ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಸ್ಟ್‌ ಆಸ್ಕಿಂಗ್‌' ಬಹುಭಾಷಾ ನಟ ಪ್ರಕಾಶ್ ರೈ ಆಸ್ತಿ ಎಷ್ಟು?

|
Google Oneindia Kannada News

Recommended Video

Lok Sabha Elections 2019 : ನಟ ಪ್ರಕಾಶ್ ರಾಜ್ (ರೈ) ಒಟ್ಟು ಆಸ್ತಿ ವಿವರ

ಬೆಂಗಳೂರು, ಮಾರ್ಚ್ 22: ಬಹುಭಾಷಾ ನಟ ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರದ ಜೊತೆಗೆ ತಮ್ಮ ಆಸ್ತಿ ವಿವರವನ್ನು ಪ್ರಕಾಶ್ ರೈ ಘೋಷಿಸಿಕೊಂಡಿದ್ದಾರೆ. ಬಹುಭಾಷಾ ನಟರಾಗಿರುವ ಅವರು ಸಂಪಾದಿಸಿರುವ ಆಸ್ತಿ ಎಷ್ಟು ಎಂಬುದನ್ನು ಇಲ್ಲಿ ಪಟ್ಟಿ ಮಾಡಿ ನೀಡಲಾಗಿದೆ.

ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ

ಪ್ರಕಾಶ್ ಸಲ್ಲಿಸಿರುವ ಸ್ವವಿವರದ ಪ್ರಕಾರ ಅವರು ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಮುಗಿಸಿದ್ದಾರೆ. ಬಿ.ಕಾಂ ಅನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಪ್ರಕಾಶ್ ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪೂರ್ವದ ವರೆಗೆ ಕಲಿತಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಪ್ರಕಾಶ್ ರೈ ಅವರು ತಮ್ಮ ಹಾಗೂ ತಮ್ಮ ಮಡದಿಯ ಆಸ್ತಿ ವಿವರ, ಆದಾಯದ ವಿವರವನ್ನು ನಾಮಪತ್ರದ ಜೊತೆಗೆ ಸಲ್ಲಿಸಿದ್ದಾರೆ. ಮಕ್ಕಳು ಮತ್ತು ಪೋಷಕರಿಗೆ ಯಾವುದೇ ಆದಾಯ ಇಲ್ಲವೆಂದು ಘೋಷಿಸಿದ್ದಾರೆ.

ಈ ವರ್ಷದ ಆದಾಯ 2.40 ಕೋಟಿ

ಈ ವರ್ಷದ ಆದಾಯ 2.40 ಕೋಟಿ

ಪ್ರಕಾಶ್ ರೈ ಅವರು 2018-19ನೇ ಸಾಲಿನಲ್ಲಿ ಘೋಷಿಸಿರುವ ಆದಾಯ 2.40 ಕೋಟಿ ರೂಪಾಯಿಗಳು. ಅವರ ಮಡದಿ ರಶ್ಮಿ ವರ್ಮಾ ಘೋಷಿಸಿರುವ ಆದಾಯ 6,05,780 ರೂಪಾಯಿಗಳು. ಪ್ರಕಾಶ್ ರೈ ಅವರ ಬಳಿ 25,000 ಸಾವಿರ ನಗದು ಇದೆ. 3.19 ಲಕ್ಷ ಹಣ ಬ್ಯಾಂಕಿನಲ್ಲಿದೆ. ಪ್ರಸ್ತುತ ಸಿನಿಮಾ ಒಂದರ ಮೇಲೆ 1.68 ಕೋಟಿ ಬಂಡವಾಳ ಹೂಡಿದ್ದಾರೆ.ಪ್ರಕಾಶ್ ರೈ ಪತ್ನಿಯನ್ನು ಪೋನಿ ವರ್ಮ ಎಂದು ಕರೆಯಲಾಗುತ್ತದೆ, ಆದರೆ ಪ್ರಕಾಶ್ ರೈ ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಯಲ್ಲಿ ಪತ್ನಿಯ ಹೆಸರು ರಶ್ಮಿ ವರ್ಮಾ ಎಂತಲೇ ಇದೆ.

1.16 ಕೋಟಿ ಸಾಲ ನೀಡಿದ್ದಾರೆ

1.16 ಕೋಟಿ ಸಾಲ ನೀಡಿದ್ದಾರೆ

ಸಂಡ್ರಿ ಡೆಬ್ಟರ್ಸ್‌ಗೆ ಪ್ರಕಾಶ್ ರೈ ಅವರು 1.16 ಕೋಟಿ ಸಾಲ ನೀಡಿದ್ದಾರೆ. 6.30 ಲಕ್ಷ ಲೀಸ್‌ ಒಪ್ಪಂದಕ್ಕಾಗಿ ನೀಡಿದ್ದಾರೆ. ಪ್ರತಿ ತಿಂಗಳು ಪ್ರಕಾಶ್ ರೈಗೆ ಪ್ರತಿ ತಿಂಗಳು 25,000 ಬಾಡಿಗೆ ಸಹ ಬರುತ್ತಿದೆ. ಮಡದಿಗೆ ಪ್ರತಿ ತಿಂಗಳು 19,000 ಬಾಡಿಗೆ ಬರುತ್ತದೆ.

