• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ಬಿಳಿ ಗಡ್ಡ ಮತ್ತು ಝಿರೋ ಟ್ರಿಮ್ಮರ್!

|

ಬೆಂಗಳೂರು, ನವೆಂಬರ್ 13 : ಸುಪ್ರೀಂಕೋರ್ಟ್ ತೀರ್ಪು, ಉಪ ಚುನಾವಣೆ, ಟಿಕೆಟ್ ಹಂಚಿಕೆ ಗಲಾಟೆ...ಇಂತಹ ಸಾಲು ಸಾಲು ರಾಜಕೀಯ ಬೆಳವಣಿಗೆ ನಡುವೆ ಕರ್ನಾಟಕದಲ್ಲಿ ಇಂದು ಹಲವು ಜನರ ಗಮನ ಸೆಳೆದಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಬಿಳಿ ಗಡ್ಡ.

ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕರು ಆಗಿರುವ ಸಿದ್ದರಾಮಯ್ಯ ಬುಧವಾರ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ 'ಕಾವೇರಿ'ಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಅಂತ್ಯದಲ್ಲಿ ತೂರಿ ಬಂದ ಸಹಜ ಪ್ರಶ್ನೆ ಮತ್ತು ಅವರಿತ್ತ ಉತ್ತರ ಹಲವರ ಹುಬ್ಬೇರುವಂತೆ ಮಾಡಿತು.

ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂ ತೀರ್ಪು ದೊಡ್ಡ ಪಾಠ: ಸಿದ್ದರಾಮಯ್ಯ

2014 ರಿಂದ ಈಚೆಗೆ ಅದರಲ್ಲೂ ಕರ್ನಾಟಕದ ಮುಖ್ಯಮಂತ್ರಿಯಾದ ನಂತರ, ಸಿದ್ದರಾಮಯ್ಯ ಎಂದರೆ ತಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕ್ಲೀನ್ ಶೇವ್ ಮಾಡಿದ ಮುಖ, ಬಿಳಿ ಅಥವ ಬಣ್ಣದ ಶರ್ಟ್, ಬಿಳಿ ಪಂಚೆ, ರೇಷ್ಮೆ ಶಲ್ಯ, ಶೂ. ಡ್ರೆಸ್ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯ ಕಾಳಜಿ ಗಮನ ಸೆಳೆಯುವಂತಿರುತ್ತೆ. ಹೀಗಿದ್ದಾಗ, ಸಿದ್ದರಾಮಯ್ಯ ಬಿಳಿ ಗಡ್ಡದೊಡನೆ ಬುಧವಾರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.

ಸಿಎಂ ಸಿದ್ದರಾಮಯ್ಯ ಮತ್ತು 40 ಸಿಗರೇಟಿನ ಕಥೆ

ಮಾಜಿ ಸಚಿವ, ಕನಕಪುರ ಕ್ಷೇತ್ರದ ಶಾಸಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಗಡ್ಡದ ವಿಚಾರಕ್ಕೆ ಸುದ್ದಿಯಾಗಿದ್ದರು. ಇಂದು ಸಿದ್ದರಾಮಯ್ಯ ಗಡ್ಡವನ್ನು ನೋಡಿದ ಪತ್ರಕರ್ತರು ಪ್ರಶ್ನೆಯ ಬಾಣವನ್ನು ಬಿಟ್ಟರು.

ಗಡ್ಡದ ನಂಟು ಬಿಚ್ಚಿಟ್ಟ ಸಿದ್ದರಾಮಯ್ಯ

ಗಡ್ಡದ ನಂಟು ಬಿಚ್ಚಿಟ್ಟ ಸಿದ್ದರಾಮಯ್ಯ

ಸುಪ್ರೀಂ ತೀರ್ಪಿನ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ ನಂತರ ಪ್ರಶ್ನೋತ್ತರದ ಕೊನೆಯಲ್ಲಿ ಅವರ ಹೊಸ ಗಡ್ಡದ ಗೆಟಪ್ ಕುರಿತು ಪ್ರಶ್ನೆಯೊಂದು ತೂರಿ ಬಂತು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ, "1974 ರಿಂದ 2014ರವರೆಗೂ ಗಡ್ಡ ಬಿಡುತ್ತಿದೆ,'' ಎಂದು ಸುಮಾರು 40 ವರ್ಷಗಳ ಗಡ್ಡದ ನಂಟನ್ನು ನೆನಪಿಸಿಕೊಂಡರು.

ಗಡ್ಡಕ್ಕೆ ಮುಕ್ತಿ ಕೊಟ್ಟಿದ್ದು ಹೇಗೆ?

ಗಡ್ಡಕ್ಕೆ ಮುಕ್ತಿ ಕೊಟ್ಟಿದ್ದು ಹೇಗೆ?

