ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಶೀಲ್ಡ್, ಮಾಸ್ಕ್ ಎರಡೂ ಇದ್ದರೂ ವೈರಸ್‌ ಚಲನೆ ತಡೆಯಲಾಗದು

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 2: ಮಾಸ್ಕ್ ಧರಿಸದೆ ಇದ್ದರೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚು ಎಂದು ಸರ್ಕಾರಗಳು ಎಚ್ಚರಿಕೆ ನೀಡುತ್ತಲೇ ಇವೆ. ಆದರೂ ಜನರು ಮಾಸ್ಕ್ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಇದರ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವುದನ್ನು ತಡೆಯಬಹುದೇ?

Recommended Video

ಆಸ್ಪತ್ರೆಯಿಂದ ಕೆಲಸ ಮಾಡುತ್ತಿರುವ Minister | Oneindia Kannada

ಮಾಸ್ಕ್ ಮಾತ್ರವಲ್ಲ, ಅದರ ಜತೆಗೆ ಫೇಸ್ ಶೀಲ್ಡ್‌ಗಳನ್ನು ಧರಿಸಿದ್ದರೂ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ ಎಂದು ಭಾರತ-ಅಮೆರಿಕದ ಸಂಶೋಧಕರ ಅಧ್ಯಯನ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಸಂಕಷ್ಟದ ಹೊರೆಗೆ ಪ್ರಮುಖ ಕಾರಣ ಈ ಐದು ರಾಜ್ಯಗಳುದೇಶದಲ್ಲಿ ಕೊರೊನಾ ವೈರಸ್ ಸಂಕಷ್ಟದ ಹೊರೆಗೆ ಪ್ರಮುಖ ಕಾರಣ ಈ ಐದು ರಾಜ್ಯಗಳು

ಕೋವಿಡ್-19 ಹೊಂದಿರುವ ವ್ಯಕ್ತಿ ಕೆಮ್ಮಿದಾಗ ಆತನ ಬಾಯಿಯಿಂದ ಹೊರಹಾರುವ ದ್ರವದಲ್ಲಿನ ವೈರಸ್‌ಗಳು ಫೇಸ್ ಶೀಲ್ಡ್‌ನ ಸುತ್ತಲೂ ಚಲಿಸುವಷ್ಟು ಸಮರ್ಥವಾಗಿವೆ. ಮಾಸ್ಕ್‌ನಲ್ಲಿನ ಉಸಿರಾಟದ ನಳಿಗೆಗಳು ಸುರಕ್ಷಿತವಲ್ಲ. ಅದರ ಮೂಲಕವೂ ವೈರಸ್‌ಗಳು ಒಳಪ್ರವೇಶಿಸಬಲ್ಲವು ಎಂದು ಅಧ್ಯಯನ ಎಚ್ಚರಿಕೆ ನೀಡಿದೆ.

ಕೊರೊನಾ ಸಂಕಷ್ಟಕ್ಕೆ ದೇಸಿ ಚಿಂತನೆಯ ಕೊರೊನಾ ಸಂಕಷ್ಟಕ್ಕೆ ದೇಸಿ ಚಿಂತನೆಯ "ಚರಕ" ಸಂಸ್ಥೆ ಸ್ಥಗಿತ

ಈ ದ್ರವದ ಹನಿಗಳು ಫೇಸ್ ಶೀಲ್ಡ್‌ನ ಭಾಗದ ಉದ್ದಗಲಕ್ಕೂ ಹರಡಬಲ್ಲವು. ಕೆಮ್ಮಿದಾಗ ದ್ರವದ ಮೂಲಕ ವೈರಸ್ ಹರಡುವ ವೇಗದ ತೀವ್ರತೆಯನ್ನು ಫೇಸ್ ಶೀಲ್ಡ್ ಕಡಿಮೆ ಮಾಡಬಹುದು ಎಂದು ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದ ಸೀ ಟೆಕ್‌ನ ನಿರ್ದೇಶಕ ಮನ್ಹಾರ್ ಧನಕ್ ತಿಳಿಸಿದ್ದಾರೆ. ಮುಂದೆ ಓದಿ...

ವೈಸರ್‌ನಲ್ಲಿ ಚಲಿಸಬಲ್ಲವು

ವೈಸರ್‌ನಲ್ಲಿ ಚಲಿಸಬಲ್ಲವು

ವ್ಯಕ್ತಿಯಿಂದ ಹೊರಬಂದ ವೈರಾಣುಗಳನ್ನು ಆರಂಭದ ಚಲನೆಯನ್ನು ತಡೆಯಲು ಫೇಸ್ ಶೀಲ್ಡ್‌ಗಳು ಸಮರ್ಥವಾಗಿವೆ ಎನ್ನುವುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಆದರೆ ಗಾಳಿಯ ಮೂಲಕ ಹರಡುವ ಹನಿಗಳು ವೈಸರ್‌ನ ಸುತ್ತಲೂ ಸಾಗುವಷ್ಟು ಸಮರ್ಥವಾಗಿವೆ ಎಂದು ಅವರು ಹೇಳಿದ್ದಾರೆ.

