ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ

|
Google Oneindia Kannada News

ಮುಂಬೈ, ಅಕ್ಟೋಬರ್ 09: ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಇಳಿಯುವ ಎಲ್ಲಾ ವೈಷಮ್ಯ ಮರೆತು ಮತ್ತೊಮ್ಮೆ ಮೈತ್ರಿ ಸಾಧಿಸಿರುವ ಬಿಜೆಪಿ ಹಾಗೂ ಶಿವಸೇನಾಕ್ಕೆ ಚುನಾವಣಾ ಪೂರ್ವ ಸಮೀಕ್ಷೆಯಿಂದ ಶುಭ ಸುದ್ದಿ ಸಿಕ್ಕಿದೆ. ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.

ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ತಿಳಿದು ಬಂದಿದೆ.

ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 3239 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ವಿರುದ್ಧ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸಲ್ಲಿಸಿದ ಅಫಿಡವಿಟ್: ಕುತೂಹಲಕಾರಿ ಅಂಶಗಳುಮಹಾರಾಷ್ಟ್ರ ಸಿಎಂ ಫಡ್ನವೀಸ್ ಸಲ್ಲಿಸಿದ ಅಫಿಡವಿಟ್: ಕುತೂಹಲಕಾರಿ ಅಂಶಗಳು

ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿವೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 145 ಮ್ಯಾಜಿಕ್ ನಂಬರ್ ದಾಟುವ ಪಕ್ಷ ಅಧಿಕಾರ ಸ್ಥಾಪಿಸುವ ಅರ್ಹತೆ ಹೊಂದಲಿದೆ.

ಎನ್ಡಿಎ ಮೈತ್ರಿಕೂಟಕ್ಕೆ 200 ಪ್ಲಸ್ ಸ್ಥಾನ

ಎನ್ಡಿಎ ಮೈತ್ರಿಕೂಟಕ್ಕೆ 200 ಪ್ಲಸ್ ಸ್ಥಾನ

288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 200 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಸಿ ವೋಟರ್ಸ್ ಸಮೀಕ್ಷೆ ಹೇಳಿದೆ. 2014ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಈ ಪಕ್ಷಗಳು ಈಗ ಮತ್ತೆ ಒಂದಾಗಿವೆ. ಬಿಜೆಪಿ 260 ಕ್ಷೇತ್ರ ಹಾಗೂ ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಮ್ಯಾಜಿಕ್ ನಂಬರ್ 145 ದಾಟಲು ಆಗಿರಲಿಲ್ಲ.

2019ರಲ್ಲಿ ಗೆಲುವಿಗೆ ಮೈತ್ರಿ ಸಾಧಿಸಿದ್ದು ಕಾರಣ

2019ರಲ್ಲಿ ಗೆಲುವಿಗೆ ಮೈತ್ರಿ ಸಾಧಿಸಿದ್ದು ಕಾರಣ

ಎಬಿಪಿ ನ್ಯೂಸ್ ಸಿ ವೋಟರ್ ಪ್ರಕಾರ ಬಿಜೆಪಿ-ಶಿವಸೇನಾ ಮೈತ್ರಿ ಸಾಧಿಸಿದ್ದು ಈ ಬಾರಿ ಯಶ ತಂದುಕೊಡಲಿದೆ. 205 ಸ್ಥಾನ ಬಹುತೇಕ ಗೆಲ್ಲಲಿದೆ ಎಂದು ಹೇಳಿದೆ. ಈ ಬಾರಿ ಕೂಡಾ ಮೈತ್ರಿ ಸಾಧಿಸುವುದು ಕಷ್ಟ ಸುಲಭವಾಗಿರಲಿಲ್ಲ. ಸೆಪ್ಟೆಂಬರ್ 30ಕ್ಕೆ ಕೊನೆಗೂ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿತು. ಅದಲ್ಲದೆ, ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಎದ್ದಿದ್ದ ಬಂಡಾಯವನ್ನು ಶಮನವಾಗಿದ್ದರಿಂದ ಅಧಿಕೃತ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದವರು ನಾಮಪತ್ರ ಹಿಂಪಡೆದುಕೊಂಡಿದ್ದು ಫಲ ನೀಡಲಿದೆ.

ಎಬಿಪಿ ನ್ಯೂಸ್ -ಸಿ ವೋಟರ್ಸ್ ಶೇಕಡಾವಾರು ಮತ ಗಳಿಕೆ

ಎಬಿಪಿ ನ್ಯೂಸ್ -ಸಿ ವೋಟರ್ಸ್ ಶೇಕಡಾವಾರು ಮತ ಗಳಿಕೆ

ಎಬಿಪಿ ನ್ಯೂಸ್ -ಸಿ ವೋಟರ್ಸ್ ಪ್ರಕಾರ ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿ- ಶಿವಸೇನಾದಲ್ಲಿ 46% ಮತಗಳಿಸಬಹುದು. ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟಕ್ಕೆ 30% ಸಿಗುವ ಸಾಧ್ಯತೆಯಿದೆ. 2014ರಲ್ಲಿ ಬಿಜೆಪಿಗೆ 28.1%, ಶಿವಸೇನಾಕ್ಕೆ 19.5% ಮತ ಗಳಿಸಿತ್ತು. 42 ಸೀಟು ಗೆದ್ದಿದ್ದ ಕಾಂಗ್ರೆಸ್ 18.1% ಮತಗಳಿಸಿತ್ತು, ಎನ್ಸಿಪಿ 41 ಸ್ಥಾನ ಗೆದ್ದು 17.4% ಮತ ಗಳಿಸಿತ್ತು.

ಲೋಕಸಭೆ ಚುನಾವಣೆ ಫಲಿತಾಂಶ ಪರಿಣಾಮ ಬೀರುವುದೇ?

ಲೋಕಸಭೆ ಚುನಾವಣೆ ಫಲಿತಾಂಶ ಪರಿಣಾಮ ಬೀರುವುದೇ?

ಕಳೆದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ-ಶಿವಸೇನಾ 49 ಸ್ಥಾನಗಳ ಪೈಕಿ 41 ಸ್ಥಾನ ಗಳಿಸಿತ್ತು. ಬಿಜೆಪಿಯಿಂದ ಮತ್ತೊಮ್ಮೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅಧಿಕಾರ ಹಂಚಿಕೆ ಹಾಗೂ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಚರ್ಚೆಯಾಗಿದ್ದು ಕೂಡಾ ಪರಿಣಾಮಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

English summary
The ABP News-C voter opinion poll has predicted a clear win for the BJP-Shiv Sena led alliance in the upcoming Maharashra Assembly elections 2019 for which the voting would be held on October 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X