ಅಷ್ಟೆ ಅಲ್ಲ, ಮುಖ್ಯಮಂತ್ರಿಯಾದ ನಂತರ ಯಾಕೆ ಮತ್ತು ಹೇಗೆ ಗಡ್ಡಕ್ಕೆ ಮುಕ್ತಿ ಕೊಟ್ಟರು ಎಂಬ ಸ್ವಾರಸ್ಯಕರ ಪ್ರಸಂಗವನ್ನೂ ಸಿದ್ದರಾಮಯ್ಯ ಹೇಳಿದರು. "ಮುಖ್ಯಮಂತ್ರಿಯಾದ ನಂತರ ಬಿಳಿ ಗಡ್ಡ ಬೇಡ ಅಂತ ಝಿರೋ ಟ್ರಿಮ್ಮರ್ ಬಳಸಿ ಶೇವ್ ಮಾಡುತ್ತಿದ್ದೆ. ಈಗ ಮತ್ತೆ ಯಾಕೋ ಗಡ್ಡ ಬಿಡಬೇಕು ಅನ್ನಿಸಿತು, ಬಿಟ್ಟಿದ್ದೀನಿ,'' ಎಂದು ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಹಾಸ್ಯದ ಹೊನಲನ್ನು ಹುಟ್ಟುಹಾಕಿತು.

ಸಿದ್ದರಾಮಯ್ಯ ಗಡ್ಡದ ಗುಟ್ಟು

ಸಿದ್ದರಾಮಯ್ಯ ಗಡ್ಡದ ಗುಟ್ಟು

ಹಾಗೆ ನೋಡಿದರೆ, ಸಿದ್ದರಾಮಯ್ಯ ಹೇಳಿದ ಹಾಗೆ ಅವರ ಅಷ್ಟೂ ಹಳೆಯ ಚಿತ್ರಗಳಲ್ಲಿ ಗಡ್ಡವೇ ಹೈಲೈಟ್. ಅದರಲ್ಲೂ 80-90 ರ ದಶಕದಲ್ಲಿ ಸಿದ್ದರಾಮಯ್ಯ ಕಪ್ಪು ಬಣ್ಣದ ಗಡ್ಡದಲ್ಲಿಯೇ ಕಾಣಿಸಿಕೊಂಡವರು. ಮುಂದಿನ ದಿನಗಳಲ್ಲಿ ಅವರ ಗಡ್ಡ ಬಿಳಿ ಆಯಿತಾದರೂ, ಅದಕ್ಕೆ ಅವರು ಮುಕ್ತಿಯನ್ನೇನೂ ನೀಡಿರಲಿಲ್ಲ. ಸಿಎಂ ಆದ ನಂತರ ಅವರೇ ಹೇಳಿದಂತೆ ಟ್ರಿಮ್ಮಿಂಗ್ ಗಡ್ಡದಲ್ಲಿ ಕ್ಲೀನ್ ಶೇವ್ ಮಾಡಿಕೊಂಡವರಂತೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡರು. ಇದೀಗ ಮತ್ತೆ ಗಡ್ಡಕ್ಕೆ ಮರಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಡಿಕೆಶಿ v/s ಸಿದ್ದರಾಮಯ್ಯ

ಡಿಕೆಶಿ v/s ಸಿದ್ದರಾಮಯ್ಯ

ಈ ನಡುವೆ, ಸಿದ್ದರಾಮಯ್ಯ ಅವರ ಗಡ್ಡ ಗಮನ ಸೆಳೆಯಲು ಇನ್ನೊಂದು ಪ್ರಮುಖ ರಾಜಕೀಯ ಕಾರಣವೂ ಇದೆ. ಜೈಲಿನಿಂದ ಬಿಡುಗಡೆಗೊಂಡ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಇದ್ದಕ್ಕಿದ್ದ ಹಾಗೆ ಗಡ್ಡದ ಜತೆ ಕಾಣಿಸಿಕೊಂಡಿದ್ದಾರೆ. ಹೋದಲ್ಲಿ ಬಂದಲ್ಲಿ ಡಿ. ಕೆ. ಶಿವಕುಮಾರ್ ತಮ್ಮ ಕುರಚಲು ಗಡ್ಡವನ್ನು ನೀವಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಒಳಗೆ ಅವರಿಗೂ ಸಿದ್ದರಾಮಯ್ಯ ಅವರಿಗೂ ಶೀತಲ ಸಮರವೊಂದು ಚಾಲ್ತಿಯಲ್ಲಿದೆ. ಹೀಗಿರುವಾಗ ಸಿದ್ದರಾಮಯ್ಯ ಕೂಡ ತಮ್ಮ ಹಳೆಯ ಗಡ್ಡದ ಗೆಟಪ್‌ಗೆ ಮರಳಿರುವುದು ಸಹಜ ಕುತೂಹಲಕ್ಕೆ ಕಾರಣ.

English summary
Former minister D. K. Shivakumar in news after he come out from Thihar jail for his salt pepper beard look. Now former chief minister Siddramaiah come out with new look with beard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X