ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ: ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 27: ಮೋದಿ ಸರ್ಕಾರ್ 2.0 ಅಧಿಕಾರ ವಹಿಸಿಕೊಂಡ ಬಳಿಕ ಹಲವು ದಿಟ್ಟ, ವಿವಾದಿತ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಬಗ್ಗೆ ದೇಶದ ಜನತೆಯ ಅಭಿಪ್ರಾಯ ಹೇಗಿದೆ ಎಂಬುದನ್ನು ಎಬಿಪಿ ನ್ಯೂಸ್ ಹಾಗೂ ಸಿವೋಟರ್ಸ್ ಸಂಗ್ರಹಿಸಿ ಮುಂದಿಟ್ಟಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಸಾಕಷ್ಟು ಪ್ರತಿಭಟನೆ, ಗೊಂದಲಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಗ್ಗಿಲ್ಲ ಎಂದು ಸಮೀಕ್ಷೆ ಹೇಳಿದೆ.

ಇಂದಿಗೂ ಮೋದಿಯೇ ಅತ್ಯುತ್ತಮ ಪ್ರಧಾನಿ: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಇಂದಿಗೂ ಮೋದಿಯೇ ಅತ್ಯುತ್ತಮ ಪ್ರಧಾನಿ: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ

ಇತ್ತೀಚೆಗೆ ಇಂಡಿಯಾ ಟುಡೆ ಸಮೂಹ ಮತ್ತು ಕಾರ್ವಿ ಇನ್‌ಸೈಟ್ಸ್ ಲಿಮಿಟೆಡ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ (ಎಂಓಟಿಎನ್)ಯಲ್ಲೂ ನರೇಂದ್ರ ಮೋದಿ ಭಾರತದ ಅತ್ಯುತ್ತಮ ಪ್ರಧಾನಿ ಎಂದು ಕನಿಷ್ಠ ಶೇ 34ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ಎಬಿಪಿ ಸಿ ವೋಟರ್ ದೇಶ್ ಕಾ ಮೂಡ್ ಸಮೀಕ್ಷೆ ಪ್ರಕಾರ, ಈಗೇನಾದರೂ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್ಡಿಎ 330 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ. 2019ಕ್ಕೆ ಹೋಲಿಸಿದರೆ 23 ಸ್ಥಾನಗಳು ಕಡಿಮೆ ಬೀಳಲಿದೆ. ಇದೇ ವೇಳೆ ಯುಪಿಎ 130 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಮೋದಿ ಜನಪ್ರಿಯತೆ

ಮೋದಿ ಜನಪ್ರಿಯತೆ

ಮೋದಿ ಜನಪ್ರಿಯತೆ: ಶೇ 70ಕ್ಕೂ ಅಧಿಕ ಮಂದಿ ಪ್ರಧಾನಿಯಾಗಲು ನರೇಂದ್ರ ಮೋದಿಯೇ ಸೂಕ್ತ ಎಂದಿದ್ದಾರೆ. ಈ ಮೂಲಕ ಮೋದಿ ನಮ್ಮ ಪ್ರಥಮ ಆಯ್ಕೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಸಂವಿಧಾನ ಆರ್ಟಿಕಲ್ 370 ರದ್ದು, ಸಿಎಎ, ಎನ್ ಆರ್ ಸಿ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಮೋದಿ ಬೆನ್ನಿಗೆ ಜನತೆ ನಿಂತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂದು 24% ಮಂದಿ ಬಯಸಿದ್ದಾರೆ.

ಇಂದು ಚುನಾವಣೆ ನಡೆದರೆ?

ಇಂದು ಚುನಾವಣೆ ನಡೆದರೆ?

ಇಂದು ಚುನಾವಣೆ ನಡೆದರೆ?: ಮೋದಿ ನೇತೃತ್ವದ ಎನ್ಡಿಎಗೆ 330 ಸ್ಥಾನಗಳು ಲಭಿಸಲಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ 23 ಸ್ಥಾನಗಳು ಕಡಿಮೆಯಾಗಲಿದೆ. ಯುಪಿಎ 130 ಸ್ಥಾನ ಗಳಿಸಲಿದ್ದು, 8 ತಿಂಗಳ ಹಿಂದೆ ಗೆದ್ದಿದ್ದಕ್ಕಿಂತ 34ಸ್ಥಾನಗಳು ಹೆಚ್ಚು ಸಿಗಲಿದೆ. ಉಳಿದ ಪಕ್ಷಗಳಿಗೆ 83 ಸ್ಥಾನ ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಶೇಕಡಾವಾರು ಮತ ಗಳಿಕೆ

ಶೇಕಡಾವಾರು ಮತ ಗಳಿಕೆ

ಶೇಕಡಾವಾರು ಮತ ಗಳಿಕೆ ಪ್ರಮಾಣದಲ್ಲಿ ಎನ್ಡಿಎ ಶೇ 44ರಷ್ಟು ಮತ ಗಳಿಸಬಹುದು, 2019ರಲ್ಲಿ ಗಳಿಸಿದಷ್ಟೇ ಪ್ರಮಾಣ ಈಗಲೂ ಲಭ್ಯವಾಗಲಿದೆ. ಯುಪಿಎಗೆ ಶೇ 25ರಷ್ಟು ಮತ ಸಿಗಬಹುದು, ಮಿಕ್ಕ ಪಕ್ಷಗಳಿಗೆ ಶೇ 31ರಷ್ಟು ಮತಗಳು ಲಭಿಸಲಿವೆ ಎಂದು ಎಬಿಪಿ ನ್ಯೂಸ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಶೇ 67 ಗ್ರಾಮೀಣ ಮತ್ತು ಶೇ 33ರಷ್ಟು ನಗರ ಪ್ರದೇಶಗಳಲ್ಲಿ ನಡೆದಿದ್ದು, ಬಹುತೇಕ ಸಮಾನ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು.

ದೇಶದ ಪ್ರಮುಖ ಚರ್ಚಿತ ವಿಷಯಗಳು

ದೇಶದ ಪ್ರಮುಖ ಚರ್ಚಿತ ವಿಷಯಗಳು

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು, ನಿರುದ್ಯೋಗದ ಸಮಸ್ಯೆ, ರೈತರ ಸಂಕಷ್ಟಗಳು, ಆರ್ಥಿಕ ಕುಸಿತ ಮುಂತಾದವುಗಳ ವಿರುದ್ಧ ಜನರು ಯಾವ ರೀತಿ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಸಮೀಕ್ಷೆ ಮುಂದಿಟ್ಟಿದೆ. ಇಂಡಿಯಾ ಟುಡೆ ಸಮೂಹ ಮತ್ತು ಕಾರ್ವಿ ಇನ್‌ಸೈಟ್ಸ್ ಲಿಮಿಟೆಡ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ಯಲ್ಲೂ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

English summary
As per ABP News-CVoter 'Desh Ka Mood' survey Modi as PM with 70% respondents feeling satisfied under his premiership and want him to continue as prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X