜ್ಯಗಳಲ್ಲಿ ಏನೇನಾಯ್ತು?

|
Google Oneindia Kannada News

ನವದೆಹಲಿ, ಜೂನ್ 17: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅಗ್ನಿಪಥ್ ಯೋಜನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಅಗ್ನಿಪಥ್ ವಿರುದ್ಧ ಹೊತ್ತಿಕೊಂಡಿರುವ ಆಕ್ರೋಶದ ಜ್ವಾಲೆಗೆ ರೈಲುಗಳು ಹೊತ್ತಿ ಉರಿದಿವೆ.

ಹೊಸ ಸೇನಾ ನೇಮಕಾತಿ ನೀತಿ ಅಗ್ನಿಪಥ್‌ಗೆ ಸಂಬಂಧಿಸಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸರ್ಕಾರದ ಹೊಸ ನೀತಿ ವಿರುದ್ಧ ಕೆರಳಿರುವ ಜನಸಮೂಹ ರೈಲುಗಳಿಗೆ ಬೆಂಕಿ ಹಚ್ಚಿತು. ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಗಿದ್ದು ಪೊಲೀಸ್ ಸಿಬ್ಬಂದಿ ಗಾಯಗೊಂಡರು.

ಬಿಹಾರ ಡಿಸಿಎಂ ಮನೆ ಮೇಲೆ ಉದ್ರಿಕ್ತರ ದಾಳಿ; ಅಗ್ನಿಪಥ್ ವಿರೋಧಿಸಿ ಶುಕ್ರವಾರವೂ ಹಲವೆಡೆ ಪ್ರತಿಭಟನೆ, ಹಿಂಸಾಚಾರಬಿಹಾರ ಡಿಸಿಎಂ ಮನೆ ಮೇಲೆ ಉದ್ರಿಕ್ತರ ದಾಳಿ; ಅಗ್ನಿಪಥ್ ವಿರೋಧಿಸಿ ಶುಕ್ರವಾರವೂ ಹಲವೆಡೆ ಪ್ರತಿಭಟನೆ, ಹಿಂಸಾಚಾರ

ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಇಂದೋರ್‌ವರೆಗೆ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ನೂರಾರು ಯುವ ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Agnipath scheme triggers violent protests in 7 states; Mobs Burn Trains, Block Roads

ಹೊಸ ನೇಮಕಾತಿ ನೀತಿಯ ವಿರುದ್ಧ ರೈಲ್ವೆ ಹಳಿಗಳನ್ನು ತಡೆದು, ರಸ್ತೆಗಳಲ್ಲಿ ಟೈರ್‌ಗಳನ್ನು ಸುಡುವ ಮೂಲಕ ಆಕ್ರೋಶ ಹೊರ ಹಾಕಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸುವುದಕ್ಕಾಗಿ ಪಲೀಸರು ಅಶ್ರುವಾಯು ಶೆಲ್‌ಗಳನ್ನು ಮತ್ತು ಲಾಠಿಚಾರ್ಜ್ ನಡೆಸಿದರು. ಶುಕ್ರವಾರ ಅಗ್ನಿಪಥ್ ವಿರುದ್ಧದ ಹೋರಾಟದ ವೈಖರಿ ಹೇಗಿತ್ತು ಎನ್ನುವುದರ ಕುರಿತು ವಿಸ್ತೃತ ವರದಿ ಇಲ್ಲಿದೆ ನೋಡಿ.

ಅಗ್ನಿಪಥ್ ವಿರುದ್ಧ ನಡೆದ ಪ್ರತಿಭಟನೆ ಘಟನಾವಳಿಗಳು:

* ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿತು. ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರೆ, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಗೂ ಅಗ್ನಿಪಥ್ ಯೋಜನೆ ವಿರೋಧಿ ಹೋರಾಟ ವ್ಯಾಪಿಸಿದೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯು ಹಿಂಸಾತ್ಮಕ ಆಂದೋಲನಕ್ಕೆ ಸಾಕ್ಷಿಯಾಗಿದೆ.

* ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿ ಉಪಮುಖ್ಯಮಂತ್ರಿ ರೇಣು ದೇವಿ ನಿವಾಸದ ಮೇಲೆ ದಾಳಿ ನಡೆದಿದ್ದು, ಹೊಸ ನೇಮಕಾತಿ ಯೋಜನೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿತು. ಬಿಹಾರದಲ್ಲಿ ಬುಧವಾರದಿಂದ ಆರಂಭವಾದ ಪ್ರತಿಭಟನೆ ಶುಕ್ರವಾರದ ಹೊತ್ತಿಗೆ ಬೆಂಕಿಯ ಜ್ವಾಲೆಯಾಗಿ ಹರಡಿತು. "ಇಂತಹ ಹಿಂಸಾಚಾರವು ಸಮಾಜಕ್ಕೆ ತುಂಬಾ ಅಪಾಯಕಾರಿ. ಇದರಿಂದ ಸಮಾಜಕ್ಕೆ ನಷ್ಟವಾಗಿದೆ ಎಂಬುದನ್ನು ಪ್ರತಿಭಟನಾಕಾರರು ನೆನಪಿಟ್ಟುಕೊಳ್ಳಬೇಕು," ಎಂದು ಉಪ ಮುಖ್ಯಮಂತ್ರಿ ಎಂಎಸ್ ದೇವಿ ತಿಳಿಸಿದರು.

* ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಶುಕ್ರವಾರ ಬೆಳಗ್ಗೆ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ರೈಲಿನ ಕೋಚ್‌ಗೆ ಬೆಂಕಿ ಹಚ್ಚಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು, ಅಷ್ಟರಲ್ಲಿ ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಲಾಗಿತ್ತು. ಕೋಲು ಮತ್ತು ಬಡಿಗೆಗಳನ್ನು ಹಿಡಿದಿದ್ದ ಪ್ರತಿಭಟನಾಕಾರರ ಮತ್ತೊಂದು ಗುಂಪು ಪೂರ್ವ ಉತ್ತರ ಪ್ರದೇಶದ ರೈಲ್ವೇ ನಿಲ್ದಾಣದ ಹೊರಗೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿತ್ತು.

* ಕಳೆದ ಬುಧವಾರ ಅಗ್ನಿಪಥ್ ವಿರುದ್ಧ ಪ್ರತಿಭಟನೆ ಶುರುವಾದಾಗಿನಿಂದ ಈವರೆಗೂ 200ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಿದೆ. 35 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.

* ಕಳೆದ ಮಂಗಳವಾರ ಅಗ್ನಿಪಥ್ ಅನ್ನು ಪರಿಚಯಿಸಿದ ಕೇಂದ್ರ ಸರ್ಕಾರವು ಇದನ್ನು "ಪರಿವರ್ತನೆ"ಯ ಯೋಜನೆ ಎಂದು ಕರೆದಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ನಾಲ್ಕು ವರ್ಷದ ಅಲ್ಪಾವಧಿ ಒಪ್ಪಂದದ ಆಧಾರದ ಮೇಲೆ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿರುತ್ತದೆ.

* ಕೇಂದ್ರ ಸರ್ಕಾರದ ಈ ಪರಿವರ್ತನೆಯ ಬಗ್ಗೆ ಪ್ರತಿಭಟನಾಕಾರರು ತೀವ್ರ ಅತೃಪ್ತಿಯನ್ನು ಹೊಂದಿದ್ದಾರೆ. ನಿರ್ದಿಷ್ಟವಾಗಿ ಸೇವಾವಧಿಯ ಕಡಿತ, ಅವಧಿ ಪೂರ್ವದಲ್ಲಿ ಸೇವೆಯಿಂದ ಬಿಡುಗಡೆಗೊಳಿಸುವುದು ಹಾಗೂ ಯಾವುರೇ ಪಿಂಚಣಿ ನೀಡದಿರುವುದು. 17.5 ರಿಂದ 21 ವರ್ಷ ವಯಸ್ಸಿನ ನಿರ್ಬಂಧವು ಸಾಕಷ್ಟು ಜನರನ್ನು ಅನರ್ಹಗೊಳಿಸುತ್ತದೆ. ಇದು ಪ್ರತಿಭಟನಾಕಾರರನ್ನು ಕೆರಳುವಂತೆ ಮಾಡಿದೆ.

* ಹೊಸ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ಅಗ್ನಿಪಥದಲ್ಲಿ ನಡೆಯುವಂತೆ ಮಾಡುವ ಮೂಲಕ ತಮ್ಮ ತಾಳ್ಮೆಯ 'ಅಗ್ನಿಪರೀಕ್ಷೆ' ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದರ ಮಧ್ಯೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಈ ಕ್ರಮವನ್ನು "ನಿರ್ಲಕ್ಷ್ಯ" ಮತ್ತು ದೇಶದ ಭವಿಷ್ಯಕ್ಕೆ "ಮಾರಕ" ಎಂದು ಕರೆದಿದ್ದಾರೆ.

* ಅಗ್ನಿಪಥ್ ನೇಮಕಾತಿಯ ವಯಸ್ಸಿನ ಮಿತಿಯನ್ನು ಈಗ 21 ರಿಂದ 23ಕ್ಕೆ ಏರಿಸಲಾಗಿದೆ. ಸರ್ಕಾರವು ಈ ಯೋಜನೆಯ 10 ಅಂಶಗಳ ರಕ್ಷಣೆಯನ್ನು ಹಾಕಿದ್ದು, ಮಿಲಿಟರಿಯಲ್ಲಿ ತಮ್ಮ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನೇಮಕಾತಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ.

* ಹೊಸ ಅಗ್ನಿಪಥ್ ಯೋಜನೆಯ ನೀತಿಯು ಯುವಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಕೇಂದ್ರದ ಸಚಿವರು ಭರವಸೆ ನೀಡುತ್ತಿದ್ದಾರೆ. ಇಂದು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರ ಬಗ್ಗೆ ಕಾಳಜಿ ತೋರುವ ಮೂಲಕ ಸೂಕ್ಷ್ಮ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.

* ಒಂದು ಬಾರಿ ತ್ಯಾಗ ಮಾಡುವಂತಹ ಸರ್ಕಾರದ ನಿರ್ಧಾರವನ್ನು ಸೇನೆಯು ಸ್ವೀಕರಿಸಿದೆ. ಈ ಸಂಬಂಧ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ. ದೇಶದ ಯುವಕರು 'ಅಗ್ನಿವೀರ'ರಾಗಿ ಸೇನೆಗೆ ಸೇರುವ ಅವಕಾಶವನ್ನು ಬಳಸಿಕೊಳ್ಳುವಂತೆ ಸೇನಾ ಮುಖ್ಯಸ್ಥರು ಕರೆ ನೀಡಿದ್ದಾರೆ.

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
Agnipath scheme triggers violent protests in Bihar, Uttar Pradesh, Rajasthan, Haryana and some other states; Mobs burnt trains and block roads. Here are the latest developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X