ಎನ್95 ಮಾಸ್ಕ್‌ಗಳಲ್ಲಿ ಚಲನೆ ಸುಲಭ

ಎನ್95 ಮಾಸ್ಕ್‌ಗಳಲ್ಲಿ ಚಲನೆ ಸುಲಭ

ಎನ್‌95 ಗುಣಮಟ್ಟದ ಫೇಸ್ ಮಾಸ್ಕ್‌ಗಳಲ್ಲಿ ಉಸಿರಾಟ ವ್ಯವಸ್ಥೆಗಾಗಿ ಇರಿಸಿರುವ ಭಾಗಗಳಿಂದ ಸಣ್ಣ ಪ್ರಮಾಣದಲ್ಲಿ ಹೊರಬರುವ ವೈರಸ್‌ಗಳು ಮಾಸ್ಕ್‌ನ ಮೇಲ್ಭಾಗ ಮತ್ತು ಮೂಗಿನ ಬಳಿಕ ಅಂತರದಿಂದ ಒಳನುಗ್ಗಬಲ್ಲವು.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

ಮಾಸ್ಕ್ ಟ್ರೆಂಟ್ ಹೆಚ್ಚುತ್ತಿದೆ

ಮಾಸ್ಕ್ ಟ್ರೆಂಟ್ ಹೆಚ್ಚುತ್ತಿದೆ

ಮಾಸ್ಕ್‌ಗಳಲ್ಲಿನ ಉಸಿರಾಟದ ಭಾಗವು ಅದರ ಸಾಮರ್ಥ್ಯವನ್ನು ಬಹಳಷ್ಟು ತಗ್ಗಿಸಿವೆ. ಆ ವಾಲ್ವ್‌ಗಳಿಂದಲೇ ಹೆಚ್ಚಿನ ಪ್ರಮಾಣದ ವೈರಸ್‌ಗಳು ಒಳಗೆ ಪ್ರವೇಶಿಸುತ್ತವೆ. ಜನರು ಮಾಮೂಲಿ ಬಟ್ಟೆಗಳು ಅಥವಾ ಸರ್ಜಿಕಲ್ ಮಾಸ್ಕ್‌ಗಳನ್ನು ಹಾಗೂ ಪ್ಲಾಸ್ಟಿಕ್ ಫೇಸ್ ಶೀಲ್ಡ್‌ಗಳನ್ನು ಉಪಯೋಗಿಸುತ್ತಿರುವ ಟ್ರೆಂಡ್ ಇತ್ತೀಚಿಗೆ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.

ಹನಿಗಳು ಸುಲಭವಾಗಿ ಹರಡುತ್ತವೆ

ಹನಿಗಳು ಸುಲಭವಾಗಿ ಹರಡುತ್ತವೆ

ಕೆಮ್ಮು ಮತ್ತು ಸೀನುವ ಮೂಲಕ ವ್ಯಕ್ತಿಯ ಬಾಯಿಯಿಂದ ಹೊರಬರುವ ಎಂಜಲಿನ ಹನಿಗಳು ಫೇಸ್ ಶೀಲ್ಡ್ ಮತ್ತು ಎನ್ 95 ಮಾಸ್ಕ್‌ಗಳನ್ನು ಧರಿಸಿದ್ದಾಗ ಯಾವ ರೀತಿ ಹರಡುತ್ತದೆ ಎಂಬುದನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಅದರಲ್ಲಿ ಹನಿಗಳು ಹೇಗೆ ವೈಸರ್‌ನ ಸುತ್ತಲೂ ಚಲಿಸುತ್ತವೆ ಮತ್ತು ಮಾಸ್ಕ್‌ನ ಉಸಿರಾಟದ ಭಾಗದಿಂದ ಒಳಗೆ ಪ್ರವೇಶಿಸುತ್ತವೆ ಎಂಬದನ್ನು ನಿದರ್ಶನಗಳೊಂದಿಗೆ ವಿವರಿಸಲಾಗಿದೆ. ಫೇಸ್ ಶೀಲ್ಡ್ ಮತ್ತು ಎನ್‌95 ಮಾಸ್ಕ್‌ಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸಾಮಾನ್ಯ ಮಾಸ್ಕ್‌ಗಳು ಇದನ್ನು ತಡೆಯಬಲ್ಲದು ಎಂದು ಅಧ್ಯಯನ ತಿಳಿಸಿದೆ.

English summary
A study by Indian-American researchers said, even face shield and N-95 mask together can't stop the coronavirus spreading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X