ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದೆ ಅಂಗೀಕಾರ ಬಳಿಕ ಸಂಸದ, ಸಚಿವರಿಗೆ ಸಂಬಳ ಕಡಿತವೆಷ್ಟು?

|
Google Oneindia Kannada News

ನವದೆಹಲಿ, ಸೆ. 17: ಕೊವಿಡ್19 ಸಾಂಕ್ರಾಮಿಕ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಗತ್ಯ ಪೂರೈಕೆಗಾಗಿ ಸಂಸದರು, ಸಚಿವರ ಸಂಬಳ ಕಡಿತಕ್ಕೆ ಎರಡು ಮಸೂದೆ ಮಂಡನೆಯಾಗಿದ್ದು ಗೊತ್ತಿರಬಹುದು. ಇದರಿಂದಾಗಿ ತಾತ್ಕಾಲಿಕವಾಗಿ ಸಚಿವರು ಹಾಗೂ ಸಂಸದರ ಸಂಬಳ ಪ್ರಮಾಣ ಶೇ 30ರಷ್ಟು ಕಡಿಮೆಯಾಗಲಿದೆ.

ಸಂಸದರ ಸಂಬಳ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2020 ಹಾಗೂ ಸಂಸದರ ಸಂಬಳ, ಪಿಂಚಣಿ ಕಾಯ್ದೆ 1954 ತಿದ್ದುಪಡಿ ಮಾಡಿದ ಮಸೂದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಗೆ ಒಕ್ಕೊರಲ ಬೆಂಬಲ ಸಿಕ್ಕು, ತಾತ್ಕಾಲಿಕ ಸಂಬಳ ಕಡಿತಕ್ಕೆ ಒಪ್ಪಿಗೆ ಸಿಕ್ಕಿತ್ತು.

ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಎಂ ಯಾರು?ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಎಂ ಯಾರು?

ಕಳೆದ ಏಪ್ರಿಲ್ 05ರಂದು ನಡೆದ ಕೇಂದ್ರ ಸಚಿವರ ಸಂಪುಟ ಸಭೆಯಲ್ಲಿ ಸಂಸದರು ಮತ್ತು ಸಚಿವರ ವೇತನ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸಲಾಗಿತ್ತು. ಸಚಿವರ ಭತ್ಯೆ, ಪಿಂಚಣಿಯನ್ನು ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನಿಸಲಾಗಿತ್ತು. ಸಂಸದರ ಪ್ರಾದೇಶಿಕ ಅಭಿವೃದ್ಧಿ ಯೋಜನೆಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲು ಮತ್ತು ಮೊತ್ತವನ್ನು ಸರ್ಕಾರದ ಏಕೀಕೃತ ನಿಧಿಗೆ ವರ್ಗಾಯಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಭತ್ಯೆಗಳ ಕಡಿತಕ್ಕೂ ಅಂಗೀಕಾರ

ಭತ್ಯೆಗಳ ಕಡಿತಕ್ಕೂ ಅಂಗೀಕಾರ

ಸಂವಿಧಾನದ ಪರಿಚ್ಛೇದ 106ರ ಅವಧಿ ಅನ್ವಯ ಜನಪ್ರತಿನಿಧಗಳಿಗೆ ಸಂಬಳ, ಭತ್ಯೆ ನೀಡಲಾಗುತ್ತದೆ. ಮಂಗಳವಾರದಂದು ಮಂಡನೆಯಾದ ಮಸೂದೆಯಂತೆ ವಾರ್ಷಿಕವಾಗಿ ಶೇ 30ರಷ್ಟು ಸಂಬಳ ಕಡಿತಗೊಳ್ಳಲಿದೆ. ಇದರ ಜೊತೆಗೆ ಭತ್ಯೆಗಳು ಕೂಡಾ ಏಪ್ರಿಲ್ 1, 2020ರಿಂದ ಅನ್ವಯವಾಗುವಂತೆ ಕಡಿತವಾಗಲಿದೆ.

ಕಚೇರಿ ನಿರ್ವಹಣಾ ವೆಚ್ಚವೂ ಕಡಿತ

ಕಚೇರಿ ನಿರ್ವಹಣಾ ವೆಚ್ಚವೂ ಕಡಿತ

ಎಲ್ಲಾ ಕಡಿತಗೊಂಡ ಬಳಿಕ ಸಂಸದರೊಬ್ಬರ ಸಂಬಳ 1,00,000ರುನಿಂದ 70,000 ರುಗೆ ಇಳಿಯಲಿದೆ. ಸಂಸದರ ಲೋಕಸಭಾ ಕ್ಷೇತ್ರಕ್ಕೆ ಸಿಗುವ ಅನುದಾನ ಭತ್ಯೆ 70,000 ರು ನಿಂಡ 49,000ರುಗೆ ಇಳಿದಿದೆ. ಕಚೇರಿ ನಿರ್ವಹಣಾ ವೆಚ್ಚವು 60,000 ರುನಿಂದ 54,000 ರು ಗೆ ತಗ್ಗಿದೆ.

