ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಗೆ ಜಯ

|
Google Oneindia Kannada News

ಮಹಾರಾಷ್ಟ್ರದಲ್ಲಿ ಮೈತ್ರಿ ಸಾಧಿಸಿರುವ ಬಿಜೆಪಿ ಹಾಗೂ ಶಿವಸೇನಾಕ್ಕೆ ಚುನಾವಣಾ ಪೂರ್ವ ಸಮೀಕ್ಷೆಯಿಂದ ಮತ್ತೊಮ್ಮೆ ಶುಭ ಸುದ್ದಿ ಸಿಕ್ಕಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ್ದ ಸಮೀಕ್ಷೆಯಿಂದ ಉತ್ತಮ ಫಲಿತಾಂಶ ಇಂದು ಪ್ರಕಟವಾದ ಫಲಿತಾಂಶದಲ್ಲಿ ಸಿಕ್ಕಿದೆ.

ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?

ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ. ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 3239 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ವಿರುದ್ಧ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಕುಟುಂಬ ರಾಜಕೀಯದ ಬೇರುಗಳುಮಹಾರಾಷ್ಟ್ರ ಚುನಾವಣೆಯಲ್ಲಿ ಕುಟುಂಬ ರಾಜಕೀಯದ ಬೇರುಗಳು

ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿವೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 145 ಮ್ಯಾಜಿಕ್ ನಂಬರ್ ದಾಟುವ ಪಕ್ಷ ಅಧಿಕಾರ ಸ್ಥಾಪಿಸುವ ಅರ್ಹತೆ ಹೊಂದಲಿದೆ.

ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಜನಪ್ರಿಯ ಆಯ್ಕೆ

ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಜನಪ್ರಿಯ ಆಯ್ಕೆ

ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಅವರು ಸಿಎಂ ಸ್ಥಾನದ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಶೇ 37ರಷ್ಟು ಮಂದಿ ಫಡ್ನವೀಸ್ ಉತ್ತಮ ಆಯ್ಕೆ ಎಂದಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಶೇ 5 ರಷ್ಟು ಮಾತ್ರ ಮತ ಸಿಕ್ಕಿದೆ.

ಬಿಜೆಪಿಯಿಂದ ಮತ್ತೊಮ್ಮೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅಧಿಕಾರ ಹಂಚಿಕೆ ಹಾಗೂ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಚರ್ಚೆಯಾಗಿದ್ದು ಕೂಡಾ ಪರಿಣಾಮಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಶೇಕಡಾವಾರು ಮತಗಳಿಕೆ

ಶೇಕಡಾವಾರು ಮತಗಳಿಕೆ

ಎಬಿಪಿ ನ್ಯೂಸ್ -ಸಿ ವೋಟರ್ ಸಮೀಕ್ಷೆಯಂತೆ, ಬಿಜೆಪಿಗೆ ಶೇ47ರಷ್ಟು ಮತಗಳು, ಕಾಂಗ್ರೆಸ್ಸಿಗೆ ಶೇ39ರಷ್ಟು ಹಾಗೂ ಇತರೆ ಪಕ್ಷಗಳಿಗೆ ಶೇ 14ರಷ್ಟು ಮತಗಳು ಲಭಿಸಲಿವೆ.

ಅಕ್ಟೋಬರ್ ಮೊದಲ ವಾರದ ಫಲಿತಾಂಶ: ಎಬಿಪಿ ನ್ಯೂಸ್ -ಸಿ ವೋಟರ್ಸ್ ಪ್ರಕಾರ ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿ- ಶಿವಸೇನಾದಲ್ಲಿ 46% ಮತಗಳಿಸಬಹುದು. ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟಕ್ಕೆ 30% ಸಿಗುವ ಸಾಧ್ಯತೆಯಿದೆ.

2014ರಲ್ಲಿ ಬಿಜೆಪಿಗೆ 28.1%, ಶಿವಸೇನಾಕ್ಕೆ 19.5% ಮತ ಗಳಿಸಿತ್ತು. 42 ಸೀಟು ಗೆದ್ದಿದ್ದ ಕಾಂಗ್ರೆಸ್ 18.1% ಮತಗಳಿಸಿತ್ತು, ಎನ್ಸಿಪಿ 41 ಸ್ಥಾನ ಗೆದ್ದು 17.4% ಮತ ಗಳಿಸಿತ್ತು.

ಬಿಜೆಪಿ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

ಬಿಜೆಪಿ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

ಅಕ್ಟೋಬರ್ ಮೊದಲ ವಾರದ ಫಲಿತಾಂಶದಲ್ಲಿ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 200 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಸಿ ವೋಟರ್ಸ್ ಸಮೀಕ್ಷೆ ಹೇಳಿತ್ತು.

ಅ. 18ರ ಫಲಿತಾಂಶದಲ್ಲಿ ಬಿಜೆಪಿ ಮೈತ್ರಿಕೂಟ 198 ಸ್ಥಾನ, ಎನ್ ಸಿಪಿ ಮೈತ್ರಿಕೂಟ 86 ಸ್ಥಾನ, ಇತರೆ ಪಕ್ಷಗಳು 8ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ.

2014ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಈ ಪಕ್ಷಗಳು ಈಗ ಮತ್ತೆ ಒಂದಾಗಿವೆ. ಬಿಜೆಪಿ 260 ಕ್ಷೇತ್ರ ಹಾಗೂ ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಮ್ಯಾಜಿಕ್ ನಂಬರ್ 145 ದಾಟಲು ಆಗಿರಲಿಲ್ಲ.

ಕೊಂಕಣ್, ಮರಾಠ್ ವಾಡ, ಮುಂಬೈ ಪ್ರದೇಶ

ಕೊಂಕಣ್, ಮರಾಠ್ ವಾಡ, ಮುಂಬೈ ಪ್ರದೇಶ

* ಕೊಂಕಣ್ ಪ್ರದೇಶದಲ್ಲಿ ಬಿಜೆಪಿ -ಶಿವಸೇನಾಕ್ಕೆ 39ರಲ್ಲಿ 34 ಸ್ಥಾನ, ಕಾಂಗ್ರೆಸ್- ಎನ್ಸಿಪಿ 4 ಸ್ಥಾನ.
* ಮುಂಬೈ ಪ್ರದೇಶದಲ್ಲಿ 36 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟಕ್ಕೆ 32 ಸ್ಥಾನ, ಇತರೆ ಪಕ್ಷಗಳಿಗೆ 4 ಸ್ಥಾನ ಲಭಿಸಲಿವೆ.
* ಮರಾಠ್ ವಾಡದಲ್ಲಿ ಎನ್ಡಿಎ ಹಾಗೂ ಎನ್ಸಿಪಿ ವಿರುದ್ಧ ಕಠಿಣ ಪೈಪೋಟಿ ನಡೆಯಲಿದೆ. ಆದರೂ ಎನ್ಡಿಎ ಗೆ 25 ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆ ಹೇಳಿದೆ.

English summary
ABP News – C-Voter Opinion Poll has predicted a clear win for the BJP, Shiv Sena alliance in Maharashtra. The saffron alliance is likely to win 198 seats in Maharashtra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X