ಪ್ರಕಾಶ್ ರಾಜ್ ಜತೆಗೆ ಒನ್ ಇಂಡಿಯಾ ಕನ್ನಡ ಎಕ್ಸ್ ಕ್ಲೂಸಿವ್ ಸಂದರ್ಶನ ಪ್ರಕಾಶ್ ರಾಜ್ ಜತೆಗೆ ಒನ್ ಇಂಡಿಯಾ ಕನ್ನಡ ಎಕ್ಸ್ ಕ್ಲೂಸಿವ್ ಸಂದರ್ಶನ

ಹಲವು ಕಾರಿವೆ ಪ್ರಕಾಶ್ ರೈ ಬಳಿ

ಹಲವು ಕಾರಿವೆ ಪ್ರಕಾಶ್ ರೈ ಬಳಿ

ಪ್ರಕಾಶ್ ರೈ ಅವರ ಬಳಿ ಐದು ಐಶಾರಾಮಿ ಕಾರುಗಳಿವೆ. ಒಂದು ಬೊಲೆರೊ ಹಾಗೂ ಒಂದು ವೆಸ್ಪಾ ಸ್ಟೂಟರ್ ಇವೆ. 17.31 ಲಕ್ಷ ಬೆಲೆಯ ಇನ್ನೊವಾ , 45 ಲಕ್ಷ ಬೆಲೆಯ ಬಿಎಂಡಬ್ಲು, 15.77 ಲಕ್ಷ ಬೆಲೆಯ ಇಸುಜು, 40.65 ಲಕ್ಷ ಬೆಲೆಯ ಆಡಿ, 63.37 ಲಕ್ಷ ಬೆಲೆಯ ಬೆಂಜ್ ಇದೆ. ಜೊತೆಗೆ 5.46 ಲಕ್ಷದ ಬೊಲೆರೊ, 70 ಸಾವಿರಗಳ ಒಂದು ವೆಸ್ಪಾ ಸ್ಕೂಟರ್ ಇದೆ. ಮಡದಿ ರಶ್ಮಿ ವರ್ಮಾ ಬಳಿ ಯಾವುದೇ ವಾಹನಗಳಿಲ್ಲ.

ಪ್ರಕಾಶ್ ರೈ ಬಳಿ ಚಿನ್ನವಿಲ್ಲ

ಪ್ರಕಾಶ್ ರೈ ಬಳಿ ಚಿನ್ನವಿಲ್ಲ

ಪ್ರಕಾಶ್ ರೈ ಅವರ ಬಳಿ ಚಿನ್ನ ಇಲ್ಲ, ಪತ್ನಿ ಬಳಿ 18 ಲಕ್ಷ ಬೆಲೆಯ ಆಭರಣ ಇದೆ, ತಾಯಿ ಬಳಿ 6 ಲಕ್ಷ ಮೌಲ್ಯದ ಚಿನ್ನ ಇದೆ. ಏರ್ ಕಂಡಿಷನರ್, ಫ್ರಿಡ್ಜ್, ಪ್ರೊಜೆಕ್ಟರ್ ಈ ರೀತಿಯ ಚರಾಸ್ಥಿ 7 ಲಕ್ಷ ಮೌಲ್ಯದ್ದಿದೆ. ಪ್ರಕಾಶ್ ರೈ ಅವರ ಬಳಿ ಕೃಷಿ ಹಾಗೂ ಕೃಷಿಯೇತರ ಜಮೀನು ಇದೆ. ಅದರ ಜೊತೆಗೆ ಎರಡು ಫಾರ್ಮ್ ಹೌಸ್‌ಗಳಿದೆ. ಜೊತೆಗೆ ಮೂರು ರೆಸಿಡೆನ್ಶಿಯಲ್ ಬಿಲ್ಡಿಂಗ್‌ಗಳಿವೆ. ಇವೆಲ್ಲವುಗಳ ಒಟ್ಟು ಮೌಲ್ಯ 26.59 ಕೋಟಿ ಆಗುತ್ತದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯ

ಪ್ರಕಾಶ್ ಅವರ ಒಟ್ಟು ಆಸ್ತಿಯ ಮೌಲ್ಯವೆಷ್ಟು?

ಪ್ರಕಾಶ್ ಅವರ ಒಟ್ಟು ಆಸ್ತಿಯ ಮೌಲ್ಯವೆಷ್ಟು?

ಪ್ರಕಾಶ್ ರೈ ಅವರ ಮೇಲೆ ಕಾರು ಸಾಲ, ಖಾಸಗಿ ಸಾಲಗಳು ಇವೆ. ಎಲ್ಲ ಒಟ್ಟು ಸೇರಿ 3.83 ಕೋಟಿ ರೂಪಾಯಿ ಸಾಲ ಇದೆ. ಇದರ ಜೊತೆಗೆ 4.25 ಕೋಟಿ ಸಾಲದ ಹಣ ತಕರಾರಿನಲ್ಲಿದೆ. ಪ್ರಕಾಶ್ ರೈ ಅವರ ಸ್ಥಿರ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 30,09,756,797 ರೂಪಾಯಿ ಆಗುತ್ತದೆ. ಇದರ ಜೊತೆಗೆ 3.85 ಕೋಟಿ ಸಾಲ ಸಹ ಇದೆ.

English summary
Actor Prakash Raj today submitted his nomination as independent candidate for Bengaluru central constituency. Here is the detail of his assets and liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X