ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ-ಸಿ ವೋಟರ್ ಸಮೀಕ್ಷೆ: ಪಂಜಾ‌ಬ್‌ನಲ್ಲಿ ಅಕಾಲಿದಳ ಕಿಂಗ್‌ಮೇಕರ್‌

|
Google Oneindia Kannada News

ಚಂಡೀಗಢ, ಜನವರಿ 10: ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14 ರಂದು ನಡೆಯಲಿದೆ. ಇದಕ್ಕೂ ಮುನ್ನ ಎಬಿಪಿ-ಸಿ ವೋಟರ್ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯು ಈ ಚುನಾವಣೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಬಲ ಹೆಚ್ಚಾದರೂ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಂಜಾಬ್‌ನಲ್ಲಿ ಕಿಂಗ್‌ ಮೇಕರ್‌ ಆಗಲಿದೆ ಎಂದು ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಪಂಜಾಬ್‌ನ 117 ಶಾಸಕರನ್ನು ಆಯ್ಕೆ ಮಾಡಲು ಫೆಬ್ರವರಿ 14ರಂದು ನಡೆಯುವ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಕಿಂಗ್‌ ಮೇಕರ್‌ ಆಗಲಿದೆ ಎಂದು ಸಮೀಕ್ಷೆ ಹೇಳಿದೆ. ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆ ಕಾಂಗ್ರೆಸ್ ಮತ್ತು ಅದರ ಆಂತರಿಕ ಕಲಹ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಸಿಎಂ ಸ್ಥಾನವನ್ನು ತೊರೆದು ತಮ್ಮದೇ ಪಕ್ಷವನ್ನು ಸ್ಥಾಪನೆ ಮಾಡಿರುವುದು, ಶಿರೋಮಣಿ ಅಕಾಲಿ ದಳ ಬಿಜೆಪಿಯೊಂದಿಗೆ ವರ್ಷಗಳ ಹಳೆಯ ಮೈತ್ರಿಯನ್ನು ಮುರಿದಿರುವುದು, ಆಮ್ ಆದ್ಮಿ ಪಕ್ಷ (ಎಎಪಿ) ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ ಅಧಿಕ ಸ್ಥಾನವನ್ನು ಪಡೆದಿರುವುದು ಪಂಜಾಬ್‌ ವಿಧಾನಸಭೆ ಚುನಾವಣೆ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ.

ABP-CVoter Opinion Poll: CM Channi-Led Congress Gets Stronger, SAD Can Be Kingmaker in Punjab

ಪಂಜಾಬ್ ಅಸೆಂಬ್ಲಿ ಚುನಾವಣೆ 2022: ಮತ ಹಂಚಿಕೆ ಹೇಗಿದೆ?

ಇತ್ತೀಚಿನ ಎಬಿಪಿ ನ್ಯೂಸ್-ಸಿವೋಟರ್ ಅಭಿಪ್ರಾಯ ಸಂಗ್ರಹದ ಪ್ರಕಾರ ಆಮ್ ಆದ್ಮಿ ಪಕ್ಷ (ಎಎಪಿ) ಅತಿ ಹೆಚ್ಚು ಸ್ಥಾನವನ್ನು ಪಡೆಯಲಿದೆ. ಆದರೆ ಬಹುಮತದ ಅಂಕವನ್ನು ಅಂದರೆ 59 ಸ್ಥಾನಗಳನ್ನು ದಾಟಲು ವಿಫಲವಾಗಲಿದೆ. ಎಎಪಿ 52 ರಿಂದ 58 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹೊಂದಿರುವ ಕಾಂಗ್ರೆಸ್‌ 37 ರಿಂದ 43 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿ ಇರಲಿದೆ. ಪಂಜಾಬ್ ಚುನಾವಣೆ 2022 ರ ಇತ್ತೀಚಿನ ಅಭಿಪ್ರಾಯ ಸಮೀಕ್ಷೆಯ ಪ್ರಕಾರ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಅದರ ಮೈತ್ರಿಯು 17 ರಿಂದ 23 ವಿಧಾನಸಭೆ ಕ್ಷೇತ್ರದಲ್ಲಿ ಜಯ ಪಡೆಯಲಿದೆ. ಈ ನಡುವೆ ಅಕಾಲಿ ದಳ ಕಿಂಗ್‌ಮೇಕರ್ ಆಗಬಹುದು. ಬಿಜೆಪಿಯು 1 ರಿಂದ 3 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ. 2017ರಲ್ಲಿ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿ 10 ವರ್ಷಗಳ ಆಡಳಿತ ನಡೆಸಿದ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಕೆಡವಿತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು.

ಮತ ಹಂಚಿಕೆ ಹೇಗೆ ಇರಲಿದೆ?

2017ರಲ್ಲಿ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆದ್ದು ಶೇಡಕ 38.5 ಮತವನ್ನು ಪಡೆದಿತ್ತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಶೇಕಡ 23.7 ಮತ ಪಡೆದಿತ್ತು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಶೇಕಡ 25.2 ಮತವನ್ನು ಪಡದಿತ್ತು. ಇನ್ನು ಕೇವಲ 3 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿ ಶೇಕಡ 5.4 ಮತವನ್ನು ಪಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇಕಡ 35.9, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಶೇಕಡ 17.7, ಆಮ್ ಆದ್ಮಿ ಪಕ್ಷ ಶೇಕಡ 39.7, ಬಿಜೆಪಿ ಶೇಕಡ 2.5 ಮತವನ್ನು ಪಡೆಯಲಿದೆ ಎಂದು ಸಮೀಕ್ಷೆಯು ಹೇಳಿದೆ. (ಒನ್‌ಇಂಡಿಯಾ ಸುದ್ದಿ)

English summary
ABP-CVoter Opinion Poll: CM Channi-Led Congress Gets Stronger, SAD Can Be Kingmaker in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X