ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಗರ್ಭಪಾತ ಹಕ್ಕು ರದ್ದು; ಭಾರತದಲ್ಲಿ ಹೇಗಿದೆ ಅಬಾರ್ಷನ್ ಕಾನೂನು?

|
Google Oneindia Kannada News

ಬೆಂಗಳೂರು, ಜೂನ್ 26: ಅಮೆರಿಕದಲ್ಲಿ ಕಳೆದ ವಾರಾಂತ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಜನರ ಗರ್ಭಪಾತ ಹಕ್ಕನ್ನು ರದ್ದುಗೊಳಿಸಿತು. ಇದು ಬೈಡನ್ ಸರಕಾರದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದವರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ಅಮೆರಿಕದಲ್ಲಿ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಸ್ವತಂತ್ರರಿದ್ದರು. ಸಂವಿಧಾನದಲ್ಲಿ ನೀಡಲಾಗಿದ್ದ ಮೂಲಭೂತ ಹಕ್ಕುಗಳಲ್ಲಿ ಅದೂ ಒಂದಾಗಿತ್ತು. ಈಗ ಅದಿರುವುದಿಲ್ಲ.

ಗರ್ಭಪಾತ ಸಾಂವಿಧಾನ ಹಕ್ಕು ರದ್ದುಗೊಳಿಸಿದ ಅಮೆರಿಕಗರ್ಭಪಾತ ಸಾಂವಿಧಾನ ಹಕ್ಕು ರದ್ದುಗೊಳಿಸಿದ ಅಮೆರಿಕ

ಗರ್ಭಪಾತದ ಬಗ್ಗೆ ಪ್ರತ್ಯೇಕವಾಗಿ ಕಾನೂನು ರೂಪಿಸಲು ವಿವಿಧ ರಾಜ್ಯಗಳಿಗೆ ಕೋರ್ಟ್‌ನಿಂದ ಸ್ವಾತಂತ್ರ್ಯ ನೀಡಲಾಗಿದೆ. ಹೀಗಾಗಿ ಅಮೆರಿಕಾದ್ಯಂತ ಏಕಪ್ರಕಾರವಾಗಿ ಗರ್ಭಪಾತ ನಿಷೇಧ ಇರುವುದಿಲ್ಲ, ಅಥವಾ ಗರ್ಭಪಾತಕ್ಕೆ ಅನುಮತಿಯೂ ಇರುವುದಿಲ್ಲ.

 ಅಮೆರಿಕದ ಕೋರ್ಟ್ ತೀರ್ಪಿಗೆ ಆಕ್ರೋಶ

ಅಮೆರಿಕದ ಕೋರ್ಟ್ ತೀರ್ಪಿಗೆ ಆಕ್ರೋಶ

ಗರ್ಭಪಾತದ ಹಕ್ಕನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕ ರಾಷ್ಟ್ರಗಳ ಮುಖಂಡರು ಕೋರ್ಟ್ ತೀರ್ಪನ್ನು ಖಂಡಿಸಿದ್ದಾರೆ. ಸ್ವತಃ ಬೈಡನ್ ಸರಕಾರವೇ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳಾ ಹಕ್ಕು, ಸ್ವಾತಂತ್ರ್ಯ ಹಕ್ಕು ಹೋರಾಟಗಾರರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಅಮೆರಿಕ 50 ವರ್ಷ ಹಿಂದಕ್ಕೆ ಹೋಗಿದೆ. ಇದು ಅಮೆರಿಕಕ್ಕೆ ಒಂದು ಕಪ್ಪುಚುಕ್ಕೆಯಾಗಿದೆ. ಹಕ್ಕುಗಳ ವಿಚಾರದಲ್ಲಿ ವಿಶ್ವಕ್ಕೇ ಆದರ್ಶಪ್ರಾಯವಾಗಿದ್ದ ಅಮೆರಿಕ ಈಗ ಇಂಥ ಸ್ಥಿತಿಗೆ ತಲುಪಬಾರದಿತ್ತು ಎಂದು ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ.

