ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಬಳಕೆಯಲ್ಲಿ ನಗರ ಮೀರಿಸಿದ ಗ್ರಾಮೀಣ ಪ್ರದೇಶ!

|
Google Oneindia Kannada News

ಇಂಟರ್ನೆಟ್ ಈಗ ಉಳ್ಳವರ ಸ್ವತ್ತಾಗಿ ಉಳಿದಿಲ್ಲ. ಎಲ್ಲೆಡೆಯೂ ವ್ಯಾಪಿಸಿದೆ. ಬಡಬಗ್ಗರು, ರೈತರು ಹೀಗೆ ಬಹಳ ಮಂದಿ ಇಂದು ಸ್ಮಾರ್ಟ್‌ಫೋನ್ ಮೂಲಕ ಇಂಟರ್ನೆಟ್ ಬಳಕೆ ಮಾಡುತ್ತಾರೆ. ನೀಲ್ಸನ್ (Nielsen India) ಎಂಬ ಸರ್ವೆ ಸಂಸ್ಥೆಯ ಸಮೀಕ್ಷೆಯಲ್ಲೂ ಇದು ದೃಢಪಟ್ಟಿದೆ. ಈ ಸಮೀಕ್ಷೆ ಪ್ರಕಾರ ನಗರ ಪ್ರದೇಶದವರಿಗಿಂತ ಗ್ರಾಮೀಣ ಭಾಗದ ಜನರೇ ಇಂಟರ್ನೆಟ್ ಬಳಕೆಯಲ್ಲಿ ಮುಂದಿದ್ದಾರೆ, ಶೇ. 20ರಷ್ಟು ಹೆಚ್ಚು ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ.

 ಸುಲಭವಾಗಿ ಆಧಾರ್‌ ಲಾಕ್‌-ಅನ್ಲಾಕ್‌ ಮಾಡಿ, ವರ್ಚುವಲ್‌ ಐಡಿ ರಚಿಸಿ: ಇಲ್ಲಿದೆ ವಿಧಾನ ಸುಲಭವಾಗಿ ಆಧಾರ್‌ ಲಾಕ್‌-ಅನ್ಲಾಕ್‌ ಮಾಡಿ, ವರ್ಚುವಲ್‌ ಐಡಿ ರಚಿಸಿ: ಇಲ್ಲಿದೆ ವಿಧಾನ

2019ರ ಬಳಿಕ ಭಾರತದ ಗ್ರಾಮೀಣ ಭಾಗದಲ್ಲಿ ಸಕ್ರಿಯ ಇಂಟರ್ನೆಟ್ ಬಕೆದಾರರ ಸಂಖ್ಯೆಯಲ್ಲಿ ಶೇ. 45ರಷ್ಟು ಹೆಚ್ಚಳವಾಗಿದೆ ಎಂದು ನೀಲ್ಸನ್ ಸಂಸ್ಥೆಯ ಸಮೀಕ್ಷೆ ಹೇಳಿದೆ. ಇದೇ ಅವಧಿಯಲ್ಲಿ ನಗರ ಭಾಗದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದ್ದು ಶೇ. 28 ಮಾತ್ರ ಎನ್ನಲಾಗಿದೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿ ಒಟ್ಟು ಇಂಟರ್ನೆಟ್ ಯೂಸರ್ಸ್ ಸಂಖ್ಯೆ 35.2 ಕೋಟಿ ಇದೆ. ಇದು ನಗರ ಭಾಗದವರಿಗಿಂತ ಶೇ. 20 ಹೆಚ್ಚು.

Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?

