ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರು

|
Google Oneindia Kannada News

ನವದೆಹಲಿ, ಜೂನ್ 14: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಹಿಂಸಾತ್ಮಕ ಘರ್ಷಣೆ ನಡೆದು ಒಂದು ವರ್ಷವಾಗಿದೆ.

ಆದರೆ ಅದೇ ಪ್ರದೇಶದಲ್ಲಿ ಚೀನಾ ಸೈನಿಕರು ಹೆಚ್ಚುವರಿ ವಸತಿ ಸೌಕರ್ಯಗಳನ್ನು ನಿರ್ಮಿಸಿದ್ದಾರೆ ಹಾಗೂ ಹೆಚ್ಚು ದಿನಗಳ ಕಾಲ ಇಲ್ಲೇ ಉಳಿಯುವ ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾಹಿತಿ 'ಒನ್‌ಇಂಡಿಯಾ'ಗೆ ಲಭ್ಯವಾಗಿದೆ.

ಪಿಎಲ್‌ಎ ಪಡೆಗಳು ಶಾಶ್ವತ ಹಾಗೂ ತಾತ್ಕಾಲಿಕ ವಸತಿ ಸೌಕರ್ಯಗಳನ್ನು ನಿರ್ಮಿಸಿವೆ ಮತ್ತು ಹೆಚ್ಚುವರಿ ವಾಹನಗಳನ್ನು ಖರೀದಿಸಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೆಚ್ಚೆಚ್ಚು ಚೀನಾ ಸೈನಿಕರು ಪ್ಯಾಂಗಾಂಗ್ ಸರೋವರದ ಬಳಿ ಓಡಾಡುತ್ತಿದ್ದಾರೆ, ಗುಪ್ತಚರ ಮಾಹಿತಿ ಪ್ರಕಾರ ಚೀನಿಯರು ದೀರ್ಘಾವಧಿವರೆಗೆ ಅಲ್ಲಿಯೇ ಬೀಡುಬಿಡುವ ತಯಾರಿಯಲ್ಲಿದ್ದಾರೆ ಹಾಗೆಯೇ ಮತ್ತೆ ಭಾರತ ಚೀನಾ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಡಾಖ್‌ನಲ್ಲಿ ಎರಡೂ ಸೇನೆಗಳು 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ನಾಲ್ಕು ಮತ್ತು ಐದನೇ ಡಿವಿಷನ್ ಸರೋವರದಿಂದ ಹಿಂತೆಗೆದಿದ್ದರೂ, ಅತ್ಯಧಿಕ ಶಸ್ತ್ರಾಸ್ತ್ರ ಹೊಂದಿರುವ 8 ಮತ್ತು 11ನೇ ರೆಜಿಮೆಂಟ್‌ಗಳನ್ನು ಸ್ಥಾಪಿಸಿವೆ.

 ಗೇಮ್ ಚೇಂಜರ್ ಆಗಿತ್ತು ಈ ಘರ್ಷಣೆ

ಗೇಮ್ ಚೇಂಜರ್ ಆಗಿತ್ತು ಈ ಘರ್ಷಣೆ

ಭಾರತ ಹಾಗೂ ಚೀನಾ ನಡುವಿನ ಸಂಬಂಧದದಲ್ಲಿ ಗಾಲ್ವಾನ್ ಹಿಂಸಾತ್ಮಕ ಸಂಘರ್ಷ ಗೇಮ್ ಚೇಂಜರ್ ಆಗಿ ಪರಿಣಮಿಸಿತ್ತು. 2020ರಜೂನ್ 15-16ರಂದು ಗಾಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ ಲಿಬರೇಷನ್ ಆರ್ಮಿ ನಡುವೆ ಕಾಳಗ ನಡೆದಿತ್ತು. ಹಿಂಸಾತ್ಮಕ ರೂಪ ಪಡೆದಿದ್ದ ಈ ಸಂಘರ್ಷದಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಗಾಯಗೊಂಡಿದ್ದರು. ಈ ಸಂಘರ್ಷ ನಡೆದ ಒಂದು ವರ್ಷದಲ್ಲಿ ಚೀನಾ ಹಾಗೂ ಭಾರತ ನಡುವೆ ನಡೆದ ಚುವಟಿಕೆಗಳು ಕೇವಲ ಉಭಯ ರಾಷ್ಟ್ರಗಳ ನಡುವಿನ ಕಾರ್ಯಾಚರಣೆ ಮತ್ತು ಕಾರ್ಯತಂತ್ರದಲ್ಲಿ ವ್ಯತ್ಯಾಸವನ್ನುಂಟು ಮಾಡಿದ್ದು ಮಾತ್ರವಲ್ಲದೆ, ಇಡೀ ಪ್ರಪಂಚದ ಭೌಗೋಳಿಕ ರಾಜಕೀಯ ಪರಿಸರದ ಮೇಲೂ ಪರಿಣಾಮ ಬೀರಿತು.