 ಬೆಳಗಾವಿಯಲ್ಲಿ 7 ಭ್ರೂಣಗಳು ಪತ್ತೆ, ಚರಂಡಿಗೆ ಎಸೆದಿದ್ದ ಆಸ್ಪತ್ರೆ ಸೀಜ್ ಬೆಳಗಾವಿಯಲ್ಲಿ 7 ಭ್ರೂಣಗಳು ಪತ್ತೆ, ಚರಂಡಿಗೆ ಎಸೆದಿದ್ದ ಆಸ್ಪತ್ರೆ ಸೀಜ್

 ಟ್ರಂಪ್ ಬೆಂಬಲ

ಟ್ರಂಪ್ ಬೆಂಬಲ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬೆಂಬಲಿಗರು ಮಾತ್ರ ಗರ್ಭಪಾತ ಹಕ್ಕು ರದ್ದು ಮಾಡಿದ ತೀರ್ಪನ್ನು ಸ್ವಾಗತಿಸಿರುವುದು.

ಈಗ ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದವರು ಆಡಳಿತ ಇರುವ ರಾಜ್ಯಗಳು ಗರ್ಭಪಾತವನ್ನು ಅಕ್ರಮ ಎಂದು ಘೋಷಿಸಿವೆ. 11 ಅಮೆರಿಕನ್ ರಾಜ್ಯಗಳು ಗರ್ಭಪಾತ ನಿಷೇಧ ಕಾನೂನು ಜಾರಿ ಮಾಡಿವೆ. ಡೆಮಾಕ್ರಾಟ್ ಪಕ್ಷ ಆಡಳಿತ ಇರುವ ಇತರ ರಾಜ್ಯಗಳಲ್ಲಿ ಈ ಕಾನೂನು ಜಾರಿ ಮಾಡಲಾಗಿಲ್ಲ.

ಇಸ್ಲಾಮಿಕ್ ದೇಶಗಳಲ್ಲೂ ಗರ್ಭಪಾತಕ್ಕೆ ವಿರೋಧ ಇದೆ. ಬಹುತೇಕ ಮುಸ್ಲಿಮ್ ದೇಶಗಳಲ್ಲಿ ಗರ್ಭಪಾತ ನಿಷೇಧ ಕಾನೂನು ಇದೆ.

 ಭಾರತದಲ್ಲಿ ಹೇಗಿದೆ ಗರ್ಭಪಾತ ಕಾನೂನು?

ಭಾರತದಲ್ಲಿ ಹೇಗಿದೆ ಗರ್ಭಪಾತ ಕಾನೂನು?

ಅಮೆರಿಕದಲ್ಲಿ ಗರ್ಭಪಾತ ಹಕ್ಕು ಕಸಿದಿರುವ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವಂತೆಯೇ ಭಾರತ ಹಾಗು ಇತರ ದೇಶಗಳಲ್ಲಿ ಗರ್ಭಪಾತದ ನಿಯಮ ಹೇಗಿದೆ ಎಂಬ ಕುತೂಹಲ ಸಹಜ.

ಭಾರತದಲ್ಲಿ ಗರ್ಭಪಾತಕ್ಕೆ ನಿರ್ಬಂಧಗಳು ಇವೆ ಎಂಬುದು ಗೊತ್ತಿರುವ ವಿಚಾರ. ಆದರೆ ಈ ನಿರ್ಬಂಧಗಳು, ನಿಯಮಗಳು ಯಾವುವು? ಹಿಂದೆ ಇದ್ದ ಕಾನೂನುಗಳು ಈಗಲೂ ಇವೆಯಾ? ಏನಾದರೂ ಬದಲಾವಣೆ ಆಗಿದೆಯಾ?

ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾಯ್ದೆ (ಎಂಟಿಪಿ ಆ್ಯಕ್ಟ್) ಪ್ರಕಾರ ಕೆಲ ನಿರ್ದಿಷ್ಟ ಷರತ್ತುಗಳಿಗೆ ಅನುಗುಣವಾಗಿ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಇದೆ. ಅತ್ಯಾಚಾರದಿಂದ ಗರ್ಭಧಾರಣೆ ಆಗಿದ್ದರೆ, ಗರ್ಭನಿರೋಧ ಔಷಧದ ವೈಫಲ್ಯದಿಂದ ಗರ್ಭಧಾರಣೆ ಆಗಿದ್ದರೆ, ಗರ್ಭಿಣಿಯರಿಗೆ ವೈದ್ಯಕೀಯ ಸಮಸ್ಯೆ ಆಗಿದ್ದರೆ, ಹಾಗು ಇತರ ಕೆಲ ಕಾರಣಗಳಿಗೆ ಗರ್ಭಪಾತ ಮಾಡಿಸಿಕೊಳ್ಳಬಹುದು. ಅವಿವಾಹಿತರಿಗೂ ಅವಕಾಶ ಕೊಡಲಾಗಿದೆ.