 ಅಗ್ಗದ ಸ್ಮಾರ್ಟ್‌ಫೋನ್ ಎಫೆಕ್ಟ್:

ಅಗ್ಗದ ಸ್ಮಾರ್ಟ್‌ಫೋನ್ ಎಫೆಕ್ಟ್:

ಭಾರತದಲ್ಲಿ 2019ರಿಂದೀಚೆ ಇಂಟರ್ನೆಟ್ ಬಳಕೆ ಹೆಚ್ಚು ವ್ಯಾಪಿಸಲು ಬೇರೆ ಬೇರೆ ಕಾರಣಗಳಿವೆ. ಅದರಲ್ಲಿ ಪ್ರಮುಖವಾದದು ಎಂದರೆ ಕಡಿಮೆ ಬೆಲೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳು ಹಾಗು ಅಗ್ಗದ ದರದಲ್ಲಿ ಸಿಕ್ಕ ಮೊಬೈಲ್ ಡಾಟಾ. ಜೊತೆಗೆ, ಕೇಂದ್ರ ಸರಕಾರ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಲಪಡಿಸಲು ಕೈಗೊಂಡ ಕ್ರಮಗಳೂ ಇಂಟರ್ನೆಟ್ ವ್ಯಾಪ್ತಿ ಹೆಚ್ಚಾಗಲು ಕಾರಣ ಎಂದು ನೀಲ್ಸನ್ ಇಂಡಿಯಾ ಸಂಸ್ಥೆಯ ಎಂಡಿ ಡಾಲಿ ಝಾ ಹೇಳುತ್ತಾರೆ.

ಗ್ರಾಮಗಳು ಹಾಗೂ ಸಣ್ಣ ಪಟ್ಟಣಗಳಲ್ಲಿ ಇಷ್ಟು ವೇಗವಾಗಿ ಇಂಟರ್ನೆಟ್ ಬೆಳೆಯಲು ಮತ್ತೊಂದು ಪ್ರಮುಖ ಕಾರಣ ಮಹಿಳಾ ಗುಂಪು. ಮಹಿಳೆಯರು ಬಹಳ ಬೇಗ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ಧಾರೆ. ಮೊಬೈಲ್ ಬಳಕೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಇಂಟರ್ನೆಟ್ ವ್ಯಾಪ್ತಿ ಹೆಚ್ಚಲು ಸಹಕಾರಿ ಅಗಿರುವುದನ್ನು ನೀಲ್ಸನ್ ಸಮೀಕ್ಷೆ ಸೂಚಿಸುತ್ತಿದೆ. ಆದರೂ ಇಂಟರ್ನೆಟ್ ಬಳಸುವವರಲ್ಲಿ ಪುರುಷರು ಶೇ. 60, ಮಹಿಳೆಯರು ಶೇ. 40 ಎನ್ನಲಾಗಿದೆ.

 ದೇಶದಲ್ಲಿ ಎಷ್ಟಿದ್ದಾರೆ ಇಂಟರ್ನೆಟ್ ಯೂಸರ್ಸ್?:

ದೇಶದಲ್ಲಿ ಎಷ್ಟಿದ್ದಾರೆ ಇಂಟರ್ನೆಟ್ ಯೂಸರ್ಸ್?:

ಈ ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಅಂಶಗಳಿವೆ. 2021, ಡಿಸೆಂಬರ್‌ವರೆಗಿನ ಅಂಶಗಳ ಪ್ರಕಾರ ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆ 64.6 ಕೋಟಿ ಇದೆ. 12 ವರ್ಷಕ್ಕಿಂತ ಹೆಚ್ಚು ವಯೋಮಾನದ ಸಕ್ರಿಯ ಇಂಟರ್ನೆಟ್ ಬಳಕೆದಾರರು 59.2 ಕೋಟಿ ಇದ್ದಾರೆ. 2019ರಲ್ಲಿ ಇದ್ದದ್ದಕ್ಕಿಂತ ಶೇ. 37 ರಷ್ಟು ಹೆಚ್ಚು ಮಂದಿ 2019ರಲ್ಲಿ ಇದ್ದಾರೆ ಎಂಬುದನ್ನ ಸಮೀಕ್ಷೆ ಹೇಳುತ್ತದೆ.

