ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್

|
Google Oneindia Kannada News

ಪಾಟ್ನಾ, ಸೆ. 25: ಕೇಂದ್ರ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಆರಂಭವಾಗಿವೆ. ಎಬಿಪಿ-ಸಿವೋಟರ್ ಅಭಿಮತ ಇಲ್ಲಿದೆ..

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 10 ರಂದು ಮತ ಎಣಿಕೆಯಾಗಲಿದೆ.

Breaking ಕೋವಿಡ್ ಭೀತಿಯ ನಡುವೆ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆBreaking ಕೋವಿಡ್ ಭೀತಿಯ ನಡುವೆ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ

ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ನಿತೀಶ್ ಕುಮಾರ್ ಅವರು ನಾಲ್ಕನೇ ಬಾರಿಗೆ ಸಿಎಂ ಪಟ್ಟಕ್ಕೇರಲಿದ್ದಾರೆ. ನಿತೀಶ್ ನೇತೃತ್ವದ ಎನ್ಡಿಎ ಸುಮಾರು 141 ರಿಂದ 161 ಸ್ಥಾನ ಗೆಲ್ಲಲಿದ್ದು, ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಫಲಿತಾಂಶ ನೀಡಿದೆ. ಬಿಹಾರದ ನಾಲ್ಕು ವಲಯಗಳಲ್ಲಿ ಸರಿ ಸುಮಾರು 25, 789 ಮತದಾರರನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಎಬಿಪಿ ಹೇಳಿದೆ.

ದಲಿತ ಮತಗಳ ಲೆಕ್ಕಾಚಾರ ಅಂದು -ಇಂದು: ಬಿಹಾರದಲ್ಲಿ ಶೇ 17ರಷ್ಟು ದಲಿತ ಮತಗಳಿವೆ. ಜಾತಿ ಆಧಾರಿತ ರಾಜಕೀಯವನ್ನು ಚೆನ್ನಾಗಿ ಅರಿತಿದ್ದ ಆರ್ ಜೆಡಿಯ ಲಾಲೂ ಪ್ರಸಾದ್ ಯಾದವರು ವೋಟ್ ಬ್ಯಾಂಕ್ ತಂತ್ರವನ್ನು ಚೆನ್ನಾಗಿ ಬಳಸಿಕೊಂಡಿದ್ದರು.ಲಾಲೂ ಅವರು ದಲಿತ ಮತಗಳನ್ನು ಕಳೆದುಕೊಳ್ಳುವ ವೇಳೆಗೆ ನಿತೀಶ್ ಕುಮಾರ್ ಹಾಗೂ ಪಾಸ್ವಾನ್ ಇಬ್ಬರು ಇದೇ ವೋಟ್ ಬ್ಯಾಂಕ್ ಮೇಲೆ ಕಣ್ಣಿರಿಸಿದ್ದಾರೆ, ಇದೇ ಕೂಡಾ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಇದು ಆರಂಭಿಕ ಹಂತದ ಸಮೀಕ್ಷೆ

ಇದು ಆರಂಭಿಕ ಹಂತದ ಸಮೀಕ್ಷೆ

ಇದು ಆರಂಭಿಕ ಹಂತದ ಸಮೀಕ್ಷೆಯಾಗಿದ್ದು, ಶೇ 31ರಷ್ಟು ಮಂದಿ ನಿತೀಶ್ ಅವರೇ ಈ ಬಾರಿಯೂ ಸಿಎಂ ಆಗಿರಲಿ ಎಂದಿದ್ದಾರೆ. ಶೇ 8ರಷ್ಟು ಮಂದಿ ಲಾಲೂ ಪ್ರಸಾದ್ ಯಾದವ್ ಪರ ಮತ ಹಾಕಿದ್ದರೆ, ಶೇ 15ರಷ್ಟು ಮತ ತೇಜಸ್ವಿ ಯಾದವ್ ಅವರಿಗೆ ಲಭಿಸಿದೆ.

ಶೇಕಡಾವಾರು ಮತ ಗಳಿಕೆ

ಶೇಕಡಾವಾರು ಮತ ಗಳಿಕೆ

ಶೇಕಡಾವಾರು ಮತ ಗಳಿಕೆಯಲ್ಲಿ ನಿತೀಶ್ ಶೇ 44.8ರಷ್ಟು ಮತ ಗಳಿಸಿದ್ದು, 141 ರಿಂದ 161 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಆರ್ ಜೆಡಿ 64 ರಿಂದ 84 ಸ್ಥಾನ ಪಡೆಯಬಹುದು. ಇತರೆ ಪಕ್ಷಗಳು 13 ರಿಂದ 23 ಸ್ಥಾನ ಮಾತ್ರ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಮೈತ್ರಿಕೂಟದ ಲೆಕ್ಕಾಚಾರ

ಮೈತ್ರಿಕೂಟದ ಲೆಕ್ಕಾಚಾರ

ಎನ್ಡಿಎಗೆ 73 ಸ್ಥಾನದಲ್ಲಿ 47 ರಿಂದ 51 ಸ್ಥಾನ ಹಾಗೂ ಯುಪಿಎ ಗೆ 17 ರಿಂದ 21 ಸ್ಥಾನ ಲಭಿಸಬಹುದು ಎಂಡು ಸಮೀಕ್ಷೆ ಹೇಳಿದೆ. ಎನ್ಡಿಎಗೆ ಶೇ 47ರಷ್ಟು ಮತಗಳು, ಯುಪಿಎಗೆ ಶೇ 32ರಷ್ಟು ಹಾಗೂ ಇತರೆ ಪಕ್ಷಗಳಿಗೆ ಶೇ 21ರಷ್ಟು ಮತಗಳು ಲಭಿಸಲಿವೆ.

Recommended Video

North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada
2015ರಲ್ಲಿ ಫಲಿತಾಂಶ ಏನಾಗಿತ್ತು

2015ರಲ್ಲಿ ಫಲಿತಾಂಶ ಏನಾಗಿತ್ತು

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ

ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

English summary
Bihar Assembly Elections 2020 ABP Opinion Poll predicts fourth term for Nitish Kumar led NDA government with 141-161 seats this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X