ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವನ್ನಪ್ಪಿ 70 ವರ್ಷದ ಬಳಿಕ ಲಕ್ಷಾಂತರ ಜನರಿಗೆ ಜೀವ ನೀಡಿದ ಯುವತಿ!

|
Google Oneindia Kannada News

ಜಿನೀವಾ, ಅಕ್ಟೋಬರ್ 19: ಯುವತಿಯೊಬ್ಬಳು ತಾನು ಸಾವನ್ನಪ್ಪಿ 70 ವರ್ಷಗಳ ಬಳಿಕ ಜನರ ಜೀವ ರಕ್ಷಣೆ ಮಾಡಿದ್ದಾಳೆ. ಕೇಳಲು ಆಶ್ಚರ್ಯ ಎನಿಸಿದರೂ ಇದು ಸತ್ಯ. ಸಾಮಾನ್ಯವಾಗಿ ಈ ವಿಷಯ ಕೇಳುತ್ತಿದ್ದಂತೆ ನೀವು ಯುವತಿ ಅಂಗಾಂಗಗಳ ದಾನ ಮಾಡಿರಬಹುದು ಎಂದು ಭಾವಿಸಬಹುದು. ಆದರೆ ಈ ಯುವತಿ ಅಂಗಾಂಗಗಳನ್ನು ದಾನ ಮಾಡಿಲ್ಲ. ಬದಲಿಗೆ ಗಂಭೀರ ಖಾಯಿಲೆಗೆ ಮದ್ದು ಕಂಡು ಹಿಡಿಯಲು ಸಹಾಯ ಮಾಡಿದ್ದಾಳೆ. ಅದು ಹೇಗೆ ತಿಳಿಯಲು ಮುಂದೆ ಓದಿ.

ಸುಮಾರು 70 ವರ್ಷಗಳ ಹಿಂದೆ ಯುವತಿಯೊಬ್ಬರು ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆಕೆಯ ಚಿಕಿತ್ಸೆಯ ಸಮಯದಲ್ಲಿ ವೈದ್ಯರು ರಹಸ್ಯವಾಗಿ ಒಂದು ಕೋಶವನ್ನು ತೆಗೆದಿದ್ದರು. ಇದರ ನಂತರ, ಆ ಕೋಶವನ್ನು ಅಧ್ಯಯನ ಮಾಡುವ ಮೂಲಕ ವಿವಿಧ ರೋಗಗಳಿಗೆ ಔಷಧವನ್ನು ತಯಾರಿಸಲಾಯಿತು. ಈ ಕಾರಣದಿಂದಾಗಿ ಪ್ರಪಂಚದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಬಹುದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ 70 ವರ್ಷಗಳ ಹಿಂದೆ ಸಾವನ್ನಪ್ಪಿದ ಹೆನ್ರಿಯೆಟಾ ಎಂಬ ಯುವತಿಯನ್ನು ಜಿನೀವಾದಲ್ಲಿ ಗೌರವಿಸಿದರು. ವಾಸ್ತವವಾಗಿ ಹೆನ್ರಿಯೆಟ್ಟಾ 70 ವರ್ಷಗಳ ಹಿಂದೆ ಅಕ್ಟೋಬರ್ 1951ರಲ್ಲಿ ನಿಧನರಾದರು. ಆದರೆ ಆಕೆಯ ದೇಹದಿಂದ ಅನುಮತಿಯಿಲ್ಲದೆ ತೆಗೆದ ಕೋಶವು ಇಂದಿಗೂ ಲಕ್ಷಾಂತರ ಜನರ ಜೀವವನ್ನು ಉಳಿಸಲು ಪ್ರಮುಖ ಕಾರಣವಾಗಿದೆ. ಹೆನ್ರಿಯೆಟ್ಟಾ ಪರವಾಗಿ, ಪ್ರಶಸ್ತಿಯನ್ನು ಅವರ 87 ವರ್ಷದ ಮಗ ಲಾರೆನ್ಸ್ ಲಾಕ್ಸ್ ಸ್ವೀಕರಿಸಿದರು.

A young woman who gave life to millions after 70 years of death

ಅವರನ್ನು ಗೌರವಿಸಿದ ಡಾ. ಟೆಡ್ರೊಸ್, "ಹೆನ್ರಿಯೆಟ್ಟಾ ಅವರನ್ನು ಗೌರವಿಸಲು ನನಗೆ ತುಂಬಾ ಹೆಮ್ಮೆ ಇದೆ. ಹಿಂದಿನ ವರ್ಷಗಳಲ್ಲಿ ಹೆನ್ರಿಯೆಟ್ಟಾ ವಿಚಾರವಾಗಿ ವೈಜ್ಞಾನಿಕವಾಗಿ ತಪ್ಪು ಮಾಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಮಾನವೀಯತೆಯನ್ನು ಉಳಿಸುವಲ್ಲಿ ಮತ್ತು ವೈದ್ಯಕೀಯ ವಿಜ್ಞಾನವನ್ನು ಉತ್ತೇಜಿಸುವಲ್ಲಿ ಅವರಿಗೆ ಗೌರವಿಸಲಾಗುತ್ತಿದೆ" ಎಂದು ಹೇಳಿದರು.

ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನ; ಡಿಎನ್ಎ ವರದಿಯ ಪ್ರಕಾರ, ಹೆನ್ರಿಯೆಟ್ಟಾ ಲಾಕ್ಸ್ ತನ್ನ ಪತಿ ಮತ್ತು 5 ಮಕ್ಕಳೊಂದಿಗೆ ಸಂತೋಷವಾಗಿದ್ದರು. ಒಂದು ದಿನ ಯೋನಿಯಲ್ಲಿ ಭಾರೀ ರಕ್ತಸ್ರಾವ ಕಾಣಿಸಿಕೊಂಡಿತು. ತನ್ನ ಪತಿಯೊಂದಿಗೆ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲದ ಆಸ್ಪತ್ರೆಗೆ ಹೋಗಿ ದಾಖಲಾದರು. ಪರೀಕ್ಷೆಯಲ್ಲಿ ಆಕೆಗೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಅವರು 4 ಅಕ್ಟೋಬರ್ 1951 ರಂದು ನಿಧನರಾದರು. ಆಗ ಅವರಿಗೆ ಕೇವಲ 31 ವರ್ಷ.

ಜೀವಕೋಶಗಳ ಸಂಗ್ರಹ; ಹೆನ್ರಿಯೆಟ್ಟಾ ಚಿಕಿತ್ಸೆ ಪಡೆಯುತ್ತಿರುವಾಗ, ವೈದ್ಯರು ಆಕೆಯ ಗಡ್ಡೆಯ ಕೆಲವು ಮಾದರಿಗಳನ್ನು ತೆಗೆದುಕೊಂಡರು. ಈ ಸಮಯದಲ್ಲಿ, ಗೆಡ್ಡೆಯಿಂದ 'ಹೆಲಾ' ಕೋಶಗಳನ್ನು ತೆಗೆಯಲಾಯಿತು. ಹಾಗೆ ಮಾಡಲು ರೋಗಿ ಅಥವಾ ಆಕೆಯ ಪತಿಯಿಂದ ಯಾವುದೇ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ.

ಇದರ ನಂತರ, ಆ ಕೋಶವನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಯಿತು. ನಂತರ ಆ ಕೋಶವನ್ನು ಪ್ರಯೋಗಾಲಯದಲ್ಲಿ ಸಾಮೂಹಿಕವಾಗಿ ಉತ್ಪಾದಿಸಲಾಯಿತು ಮತ್ತು ಕುಟುಂಬದ ಅನುಮತಿಯಿಲ್ಲದೆ ಮಾರಾಟ ಮಾಡಲಾಯಿತು. ಈವರೆಗೆ ಪ್ರಪಂಚದಾದ್ಯಂತದ ಕೋಶಗಳ ಅಧ್ಯಯನಕ್ಕಾಗಿ 500 ಮಿಲಿಯನ್ ಮೆಟ್ರಿಕ್ ಟನ್ 'ಹೆಲಾ' ಕೋಶಗಳನ್ನು ಮಾರಾಟ ಮಾಡಲಾಗಿದೆ.

ಲಕ್ಷಾಂತರ ಜನರಿಗೆ ಜೀವ ದಾನ; ಈ 'ಹೆಲಾ' ಸೆಲ್ ಜನರ ಜೀವ ಉಳಿಸುವಲ್ಲಿ ರಾಮಬಾಣ ಎಂದು ಸಾಬೀತಾಯಿತು. ಈ ಕೋಶವನ್ನು ಅಧ್ಯಯನ ಮಾಡುವ ಮೂಲಕ, ಪ್ರಪಂಚದಾದ್ಯಂತದ ವಿಜ್ಞಾನಿಗಳು ಎಚ್‌ಪಿವಿ ಲಸಿಕೆ, ಪೋಲಿಯೊ ಲಸಿಕೆ, ಎಚ್‌ಐವಿ/ಏಡ್ಸ್‌ಗೆ ಔಷಧಿ, ಹಿಮೋಫಿಲಿಯಾ, ರಕ್ತಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ತಯಾರಿಸಲು ಸಾಧ್ಯವಾಯಿತು.

ಇದರೊಂದಿಗೆ, ಕ್ಯಾನ್ಸರ್, ಜೀನ್ ಮ್ಯಾಪಿಂಗ್, ಐವಿಎಫ್ ನಂತಹ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಯೂ ವೇಗವನ್ನು ಪಡೆಯಿತು. ಇದನ್ನು ಬಳಸುವುದರ ಮೂಲಕ ಜಗತ್ತಿನಲ್ಲಿ ಇದುವರೆಗೆ ಲಕ್ಷಾಂತರ ಜೀವಗಳನ್ನು ಉಳಿಸಲಾಗಿದೆ.

English summary
A young woman has saved people 70 years after her death. This is true even though it is a surprise to hear. You may think that a young woman may have donated organs, as is usually the case. But this young woman has not donated organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X