 ಇಂಟರ್ನೆಟ್ ಬಳಸದವರ ಸಂಖ್ಯೆ ಬಹಳ ಇದೆ:

ಇಂಟರ್ನೆಟ್ ಬಳಸದವರ ಸಂಖ್ಯೆ ಬಹಳ ಇದೆ:

ನಗರ ಭಾಗದಲ್ಲಿ ಇಂಟರ್ನೆಟ್ ವ್ಯಾಪ್ತಿ ಶೇ. 59 ಇದೆ. ಗ್ರಾಮೀಣ ಭಾಗದಲ್ಲಿ ಸುಮಾರು ಶೇ. 40ರಷ್ಟು ಜನರು ಇಂಟರ್ನೆಟ್ ಬಳಸುತ್ತಾರೆ. ಅಂದರೆ ಗ್ರಾಮಗಳಲ್ಲಿ ಇಂಟರ್ನೆಟ್ ಬೆಳೆಯುವ ಅವಕಾಶ ಇನ್ನೂ ಬಹಳ ಇದೆ. ನಗರ ಪ್ರದೇಶದಲ್ಲೂ ಇಂಟರ್ನೆಟ್ ಬಳಸದವರ ಸಂಖ್ಯೆ ಶೇ. 40ರಷ್ಟಿದೆ.

 ಶಾಪಿಂಗ್‌ನಲ್ಲಿ ನಗರದವರೇ ಮುಂದು:

ಶಾಪಿಂಗ್‌ನಲ್ಲಿ ನಗರದವರೇ ಮುಂದು:

ಇಂಟರ್ನೆಟ್ ಬಳಕೆಯಲ್ಲಿ ನಗರದವರಿಗಿಂತ ಗ್ರಾಮೀಣ ಭಾಗದವರೇ ಹೆಚ್ಚು ಇದ್ದಾರೆ ಎಂಬುದು ಹೌದಾದರೂ, ಆನ್‌ಲೈನ್ ಶಾಪಿಂಗ್ ವಿಚಾರಕ್ಕೆ ಬಂದರೆ ನಿರೀಕ್ಷೆಯಂತೆ ನಗರವಾಸಿಗಳೇ ಬಹಳ ಮುಂದಿದ್ದಾರೆ. ಒಟ್ಟು ಇಂಟರ್ನೆಟ್ ಶಾಪಿಂಗ್‌ನಲ್ಲಿ ಶೇ. 47 ಪಾಲು ನಗರ ಪ್ರದೇಶದವರದ್ದಾಗಿದೆ. ಬ್ಯಾಂಕಿಂಗ್ ಸೇವೆ, ಡಿಜಿಟಲ್ ಪಾವತಿಯಲ್ಲೂ ನಗರದವರೇ ಹೆಚ್ಚು. ಅದರಲ್ಲೂ ಸಕ್ರಿಯ ಬಳಕೆದಾರರಲ್ಲಿ 20-39 ವರ್ಷ ವಯೋಮಾನದವರೇ ಹೆಚ್ಚು.

ಇಂಟರ್ನೆಟ್ ಬಳಕೆ ಎಂದರೆ ಹೆಚ್ಚಾಗಿ ಜನರು ನೋಡುವುದು ಸೋಷಿಯಲ್ ಮೀಡಿಯಾ ಮತ್ತು ಚಾಟಿಂಗ್. ಇದರ ಜೊತೆಗೆ ವಿಡಿಯೋ ವೀಕ್ಷಣೆ, ಮ್ಯೂಸಿಕ್ ಆಲಿಸುವುದು ಇವುಗಳನ್ನೂ ಜನರು ಹೆಚ್ಚು ಬಳಸುತ್ತಾರೆ. ನೀಲ್ಸನ್ ಸಮೀಕ್ಷೆಯ ಅಂದಾಜಿನ ಪ್ರಕಾರ ದೇಶದಲ್ಲಿ 44 ಕೋಟಿ ಜನರು ಆನ್‌ಲೈನ್‌ನಲ್ಲಿ ವಿಡಿಯೋಗಳನ್ನ ವೀಕ್ಷಿಸುತ್ತಾರೆ. ಇವರಲ್ಲಿ ಗ್ರಾಮೀಣ ಭಾಗದವರ ಸಂಖ್ಯೆ ಶೇ. 54 ಇದೆ.

(ಒನ್ಇಂಡಿಯಾ ಸುದ್ದಿ)

English summary
A study by consumer insights firm Nielsen revealed a 45% growth in active internet users in rural India since 2019, outshining urban users’ growth at 28% in the same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X