 20 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿ:

20 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿ:

ಎಂಟಿಪಿ ಕಾಯ್ದೆಯಲ್ಲಿ ಭಾರತದಲ್ಲಿ ಮಹಿಳೆಯರು ಗರ್ಭಧಾರಣೆಯಾಗಿ 20 ವಾರಗಳವರೆಗೂ ಸಕಾರಣ ಕೊಟ್ಟು ಗರ್ಭಪಾತ ಮಾಡಿಸಿಕೊಳ್ಳಬಹುದು. ಅಂದರೆ, ಹತ್ತಿರ ಹತ್ತಿರ ಮೂರು ತಿಂಗಳ ಗರ್ಭಿಣಿಯರು ಅಬಾರ್ಷನ್ ಮಾಡಿಸಿಕೊಳ್ಳುವ ಅವಕಾಶವನ್ನು ಭಾರತೀಯ ಕಾನೂನಿನಲ್ಲಿ ಕೊಡಲಾಗಿದೆ. ಆ ಅವಧಿ ಮೀರಿದರೆ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ತುರ್ತು ವೈದ್ಯಕೀಯ ಸಮಸ್ಯೆ ಇದ್ದರೆ ಮಾತ್ರ ಅಬಾರ್ಷನ್ ಮಾಡಿಸಿಕೊಳ್ಳಬಹುದು ಅಷ್ಟೇ.

 ವಿಶೇಷ ಪ್ರಕರಣಗಳಲ್ಲಿ ಅಬಾರ್ಷನ್ ಅವಧಿ ಹೆಚ್ಚಳ:

ವಿಶೇಷ ಪ್ರಕರಣಗಳಲ್ಲಿ ಅಬಾರ್ಷನ್ ಅವಧಿ ಹೆಚ್ಚಳ:

ಕೆಲ ವಿಶೇಷ ಪ್ರಕರಣಗಳಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿದೆ. ಗರ್ಭಧಾರಣೆಯಾಗಿ 24 ವಾರಗಳ ಬಳಿಕ, ಅಂದರೆ ಹೆಚ್ಚೂಕಡಿಮೆ ನಾಲ್ಕು ತಿಂಗಳ ಗರ್ಭಿಣಿಯರು ಅಬಾರ್ಷನ್ ಮಾಡಿಸಿಕೊಳ್ಳಬಹುದು. ಈ ವಿಶೇಷ ಪ್ರಕರಣಗಳು ಇಂತಿವೆ:
* ಅತ್ಯಾಚಾರದಿಂದ ಗರ್ಭಧಾರಣೆಯಾದವರು
* ಗರ್ಭಧಾರಣೆಯಾದ ಬಳಿಕ ವಿಧವೆಯಾದವರು ಅಥವಾ ವಿಚ್ಛೇದನ ಪಡೆದವರು.
* ದೈಹಿಕ ವೈಕಲ್ಯಗಳಿರುವ ಮಹಿಳೆಯರು
* ಮಾನಸಿಕ ಅಸ್ವಸ್ಥರು
* ಗರ್ಭದೊಳಗಿನ ಭ್ರೂಣದ ಬೆಳವಣಿಗೆ ಸರಿಯಾಗಿ ಆಗದೇ ಇದ್ದರೆ
* ಗರ್ಭನಿರೋಧ ಔಷಧದ ವೈಫಲ್ಯದಿಂದ ಗರ್ಭಧಾರಣೆ ಆಗಿದ್ದರೆ.

ಈ ಮೇಲಿನ ಕಾರಣಗಳಿಂದ ಗರ್ಭವತಿಯಾದವರು 24 ವಾರಗಳವರೆಗೆ ಅಬಾರ್ಷನ್ ಮಾಡಿಸಿಕೊಳ್ಳಬಹುದು. 24 ವಾರ ಕಳೆದು ಗರ್ಭಪಾತ ಮಾಡಿಸಿಕೊಳ್ಳುವುದು ವೈದ್ಯಕೀಯವಾಗಿ ಸುರಕ್ಷಿತ ಕ್ರಮವಲ್ಲ. ಇದರಿಂದ ತಾಯಿಯ ಪ್ರಾಣಕ್ಕೆ ಅಪಾಯ ಇರುತ್ತದೆ. ಹೀಗಾಗಿ, ಗರ್ಭಪಾತಕ್ಕೆ 24 ವಾರಗಳವರೆಗೆ ಮಾತ್ರ ಅನುಮತಿ ಕೊಡಲಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada

English summary
American Supreme Court has canceled Abortion Rights in its historical judgement. Now, know what laws in India say about abortion rights here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X