 ಮೊದಲ ಸಭೆ ನಡೆದಿದ್ದು ಜೂನ್ 6ರಂದು

ಮೊದಲ ಸಭೆ ನಡೆದಿದ್ದು ಜೂನ್ 6ರಂದು

ಉಭಯ ದೇಶಗಳ ನಡುವೆ ಮೊದಲ ಮಿಲಿಟರಿ ಉನ್ನತ ಮಟ್ಟದ ಸಭೆ ಜೂನ್ 6 ರಂದು ನಡೆಯಿತು, ಇದರಲ್ಲಿ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು, ಇದರಂತೆ ಗಾಲ್ವಾನ್ ಕಣಿವೆಯಲ್ಲಿ ಎಂಗೇಜ್ಮೆಂಟ್ ಪ್ರಕ್ರಿಯೆ ನಡೆಯುತ್ತಿತ್ತು. ಇದನ್ನು ನೋಡಿಕೊಳ್ಳುವ ಹೊಣೆ ಕರ್ನಲ್ ಸಂತೋಷ್ ಬಾಬು ಅವರಿಗೆ ವಹಿಸಲಾಗಿತ್ತು. ಕರ್ನಲ್ ಬಾಬು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ, ಚೀನಾ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಮಾರಕ ದಾಳಿ ಮಾಡಿದರು. ಕಲ್ಲೆಸೆತ ಸಂಘರ್ಷಕ್ಕೂ ಮುಂದಾದರು. ದಾಳಿಗೆ ಕುಗ್ಗದ ಭಾರತೀಯ ಸೇನೆ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿತು.

 1962ರ ಚೀನಾ-ಭಾರತ ಯುದ್ಧದ ಬಗ್ಗೆ ಮಾಹಿತಿ

1962ರ ಚೀನಾ-ಭಾರತ ಯುದ್ಧದ ಬಗ್ಗೆ ಮಾಹಿತಿ

1962ರ ಚೀನಾ-ಭಾರತ ಯುದ್ಧದಲ್ಲಿ ಸಹ ಇದೇ ರೀತಿ ಘರ್ಷಣೆ ಉಂಟಾಗಿತ್ತು. ಚೀನಾದ ಸೈನಿಕರು ಮಧ್ಯಕಾಲೀನ ಶೈಲಿಯ ಶಸ್ತ್ರಾಸ್ತ್ರಗಳನ್ನು ಮೊನಚಾದ ಆಯುಧಗಳ ಮೂಲಕ ಯುದ್ಧಕ್ಕಿಳಿದಿದ್ದರು. ಪರಸ್ಪರ ಗುಂಡಿನ ಚಕಮಕಿ ಏರ್ಪಟ್ಟಿರಲಿಲ್ಲ. ಈ ಘರ್ಷಣೆ ನಂತರ ಭಾರತದ ಹಲವು ಚೀನಾ ಸೈನಿಕರನ್ನು ಸೆರೆಹಿಡಿದು ನಂತರದಲ್ಲಿ ಬಿಡುಗಡೆ ಮಾಡಿತು. ಚೀನಾ 2020ರ ಮೇ ತಿಂಗಳು ಹಾಗೂ ಬಳಿಕ ನಡೆಸಿದ್ದನ್ನು ಯಾಕೆ ಮಾಡಿತು ಎಂದು ತಿಳಿದುಕೊಳ್ಳುವ ಯತ್ನ ನಡೆಸಲಾಗಿತ್ತು. ಆದರೆ 1962ರಲ್ಲಿ ಮಾಡಿದ್ದನ್ನೇ ಮತ್ತೆ ಯಾಕೆ ಮುನರಾವರ್ತಿಸಿತು ಎಂಬುದು ಈವರೆಗೂ ತಿಳಿದುಬಂದಿಲ್ಲ. ಗಡಿಯಲ್ಲಿ

 ಆರ್ಥಿಕತೆ ದುರ್ಬಲಗೊಳಿಸುವ ಯತ್ನ

ಆರ್ಥಿಕತೆ ದುರ್ಬಲಗೊಳಿಸುವ ಯತ್ನ

ಉತ್ತರ ಗಡಿಯಲ್ಲಿ ಸ್ಥಗಿತದ ಆಟ ಆಡುವಾಗ ಚೀನಾ ಬಹುತ್ವ ಮತ್ತು ನಮ್ಯತೆಯ ತತ್ವವನ್ನು ಅನುಸರಿಸಿದೆ. ಚೀನಾ ತನ್ನ ನೆರೆ ರಾಷ್ಟ್ರಗಳಿಂದ ತೊಂದರೆಯಲ್ಲಿ ಸಿಲುಕಬಹುದು ಎಂದು ಬುದ್ಧಿವಂತಿಕೆಯಿಂದ ಹೆಜ್ಜೆ ಇರಿಸಿದೆ. ವಿಶೇಷವಾಗಿ ಭಾರತದ ಆರ್ಥಿಕತೆಯ ಸುರ್ಬಲಗೊಳಿಸಲು ಯತ್ನಿಸಿದೆ.

ಮಾತುಕತೆ ಮೂಲಕ ಗಡಿ ಬಳಿ ಗಸ್ತು ತಿರುಗುವ ಪ್ರಕ್ರಿಯೆ ನಿಲ್ಲಿಸಿರಬಹುದು ಆದರೆ ನೆರೆ ರಾಷ್ಟ್ರದ ಮೇಲಿದ್ದ ವಿಶ್ವಾಸ ಉಳಿದುಕೊಂಡಿಲ್ಲ. ಈ ಇಡೀ ಸಮಸ್ಯೆ ಬಗೆಹರಿಯುವವರೆಗೆ ಇದು ನಮ್ಮ ಸಾಧನೆ ಇಂದು ಭಾವಿಸಲೇಬಾರದು. ವಿವಿಧ ಹಾಟ್‌ಸ್ಪಾಟ್‌ಗಳಲ್ಲಿ ಗಸ್ತು ತಿರುಗದಂತೆ ಬಫರ್ ವಲಯಗಳ ರಚನೆ ನಿಜವಾಗಿಯೂ ಸಂಘರ್ಷಕ್ಕೆ ಪರಿಹಾರವಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

English summary
It has been a year since the violent clash between the Armies of India and China at the Galwan Valley in eastern Ladakh. While there is no sign of escalation, officials tell OneIndia that the Chinese have built additional accommodation and this is a sign they are ready for a long haul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X