ಕೊರೊನಾ ವಿರುದ್ಧದ ಹೋರಾಟ; ರಾಷ್ಟ್ರಪತಿಗಳ ದಿಟ್ಟ ತೀರ್ಮಾನಕೊರೊನಾ ವಿರುದ್ಧದ ಹೋರಾಟ; ರಾಷ್ಟ್ರಪತಿಗಳ ದಿಟ್ಟ ತೀರ್ಮಾನ

ಪ್ರಧಾನ ಮಂತ್ರಿಗಳ ಸಂಬಳ, ಭತ್ಯೆ

ಪ್ರಧಾನ ಮಂತ್ರಿಗಳ ಸಂಬಳ, ಭತ್ಯೆ

ಪ್ರಧಾನ ಮಂತ್ರಿಗಳ ಸಂಬಳ, ಭತ್ಯೆ ಕೂಡಾ ಬದಲಾವಣೆಗೊಳಪಡಲಿದ್ದು, ಮಸೂದೆ ಪ್ರಕಾರ ಪ್ರಧಾನಿಗೆ ಸಿಗುತ್ತಿದ್ದ sumptuary ವಿಶೇಷ ಭತ್ಯೆ 3,000 ರು ನಿಂದ 2,100ರು ಗೆ ಇಳಿಸಲಾಗಿದೆ. ಇದೇ ರೀತಿ ಕ್ಯಾಬಿನೆಟ್ ಸಚಿವರಿಗೆ ಸಿಗುತ್ತಿದ್ದ 2,000ರು ಭತ್ಯೆ ಬದಲಿಗೆ 1,400 ರು ಮಾತ್ರ ಸಿಗಲಿದೆ. ರಾಜ್ಯ ಸಚಿವರಿಗೆ 1,000ರು ಭತ್ಯೆ ಬದಲು 700 ರು ದಕ್ಕಲಿದೆ.

ಭತ್ಯೆಗಳನ್ನು ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶವಿದೆ

ಭತ್ಯೆಗಳನ್ನು ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶವಿದೆ

ಸಂವಿಧಾನದ ಆರ್ಟಿಕಲ್ 164 ರಂತೆ ಮುಖ್ಯಮಂತ್ರಿಗಳ ಸಂಬಳ, ಆರ್ಟಿಕಲ್ 75 ಅನ್ವಯ ಪ್ರಧಾನಿ ಸಂಬಳ ನಿಗದಿಯಾಗುತ್ತದೆ. ಆದರೆ, ಆಯಾ ರಾಜ್ಯಗಳಲ್ಲಿ ಭತ್ಯೆಗಳನ್ನು ಹೆಚ್ಚಲು ಮಾಡಲು ಇರುವ ಕಾನೂನು ತಿದ್ದುಪಡಿಗೆ ಅವಕಾಶವಿದೆ. ಆದರೆ, ಯಾವುದೇ ಜನಪ್ರತಿನಿಧಿಗಳ ಮೂಲ ವೇತನವು ರಾಷ್ಟ್ರಪತಿಗಳ ಸಂಬಳಕ್ಕಿಂತ ಹೆಚ್ಚಿಗೆ ಇರಬಾರದು.

2019ರ ಅಂಕಿ ಅಂಶದಂತೆ ಸಂಬಳ ಪ್ರತಿ ತಿಂಗಳಿಗೆ (ಮೂಲ ವೇತನ ಮಾತ್ರ)
* ರಾಷ್ಟ್ರಪತಿ (ರಾಮನಾಥ್ ಕೋವಿಂದ್): 5,00,000 ರು
* ಪ್ರಧಾನಿ (ನರೇಂದ್ರ ಮೋದಿ): 2,75,000 ರು
* ಸಿಜೆಐ(ಶರದ್ ಅರವಿಂದ್ ಬೊಬ್ಡೆ): 2,80,000ರು
* ರಾಜ್ಯಪಾಲರು: 3,50,000ರು
* ಸಂಸದರು: 1,00,000ರು

ಕರ್ನಾಟಕದ ನೂತನ ಕ್ಯಾಬಿನೆಟ್ ಸಚಿವರ ಸಂಬಳವೆಷ್ಟು? ಭತ್ಯೆ ಎಷ್ಟು?ಕರ್ನಾಟಕದ ನೂತನ ಕ್ಯಾಬಿನೆಟ್ ಸಚಿವರ ಸಂಬಳವೆಷ್ಟು? ಭತ್ಯೆ ಎಷ್ಟು?

Recommended Video

122 ಉಗ್ರರ ಬಂಧನ, ರಾಜ್ಯದಲ್ಲಿ ರಕ್ಕಸರ ಹಾವಳಿ | Oneindia Kannada
ರಾಷ್ಟ್ರಪತಿಗಳ ಶೇ 30ರಷ್ಟು ವಾರ್ಷಿಕ ವೇತನ

ರಾಷ್ಟ್ರಪತಿಗಳ ಶೇ 30ರಷ್ಟು ವಾರ್ಷಿಕ ವೇತನ

ಕೋವಿಡ್ - 19 ವಿರುದ್ಧದ ಹೋರಾಟಕ್ಕೆ ರಾಷ್ಟ್ರಪತಿಗಳು ಮಾರ್ಚ್ ತಿಂಗಳ ವೇತನವನ್ನು ಪ್ರಧಾನ ಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದರು. ಈಗ ಶೇ 30ರಷ್ಟು ವಾರ್ಷಿಕ ವೇತನವನ್ನು ಪಡೆಯದಿರಲು ರಾಷ್ಟ್ರಪತಿ ಕೊವಿಂದ್ ಅವರು ಮಾರ್ಚ್ ತಿಂಗಳಲ್ಲೇ ತೀರ್ಮಾನಿಸಿದ್ದಾರೆ. ಇದು ರಾಷ್ಟ್ರಪತಿ ಭವನದ ಸಿಬ್ಬಂದಿಗೂ ಅನ್ವಯವಾಗುತ್ತಿದೆ.

English summary
In view of austerity measures following the COVID-19 pandemic, Union government pushed two bills to temporarily reduce the salaries of lawmakers and ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X