ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣದಲ್ಲಿ ಮತ್ತೆ ಅರಳಲಿದೆ ಕಮಲ: ಎಬಿಪಿ-ಸಿವೋಟರ್ ಸಮೀಕ್ಷೆ

|
Google Oneindia Kannada News

ಅಕ್ಟೋಬರ್ ಮೊದಲ ವಾರದಲ್ಲಿ ಎಬಿಪಿ ನ್ಯೂಸ್- ಸಿ ವೋಟರ್ ನಡೆಸಿದದ್ದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಲಭ್ಯವಾಗಿದ್ದು, ಹರ್ಯಾಣದಲ್ಲಿ ಮತ್ತೊಮ್ಮೆ ಕಮಲ ಅರಳುವ ಸಾಧ್ಯತೆ ನಿಚ್ಛಳವಾಗಿದೆ.

ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಗೆಲುವು ಸಾಧಿಸುವ ಸಾಧ್ಯತೆಗೆ ಈ ಸಮೀಕ್ಷೆ ಪುಷ್ಠಿ ನೀಡಿದೆ.

ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಗೆ ಜಯಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಗೆ ಜಯ

ಹರ್ಯಾಣದ ಒಟ್ಟು 90 ಕ್ಷೇತ್ರಗಳಲ್ಲಿ 83 ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. 2014 ರಲ್ಲಿ ಬಿಜೆಪಿ 47 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದು. ಆದರೆ ಬಹುಮತ ಪಡೆದಿತ್ತು. ಆದರೆ ಈ ಬಾರಿ 83 ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಕಾಂಗ್ರೆಸ್ ಕೇವಲ 3 ಮತ್ತು ಇತರರು 4 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.

15 ರಿಂದ 3 ಕ್ಕಿಳಿಯಲಿರುವ ಕಾಂಗ್ರೆಸ್!

15 ರಿಂದ 3 ಕ್ಕಿಳಿಯಲಿರುವ ಕಾಂಗ್ರೆಸ್!

2014 ರ ಲೋಕಸಭೆ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್ ಈ ಬಾರಿ 12 ಸ್ಥಾನಗಳನ್ನು ಕಳೆದುಕೊಂಡು ಕೇವಲ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ 47 ರಿಂದ 83 ಕ್ಕೆ ಏರಲಿದೆ.

ಮತ ಹಂಚಿಕೆ ಲೆಕ್ಕಾಚಾರ

ಮತ ಹಂಚಿಕೆ ಲೆಕ್ಕಾಚಾರ

ಜನನಾಯಕ್ ಜನತಾ ಪಾರ್ಟಿ- 9.3%
ಬಿಜೆಪಿ- 47.5%
ಕಾಂಗ್ರೆಸ್- 21.4%
ಇತರರು- 21.8

ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?ಸಮೀಕ್ಷೆ; ಮಹಾರಾಷ್ಟ್ರ, ಹರ್ಯಾಣದಲ್ಲಿ ಯಾರಿಗೆ ಜಯ?

ಮುಖ್ಯಮಂತ್ರಿ ಯಾರಾಗಬೇಕು?

ಮುಖ್ಯಮಂತ್ರಿ ಯಾರಾಗಬೇಕು?

ಈ ಸಮೀಕ್ಷೆಯ ಸಂದರ್ಭದಲ್ಲಿ ಮತದಾರರಲ್ಲಿ ಹರ್ಯಾಣದ ಮುಮದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು. ಈ ಪ್ರಶ್ನೆಗೆ ಶೇ. 40.3 ರಷ್ಟು ಜನ ಬಿಜೆಪಿಯ ಮನೋಹರ್ ಲಾಲ್ ಕಟ್ಟರ್ ಅವರ ಹೆರನ್ನು ಹೇಳಿ, ಎರಡನೇ ಬಾರಿಗೂ ಅವರೇ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ. ಕಾಂಗ್ರೆಸ್ ನ ಭುಪೀಂದರ್ ಸಿಂಗ್ ಹೂಡಾ ಅವರನ್ನು ಶೇ.19 ಜನ ಆಯ್ಕೆ ಮಾಡಿದ್ದರೆ, ಜೆಜೆಪಿಯ ದುಷ್ಯಂತ್ ಚೌಟಾಲಾ ಅವರನ್ನು ಶೇ.14.2 ಜನ ಆಯ್ಕೆ ಮಾಡಿದ್ದಾರೆ.

ಪ್ರಧಾನಿ ಯಾರಾಗಬೇಕು?

ಪ್ರಧಾನಿ ಯಾರಾಗಬೇಕು?

ಇನ್ನು ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎಂಬ ಪ್ರಶ್ನೆಗೆ ಶೇ. 71.6 ರಷ್ಟು ಜನ ನರೇಂದ್ರ ಮೋದಿಯವರನ್ನು ಆರಿಸಿದ್ದರೆ, 7.6 ರಷ್ಟು ಜನ ರಾಹುಲ್ ಗಾಂಧಿ ಅವರನ್ನು ಆರಿಸಿದ್ದಾರೆ.

English summary
ABP-CVoter Opinion Poll: BJP Will Win Another Term In Haryana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X